ಲ್ಯಾಂಡ್‌ಲಾರ್ಡ್..ಈ ಹೊಸ ವರ್ಷದಲ್ಲಿ ಬರ್ತಿರೋ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ಇತ್ತೀಚೆಗೆ ಧಾರವಾಡದಲ್ಲಿ ಅದ್ಧೂರಿಯಾಗಿ ಸಾಂಗ್ ಲಾಂಚ್ ಇವೆಂಟ್ ನಡೆಸಿತು ಚಿತ್ರತಂಡ. ಇಡೀ ಚಿತ್ರತಂಡ ಅಲ್ಲಿ ನೆರೆದಿತ್ತು. ಅವರಿಗೆ ಜಗದೀಶ್ ಶೆಟ್ಟರ್ ಕೂಡ ಸಾಥ್ ನೀಡಿದ್ರು. ಆದ್ರೆ ನಾಯಕನಟ ದುನಿಯಾ ವಿಜಯ್ ಹಾಗೂ ಅವ್ರ ಮಗಳು ರಿತನ್ಯಾ ಮಾತ್ರ ಗೈರು. ಅದ್ಯಾಕೆ ಅನ್ನೋದ್ರ ಜೊತೆ ಇವೆಂಟ್ ಹೈಲೈಟ್ಸ್ ಇಲ್ಲಿವೆ ನೋಡಿ.
ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ ಇತ್ತೀಚೆಗೆ ಕಡಿಮೆ ಆಗಿದೆ. ಆದ್ರೆ 70-80ರ ದಶಕದಲ್ಲಿ ಅದರ ಕಿಚ್ಚು ಬಹಳ ಜೋರಿತ್ತು. ಸದ್ಯ 80ರ ದಶಕದ ಕಾಲಘಟ್ಟದ ಅಂಥದ್ದೇ ರೆಬೆಲ್ ಕಥಾನಕವೊಂದು ಇದೇ ಜನವರಿ 23ಕ್ಕೆ ಬೆಳ್ಳಿಪರದೆ ಬೆಳಗೋಕೆ ಸಜ್ಜಾಗಿದೆ. ಅದೇ ಲ್ಯಾಂಡ್‌ಲಾರ್ಡ್. ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ರಿತನ್ಯಾ ವಿಜಯ್ ಕುಮಾರ್, ಶಿಶಿರ್ ಬೈಕಾಡಿ, ಗಾಳಿಪಟ ಭಾವನಾ, ರಾಕೇಶ್ ಅಡಿಗ ಸೇರಿದಂತೆ ಬಹುದೊಡ್ಡ ತಾರಾಗಣವಿರೋ ಲ್ಯಾಂಡ್‌ಲಾರ್ಡ್ ಸ್ಯಾಂಪಲ್ಸ್‌ನಿಂದಲೇ ಅತೀವ ನಿರೀಕ್ಷೆ ಮೂಡಿಸಿದೆ.

ಧಾರವಾಡದಲ್ಲಿ ಲ್ಯಾಂಡ್‌ಲಾರ್ಡ್..ಅಪ್ಪ-ಮಗಳು ಗೈರೇಕೆ..?
ಹಾಡು ಹಾಡಿ, ಕುಣಿದ ನಿಂಗವ್ವ, ಲೇಡಿ ಸೂಪರ್ ಸ್ಟಾರ್ ರಚ್ಚು
ಇತ್ತೀಚೆಗೆ ಲ್ಯಾಂಡ್‌ಲಾರ್ಡ್ ಚಿತ್ರತಂಡ ದುನಿಯಾ ವಿಜಯ್ ಮಗಳು ರಿತನ್ಯಾ ಹಾಗೂ ಡೇರ್‌ಡೆವಿಲ್ ಮುಸ್ತಫಾ ಖ್ಯಾತಿಯ ಶಿಶಿರ್ ಬೈಕಾಡಿ ಕಾಂಬೋನ ಹಾಡೊಂದರ ಲಾಂಚ್ ಇವೆಂಟ್‌ನ ಧಾರವಾಡದಲ್ಲಿ ನೆರವೇರಿಸಿತು. ಅಲ್ಲಿ ಇಡೀ ಚಿತ್ರತಂಡ ನೆರೆದಿತ್ತು. ನೆಚ್ಚಿನ ಕಲಾವಿದರನ್ನ ಕಣ್ತುಂಬಿಕೊಳ್ಳೋಕೆ ದೊಡ್ಡ ಮಟ್ಟದಲ್ಲಿ ಜನಸಾಗರ ಹರಿದು ಬಂದಿತ್ತು. ರಾಜಕಾರಣಿ ಜಗದೀಶ್ ಶೆಟ್ಟರ್ ಕೂಡ ಭಾಗಿಯಾಗಿದ್ರು. ಆದ್ರೆ ಆ ಇವೆಂಟ್‌ಗೆ ದುನಿಯಾ ವಿಜಯ್ ಹಾಗೂ ಅವ್ರ ಮಗಳು ರಿತನ್ಯಾ ಅವರೇ ಗೈರಾಗಿದ್ದು ಅಚ್ಚರಿ.

ಹಾಡು ರಿತನ್ಯ ಅವರದ್ದೇ ರಿಲೀಸ್ ಆಗ್ತಿದ್ರೂ ಸಹ ಆಕೆ ಬರಲಿಲ್ಲ. ಅದಕ್ಕೆ ಕಾರಣ ಆಕೆಗೆ ವೈರಲ್ ಫೀವರ್. ಆಕೆಯನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಯೋಗಕ್ಷೇಮ ನೋಡಿಕೊಳ್ತಿರೋ ದುನಿಯಾ ವಿಜಯ್ ಕೂಡ ವಿಡಿಯೋ ಮೂಲಕ ಫ್ಯಾನ್ಸ್‌ಗೆ ಶುಭಾಶಯ ಕಳಿಸಿದ್ದಾರಷ್ಟೇ. ಆದ್ರೆ ರಚಿತಾ ರಾಮ್ ವೇದಿಕೆ ಮೇಲೆ ಹಾಡು ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ನಿರ್ಮಾಪಕರು ಕೂಡ ಸಾರಥಿ ಬಳಿಕ ಒಂದೊಳ್ಳೆ ಚಿತ್ರದಿಂದ ಬಂದಿದ್ದೀವಿ, ಕೈ ಹಿಡಿಯಿರಿ ಅಂತ ಉತ್ತರ ಕರ್ನಾಟಕ ಜನತೆಗೆ ಮನವಿ ಮಾಡಿದ್ರು.

ಜ-23ಕ್ಕೆ ಲ್ಯಾಂಡ್‌ಲಾರ್ಡ್..ದಚ್ಚು ‘ಕಾಟೇರ’ದಷ್ಟೇ ಕ್ರೇಜ್
80ರ ದಶಕದ ರೆಬೆಲ್ ಚಿತ್ರ..ಮಕ್ಕಳು ಮುದುಕರಿಗೂ ಕನೆಕ್ಟ್

ಗುರುಶಿಷ್ಯರು, ಜಂಟಲ್‌ಮನ್ ಸಿನಿಮಾಗಳನ್ನ ಮಾಡಿದ್ದಂತಹ ಡೈರೆಕ್ಟರ್ ಜಡೇಶ್ ಕೆ ಹಂಪಿ ಕಾಟೇರ ಚಿತ್ರಕ್ಕೆ ಕಥೆ ಕೂಡ ಬರೆದಿದ್ದರು. ಇದೀಗ ಡಿಬಾಸ್ ದರ್ಶನ್ ಕಾಟೇರದಂತೆ ಲ್ಯಾಂಡ್‌ಲಾರ್ಡ್ ಕೂಡ ಕ್ರಾಂತಿಕಾರಿಯ ಕಥಾನಕ ಹೊಂದಿರೋದ್ರಿಂದ ಕಾಟೇರ-2 ಆಗುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ಈ ಹಿಂದೆ ದರ್ಶನ್ ಜೊತೆ ಸಾರಥಿ ಸಿನಿಮಾ ಮಾಡಿದ್ದ ನಿರ್ಮಾಪಕರೇ ಈಗಲೂ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಸ್ಯಾಂಪಲ್ಸ್ ಸಖತ್ ಪ್ರಾಮಿಸಿಂಗ್ ಅಗಿದ್ದು, ಗೆಲ್ಲುವ ಲಕ್ಷಣ ತೋರಿದೆ ಲ್ಯಾಂಡ್‌ಲಾರ್ಡ್.





