ತಮಿಳಿನ ಮೋಸ್ಟ್ ವರ್ಸಟೈಲ್ ಹಾಗೂ ಎನರ್ಜಿಟಿಕ್ ಆ್ಯಕ್ಟರ್ ಕಾರ್ತಿ ಕಾಲಿಗೆ ಪೆಟ್ಟಾಗಿದೆ. ಹೌದು.. ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಎಡವಟ್ ನಿಂದ ಈ ಅವಘಡ ಆಗಿದ್ದು, ಚಿತ್ರತಂಡ ಕೂಡಲೇ ಶೂಟಿಂಗ್ ರದ್ದುಗೊಳಿಸಿದೆ ಚಿತ್ರತಂಡ. ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ರೀತಿ ಆಗಿದ್ದು, ಗ್ರಿಪ್ಪಿಂಗ್ ಸ್ಪೈ ಫೈಟಿಂಗ್ ನಲ್ಲಿ ಹೀಗಾಗಿದೆ ಅನ್ನೋದು ಚಿತ್ರತಂಡ ನೀಡಿರೋ ಮಾಹಿತಿ.

ನಾಯಕನಟ ಕಾರ್ತಿ ಅದನ್ನ ಡೂಪ್ ಇಲ್ಲದೆ ಸ್ವತಃ ತಾವೇ ಮಾಡ್ತಿದ್ದಾಗ ಹೀಗಾಗಿರೋದು ನೋವಿನ ಸಂಗತಿ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಕಾರ್ತಿ ಆರಾಮಾಗಿದ್ದಾರೆ ಎನ್ನಲಾಗ್ತಿದೆ. ಕೂಡಲೇ ಶೂಟಿಂಗ್ ರದ್ದುಗೊಳಿಸಿರೋ ಚಿತ್ರತಂಡಕ್ಕೆ ಕಾರ್ತಿಗೆ ಚಿಕಿತ್ಸೆ ನೀಡಿದ ವೈದ್ಯರು ಶಾಕ್ ನೀಡಿದ್ದಾರೆ. ಎರಡು ವಾರಗಳ ಕಾಲ ರೆಸ್ಟ್ ಹೇಳಿದ್ದು, ಇನ್ನು ಕಾರ್ತಿ ಸಂಪೂರ್ಣವಾಗಿ ಚೇತರಿಸಿಕೊಂಡು ಶೂಟಿಂಗ್ ಸೆಟ್ ಗೆ ಹಿಂದಿರುಗಲು ಕಾಲಾವಕಾಶ ಹಿಡಿಯಲಿದೆ. ಹಾಗಾಗಿ ಅಲ್ಲಿಯವರೆಗೂ ಸರ್ದಾರ್-2 ಶೂಟಿಂಗ್ ಕೂಡ ಪೋಸ್ಟ್ ಪೋನ್ ಎನ್ನಲಾಗ್ತಿದೆ.

ಅಂದಹಾಗೆ ಕಳೆದ ವರ್ಷ ಇದೇ ಚಿತ್ರದ ಫೈಟ್ ಸೀಕ್ವೆನ್ಸ್ ಒಂದರ ಶೂಟಿಂಗ್ ವೇಳೆ ಏಳುಮಲೈ ಅನ್ನೋ ಸ್ಟಂಟ್ ಬಾಯ್ ಒಬ್ಬ ಇಹಲೋಕ ತ್ಯಜಿಸಿರುತ್ತಾನೆ. ಇದೀಗ ಕಾರ್ತಿಗೆ ಹೀಗಾಗಿರೋದು ನಿರ್ಮಾಪಕ ಹಾಗೂ ನಿರ್ದೇಶಕರಲ್ಲಿ ದೊಡ್ಡ ಆತಂಕ ಸೃಷ್ಟಿಸಿದೆ. ಇದು 2022ರ ಬ್ಲಾಕ್ ಬಸ್ಟರ್ ಹಿಟ್ ಸರ್ದಾರ್ ಚಿತ್ರದ ಸೀಕ್ವೆಲ್ ಸಿನಿಮಾ ಇದಾಗಿದ್ದು, ಕಾರ್ತಿ ವೆರೈಟಿ ಗೆಟಪ್ಸ್ ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಸರ್ದಾರ್-2 ಶೇಕಡಾ 80ರಷ್ಟು ಶೂಟಿಂಗ್ ಮುಗಿಸಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಹೀಗಾಗಿರೋದಕ್ಕೆ ಫುಲ್ ಟೆನ್ಷನ್ ನಲ್ಲಿದೆ ಟೀಂ.





