ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾ ಸಾವನ್ನು ಬಯಸಿ ವಿಕೃತ ಮೆರೆದಿದ್ದ ಕಾಮಿಡಿ ಕಿಲಾಡಿ ಮಡೆನೂರು ಮನುಗೆ ಹೆಡೆಮುರಿ ಕಟ್ಟಿದೆ ಚಿತ್ರರಂಗ. ಅದಕ್ಕೆ ಹಿರಿಯನಟ ನವರಸನಾಯಕ ಜಗ್ಗೇಶ್ ಕೂಡ ಸಾಥ್ ನೀಡಿದ್ದು, ಜೈಲಿಂದ ಹೊರಬಂದ್ರೂ ಬಣ್ಣ ಹಚ್ಚೋಕೆ ಸಿಕ್ಕಾಪಟ್ಟೆ ಸರ್ಕಸ್ ಮಾಡಬೇಕಿದೆ.
ಲೈಂಗಿನ ಕಿರುಕುಳ ಪ್ರಕರಣದಲ್ಲಿ ಈಗಾಗ್ಲೇ ಪರಪ್ಪನ ಅಗ್ರಹಾರ ಸೇರಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನುಗೆ ಈಗ ಮತ್ತೊಂದು ಶಾಕ್ ನೀಡಿದೆ ಫಿಲ್ಮ್ ಚೇಂಬರ್. ಎರಡು ದಿನಗಳ ಹಿಂದೆ ಮಿಸ್ ಮಿಂಚು ಅನ್ನೋ ಇನ್ಸ್‌ಟಾ ಪೇಜ್‌ನಿಂದ ಮನು ಭಾವಚಿತ್ರ ಹಾಗೂ ಅದ್ರ ಹಿನ್ನೆಲೆಯಲ್ಲಿ ಒಂದು ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಚಿತ್ರರಂಗದ ಮೂವರು ಬಿಗ್ ಸ್ಟಾರ್ಸ್ ಸಾವನ್ನು ಬಯಸಿ ಮಡೆನೂರು ಮನು ಮಾತನಾಡಿದ್ರು. ಅದೀಗ ಆತನ ಲೈಫ್‌ಗೆ ಮತ್ತೊಂದು ಮಹತ್ವದ ಉರುಳಾಗಿದೆ.
1986ರಿಂದ ಸುಮಾರು 125ಕ್ಕೂ ಅಧಿಕ ಸಿನಿಮಾಗಳನ್ನ ಚಿತ್ರರಂಗಕ್ಕೆ ನೀಡಿರೋ ಶಿವರಾಜ್‌ಕುಮಾರ್, ಲೈಟ್ ಬಾಯ್ ಆಗಿದ್ದ ಒಬ್ಬ ಸಾಮಾನ್ಯ ಹುಡ್ಗ ಕಷ್ಟ ಪಟ್ಟು ಮೇಲೆ ಬಂದು 55 ಸಿನಿಮಾಗಳನ್ನ ಇಂಡಸ್ಟ್ರಿಗೆ ನೀಡೋ ಮೂಲಕ ಬಾಕ್ಸ್ ಆಫೀಸ್ ಸುಲ್ತಾನನಾದ ದರ್ಶನ್ ಹಾಗೂ ಶಕ್ತಿ ಪ್ರಸಾದ್ ಕುಟುಂಬದ ಶಕ್ತಿಯಾಗಿ ಮಾಸ್ ಆಡಿಯೆನ್ಸ್‌ನ ಅಚ್ಚುಮೆಚ್ಚಿನ ಹೀರೋ ಆಗಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಬ್ಯಾಕ್ ಟು ಬ್ಯಾಕ್ ಮಾಡ್ತಿರೋ ಧ್ರುವ ಸರ್ಜಾಗೆ ಸಾವು ಬಯಸಿದ್ದ ಮನುವಿನ ವಿಕೃತ ಮನಸ್ಥಿತಿಗೆ ಅಭಿಮಾನಿ ಸಂಘಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ದೊಡ್ಮನೆ ಅಭಿಮಾನಿಗಳು, ಡಿ ಬಾಸ್ ಫ್ಯಾನ್ಸ್ ಹಾಗೂ ಧ್ರುವ ವಿಐಪಿಗಳು ಮಡೆನೂರು ಮನು ಮೇಲೆ ಕಿಡಿಕಾರುತ್ತಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದ ಕಲಾವಿದರು ಕೂಡ ಅದರ ಬಗ್ಗೆ ಮಾತನಾಡ್ತಿದ್ದಾರೆ. ಹಿರಿಯನಟ ಜಗ್ಗೇಶ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದು, ಸಾವು ಬಯಸಿದವನಿಗೆ ಕೇಡುಗಾಲ ಸಮೀಪಿಸಿದೆ ಎಂದಿದ್ದಾರೆ.
ಶಿವರಾಜ್‌ಕುಮಾರ್ ಚಿತ್ರರಂಗದ ಕಿರೀಟ ಇದ್ದಂತೆ. ಎಲ್ಲರನ್ನೂ ಪ್ರೀತಿಸುವ ಜೀವ. ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ. ನೊಂದುಕೊಳ್ಳದಿರಿ ಶಿವಣ್ಣ. ನೀವು ಹಿಮಾಲಯ. ನಿಮಗೆ ದೀರ್ಘಾಯುಷ್ಯ ಪ್ರಾಪ್ತಿಯಿದೆ. ನಿಮ್ಮ ಹೆತ್ತವರು ಹಾಗೂ ಕನ್ನಡಿಗರ ಆಶೀರ್ವಾದವಿದೆ. ವಿ ಲವ್ ಯೂ’.
ಹೀಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ ಜಗ್ಗೇಶ್. ಅದರ ಬೆನ್ನಲ್ಲೇ ಫಿಲ್ಮ್ ಚೇಂಬರ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ, ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಾರಾ ಗೋವಿಂದು, ಉಮೇಶ್ ಬಣಕಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿತು. ಸಭೆಯಲ್ಲಿ ಮಹತ್ವದ ನಿರ್ಧಾರವ ಕೈಗೊಂಡ ಚಿತ್ರರಂಗ, ಇನ್ಮೇಲೆ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಇಂತಹ ಮಾತುಗಳನ್ನ ಆಡಿದ ಮಡೆನೂರು ಮನು ವಿರುದ್ಧ ಅನಿರ್ಧಿಷ್ಟಾವಧಿ ಅಸಹಕಾರ ಘೋಷಿಸಿದೆ. ಅರ್ಥಾತ್ ಪರೋಕ್ಷವಾಗಿ ನಟನೆಯಿಂದ ಮನುನ ಬ್ಯಾನ್ ಮಾಡಿದೆ.
ಅಷ್ಟೇ ಅಲ್ಲ, ಮನು ವಿರುದ್ಧ ಸ್ವತಃ ಫಿಲ್ಮ್ ಚೇಂಬರ್ ಚಿತ್ರರಂಗದ ಪರವಾಗಿ ಕೇಸ್ ದಾಖಲಿಸಲಿದೆಯಂತೆ. ಒಂದು ವೇಳೆ ತನ್ನ ಮೇಲಿನ ಎಲ್ಲಾ ಆರೋಪಗಳಿಂದ ಮಡೆನೂರು ಮನು ಮುಕ್ತನಾಗಿ ಹೊರಬಂದರೂ ಸಹ ಆತ ಮತ್ತೆ ಬಣ್ಣ ಹಚ್ಚೋದು ಅಷ್ಟು ಸುಲಭವಾಗಿಲ್ಲ. ಈ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಹಾಗೂ ಸಾರಾ ಗೋವಿಂದು ಸ್ಪಷ್ಟ ಪಡಿಸಿದ್ದಾರೆ.
ಸಂಕಷ್ಟದ ಸುಳಿಗೆ ಸಿಲುಕಿರೋ ಮಡೆನೂರು ಮನುಗೆ ಮತ್ತಷ್ಟು ಸಮಸ್ಯೆಗಳು ಎದುರಾಗಿವೆ. ಕುಡಿದ ಮತ್ತಿನಲ್ಲಿ ಯಾರ ಮೇಲೆ ಯಾರು ಏನು ಬೇಕಾದ್ರೂ ಮಾತಾಡಬಹುದು ಅಂದುಕೊಂಡ್ರೆ ಅದು ತಪ್ಪು. ಅದಕ್ಕೆ ತಕ್ಕನಾದ ಬೆಲೆ ತೆರಲೇಬೇಕು ಅನ್ನೋದಕ್ಕೆ ಮನು ಮಾತುಗಳು ಜ್ವಲಂತ ಸಾಕ್ಷಿ ಆಗ್ತಿವೆ. ಹಾಗಾಗಿ ಇನ್ಮೇಲೆ ಯಾರಾದ್ರೂ ಯಾರಿಗಾದ್ರು ಸಾವು ಬಯಸಿದ್ರೆ ಹುಷಾರ್ ಅನ್ನುವ ಖಡಕ್ ಎಚ್ಚರಿಕೆಯ ಸೂಚನೆ ರವಾನೆ ಆಗಿದೆ.