ಒಂದ್ಕಡೆ ಕೋರ್ಟ್ ಕಟಕಟೆಯಲ್ಲಿ ಲಾಯರ್ ಕೊಟ್ಟ ದಿಢೀರ್ ಶಾಕ್.. ಇನ್ನೊಂದ್ಕಡೆ ನಾನ್ ಬರ್ತಿದ್ದೀನಿ ಚಿನ್ನ ಅಂತ ಸೈರನ್ ಊದಿದ ಡೆವಿಲ್. ಹೌದು ಜೈಲಲ್ಲಿರೋ ದಾಸನಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಹಿನ್ನಡೆಯಾಗಿದ್ರೂ, ಹೊರಗಡೆ ಅವರ ಬ್ರ್ಯಾಂಡ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಒಟಿಟಿಯಲ್ಲಿ ದರ್ಶನ್ ಹೊಸ ಸಿನಿಮಾ ಅಬ್ಬರಿಸಲು ರೆಡಿಯಾಗ್ತಿದ್ರೆ, ಥಿಯೇಟರ್‌ನಲ್ಲಿ ‘ಕಲಾಸಿಪಾಳ್ಯ’ ರೀ-ರಿಲೀಸ್ ಆಗಿ ಧೂಳೆಬ್ಬಿಸ್ತಿದೆ. ಕೋರ್ಟ್‌ನಲ್ಲಿ ನಡೆದ ಆ ಹೈಡ್ರಾಮಾ ಏನು..?
- ಹೈಕೋರ್ಟ್‌ನಲ್ಲಿ ದಾಸನಿಗೆ ಶಾಕ್… ವಾದ ಮಾಡಲ್ಲ ಅಂದ್ರು ಲಾಯರ್
- ಕೋರ್ಟ್‌ನಲ್ಲಿ ಟೆನ್ಷನ್…ಒಟಿಟಿಯಲ್ಲಿ ಡೆವಿಲ್ ಅಬ್ಬರದ ಸೆನ್ಸೇಷನ್..!
- ಒಟಿಟಿಗೆ ಬರ್ತಿದ್ದಾನೆ ಡೆವಿಲ್…ಫ್ಯಾನ್ಸ್‌ಗೆ ಹಬ್ಬದೂಟ..!
- ಜೈಲಲ್ಲಿದ್ರೂ ತಗ್ಗಿಲ್ಲ ದಾಸನ ಕ್ರೇಜ್…ಇದು ರಿಯಲ್ ಹವಾ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್‌ಗೆ ಕಾನೂನು ಹೋರಾಟದಲ್ಲಿ ಮತ್ತೊಂದು ಆಘಾತ ಎದುರಾಗಿದೆ. ರೇಣುಕಾಸ್ವಾಮಿ ತಾಯಿಯ ಪಾಟೀಸವಾಲಿಗೆ ಅವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಾಗ ಹೈಡ್ರಾಮಾ ನಡೆದಿದೆ. ಇದುವರೆಗೆ ದರ್ಶನ್ ಪರ ಬ್ಯಾಟ್ ಬೀಸುತ್ತಿದ್ದ ವಕೀಲ ಸುನೀಲ್, “ನಾನು ಕೆಳಹಂತದ ಕೋರ್ಟ್‌ನಲ್ಲಿ ಮಾತ್ರ ದರ್ಶನ್ ಪರ ಹಾಜರಾಗ್ತಿದ್ದೀನಿ, ಹೈಕೋರ್ಟ್‌ನಲ್ಲಿರೋ ಈ ಕೇಸ್‌ನಿಂದ ಹಿಂದೆ ಸರಿದಿದ್ದೇನೆ. ಈ ಬಗ್ಗೆ ವಾದ ಮಂಡಿಸಲು ದರ್ಶನ್ ಕಡೆಯಿಂದ ನನಗೆ ಯಾವುದೇ ಸೂಚನೆ ಇಲ್ಲ” ಎಂದು ದಿಢೀರ್ ವಕಾಲತ್ತಿನಿಂದ ಹಿಂದೆ ಸರಿದು ಶಾಕ್ ಕೊಟ್ಟಿದ್ದಾರೆ. ಸದ್ಯ ಹೈಕೋರ್ಟ್ ಈ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿದೆ.
ಒಂದ್ಕಡೆ ಕೋರ್ಟ್ ಕಟಕಟೆಯಲ್ಲಿ ಲಾಯರ್ ಕೊಟ್ಟ ಟ್ವಿಸ್ಟ್‌ನಿಂದ ದರ್ಶನ್ ಗ್ಯಾಂಗ್‌ಗೆ ತಲೆನೋವು ಶುರುವಾಗಿದ್ರೆ, ಇನ್ನೊಂದ್ಕಡೆ ಅಭಿಮಾನಿಗಳಿಗೆ ಮಾತ್ರ ಒಟಿಟಿಯಿಂದ ಬಿಗ್ ಗಿಫ್ಟ್ ಸಿಕ್ಕಿದೆ. ದರ್ಶನ್ ಅಭಿಮಾನಿಗಳು ಕಳೆದ ಆರು ತಿಂಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಆ ಘಳಿಗೆ ಕೊನೆಗೂ ಬಂದೇ ಬಿಟ್ಟಿದೆ. ಥಿಯೇಟರ್‌ನಲ್ಲಿ ಧೂಳೆಬ್ಬಿಸಿದ್ದ ಡೆವಿಲ್ ಸಿನಿಮಾ ಈಗ ನಿಮ್ಮದೇ ಮೊಬೈಲ್ ಹಾಗೂ ಟಿವಿ ಸ್ಕ್ರೀನ್‌ಗಳಿಗೆ ಲಗ್ಗೆ ಇಡಲು ಸಜ್ಜಾಗಿದೆ.
ಹೌದು, ಚಿತ್ರದ ಒಟಿಟಿ ಹಕ್ಕುಗಳನ್ನು ಜೇಬಿಗೆ ಹಾಕಿಕೊಂಡಿರುವ ಜೀ5 ಸಂಸ್ಥೆ, ‘ನಾನ್ ಬರ್ತಿದ್ದೀನಿ ಚಿನ್ನ’ ಅನ್ನೋ ಖಡಕ್ ಡೈಲಾಗ್ ಇರೋ ಪೋಸ್ಟರ್ ರಿಲೀಸ್ ಮಾಡಿದೆ. ಡೇಟ್ ಇನ್ನು ಅನೌನ್ಸ್ ಮಾಡದಿದ್ರೂ, ‘ಡೆವಿಲ್’ ಎಂಟ್ರಿ ಫಿಕ್ಸ್ ಅಂತ ಗೊತ್ತಾಗ್ತಿದ್ದಂತೆ ದಾಸನ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಬ್ಬ ಆಚರಿಸುತ್ತಿದ್ದಾರೆ.
ಸದ್ಯ ನಟ ದರ್ಶನ್ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲು ಪಾಲಾಗಿದ್ದಾರೆ ಅನ್ನೋದು ಇಡೀ ಕನ್ನಡಿಗರಿಗೆ ಗೊತ್ತಿರೋ ವಿಚಾರ. ತಾರೆಗಳು ಜೈಲಿಗೆ ಹೋದ್ರೆ ಅವರ ಸಿನಿಮಾಗಳ ಮಾರ್ಕೆಟ್ ಡಲ್ ಆಗುತ್ತೆ, ಜನ ಮರೆತುಬಿಡ್ತಾರೆ ಅನ್ನೋ ಟ್ರೆಂಡ್ ಇರೋ ಈ ಕಾಲದಲ್ಲಿ, ದರ್ಶನ್ ವಿಷಯದಲ್ಲಿ ಮಾತ್ರ ಎಲ್ಲವೂ ಉಲ್ಟಾ ಆಗಿದೆ. ನಟ ಕಣ್ಣಮುಂದೆ ಇಲ್ಲದಿದ್ರೂ, ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ರೂ, ಅವರ ಸಿನಿಮಾಗಳ ಮೇಲಿರೋ ಕ್ರೇಜ್ ಹಾಗೂ ಡಿ-ಬಾಸ್ ಅನ್ನೋ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಇಂಚೂ ಕಮ್ಮಿ ಆಗಿಲ್ಲ.
ಪ್ಯಾನ್ ಇಂಡಿಯಾ ಬೇಡ, ಸಿಂಗಲ್ ಭಾಷೆಯಲ್ಲೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್
ಥಿಯೇಟರ್‌ನಲ್ಲಿ ಕಲಾಸಿಪಾಳ್ಯ ರೀ-ರಿಲೀಸ್ ಹಂಗಾಮಾ..!
ಕಳೆದ ಡಿಸೆಂಬರ್ 11ರಂದು ಕೇವಲ ಕನ್ನಡದಲ್ಲೇ ಬಿಡುಗಡೆಯಾಗಿದ್ದ ‘ಡೆವಿಲ್’, ಮೊದಲ ದಿನವೇ ಬರೋಬ್ಬರಿ 13.5 ಕೋಟಿ ಬಾಚಿ ಇತಿಹಾಸ ಸೃಷ್ಟಿಸಿತ್ತು. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳೇ ಬಾಕ್ಸ್ ಆಫೀಸ್‌ನಲ್ಲಿ ತಿಣುಕಾಡುತ್ತಿರುವಾಗ, ಕೇವಲ ಒಂದೇ ಭಾಷೆಯಲ್ಲಿ ‘ಡೆವಿಲ್’ ಮಾಡಿರೋ ಈ ಕಲೆಕ್ಷನ್ ಹಂಗಾಮಾ ಸ್ಯಾಂಡಲ್‌ವುಡ್ ಅನ್ನೇ ಬೆರಗುಗೊಳಿಸಿತ್ತು. ಆರಂಭದ ಅಬ್ಬರದ ನಂತರ ಸಿನಿಮಾ ಒಟ್ಟಾರೆಯಾಗಿ 40 ಕೋಟಿ ರೂಪಾಯಿ ಲೂಟಿ ಮಾಡಿ ಸೈಲೆಂಟ್ ಆಗಿತ್ತು. ಆದರೆ ಈಗ ಒಟಿಟಿ ರಿಲೀಸ್ ಸುದ್ದಿ ಸಿಗುತ್ತಿದ್ದಂತೆ ಮತ್ತೆ ವೈರಲ್ ಟ್ರೆಂಡ್ ಸೆಟ್ ಮಾಡಿದೆ.
ದರ್ಶನ್ ಕ್ರೇಜ್ ಯಾವ ಲೆವೆಲ್‌ಗೆ ಇದೆ ಅನ್ನೋದಕ್ಕೆ ನಿನ್ನೆ ಥಿಯೇಟರ್‌ಗಳಲ್ಲಿ ನಡೆದ ಘಟನೆಯೇ ಸಾಕ್ಷಿ. ದರ್ಶನ್ ಅವರ ಎವರ್‌ಗ್ರೀನ್ ಮಾಸ್ ಸಿನಿಮಾ ‘ಕಲಾಸಿಪಾಳ್ಯ’ ನಿನ್ನೆ ರಾಜ್ಯಾದ್ಯಂತ ರೀ-ರಿಲೀಸ್ ಆಗಿದೆ. ಹಳೇ ಸಿನಿಮಾವೇ ಆದ್ರೂ ಥಿಯೇಟರ್‌ಗಳ ಮುಂದೆ ಕಟೌಟ್‌ಗಳು ನಿಂತಿವೆ, ಹಾಲಿನ ಅಭಿಷೇಕ ನಡೀತಿದೆ, ಥಿಯೇಟರ್ ಒಳಗೆ ಫ್ಯಾನ್ಸ್ ಜೈಕಾರ ಹಾಕ್ತಿದ್ದಾರೆ. ಹೊಸ ಸಿನಿಮಾಗಳಿಗೂ ಸಿಗದ ರೆಸ್ಪಾನ್ಸ್, ದರ್ಶನ್ ಜೈಲಲ್ಲಿದ್ದರೂ ಅವರ ಹಳೇ ಸಿನಿಮಾಗೆ ಸಿಗುತ್ತಿರುವುದು ಗಾಂಧಿನಗರದ ಮಂದಿ ಹುಬ್ಬೇರಿಸುವಂತೆ ಮಾಡಿದೆ.
ಸಿನಿಮಾ ರಿಲೀಸ್ ಆಗಿ ಆರು ತಿಂಗಳಾದ್ರೂ ಒಟಿಟಿಗೆ ಬರದೇ ಇದ್ದಿದ್ದಕ್ಕೆ ಫ್ಯಾನ್ಸ್ ಸಖತ್ ಕನ್ಫ್ಯೂಸ್ ಆಗಿದ್ರು. ಆದರೀಗ ಜೀ5 ಕೊಟ್ಟಿರೋ ಅಪ್‌ಡೇಟ್ ಅವರಲ್ಲಿ ಹೊಸ ಜೋಶ್ ತುಂಬಿದೆ. ಸ್ಟ್ರೀಮಿಂಗ್ ಡೇಟ್ ಯಾವಾಗ ಅನ್ನೋ ಸಸ್ಪೆನ್ಸ್ ಮಾತ್ರ ಇನ್ನು ಹಾಗೇ ಇದೆ. ಒಟ್ಟಿನಲ್ಲಿ, ನಾಯಕ ಜೈಲಿನಲ್ಲಿದ್ದರೂ ಆತನ ಸಿನಿಮಾ ಮತ್ತು ಹವಾ ಮಾತ್ರ ಹೊರಗಡೆ ರಾಜರೋಷವಾಗಿ ರಾಜ್ಯಭಾರ ಮಾಡುತ್ತಿದೆ. ‘ಡೆವಿಲ್’ ಯಾವ ದಿನ ಒಟಿಟಿಯಲ್ಲಿ ಅಬ್ಬರಿಸಲಿದ್ದಾನೆ ಅನ್ನೋದನ್ನ ನೋಡಲು ಇಡೀ ಕರ್ನಾಟಕವೇ ಕೌಂಟ್‌ಡೌನ್ ಶುರು ಮಾಡಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





