ನಟ ದರ್ಶನ್ ಸದ್ಯ ಜೈಲಲ್ಲಿದ್ದಾರೆ. ಅದಕ್ಕೆ ಕಾರಣ ರೇಣುಕಾಸ್ವಾಮಿ ಹತ್ಯೆ ಪ್ರಕರಣ. ಇಲ್ಲಿ ದರ್ಶನ್ ರೇಣುಕಾಸ್ವಾಮಿಯನ್ನ ಹತ್ಯೆ ಮಾಡಿದ್ರಾ ಇಲ್ವಾ ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆ. ಅದೇ ರೀತಿ ಅವರಿಗೆ ಬೆನ್ನು ನೋವು ಇದೆಯಾ ಅನ್ನೋದು ಕೂಡ ಯಕ್ಷ ಪ್ರಶ್ನೆಯಾಗಿ ಕಾಡ್ತಿದೆ. ಹಾಗಾದ್ರೆ ಸದ್ಯ ವೈರಲ್ ಆಗ್ತಿರೋ ಡೆವಿಲ್ ಶೂಟಿಂಗ್ ಸೆಟ್‌ನಲ್ಲಾದ ಕಥೆ ಏನು ಅನ್ನೋದನ್ನ ನೀವೇ ನೋಡಿ.
ಇದು ಡಿಬಾಸ್ ದರ್ಶನ್ ಬೇಲ್ ಮೇಲೆ ಹೊರಗೆ ಬಂದಿದ್ದಾಗ ನಡೆದಿರೋ ಡೆವಿಲ್ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಸೆರೆಯಾದ ವಿಡಿಯೋ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ವಿಡಿಯೋ. ನಟ ದರ್ಶನ್ ತೀವ್ರ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರೋದಕ್ಕೆ ಪುರಾವೆ ಆಗ್ತಿರೋ ದೃಶ್ಯದ ಝಲಕ್. ಹೌದು.. ನಾಯಕನಟಿ ರಚನಾ ರೈರನ್ನ ಹೊತ್ತುಕೊಂಡು ಓಡುವ ದೃಶ್ಯದಲ್ಲಿ ಆಕೆಯನ್ನ ಹೆಗಲ ಮೇಲೆ ಹೊತ್ತಾಕ್ಷಣ ಬೆನ್ನು ನೋವು ಕಾಣಿಸಿಕೊಂಡಿದೆ.

ಕೂಡಲೇ ನೆಲಕ್ಕೆ ಕಾಲು ಊರಿದ ದರ್ಶನ್, ಲೈಟ್ ಬಾಯ್‌ಗಳು ಲೈಟಿಂಗ್ ಮ್ಯಾಟ್‌ನ ಹಾಸಿದಾಕ್ಷಣ ಅದರ ಮೇಲೆ ಬೋರಲು ಮಲಗಿ ಬಿಡ್ತಾರೆ. ಇದು ನಿಜಕ್ಕೂ ನೋಡೋಕೆ ಘಾಸಿ ಆಗುವಂತಹ ದೃಶ್ಯ. ಒಂದು ವೇಳೆ ದರ್ಶನ್‌ಗೆ ಬೆನ್ನು ನೋವು ಇಲ್ಲವಾಗಿದ್ದರೆ, ಅಲ್ಲಿ ಅವರಿಗೆ ನಾಟಕ ಮಾಡುವ ಪ್ರಮೇಯ ಆದ್ರೂ ಏನಿತ್ತು ಅಲ್ಲವೇ..? ಹೀಗೊಂದು ಸಂದೇಹ ಸಹಜವಾಗಿಯೇ ಮೂಡಲಿದೆ.
ದರ್ಶನ್‌ಗೆ ಬೆನ್ನು ನೋವು ಇದ್ಯಾ ? ಬಿಲಿಯನ್ ಡಾಲರ್ ಪ್ರಶ್ನೆ
L1 L5 ಆಗಿದೆ ಎಂದಿದ್ದ ದಿನಕರ್..ಕುದುರೆಯಿಂದ ಬಿದ್ದಿದ್ದ ದಚ್ಚು

ಆದ್ರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಳ್ಳಾರಿ ಜೈಲಿಂದ ಬೇಲ್ ಪಡೆದು ಹೊರಗೆ ಬರೋಕ್ಕೆ ಅಸ್ತ್ರವೇ ಈ ಬ್ಯಾಕ್‌ಪೇನ್. ದರ್ಶನ್ ಪರ ವಕೀಲರು ಮೆಡಿಕಲ್ ಬೇಲ್ ಮೇಲೆ ದಚ್ಚುನ ಹೊರಕ್ಕೆ ತರೋಕೆ ಕೋರ್ಟ್‌ಗೆ ಕೊಡುವ ಪ್ರಮುಖ ರೀಸನ್ ಆತನಿಗಿರೋ ಬೆನ್ನು ನೋವು. ಅಂದಹಾಗೆ ದರ್ಶನ್ ಬಳ್ಳಾರಿ ಜೈಲಲ್ಲಿ ಬೆನ್ನು ಹಿಡ್ಕೊಂಡು ಒದ್ದಾಡುವ ಸಾಕಷ್ಟು ದೃಶ್ಯಾವಳಿಗಳು ಕೂಡ ಅದಕ್ಕೆ ಸಾಕ್ಷಿ ಆಗಿವೆ. ಕೂಡಲೇ ದರ್ಶನ್‌ಗೆ ಸರ್ಜರಿ ಮಾಡಿಸಬೇಕು. ಇಲ್ಲ ಅಂದಲ್ಲಿ ಪ್ಯಾರಾಲಿಸಿಸ್ ಆಗುತ್ತೆ ಲಕ್ವಾ ಹೊಡೆಯುತ್ತೆ ಅಂತೆಲ್ಲಾ ರೀಸನ್ ನೀಡಿ, ಮೆಡಿಕಲ್ ಬೇಲ್ ಪಡೆದು ಹೊರಗೆ ತರಲಾಗಿತ್ತು.

ಡೆವಿಲ್ ಶೂಟಿಂಗ್ ಸೆಟ್‌ನಲ್ಲಿ ಬ್ಯಾಕ್‌ಪೇನ್‌ಗೆ ದಾಸ ನರಳಾಟ
ಮೆಡಿಕಲ್ ಬೇಲ್‌ಗೆ ಅದೇ ಅಸ್ತ್ರ.. ಬೇಲ್ ಕ್ಯಾನ್ಸಲ್‌ಗೂ ಸೂತ್ರ..!
ದಾಸ ದರ್ಶನ್ ಮೆಡಿಕಲ್ ಬೇಲ್ ಮೇಲೆ ಹೊರಗೆ ಬಂದ ಬಳಿಕ ರೆಗ್ಯುಲರ್ ಬೇಲ್ ಪಡೆದುಕೊಂಡಿದ್ರು. ಸುಮಾರು 6 ತಿಂಗಳು ಆರಾಮಾಗಿ ಓಡಾಡಿಕೊಂಡು, ಸಿನಿಮಾ ಶೂಟಿಂಗ್ ಜೊತೆ ಸ್ನೇಹಿತರ ಸಿನಿಮಾಗಳ ಪ್ರಮೋಷನ್‌ನಲ್ಲೂ ಭಾಗಿಯಾಗಿದ್ರು. ಪಾರ್ಟಿಗಳು ಎಲ್ಲಾ ಜೋರಾಗೇ ನಡೆದಿದ್ದವು. ಎಲ್ಲಕ್ಕೂ ವಿಡಿಯೋಗಳು ಸಾಕ್ಷಿಗಳಾಗಿತ್ತು. ಆದ್ರೆ ಪೊಲೀಸರು ಬೇಲ್ ಕ್ಯಾನ್ಸಲ್‌ಗಾಗಿ ಸುಪ್ರೀಂ ಮೊರೆ ಹೋಗಿದ್ರು. ಸುಪ್ರೀಂ ಕೋರ್ಟ್ ಪುನಃ ದರ್ಶನ್ ಬೇಲ್ ರದ್ದುಗೊಳಿಸಿ, ಪರಪ್ಪನ ಅಗ್ರಹಾರ ಸೇರುವಂತೆ ಮಾಡಿದೆ.

ಒನ್ಸ್ ಅಗೈನ್ ದರ್ಶನ್ ಬೇಲ್ ಕ್ಯಾನ್ಸಲ್ ಆಗೋಕೆ ಮತ್ತದೇ ಬೆನ್ನು ನೋವು ಪ್ರಮುಖ ಕಾರಣವಾಗುತ್ತೆ. ಯೆಸ್.. ಅಂದು ಸರ್ಜರಿ ಮಾಡಿಸಬೇಕು ಅಂತ ಬೇಲ್ ಪಡೆದು ಹೊರಬಂದ ದರ್ಶನ್ ಅಂದಿನಿಂದ ಬೇಲ್ ಕ್ಯಾನ್ಸಲ್ ಆಗುವವರೆಗೆ ಸರ್ಜರಿ ಮಾಡಿಸಿರಲ್ಲ. ಬ್ಯಾಕ್ ಪೇನ್‌ಗಾಗಿ ವೈದ್ಯರ ಬಳಿ ಒಂದು ಟ್ಯಾಬ್ಲೆಟ್ ಕೂಡ ಪಡೆದಿರೋದಕ್ಕೆ ಪುರಾವೆ ಇಲ್ಲ ಎನ್ನಲಾಗ್ತಿದೆ. ಅದೇ ಕಾರಣದಿಂದ ಸುಳ್ಳು ರೀಸನ್ ನೀಡಿ ಬೇಲ್ ಪಡೆದಿದ್ರು ಅಂತ ಅವ್ರ ಜಾಮೀನು ರದ್ದುಗೊಳಿಸಿತ್ತು ಸುಪ್ರೀಂ.

ಇವೆಲ್ಲವೂ ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿದೆ. ಇನ್ನು ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿರೋ ದರ್ಶನ್ ಸಹೋದರ ದಿನಕರ್ ತೂಗುದೀಪ್, ದರ್ಶನ್‌ಗೆ ಎಲ್1 ಎಲ್5 ಆಗಿದೆ. ಅವರಿಗೆ ಬೆನ್ನು ನೋವು ಇರೋದು ನಿಜ. ಒಮ್ಮೆ ಶೂಟಿಂಗ್‌ನಲ್ಲಿ ಕುದುರೆಯಿಂದ ಕೆಳಗೆ ಬಿದ್ದಿದ್ರು. ಆಗಲಿಂದಲೂ ನೋವಿಗೆ ತುಂಬಾ ಒದ್ದಾಡ್ತಾರೆ ಅಂದಿದ್ರು.
ಒಟ್ಟಾರೆ ಇವೆಲ್ಲವನ್ನು ಅವಲೋಕಿಸಿದಾಗ ನಿಜಕ್ಕೂ ದರ್ಶನ್‌ಗೆ ಬೆನ್ನು ನೋವು ಇದೆಯಾ ಅನ್ನೋ ಪ್ರಶ್ನೆ ಮೂಡಲಿದೆ. ರಾಜಮೌಳಿಯ ಬಾಹುಬಲಿ ಭಾಗ-1ರಲ್ಲಿ ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ಯಾಕೆ ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆಯಂತೆ ಈಗ ಬಹಳ ಚರ್ಚೆಗೆ ಗ್ರಾಸವಾಗಿದೆ ಈ ಡಿಬಾಸ್ ಬ್ಯಾಕ್‌ಪೇನ್.





