ಕೆಜಿಎಫ್.. ನಮ್ಮ ಸ್ಯಾಂಡಲ್‌ವುಡ್‌ನ ಆಲ್ ಟೈಂ ಮಾಸ್ಟರ್‌ಪೀಸ್ ಮೂವಿ. ಆದ್ರೀಗ ಆ ಮಾಸ್ಟರ್‌ಪೀಸ್‌ಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ ಕಾಂತಾರ. ಯೆಸ್.. ರಾಕಿಭಾಯ್ ಯಶ್ ಮಾಡಿದ್ದ ಕೆಜಿಎಫ್ ಕಲೆಕ್ಷನ್ ರೆಕಾರ್ಡ್ಸ್, ರಿಷಬ್ ಶೆಟ್ಟಿ ಕಾಂತಾರಕ್ಕೆ ಬಲಿಯಾಗಿವೆ. 8 ವಾರದಲ್ಲಿ ಕೆಜಿಎಫ್-2 ಗಳಿಸಿದ ದುಡ್ಡನ್ನು, ಒಂದೇ ವಾರದಲ್ಲಿ ಗಲ್ಲಾ ಪೆಟ್ಟಿಗೆ ತುಂಬಿಸಿದೆ ಕಾಂತಾರ. ಅದ್ರ ಎಕ್ಸ್‌ಕ್ಲೂಸಿವ್ ಹಾಗೂ 100% ಪಕ್ಕಾ ಲೆಕ್ಕ ಇಲ್ಲಿದೆ ಜಸ್ಟ್ ವಾಚ್.
ಕಾಂತಾರ.. ಕಾಂತಾರ.. ಕಾಂತಾರ.. ಎಲ್ಲೆಡೆ ಕಾಂತಾರವೇ ಆವರಿಸಿಕೊಂಡುಬಿಟ್ಟಿದೆ. ಅಷ್ಟರ ಮಟ್ಟಿಗೆ ಶೆಟ್ರ ಸಿನಿಮಾ ಸಂಚಲನ ಸೃಷ್ಠಿಸ್ತಿದೆ. ಕಾಂತಾರ ಚಮತ್ಕಾರಕ್ಕೆ ಬಾಲಿವುಡ್ ಮಂದಿ ಕೂಡ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಸುನೀಲ್ ಶೆಟ್ಟಿ ಸೇರಿದಂತೆ ಒಂದಷ್ಟು ಮಂದಿ ಹಿಂದಿ ಕಲಾವಿದರು, ತಂತ್ರಜ್ಞರು ಕಾಂತಾರ ನೋಡಿ ಪುಳಕಿತರಾಗಿದ್ದಾರೆ. ಅಂಥದ್ದೊಂದು ಅಭೂತಪೂರ್ವ ಅನುಭವವನ್ನ ಸಿನಿಮಾ ನೀಡಿದೆ.
ಯಶ್ KGF ದಾಖಲೆ ಸರಿಗಟ್ಟಿದ ರಿಷಬ್.. ಇಲ್ಲಿದೆ ಪಕ್ಕಾ ಲೆಕ್ಕ
8 ವಾರದ KGF ರೆಕಾರ್ಡ್.. ಏಳು ದಿನದಲ್ಲಿ ಕಾಂತಾರಕ್ಕೆ ಬಲಿ
ಒಂದೇ ವಾರದಲ್ಲಿ ಬರೋಬ್ಬರಿ 509 ಕೋಟಿ 25 ಲಕ್ಷ ರೂಪಾಯಿ ಬೃಹತ್ ಮೊತ್ತವನ್ನು ಕಲೆ ಹಾಕುವಲ್ಲಿ ಕಾಂತಾರ ಯಶಸ್ವಿ ಆಗಿದೆ. ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿರೋ ಕಾಂತಾರ, ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಜನ ಕುಟುಂಬ ಸಮೇತ ಹೋಗಿ ಕಣ್ತುಂಬಿಕೊಳ್ತಿದ್ದಾರೆ. ಅಷ್ಟೇ ಅಲ್ಲ, ಥಿಯೇಟರ್ ಅಂಗಳಕ್ಕೆ ರಿಪೀಟೆಡ್ ಆಡಿಯೆನ್ಸ್ ಹರಿದು ಬರ್ತಿದ್ದಾರೆ. ನೋಡಿದವರೇ ಪುನಃ ಪುನಃ ಕಾಂತಾರ ನೋಡ್ತಿರೋದು ಇಂಟರೆಸ್ಟಿಂಗ್.
ವಿಶ್ವದ ಮೂಲೆ ಮೂಲೆಯಲ್ಲಿ ಕಾಂತಾರ ಮಂದಿಯ ಆಚಾರ ಹಾಗೂ ಬಾಂಗ್ರಾ ಅರಸರ ಆಳ್ವಿಕೆಯ ನಡುವಿನ ಸಂಘರ್ಷದ ಕಥೆ ನೋಡುಗರಿಗೆ ರೋಮಾಂಚನ ನೀಡ್ತಿದೆ. ಕನ್ನಡ ಸಿನಿಮಾವೊಂದನ್ನ ಈ ರೀತಿ ಎಲ್ಲರೂ ಟಾಪ್ ರೇಟಿಂಗ್ಸ್ ನೀಡಿ, ಮೆರೆಸುತ್ತಿರೋದು ಇದೇ ಮೊದಲು. ಯಾಕಂದ್ರೆ ಚಿತ್ರದಲ್ಲಿ ಬರೀ ಕಮರ್ಷಿಯಲ್ ಎಲಿಮೆಂಟ್ಸ್ ಅಷ್ಟೇ ಅಲ್ಲ, ಕರಾವಳಿ ನೆಲದ ಸಂಸ್ಕೃತಿಯ ಸೊಗಡು, ಸೊಬಗಿದೆ. ಚಿತ್ರದಲ್ಲಿ ದೈವಿಕ ಅಂಶಗಳ ಮೆರವಣಿಗೆ ನಡೆದಿದೆ. ಹಾಗಾಗಿಯೇ ಇದು ಎಲ್ಲರಿಗೂ ರುಚಿಸುತ್ತಿದೆ.
ಕರ್ನಾಟಕದಲ್ಲಿ ಕಾಂತಾರ ಒಂದೇ ವಾರದಲ್ಲಿ 145 ಕೋಟಿ ಗ್ರಾಸ್
250Cr ಕ್ಲಬ್‌ಗೆ ಗುಳಿಗ ದೃಶ್ಯವೈಭವ.. ಹೊಂಬಾಳೆ ವಿಜಯೋತ್ಸವ
ಇಲ್ಲಿಯವರೆಗೂ ಬಾಕ್ಸ್ ಆಫೀಸ್ ಮಟ್ಟದಲ್ಲಿ ರಾಕಿಭಾಯ್ ಯಶ್‌ರ ಕೆಜಿಎಫ್ ಚಾಪ್ಟರ್-2 ಸಿನಿಮಾ ಮಾಸ್ಟರ್‌ಪೀಸ್ ಆಗಿತ್ತು. ಆದ್ರೀಗ ಆ ಮಾಸ್ಟರ್‌ಪೀಸ್‌ಗೇ ಮಾಸ್ಟರ್‌ಸ್ಟ್ರೋಕ್ ನೀಡಿದೆ ಶೆಟ್ರ ಕಾಂತಾರ. ಯೆಸ್.. ಕರ್ನಾಟಕದಲ್ಲಿ ಕೆಜಿಎಫ್-2 ದಾಖಲೆಗಳನ್ನ ಉಡೀಸ್ ಮಾಡಿದೆ ಕಾಂತಾರ ಚಾಪ್ಟರ್-1. ಸುಮಾರು 8 ವಾರದಲ್ಲಿ ಯಶ್ ಕೆಜಿಎಫ್-2 ಗಳಿಸಿದ್ದ 100 ಕೋಟಿ ಗಳಿಕೆಯನ್ನ ರಿಷಬ್ ಶೆಟ್ಟಿಯ ಕಾಂತಾರ ಜಸ್ಟ್ ಒಂದೇ ವಾರದಲ್ಲಿ ಸರಿಗಟ್ಟಿದೆ. ಹೊಂಬಾಳೆ ಫಿಲಂಸ್ ಅಧಿಕೃತ ಮೂಲಗಳ ಪ್ರಕಾರ ಕಾಂತಾರ ಒಂದೇ ವಾರದಲ್ಲಿ ಕರುನಾಡಲ್ಲಿ ಬರೋಬ್ಬರಿ 145 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಶೇರ್ ಮಾತ್ರವೇ 80 ಕೋಟಿ ಬಂದಿದೆ ಎನ್ನಲಾಗ್ತಿದೆ.
ಸದ್ಯ 250 ಕೋಟಿ ಕ್ಲಬ್‌ಗೆ ಸೇರುತ್ತಿರುವ ಕಾಂತಾರ-1, ಕರ್ನಾಟಕದಲ್ಲಿ ಫಾಸ್ಟೆಸ್ಟ್ 250 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗ್ತಿದೆ. ಹೌದು.. ಕನ್ನಡದ ಚಿತ್ರಗಳು ಇಲ್ಲಿಯವೆಗೂ ಕರ್ನಾಟಕದಲ್ಲಿ 100 ರಿಂದ 120 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದವು. ಆದ್ರೀಗ ಆ ಎಲ್ಲಾ ದಾಖಲೆಗಳನ್ನ ಚಿಂದಿ ಉಡಾಯಿಸೋ ಮೂಲಕ ನೂತನ ದಾಖಲೆಗಳನ್ನ ಬರೆಯುತ್ತಿದೆ ರಿಷಬ್ ಶೆಟ್ರ ಕಾಂತಾರ ಸಿನಿಮಾ.
ದೆಹಲಿ ಸಿಎಂ ಸೇರಿದಂತೆ ದೇಶದ ಎಲ್ಲೆಡೆ ಕಾಂತಾರ ಚಿತ್ರವನ್ನ ರಾಜಕಾರಣಿಗಳು, ತಂತ್ರಜ್ಞರು ಹಾಗೂ ಸೂಪರ್ ಸ್ಟಾರ್‌ಗಳು ಹಾಡಿ ಹೊಗಳುತ್ತಿದ್ದಾರೆ. ದೇವರ ಮೇಲೆ ನಂಬಿಕೆ ಇಲ್ಲದಂತಹ, ಹಿಂದುತ್ವವನ್ನು ವಿರೋಧಿಸುತ್ತಾ ಬರ್ತಿರೋ ಬಹುಭಾಷಾ ನಟ ಪ್ರಕಾಶ್ ರೈ ಅಂತವರೇ ಕಾಂತಾರ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ರೈ ಸೈ ಎಂದ ಈ ಒಂದು ದಾಖಲೆಯೇ ಸಾವಿರ ಕೋಟಿ ಬಾಕ್ಸ್ ಆಫೀಸ್‌ಗೆ ಸಮ ಅನ್ನೋದು ಕೂಡ ಸದ್ಯದ ಟಾಕ್.
ಒಟ್ಟಾರೆ ಎಲ್ಲಾ ಭಾಷೆಗಳಲ್ಲಿ ಕಾಂತಾರಕ್ಕೆ ಸಿಕ್ಕ ಈ ಟ್ರೆಮಂಡಸ್ ರೆಸ್ಪಾನ್ಸ್‌ಗೆ ಹೊಂಬಾಳೆ ಫಿಲಂಸ್ ದಿಲ್‌ಖುಷ್ ಆಗಿದೆ. ಮತ್ತೊಂದು ವಿಜಯೋತ್ಸವದ ಸಂಭ್ರಮದಲ್ಲಿರೋ ವಿಜಯ್ ಕಿರಗಂದೂರು ಸಾರ್ಥಕ ಭಾವ ತೋರಿದ್ದಾರೆ. ಸದಾ ಜನ ಮೆಚ್ಚುವಂತಹ ಸದಭಿರುಚಿಯ ಚಿತ್ರಗಳನ್ನ ನೀಡ್ತಾ ಬರ್ತಿರೋ ಹೊಂಬಾಳೆ, ಬಾಲಿವುಡ್ ಜೊತೆ ಹಾಲಿವುಡ್ ಪ್ರೊಡಕ್ಷನ್ ಬ್ಯಾನರ್‌ಗಳು ಕೂಡ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ.