ರಂಗಸ್ಥಳಂ, ಪುಷ್ಪ, ದಸರಾ, ಪೆದ್ದಿ ಚಿತ್ರಗಳ ನಂತ್ರ ಟಾಲಿವುಡ್ ಅಂಗಳದಲ್ಲಿ ಅಂಥದ್ದೇ ಹಳ್ಳಿ ಸೊಗಡಿನ ರೆಟ್ರೋ ಸಿನಿಮಾವೊಂದು ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ. ಅಖಿಲ್ ಅಕ್ಕಿನೇನಿಯ ಲೆನಿನ್ ಟ್ರೈಲರ್ ರಿಲೀಸ್ ಆಗಿದ್ದು, ನಮ್ಮ ಮಂಡ್ಯ ಹೈದ ಪ್ರಮೋದ್ ಪಂಜು ಮಿಂಚು ಹರಿಸಿರೋದು ಇಂಟರೆಸ್ಟಿಂಗ್. ಅಂದು ಪ್ರಭಾಸ್ ಜೊತೆ ಸಲಾರ್.. ಇಂದು ಅಖಿಲ್ ಜೊತೆ ಲೆನಿನ್ ಖದರ್ ಹೇಗಿದೆ ಅನ್ನೋದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ..
- ಸಲಾರ್ ನಂತ್ರ ಲೆನಿನ್.. ಅಖಿಲ್-ಮಂಡ್ಯ ಹೈದ ಜುಗಲ್ಬಂದಿ..!!
- ಪಕ್ಕದ ಟಾಲಿವುಡ್‌ನಲ್ಲಿ ಪ್ರಮೋದ್ ಪಂಜು ಸಖತ್ ಸೆನ್ಸೇಷನ್
- ದಸರಾದಲ್ಲಿ ನಾನಿ-ದೀಕ್ಷಿತ್.. ಲೆನಿನ್‌ನಲ್ಲಿ ಅಖಿಲ್-ಪ್ರಮೋದ್
- ಟ್ರೈಲರ್ ಪ್ರಾಮಿಸಿಂಗ್.. ಮಸ್ತ್ ಮೇಕಿಂಗ್.. ಸಖತ್ ಸಸ್ಪೆನ್ಸ್..!
ಇದು ತೆಲುಗಿನ ಲೆನಿನ್ ಚಿತ್ರದ ಟ್ರೈಲರ್ ಝಲಕ್. ಇತ್ತೀಚೆಗೆ ಟ್ರೈಲರ್ ಲಾಂಚ್ ಜೊತೆ ಗ್ರ್ಯಾಂಡ್ ಪ್ರೀ ರಿಲೀಸ್ ಇವೆಂಟ್ ಕೂಡ ನಡೀತು. ಕಿಂಗ್ ನಾಗಾರ್ಜುನ್ ಪುತ್ರ ಅಖಿಲ್ ಅಕ್ಕಿನೇನಿ ಏಜೆಂಟ್ ಚಿತ್ರದ ಬಳಿಕ ಸುಮಾರು 3 ವರ್ಷಗಳು ಗ್ಯಾಪ್ ತೆಗೆದುಕೊಂಡು ಮಾಡಿರೋ ಚಿತ್ರವಿದು. ಮುರಳಿ ಕಿಶೋರ್ ನಿರ್ದೇಶನದ ಪಕ್ಕಾ ಹಳ್ಳಿ ಬ್ಯಾಕ್‌ಡ್ರಾಪ್ ಚಿತ್ರ ಇದಾಗಿದ್ದು, ಸ್ಯಾಂಪಲ್ಸ್‌ನಿಂದ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.
ರಂಗಸ್ಥಳಂ, ಪುಷ್ಪ, ದಸರಾ ಹಾಗೂ ಪೆದ್ದಿ ಚಿತ್ರಗಳ ಶೈಲಿಯ ರಾ & ರಗಡ್ ಚಿತ್ರ ಲೆನಿನ್. ಅಖಿಲ್‌ಗೆ ಭಾಗ್ಯಶ್ರೀ ಜೋಡಿಯಾಗಿದ್ದು, ಇದು ಹಳ್ಳಿಯೊಂದರ ಕಂಪ್ಲೀಟ್ ಚಿತ್ರಣ ನೀಡುವ ಭರವಸೆ ನೀಡಿದೆ. ಅಲ್ಲಿ ನಡೆಯೋ ಜಾತ್ರೆ, ಲೋಕಲ್ ಪಾಲಿಟಿಕ್ಸ್, ಲವ್, ಫ್ಯಾಮಿಲಿ, ಫ್ರೆಂಡ್‌ಶಿಪ್ ಹೀಗೆ ಸಾಕಷ್ಟು ವಿಷಯಗಳನ್ನ ಒಳಗೊಂಡಿದೆ. ಚಿತ್ರ ಇದೇ ಜುಲೈ 10ಕ್ಕೆ ತೆರೆಗೆ ಬರ್ತಿದ್ದು, ಮಂಡ್ಯ ಹೈದ ನಮ್ಮ ಪ್ರಮೋದ್ ಪಂಜು ಅಖಿಲ್ ಜೊತೆ ಸ್ಪೆಷಲ್ ಅಟ್ರ್ಯಾಕ್ಷನ್ ಅನಿಸಿದ್ದಾರೆ.
ಯೆಸ್.. ಈ ರೆಟ್ರೋ ಗ್ರಾಮೀಣ ಸೊಗಡಿನ ಚಿತ್ರದಲ್ಲಿ ನಾಯಕನಟ ಅಖಿಲ್ ಅಕ್ಕಿನೇನಿ ಜೊತೆ ಹೈಲೆಟ್ ಆಗಿರೋದು ನಮ್ಮ ಬಾಂಡ್ ರವಿ ಫೇಮ್ ಪ್ರಮೋದ್ ಪಂಜು. ನೋಡೋಕೆ ಅಖಿಲ್ ಹಾಗೂ ಪ್ರಮೋದ್ ಆಪ್ತಮಿತ್ರರಂತೆ ಕಾಣ್ತಿದೆ. ಆದ್ರೆ ಪ್ರಮೋದ್ ಪ್ರೀ-ರಿಲೀಸ್ ಇವೆಂಟ್‌ಗೆ ಹೋಗದೇ ಇರೋದು ನೋಡ್ತಿದ್ರೆ, ಸಿನಿಮಾಗೆ ಅವರೇ ಮೇಜರ್ ಟರ್ನಿಂಗ್ ಪಾಯಿಂಟ್ ಅನಿಸ್ತಿದೆ. ಹೌದು.. ಚಿತ್ರತಂಡ ಕೂಡ ಪ್ರಮೋದ್‌ರನ್ನ ಪ್ರಮೋಟ್ ಮಾಡ್ತಿಲ್ಲ. ಸೋ.. ಪ್ರಮೋದ್ ಈ ಲೆನಿನ್ ವಿರುದ್ಧ ತೊಡೆ ತಟ್ಟುವ ಖಳನಾಯಕನಾಗಿದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ ಚಿತ್ರಪ್ರೇಮಿಗಳು.
ಈಗಾಗ್ಲೇ ಸಲಾರ್ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಜೊತೆ ಪ್ರಮೋದ್ ಕಾಣಿಸಿಕೊಂಡಿದ್ರು. ಪ್ರಭಾಸ್‌ಗೆ ಸಹೋದರನ ಪಾತ್ರದಲ್ಲಿ ನಟಿಸಿ ಎಲ್ಲರ ದಿಲ್ ದೋಚಿದ್ರು. ಇದೀಗ ಅದೇ ಮಾದರಿಯಲ್ಲಿ ಲೆನಿನ್ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಮತ್ತಷ್ಟು ಕ್ರೇಜ್ ಹೆಚ್ಚಿಸಿಕೊಳ್ತಿದ್ದಾರೆ. ಪ್ರಮೋದ್ ಲುಕ್ಸ್ ಸಖತ್ ಕಿಕ್ ಕೊಡ್ತಿದ್ದು, ಅಸಲಿ ಪಿಚ್ಚರ್ ಶುಕ್ರವಾರ ಬಯಲಾಗಲಿದೆ.
ಅಂದಹಾಗೆ ದಸರಾ ಸಿನಿಮಾದಲ್ಲಿ ನಾನಿ ಹಾಗೂ ದೀಕ್ಷಿತ್ ಶೆಟ್ಟಿ ಪಾತ್ರಗಳನ್ನ ನೆನಪಿಸ್ತಿದೆ ಈ ಲೆನಿನ್ ಜೋಡಿ. ಹೌದು.. ನಾನಿ ಜೊತೆ ನಮ್ಮ ಕನ್ನಡಿಗ ದೀಕ್ಷಿತ್ ಶೆಟ್ಟಿ ಬಣ್ಣ ಹಚ್ಚಿದ್ರು. ಆ ಸಿನಿಮಾಗೆ ಮೇಜರ್ ಟರ್ನಿಂಗ್ ಪಾಯಿಂಟ್ ದೀಕ್ಷಿತ್ ಆಗ್ತಾರೆ. ಇಲ್ಲಿ ಕೂಡ ಲೆನಿನ್‌ಗೆ ಮಹತ್ವದ ತಿರುವು ನೀಡೋದೇ ಪ್ರಮೋದ್ ಎನ್ನಲಾಗ್ತಿದೆ. ಸೋ.. ನಮ್ಮ ಕನ್ನಡಿಗರ ಗತ್ತು, ಗೈರತ್ತು ಹೇಗಿರಲಿದೆ ಲೆನಿನ್‌ನಲ್ಲಿ ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





