ಮ್ಯಾಕ್ಸ್‌ನಂತೆ ಮಾರ್ಕ್ ಕೂಡ ಸಿಕ್ಕಾಪಟ್ಟೆ ಮ್ಯಾಜಿಕ್ ಮಾಡ್ತಿದೆ. ಬಾದ್‌ಷಾ ಕಿಚ್ಚ ಸುದೀಪ್ ಕರಿಯರ್‌ನ ಬೆಸ್ಟ್ ಮೂವೀಸ್ ಲಿಸ್ಟ್ ಸೇರಿರೋ ಮಾರ್ಕ್, ಬುಲೆಟ್ ಸ್ಪೀಡ್ ಸ್ಕ್ರೀನ್‌ಪ್ಲೇನಿಂದ ಹೊಸ ಬೆಂಚ್ ಮಾರ್ಕ್ ಸೃಷ್ಟಿಸಿದೆ. ಇಷ್ಟಕ್ಕೂ ಮಾರ್ಕ್ ಚಿತ್ರದ ಕಥೆ ಏನು..? ಆರ್ಟಿಸ್ಟ್ ಪರ್ಫಾಮೆನ್ಸ್ ಹೇಗಿದೆ..? ಸಿನಿಮಾಗೆ ಪ್ಲಸ್ ಏನು ಮೈನಸ್ ಏನು..? ಫಸ್ಟ್ ಡೇ ಫಸ್ಟ್ ಶೋ ಸೆಲೆಬ್ರೇಷನ್ ಹೇಗಿತ್ತು ಅನ್ನೋದ್ರ ಕಂಪ್ಲೀಟ್ ರಿವ್ಯೂ ರಿಪೋರ್ಟ್ ಇಲ್ಲಿದೆ ನೋಡಿ.
ಕಳೆದ ವರ್ಷ ಮ್ಯಾಕ್ಸ್.. ಈ ವರ್ಷ ಮಾರ್ಕ್.. ಕಿಚ್ಚ ಪಂಚ್
ಮಾರ್ಕ್‌ಗೆ ಒಲಿದ ವಿಜಯಲಕ್ಷ್ಮೀ.. ಎಲ್ಲೆಡೆ ಹೌಸ್‌ಫುಲ್
ದಿ ವೆಯ್ಟ್ ಈಸ್ ಓವರ್.. ಬೆಳ್ಳಿತೆರೆ ಮೇಲೆ ಮ್ಯಾಜಿಕ್ ಮಾಡ್ತಿದೆ ಮಾರ್ಕ್. ಎಲ್ಲರೂ ಸ್ಟಾರ್‌ಗಳು ಕೊಂಚ ಫಾಸ್ಟ್ ಆಗ್ಬೇಕು ಅಂತಿರುವಾಗ ಸೂಪರ್ ಫಾಸ್ಟ್ ಆದ ಬಾದ್‌ಷಾ ಕಿಚ್ಚ ಸುದೀಪ್ ಫಟಾಫಟ್ ಅಂತ ಮುಗಿಸಿರೋ ಸಿನಿಮಾ ಈ ಮಾರ್ಕ್. ಕಳೆದ ವರ್ಷ ಮ್ಯಾಕ್ಸ್ ಚಿತ್ರದಿಂದ ಚಿತ್ರಪ್ರೇಮಿಗಳನ್ನ ನಿರೀಕ್ಷೆಗೂ ಮೀರಿ ಎಂಟರ್‌ಟೈನ್ ಮಾಡಿದ್ದ ಕಿಚ್ಚ, ಈ ವರ್ಷ ಮಾರ್ಕ್‌ನಿಂದ ಅದೇ ಪರ್ವ ಮುಂದುವರೆಸಿದ್ದಾರೆ. ಇಯರ್ ಎಂಡ್‌ಗೊಂದು ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದಾರೆ.
ಕಿಚ್ಚ-ದಚ್ಚು ಸ್ಟಾರ್ ವಾರ್, ಸ್ಟಾರ್‌ಗಳ ಫ್ಯಾನ್ಸ್ ವಾರ್, ವಿಜಯಲಕ್ಷ್ಮೀ ಹಾಗೂ ಧನ್ವೀರ್ ಸೋಶಿಯಲ್ ಮೀಡಿಯಾ ವಾರ್‌ಗಳ ನಡುವೆ ಸುದೀಪ್‌ರ ಮಾರ್ಕ್‌ಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. ಯೆಸ್.. ಮಾರ್ಕ್‌ಗೆ ಇದು ದೊಡ್ಡ ವಿಜಯವೂ ಹೌದು, ಧನಲಕ್ಷ್ಮೀಯ ಆಗಮನವೂ ಹೌದು. ಅದಕ್ಕೆ ಕಾರಣ ಒನ್ಸ್ ಅಗೈನ್ ಅದೇ ಮ್ಯಾಕ್ಸ್ ಸಾರಥಿ ವಿಜಯ್ ಮಾಸ್ಟರ್‌ಮೈಂಡ್ ಹಾಗೂ ಕಿಚ್ಚನ ಸ್ಕ್ರೀನ್ ಪ್ರೆಸೆನ್ಸ್.
ರಿಲೀಸ್‌ಗೆ 18 ಗಂಟೆ ಮೊದ್ಲೇ 250+ ಶೋ ಸೋಲ್ಡ್‌ಔಟ್
ಇಂದು 500ಪ್ಲಸ್ ಶೋಗಳು ಫಾಸ್ಟ್ ಫಿಲ್ಲಿಂಗ್ ರೆಕಾರ್ಡ್
ಕಿಂಗ್ ಕಿಚ್ಚನ ಗತ್ತು ಇಡೀ ಇಂಡಿಯಾಗೇ ಗೊತ್ತು. ಅಫ್ ಕೋರ್ಸ್ ಮಾರ್ಕ್ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಕೂಡ ತೆರೆ ಕಂಡಿದೆ. ಆದ್ರೆ ಕರ್ನಾಟಕ ಒಂದರಲ್ಲೇ ರಿಲೀಸ್‌ಗೂ 18 ಗಂಟೆ ಮೊದಲೇ ಬರೋಬ್ಬರಿ 250 ಪ್ಲಸ್ ಶೋಗಳು ಆನ್‌ಲೈನ್ ಬುಕಿಂಗ್ ಆಗುವ ಮೂಲಕ ಸೋಲ್ಡ್ ಔಟ್ ಆಗಿವೆ. ಇಂದು ಕೂಡ ಬರೋಬ್ಬರಿ 500ಕ್ಕೂ ಅಧಿಕ ಶೋಗಳ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ. ಇನ್ನು ಮೊನ್ನೆ ಮುಂಗಡ ಟಿಕೆಟ್ ಬುಕಿಂಗ್ ಮಾಡಲು ಬುಕ್ ಮೈ ಶೋಗೆ ಬಿಡ್ತಿದ್ದಂತೆ ಫ್ಯಾನ್ಸ್ ಶೋಗಳ ಟಿಕೆಟ್ಸ್ ಮೂರೇ ನಿಮಿಷದಲ್ಲಿ ಎಲ್ಲವೂ ಮಾರಾಟವಾಗಿದ್ದವು. ಇದು ಕಿಚ್ಚನ ಆಲ್ ಟೈಂ ರೆಕಾರ್ಡ್ ಕೂಡ ಹೌದು.
ಬುಲೆಟ್ ಸ್ಪೀಡ್ ಸ್ಕ್ರೀನ್‌ಪ್ಲೇ.. ಇದು ಕಿಚ್ಚನ ಟ್ರೇಡ್‌ಮಾರ್ಕ್
18 ಮಕ್ಕಳು.. 18 ಗಂಟೆ.. ಸಿಎಂ & ಕಳ್ಳ-ಪೊಲೀಸ್ ಡ್ರಾಮಾ
ಸಸ್ಪೆಂಡೆಡ್ SP ಮಾರ್ಕ್ v/s ಆದಿಕೇಶವ, ಭದ್ರ & ರುದ್ರ..!
144 ನಿಮಿಷಗಳ ಅಂದ್ರೆ 2 ಗಂಟೆ 24 ನಿಮಿಷಗಳ ರನ್ ಟೈಂ ಇರೋ ಮಾರ್ಕ್ ಸಿನಿಮಾದ ಸ್ಕ್ರೀನ್ ಪ್ಲೇ ಬುಲೆಟ್ ಸ್ಪೀಡ್ ಟ್ರೈನ್‌ನಂತಿದೆ. ನೋಡುಗರನ್ನ ಒಂದು ನಿಮಿಷ ಕೂಡ ಆ ಕಡೆ ಈ ಕಡೆ ಅಲುಗಾಡೋಕೆ ಬಿಡಲ್ಲ. ಎರಡು ಸೆಕೆಂಡ್ ಮೊಬೈಲ್ ನೋಡೋಕೆ ಕೂಡ ಬಿಡಲ್ಲ. ಆ ರೀತಿಯ ಕಥೆ, ಟ್ವಿಸ್ಟ್ ಅಂಡ್ ಟರ್ನ್ಸ್ ಮೂಲಕ ನೋಡುಗರನ್ನ ಸೀಟ್ ಎಡ್ಜ್‌ನಲ್ಲಿ ಕೂರಿಸುತ್ತೆ. ಅಂದಹಾಗೆ ಇದು ಸಸ್ಪೆಂಡೆಡ್ ಎಸ್‌ಪಿ ಅಜಯ್ ಮಾರ್ಕಂಡೇಯ ಹಾಗೂ ಸಿಎಂ ಪದವಿಗಾಗಿ ತಾಯಿಯನ್ನೇ ಕೊಂದು, ಸಿಎಂ ಸ್ಥಾನಕ್ಕೇರಲು ಪರಿತಪಿಸೋ ಹೋಮ್ ಮಿನಿಸ್ಟರ್ ಆದಿಕೇಶವ ಹಾಗೂ ಆತನಿಗೆ ಸಾಥ್ ಕೊಡೋ ಭದ್ರ, ರುದ್ರ ಗ್ಯಾಂಗ್‌ಸ್ಟರ್ ಬ್ರದರ್‌ಗಳ ಕಥೆಯಾಗಿದೆ.
18 ಮಕ್ಕಳ ಕಿಡ್ನ್ಯಾಪ್.. ಅವರನ್ನ ಉಳಿಸಲು 18 ಗಂಟೆಗಳ ಕಾಲಾವಕಾಶ.. ಎರಡು ಸಾವಿರ ಕೋಟಿ ಮೌಲ್ಯದ ಕೊಕೇನ್.. ಹೀಗೆ ಕಥೆ ಸಾಕಷ್ಟು ಮಜಬೂತಾಗಿ ಸಾಗುತ್ತೆ. ಅಜಯ್ ಮಾರ್ಕಂಡೇಯ ಅಕಾ ಮಾರ್ಕ್ ಆಗಿ ಕಿಚ್ಚನ ಖದರ್ ನೆಕ್ಸ್ಟ್ ಲೆವೆಲ್‌ಗಿದೆ. ಅಭಿನಯದಲ್ಲಿ ಚಕ್ರವರ್ತಿ ಅಂತಲೇ ಹೆಸರುವಾಸಿಯಾಗಿರೋ ಸುದೀಪ್, ಸೈಕ್ ಪರ್ಫಾಮೆನ್ಸ್ ನೀಡಿದ್ದಾರೆ. ಒಂದು ಡಿಫರೆಂಟ್ ಸ್ಟೈಲ್ ಇದೆ. ಸ್ವ್ಯಾಗ್ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಖಾಕಿದಾರಿಯ ರೇಜ್ ಇದೆ.
ಆದಿಕೇಶವ ಪಾತ್ರದಲ್ಲಿ ಮಲಯಾಳಂನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಟಾಮ್ ಚಾಕೋ, ಗ್ಯಾಂಗ್‌ಸ್ಟರ್ ಸ್ಟೀಫನ್ ಪಾತ್ರದಲ್ಲಿ ಗುರು ಸೋಮಸುಂದರಮ್, ಭದ್ರ-ರುದ್ರ ಬ್ರದರ್‌ಗಳಾಗಿ ಟಾಲಿವುಡ್ ಆ್ಯಕ್ಟರ್ ನವೀನ್ ಚಂದ್ರ ಹಾಗೂ ತಮಿಳಿನ ವಿಕ್ರಾಂತ್ ಲೀಡ್‌ನಲ್ಲಿ ಮಿಂಚಿದ್ದಾರೆ. ಇವರುಗಳ ಜೊತೆ ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ದೇವ್‌ಗಿಲ್, ಅರುಳ್ ದಾಸ್, ಗೋಪಾಲಕೃಷ್ಣ ದೇಶಪಾಂಡೆ, ಅಶ್ವಿನ್ ಹಾಸನ್, ದೀಪ್ಷಿಕಾ, ಜಿ ಎಂ ಕುಮಾರ್, ಸುಬ್ಬು ಪಂಚು, ಕೃಷ್ಣಪ್ರಿಯಾ, ಅರ್ಚನಾ ಕೊಟ್ಟಿಗೆ, ಪ್ರತಾಪ್ ನಾರಾಯಣ್, ರೋಶಿನಿ ಪ್ರಕಾಶ್, ಜಟ್ಟ ಗಿರಿರಾಜ್, ರಘು ರಮಣಕೊಪ್ಪ ಸೇರಿದಂತೆ ಬಹುದೊಡ್ಡ ಕಲಾವಿದರ ದಂಡಿದೆ. ಎಲ್ಲರೂ ಅವರವರ ಪಾತ್ರಗಳನ್ನ ಸಮರ್ಪಕವಾಗಿ ನಿಭಾಯಿಸಿದ್ದಾರೆ.

ಕನ್ನಡಿಗ ನವೀನ್ ಚಂದ್ರನ ಇಂಡಸ್ಟ್ರಿಗೆ ಇಳಿಸಿದ ಬಾದ್‌ಷಾ
ಯೋಗಿ ಬಾಬು ಕಾಮಿಡಿ ಟಚ್.. ನಿಶ್ವಿಕಾ ಗ್ಲಾಮರ್ ಗರ್ಲ್
ತಮಿಳಿನ ಖ್ಯಾತ ಹಾಸ್ಯ ಕಲಾವಿದ ಯೋಗಿ ಬಾಬು ಈ ಮಾರ್ಕ್‌ನಲ್ಲಿ ಒಂದೊಳ್ಳೆ ಪಾತ್ರ ಮಾಡಿದ್ದಾರೆ. ಆಗಾಗ ಪ್ರೇಕ್ಷಕರ ಮುಖದಲ್ಲಿ ನಗು ಕೂಡ ತರಿಸುತ್ತಾರೆ. ಅಲ್ಲದೆ ಗ್ಲಾಮರ್ ರಂಗು ಹೆಚ್ಚಿಸಲು ಮಸ್ತ್ ಮಲೈಕಾ ಅಂತ ಕಿಚ್ಚನ ಜೊತೆ ಕುಣಿಯೋ ನಿಶ್ವಿಕಾ ನಾಯ್ಡು ಸ್ಪೆಷಲ್ ಅಪಿಯರೆನ್ಸ್ ಚಿತ್ರಕ್ಕೆ ಪ್ಲಸ್ ಆಗಿದೆ.
ಇಂಟರೆಸ್ಟಿಂಗ್ ಅಂದ್ರೆ ಆಂಧ್ರದ ಸಿಕಂದ್ರಾಬಾದ್‌ನಲ್ಲಿ ಸೆಟಲ್ ಆಗಿರೋ ನಮ್ಮ ಕನ್ನಡ ಮೂಲದ ನವೀನ್ ಚಂದ್ರ ಈ ಮಾರ್ಕ್ ಚಿತ್ರದ ಮೂಲಕ ಕನ್ನಡಕ್ಕೆ ಇಂಟ್ರಡ್ಯೂಸ್ ಆಗಿದ್ದಾರೆ. ಖಡಕ್ ಖಳನಾಯಕ ಭದ್ರನಾಗಿ ಕಿಚ್ಚನ ಎದುರು ಅಬ್ಬರಿಸಿ, ಆರ್ಭಟಿಸಿರೋ ನವೀನ್ ಈಗಾಗ್ಲೇ ತೆಲುಗು, ತಮಿಳಿನಲ್ಲಿ ಸ್ಟಾರ್ ಆಗಿ ಗುರ್ತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲದೆ, ವೆಬ್ ಸೀರೀಸ್‌ಗಳಲ್ಲೂ ಮಿಂಚಿದ್ದಾರೆ. ಇತ್ತೀಚೆಗೆ ರವಿತೇಜಾ ಜೊತೆ ಮಾಸ್ ಜಾತರ ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ರು. ನವೀನ್‌ರಲ್ಲಿರೋ ಪ್ರತಿಭೆ ಗುರ್ತಿಸಿ, ಕನ್ನಡಿಗನಾದ ಆತನನ್ನ ಕನ್ನಡಕ್ಕೆ ಇಂಟ್ರಡ್ಯೂಸ್ ಮಾಡಿರೋ ಸುದೀಪ್ ವ್ಯಕ್ತಿತ್ವಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು.
ಸತ್ಯಜ್ಯೋತಿ ಫಿಲಂಸ್ ಬ್ಯಾನರ್ ಜೊತೆ ಕಿಚ್ಚ ನಿರ್ಮಾಪಕರಾಗಿಯೂ ಗೆದ್ದಿದ್ದಾರೆ. ಕೆಆರ್‌ಜಿ ಜೊತೆಗೂಡಿ ಡಿಸ್ಟ್ರಿಬ್ಯೂಷನ್‌ಗೆ ಕಥ ಹಾಕಿರೋ ಪ್ರಿಯಾ ಸುದೀಪ್, ಮೊದಲ ಹೆಜ್ಜೆಯಲ್ಲೇ ಗೆದ್ದಿದ್ದಾರೆ. ಕನ್ನಡದಲ್ಲಿ ತಂದೆ ಚಿತ್ರದಿಂದಲೇ ಗಾಯಕಿಯ ಕಾಯಕ ಆರಂಭಿಸಿರೋ ಸಾನ್ವಿ ಸುದೀಪ್‌ಗೂ ಬಹುಪರಾಕ್ ಹೇಳಲೇಬೇಕು. ಒಟ್ಟಾರೆ ಮಾರ್ಕ್ ಸಿನಿಮಾ ಎಂಗೇಜಿಂಗ್ ಆಗಿದ್ದು, ಪಕ್ಕಾ ಪೈಸಾ ವಸೂಲ್ ಚಿತ್ರ ಅನಿಸಿಕೊಂಡಿದೆ.
ಮತ್ತಷ್ಟು ಇಂಟೆನ್ಸ್ ಎಮೋಷನ್ಸ್ ಇದ್ದಿದ್ರೆ ಮಗದಷ್ಟು ಚೆನ್ನಾಗಿರ್ತಿತ್ತು ಅನ್ನೋ ಭಾವನೆ ತರಿಸುತ್ತೆ. ಅಜನೀಶ್ ಲೋಕನಾಥ್ ಸಂಗೀತ, ಹಿನ್ನೆಲೆ ಸಂಗೀತ, ಶೇಖರ್ ಚಂದ್ರ ಸಿನಿಮಾಟೋಗ್ರಫಿ ಮೆಚ್ಚುವಂತಿದ್ದು, ಮನರಂಜನೆಗಾಗಿ ಥಿಯೇಟರ್‌ಗೆ ಹೋಗೋರಿಗೆ ಬೆಸ್ಟ್ ಚಾಯ್ಸ್ ಆಗಲಿದೆ. ಕೊಡೋ ಕಾಸಿಗೆ ಮೋಸ ಇಲ್ಲದೆ ರಂಜಿಸುತ್ತೆ ಮಾರ್ಕ್. ಐದಕ್ಕೆ ನಾಲ್ಕು ಸ್ಟಾರ್ ರೇಟಿಂಗ್ ಕೊಡಬಹುದಾದ ಚಿತ್ರ ಇದಾಗಿದೆ.





