ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿದ ಕಾಂತಾರ ಸಿನಿಮಾದ ಪ್ರೀಕ್ವೆಲ್ ಕಾಂತಾರ ಚಾಪ್ಟರ್ 1 ಚಿತ್ರೀಕರಣದ ಸಮಯದಲ್ಲಿ ಮತ್ತೊಂದು ದೊಡ್ಡ ದುರಂತ ಸಂಭವಿಸಿದೆ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಶೂಟಿಂಗ್‌ಗಾಗಿ ಬಳಸಲಾಗುತ್ತಿದ್ದ ದೋಣಿಯೊಂದು ಮುಗುಚಿ ಬಿದ್ದಿದ್ದು, ನಟ-ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಕಲಾವಿದರು ಮತ್ತು ತಂತ್ರಜ್ಞರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಚಿತ್ರತಂಡದಲ್ಲಿ ಆತಂಕವನ್ನು ಉಂಟುಮಾಡಿದ್ದು, ಕ್ಯಾಮೆರಾಗಳು ಮತ್ತು ಇತರ ಪ್ರಾಪರ್ಟಿಗಳು ನೀರಿಗೆ ಮುಳುಗಿವೆ.
ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಕಾಂತಾರ ಚಾಪ್ಟರ್ 1 ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು. ಕತ್ತಲಿನ ವೇಳೆ ಚಿತ್ರೀಕರಣ ನಡೆಸಲಾಗುತ್ತಿದ್ದಾಗ ದೋಣಿಯೊಂದು ಮುಗುಚಿತು. ಈ ಘಟನೆಯಲ್ಲಿ ರಿಷಬ್ ಶೆಟ್ಟಿ, ಕ್ಯಾಮೆರಾಮ್ಯಾನ್ ಸೇರಿದಂತೆ ಒಟ್ಟು 30 ಮಂದಿ ಇದ್ದರು. ಎಲ್ಲರೂ ಈಜುತ್ತಲೇ ದಡ ಸೇರಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲವಾದರೂ, ಕ್ಯಾಮೆರಾಗಳು ಮತ್ತು ಶೂಟಿಂಗ್‌ಗೆ ಬೇಕಾದ ಪ್ರಾಪರ್ಟಿಗಳು ನೀರಿಗೆ ಹಾನಿಯಾಗಿವೆ.
ಈ ಘಟನೆಯಿಂದ ಚಿತ್ರತಂಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 15 ದಿನಗಳ ಶೂಟಿಂಗ್‌ಗಾಗಿ ಚಿತ್ರತಂಡ ಯೋಜನೆ ರೂಪಿಸಿತ್ತು, ಆದರೆ ಈ ದುರಂತದಿಂದ ಚಿತ್ರೀಕರಣಕ್ಕೆ ತೊಡಕು ಉಂಟಾಗಿದೆ.
ಕಾಂತಾರ ಚಾಪ್ಟರ್ 1 ಚಿತ್ರೀಕರಣದ ಸಮಯದಲ್ಲಿ ಇದೇ ಮೊದಲ ದುರಂತವಲ್ಲ. ಈ ಹಿಂದೆಯೂ ಚಿತ್ರತಂಡವು ಹಲವು ಅವಘಡಗಳನ್ನು ಎದುರಿಸಿದೆ.
ಕಾಂತಾರ ಸಿನಿಮಾವು ಕೇವಲ 15 ಕೋಟಿ ರೂಪಾಯಿಗಳ ಬಂಡವಾಳದಲ್ಲಿ ನಿರ್ಮಾಣವಾಗಿ 300 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿ ವಿಶ್ವದಾದ್ಯಂತ ಗಮನ ಸೆಳೆಯಿತು. ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳನ್ನು ವಿಶ್ವಕ್ಕೆ ಪರಿಚಯಿಸಿದ ಈ ಚಿತ್ರವು ವಿಶ್ವಸಂಸ್ಥೆಯ ಅಂಗಳದಲ್ಲಿ ಪ್ರದರ್ಶನಗೊಂಡು ಆಸ್ಕರ್‌ಗೂ ಆಯ್ಕೆಯಾಗಿತ್ತು.
ಈ ಯಶಸ್ಸಿನಿಂದ ಪ್ರೇರಿತರಾದ ರಿಷಬ್ ಶೆಟ್ಟಿ, ಕಾಂತಾರ ಚಾಪ್ಟರ್ 1ನಲ್ಲಿ ಹತ್ತು ಪಟ್ಟು ದೊಡ್ಡ ಚಿತ್ರವನ್ನು ನಿರ್ಮಿಸುವ ಕನಸಿನೊಂದಿಗೆ ಶೂಟಿಂಗ್ ಆರಂಭಿಸಿದರು. ಆದರೆ, ಚಿತ್ರೀಕರಣದ ಆರಂಭದಿಂದಲೂ