ರಿಷಬ್-ರುಕ್ಮಿಣಿ.. ಸದ್ಯ ಎಲ್ಲರೂ ಮಾತನಾಡುವಂತಾಗಿರೋ ಕನ್ನಡ ಹೆಮ್ಮೆಯ ಕಲಾವಿದರು. ಅದಕ್ಕೆ ಕಾರಣ ಕಾಂತಾರ. 700 ಕೋಟಿ ಕ್ಲಬ್ ಸೇರಿರುವ ಕಾಂತಾರ ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ದೀಪಾವಳಿ ವಿಶೇಷ ಹೊಚ್ಚ ಹೊಸ ಟ್ರೈಲರ್ ಕೂಡ ಲಾಂಚ್ ಆಗಿದೆ. ಅದು ಹೇಗಿದೆ ಅನ್ನೋದ್ರ ಜೊತೆಗೆ IMDb ಟಾಪ್ ಟ್ರೆಂಡಿಂಗ್‌ನಲ್ಲಿ ಮಿಂಚುತ್ತಿರೋ ಅಪ್ಪಟ ಕನ್ನಡಿಗರ ಗತ್ತು, ಗಮ್ಮತ್ತಿನ ಕಥೆ ಇಲ್ಲಿದೆ ನೋಡಿ.
ಸಿನಿಮಾದ ಮೂಲ ಉದ್ದೇಶ ಮನರಂಜನೆಯೇ ಆದ್ರೂ ಸಹ ಸಮಾಜ ಅಥ್ವಾ ಅದರ ಸಂಸ್ಕೃತಿಯಿಂದ ಹುಟ್ಟುವ ಕಥೆಗಳಿಗೆ ಜನಮನ್ನಣೆ ಜಾಸ್ತಿ. ಹೌದು.. ಜನಕ್ಕೆ, ಅವರ ಜೀವನಗಳಿಗೆ ಹತ್ತಿರ ಆಗುವಂತಹ ಕಥಾನಕ ಇದ್ರೆ ಎಂಥವರೂ ಅದನ್ನ ಮುಗಿಬಿದ್ದು ನೋಡ್ತಾರೆ. ಅಣ್ಣಾವ್ರ ಚಿತ್ರಗಳ ಬಳಿಕ ಸದ್ಯ ಕಾಂತಾರ ಅಂಥದ್ದೊಂದು ಮಹತ್ವದ ಚಿತ್ರ ಅನಿಸಿಕೊಳ್ತಿದೆ. ಅದೇ ಕಾರಣಕ್ಕೆ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇಡೀ ದೇಶವೇ ಕೊಂಡಾಡ್ತಿದೆ. ವಿದೇಶಿಗರು ಕೂಡ ಚಿತ್ರ ನೋಡಿ ವಿಸ್ಮಿತರಾಗ್ತಿದ್ದಾರೆ.
IMDb ಟಾಪ್ ಟ್ರೆಂಡಿಂಗ್‌ನಲ್ಲಿ ರಿಷಬ್-ರುಕ್ಮಿಣಿ ಸೆನ್ಸೇಷನ್..!
ರಾಜಮೌಳಿ, ಹೃತಿಕ್, ಎನ್‌ಟಿಆರ್‌ನ ಹಿಂದಿಕ್ಕಿದ ಕನ್ನಡಿಗರು
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರೋ ಕಾಂತಾರ-1 ಸಿನಿಮಾ ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆದ ಕಾಂತಾರ ಚಿತ್ರದ ಪ್ರೀಕ್ವೆಲ್. ಹೊಂಬಾಳೆ ಫಿಲಂಸ್ ಒನ್ಸ್ ಅಗೈನ್ ಕರಾವಳಿ ನೆಲದ ಆಚಾರ, ವಿಚಾರಗಳನ್ನ ವಿಶ್ವ ಸಿನಿದುನಿಯಾಗೆ ಪರಿಚಯಿಸೋ ಶೆಟ್ರ ಕನಸಿಗೆ ನೀರೆರೆಯಿತು. ಹಾಗಾಗಿಯೇ ಇಂದು ಎಲ್ಲರೂ ಕಾಂತಾರವನ್ನು ಕೊಂಡಾಡ್ತಿದ್ದಾರೆ. ವಿಶ್ವ ಸಿನಿದುನಿಯಾದಲ್ಲಿ ಎರಡು ವಾರಗಳಿಗೂ ಮೊದಲೇ ಬರೋಬ್ಬರಿ 700 ಕೋಟಿ ಗಳಿಸಿ, ಇಂದಿಗೂ ಟಿಕೆಟ್ಸ್‌ಗೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ.
ಅಂದಹಾಗೆ ಕಾಂತಾರ ಚಿತ್ರದ ಈ ಅಭೂತಪೂರ್ವ ಸಕ್ಸಸ್‌ನಿಂದ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಪಟ್ಟ ಮತ್ತಷ್ಟು ಗಟ್ಟಿಯಾಗಿದೆ. ಅದಕ್ಕೆ ಪೂರಕವಾಗಿ ಪ್ರತಿಷ್ಠಿತ IMDb ಟಾಪ್ ಟ್ರೆಂಡಿಂಗ್ ಲಿಸ್ಟ್‌ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಅಂದಹಾಗೆ ರಿಷಬ್ ಜೊತೆ ಯುವರಾಣಿ ಕನಕವತಿಯಾಗಿ ಮಿಂಚು ಹರಿಸಿರೋ ಅಪ್ಪಟ ಕನ್ನಡತಿ, ಕ್ಲಾಸಿಕ್ ಚೆಲುವೆ ರುಕ್ಮಿಣಿ ವಸಂತ್ ಕೂಡ IMDbಯ ಟಾಪ್ ಟ್ರೆಂಡಿಂಗ್-2ನಲ್ಲಿ ಕಮಾಲ್ ಮಾಡ್ತಿರೋದು ವಿಶೇಷ.
ಟಾಪ-1ನಲ್ಲಿ ರಿಷಬ್ ಶೆಟ್ಟಿ.. ಟಾಪ್-2ನಲ್ಲಿ ಯುವರಾಣಿ ರುಕ್ಕು
ದೀಪಾವಳಿಗೆ ಕಾಂತಾರ-1 ನ್ಯೂ ಟ್ರೈಲರ್.. ಪ್ರೇಕ್ಷಕರಿಗೆ ಥ್ರಿಲ್..!
ಅಂದಹಾಗೆ ಇವರುಗಳು ಕಳೆದ ವಾರ ಮೂರು ಮತ್ತು ಐದನೇ ಶ್ರೇಯಾಂಕದಲ್ಲಿದ್ರು. ಆದ್ರೀಗ ಸಿನಿಮಾದ ಸಕ್ಸಸ್, ಜನ ಮೆಚ್ಚುಗೆ, ವಿಜಯಯಾತ್ರೆ, ನ್ಯಾಷನಲ್ ಲೆವೆಲ್ ಇಂಟರ್‌ವ್ಯೂಸ್, ಸೋಶಿಯಲ್ ಮೀಡಿಯಾ ಅಲೆಗಳಿಂದ ಟಾಪ್ ಲಿಸ್ಟ್‌ನಲ್ಲಿ ರಾರಾಜಿಸ್ತಿರೋದು ಖುಷಿಯ ವಿಚಾರ. ವಿಶೇಷ ಅಂದ್ರೆ ಸದ್ಯ ರಿಷಬ್-ರುಕ್ಮಿಣಿ ಜೋಡಿ ರಾಜಮೌಳಿ, ಜೂನಿಯರ್ ಎನ್‌ಟಿಆರ್, ಹೃತಿಕ್ ರೋಷನ್, ಕಿಯಾರಾ ಅಂತಹ ಸೆನ್ಸೇಷನಲ್ ಸೆಲೆಬ್ರಿಟಿಗಳನ್ನ ಹಿಂದಿಕ್ಕಿರೋದು ಕನ್ನಡಿಗರಾದ ನಾವು ಹೆಮ್ಮೆ ಪಡುವ ವಿಷಯವಾಗಿದೆ.
ದೀಪಾವಳಿ ಹಬ್ಬದ ವಿಶೇಷ ಕಾಂತಾರ ಚಾಪ್ಟರ್-1 ಚಿತ್ರತಂಡ ಹೊಚ್ಚ ಹೊಸ ಟ್ರೈಲರ್ ಲಾಂಚ್ ಮಾಡಿದೆ. ಇಲ್ಲಿ ದೈವಿಕ ಅಂಶಗಳು ಹಾಗೂ ಸಂಘರ್ಷದ ಭಯಾನಕ ದೃಶ್ಯಗಳನ್ನ ಕಟ್ ಮಾಡಿ ಹೊಸ ಟ್ರೈಲರ್ ಸಿದ್ದಗೊಳಿಸಿದೆ ಟೀಂ. ಈ ಟ್ರೈಲರ್ ಮತ್ತಷ್ಟು ಥ್ರಿಲ್ಲಿಂಗ್ ಆಗಿದ್ದು, ಇನ್ನೂ ಸಿನಿಮಾ ನೋಡದ ಮಂದಿಗೆ ಚಿತ್ರ ವೀಕ್ಷಿಸಲು ಪ್ರೇರೇಪಿಸುವಂತಿದೆ.
ಮೈಸೂರಿನಲ್ಲಿ ವಿಜಯಯಾತ್ರೆ.. ಶೆಟ್ರ ಕಾಣಲು ಜನ ಸಾಗರ
ಕನ್ನಡಿಗರ ಪ್ರೀತಿ, ಅಭಿಮಾನಕ್ಕೆ ಕಾಂತಾರ ಟೀಂ ಧನ್ಯೋಸ್ಮಿ..!
ಯೆಸ್.. ಸಿನಿಮಾದ ವಿಜಯಯಾತ್ರೆ ಜೊತೆ ಜೊತೆಗೆ ಟೆಂಪಲ್ ರನ್ ಕೂಡ ಶುರುವಿಟ್ಟಿರೋ ರಿಷಬ್ ಶೆಟ್ಟಿ ಅಂಡ್ ಟೀಂ ಕಾಂತಾರ, ಸಾಕಷ್ಟು ಕಡೆ ಹರಕೆಗಳನ್ನ ತೀರಿಸೋ ಕಾರ್ಯ ಮಾಡ್ತಿದೆ. ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದರು. ಕಾಂತಾರ ಟೀಂನ ನೋಡಲು ದೊಡ್ಡ ಮಟ್ಟದಲ್ಲಿ ಜನ ಜಮಾಯಿಸಿದ್ರು. ಕಾರ್ ಏರಿ ಎಲ್ಲರಿಗೂ ಧನ್ಯವಾದ ತಿಳಿಸಿದ ಶೆಟ್ರು, ಈ ಪ್ರೀತಿ, ಅಭಿಮಾನಕ್ಕೆ ಧನ್ಮೋಸ್ಮಿ ಎಂದರು.
ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಕೂಡ ಪಡೆದ ಕಾಂತಾರ ಚಿತ್ರತಂಡ, ಇಂದು ಅರಮನೆ ನಗರಿಯ ಗಾಯತ್ರಿ ಚಿತ್ರಮಂದಿರಕ್ಕೂ ಭೇಟಿ ನೀಡಿ, ಅಭಿಮಾನಿಗಳನ್ನ ಭೇಟಿ ಆಗುವ ಕಾರ್ಯ ಮಾಡಿದೆ. ಒಟ್ಟಾರೆ ಕಾಂತಾರ ದಾಖಲೆಗಳ ಮೇಲೆ ದಾಖಲೆಗಳನ್ನ ಬರೆಯುತ್ತಾ.. ನೋಡುಗರಿಗೆ ನಿರೀಕ್ಷೆಗೂ ಮೀರಿದ ಅನುಭವಗಳನ್ನು ಕೊಡ್ತಿದೆ.