ಪ್ರೇಮ್-ಧ್ರುವ ಕೆಡಿ ಸಿನಿಮಾ ಯಶಸ್ವೀ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಣ್ತಮ್ಮ ಸೆಂಟಿಮೆಂಟ್‌ಗೆ ಪ್ರೇಕ್ಷಕರು ಜೈಕಾರ ಹಾಕ್ತಿದ್ದು, ರಾಜ್ಯದ ಪ್ರಮುಖ ಸೆಂಟರ್‌ಗಳಿಗೆ ವಿಸಿಟ್ ಮಾಡಲಿದ್ದಾರೆ ಧ್ರುವ. ಯೆಸ್.. ವಿಜಯಯಾತ್ರೆಗೆ ಸಜ್ಜಾಗಿರೋ ಆ್ಯಕ್ಷನ್ ಪ್ರಿನ್ಸ್ ತಮ್ಮ ವಿಐಪಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹಾಗಾದ್ರೆ ಯಾವತ್ತು ಯಾವ ಊರಿಗೆ ಭೇಟಿ ಕೊಡ್ತಿದ್ದಾರೆ..? ಹೇಗಿದೆ ಕೆಡಿ ವಿಜಯಯಾತ್ರೆ ರೂಟ್ ಮ್ಯಾಪ್ ಅಂತೀರಾ..? ಇದರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ..
- ವಿಜಯಯಾತ್ರೆಗೆ ಧ್ರುವ ಸಜ್ಜು.. ನಿಮ್ಮೂರಿಗೆ KD ಕಮಿಂಗ್!
- ಹಳೇ ಮೈಸೂರು to ಹೊಸಪೇಟೆ.. ಇಲ್ಲಿದೆ ರೂಟ್ ಮ್ಯಾಪ್
- ಗ್ಯಾರಂಟಿ ನ್ಯೂಸ್‌ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಮುಂದಿನ ನಡೆ
- ಅಣ್ತಮ್ಮ ಸೆಂಟಿಮೆಂಟ್‌ಗೆ ಫಿದಾ ಆಗಿರೋ ಚಿತ್ರಪ್ರೇಮಿಗಳು..!
ಕೆಡಿ.. ಕಳೆದ ವಾರ ತೆರೆಕಂಡ ಧ್ರುವ ಸರ್ಜಾ ನಟನೆಯ ಸಿನಿಮಾ. ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಮೂವಿ ಆಗಿ ಹೊರಹೊಮ್ಮಿತ್ತು. ಯಶಸ್ವೀ ಎರಡನೇ ವಾರಕ್ಕೆ ಕಾಲಿಟ್ಟಿರೋ ಈ ಸಿನಿಮಾ, ಆರೇ ದಿನದಲ್ಲಿ ಬರೋಬ್ಬರಿ 62 ಕೋಟಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ಸುದೀಪ್.. ಹೀಗೆ ಬಹುದೊಡ್ಡ ತಾರಾಗಣವಿರೋ ಕೆಡಿ, ನೋಡುಗರ ಕಣ್ಮನ ತಣಿಸುತ್ತಿದೆ.
ಕಲರ್‌ಫುಲ್ ಮೇಕಿಂಗ್, ಬಿಗ್ಗೆಸ್ಟ್ ಸ್ಟಾರ್ ಕ್ಯಾಂಪೇನ್, ಲವ್, ಆ್ಯಕ್ಷನ್, ಸೆಂಟಿಮೆಂಟ್ಸ್, ಕಾಮಿಡಿಯಿಂದ ಕೆಡಿ ವ್ಹಾವ್ ಫೀಲ್ ತರಿಸಿದೆ. ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಇಬ್ಬರೂ ಸಾಮರ್ಥ್ಯ ಮೀರಿ ನಟಿಸಿದ್ದು, ಪ್ರೇಕ್ಷಕರಿಂದ ಭೇಷ್ ಅನಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಕೈಯಲ್ಲಿ ಹೀಗೊಂದು ಪಾತ್ರ ಮಾಡಿಸಬಹುದು ಅನ್ನೋದನ್ನ ಪ್ರೇಮ್ ತೋರಿಸಿಕೊಟ್ಟಿದ್ದಾರೆ.
ಸಿನಿಮಾ ಗೆದ್ದ ಖುಷಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಿಸಿರೋ ಚಿತ್ರತಂಡ, ಇದೀಗ ವಿಜಯಯಾತ್ರೆಗೆ ಸಜ್ಜಾಗಿದೆ. ಹೌದು.. ನಟ ಧ್ರುವ ಸರ್ಜಾ ಈ ಸಕ್ಸಸ್‌ನ ತಮ್ಮ ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡಿಕೊಳ್ಳೋಕೆ ರಾಜ್ಯದ ಆಲ್ಮೋಸ್ಟ್ ಆಲ್ ಎಲ್ಲಾ ಪ್ರಮುಖ ಸೆಂಟರ್‌ಗಳೀಗೆ ಭೇಟಿ ನೀಡ್ತಿದ್ದಾರೆ. ಗ್ಯಾರಂಟಿ ನ್ಯೂಸ್‌ನಲ್ಲಿ ಯಾವ್ಯಾವ ಡೇಟ್‌ಗೆ ಎಲ್ಲೆಲ್ಲಿಗೆ ವಿಸಿಟ್ ಮಾಡ್ತಾರೆ ಅನ್ನೋದ್ರ ಎಕ್ಸ್‌ಕ್ಲೂಸಿವ್ ರೂಟ್ ಮ್ಯಾಪ್ ಇದ್ದು, ಅದೀಗ ಧ್ರುವ ವಿಐಪಿಗಳಿಗೆ ಎಲ್ಲಿಲ್ಲದ ಖುಷಿ ತರುವ ವಿಷಯವಾಗಿದೆ.
ಇದೇ ಮೇ 8ರಿಂದ ಅಂದ್ರೆ ನಾಳೆಯಿಂದಲೇ ಕೆಡಿ ವಿಜಯಯಾತ್ರೆ ಆರಂಭವಾಗಲಿದ್ದು, ಶುಕ್ರವಾರ ಬೆಳಗ್ಗೆ 10.30ಕ್ಕೆ ಮದ್ದೂರು, ಮಂಡ್ಯದ ಮಹಾವೀರ್ ಚಿತ್ರಮಂದಿರ ಮುಗಿಸಿ, ಮಧ್ಯಾಹ್ನ 2.30ಕ್ಕೆ ಮೈಸೂರಿನ ಗಾಯತ್ರಿ, ಡಿಆರ್‌ಸಿಗೆ ಭೇಟಿ ನೀಡಲಿದ್ದಾರೆ. ನಾಳೆಯೇ ಸಂಜೆ ವೇಳೆಗೆ ನಂಜನಗೂಡಿನ ಭಾರ್ಗವಿ ಥಿಯೇಟರ್‌ಗೂ ಭೇಟಿ ನೀಡಿ, ಫ್ಯಾನ್ಸ್ ಜೊತೆ ಸಮಯ ಕಳೆಯಲಿದ್ದಾರೆ.
ಮೇ 9, ಶನಿವಾರದಂದು ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ಮೇ 10 ಭಾನುವಾರದಂದು ಧಾರವಾಡ, ಗದಗ ಹಾಗೂ ಹೊಸಪೇಟೆಗೆ ವಿಸಿಟ್ ಮಾಡಲಿದ್ದಾರೆ ಧ್ರುವ ಸರ್ಜಾ. ಇನ್ನೂ ಆ್ಯಕ್ಷನ್ ಪ್ರಿನ್ಸ್ ಜೊತೆ ನಟಿ ರೀಷ್ಮಾ ನಾಣಯ್ಯ ಹಾಗೂ ನಿರ್ದೇಶಕ ಪ್ರೇಮ್ ಕೂಡ ಎಲ್ಲಾ ಕಡೆ ಯಾತ್ರೆಯಲ್ಲಿ ಭಾಗಿಯಾಗೋ ಸಾಧ್ಯತೆಯಿದೆ. ಒಟ್ಟಾರೆ ಧ್ರುವ ಸರ್ಜಾ ಹೀಗೆ ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಿಗೆ ಹೋಗ್ತಿರೋದು ಅವ್ರ ಫ್ಯಾನ್ಸ್‌ಗೆ ಹಬ್ಬದ ರೀತಿಯ ವಾತಾವರಣ ಸೃಷ್ಟಿಸಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





