ಮನದ ಕಡಲು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ಯುವ ನಾಯಕ ಸುಮುಖ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಸುಮುಖ್ ಬರ್ತಡೇ ವಿಶೇಷವಾಗಿ ಹೊಸ ಸಿನಿಮಾ ಘೋಷಣೆಯಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಸುಮುಖ್ ಈಗ ಹೊಸ ಅವತಾರವೆತ್ತಿದ್ದಾರೆ. ಚಾಕಲೇಟ್ ಹೀರೋ ಸುಮುಖ್ ಕಂಪ್ಲೀಟ್ ರಗಡ್ ಅವತಾರ ತಾಳಿದ್ದಾರೆ.
ಹೇಗಿದೆ ಪೋಸ್ಟರ್?
ಸುಮುಖ್ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಗಣೇಶ ಪೇಟಿಂಗ್ ಮುಂದೆ ಕೈಯಲ್ಲಿ ಪೇಂಟ್ ಬಾಕ್ಸ್ ಹಿಡಿದು ನಿಂತಿರುವ ಸುಮುಖ್ ಗೆ ಅವನ ನಿಷ್ಠೆ ತಲೆಬಾಗುವುದಿಲ್ಲ. ಅದು ಜ್ವಾಲೆಯಂತೆ ಹತ್ತಿ ಉರಿಯುತ್ತದೆ ಎಂಬ ಅಡಿ ಬರಹ ಕೊಡಲಾಗಿದೆ.
ನಿರ್ದೇಶಕರು ಯಾರು?
ಕಳೆದ ಹತ್ತದಿನೈದು ವರ್ಷಗಳಿಂದ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಸಂಜಯ್ ಕೆಕೆ ಎಂಬುವವರು ಈ ಚಿತ್ರ ನಿರ್ದೇಶಕನಕ್ಕಿಳಿದಿದ್ದಾರೆ. ಈ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿರುವ ಸಂಜಯ್ ಕಥೆ ಬರೆದು ಚೊಚ್ಚಲ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ನೈಜ ಕಥೆಯಲ್ಲಿ ಸುಮುಖ್
ಸಂಜಯ್ ಅವರು ನೈಜ ಕಥೆಯನ್ನು ಹೇಳೋದಿಕ್ಕೆ ಹೊರಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆಯೊಂದನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಕಥೆ ಎಣಿದು ಇದೀಗ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಸುಮುಖ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಹಾಗೂ ಸುಮುಖ್ ಅವರ ಹೊಸ ಸಾಹಸಕ್ಕೆ ರಾಯಲ್ ಫೈ ಎಂಟರ್ಟೈನ್ಮೆಂಟ್ ಬಂಡವಾಳ ಹಾಕುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಉಳಿದ ಅಪ್ ಡೇಟ್ ನೀಡಲಿದೆ.