ಎಕ್ಕಗೆ ದೊಡ್ಮನೆ ಶಕ್ತಿ ಇದ್ರೆ, ಜೂನಿಯರ್‌ಗೆ ರಾಜಮೌಳಿ ಯುಕ್ತಿಯಿದೆ. ಗಾಲಿ ಜನಾರ್ದನ್ ರೆಡ್ಡಿ ಮಗ ಕಿರೀಟಿ, ಬಹುಭಾಷಾ ಲೆಜೆಂಡ್ಸ್ ಜೊತೆ ಪಳಗಿ ತೆರೆ ಮೇಲೆ ಬಂದಿದ್ದಾರೆ. ಹಾಗಾದ್ರೆ ಕಿರೀಟಿಗೆ ಸಿಕ್ತಾ ಭರವಸೆಯ ಸ್ಟಾರ್ ಕಿರೀಟ..? ಜೂನಿಯರ್ ಕಥೆ ಪ್ರೇಕ್ಷಕರಿಗೆ ಇಷ್ಟವಾಯ್ತಾ..? ಸಿನಿಮಾ ನೋಡಿ ಜನ ಹೇಳಿದ್ದೇನು..? ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕೋಟಿ ಗಳಿಸುತ್ತೆ..?
ಜೂನಿಯರ್ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿರೋ ಬಹು ನಿರೀಕ್ಷಿತ ಸಿನಿಮಾ. ಗಣಿ ಧಣಿ ಗಾಲಿ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ, ನಾಯಕನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋ ಸಿನಿಮಾ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಚಲನಚಿತ್ರಂ ಬಂಡವಾಳ ಹೂಡಿರುವ ಈ ಸಿನಿಮಾಗೆ ರಾಧಾಕೃಷ್ಣ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಅಂದಹಾಗೆ ಇಂದಿನಿಂದ ಕಿರೀಟಿ ಜೂನಿಯರ್ ಅಲ್ಲ. ಯಾಕಂದ್ರೆ ಆತ ಚಿತ್ರರಂಗಕ್ಕೆ ಅಫಿಶಿಯಲಿ ಕಾಲಿಟ್ಟಾಗಿದೆ. ಚೊಚ್ಚಲ ಸಿನಿಮಾ ಬಿಗ್ ಸ್ಕ್ರೀನ್ ಗೆ ಎಂಟ್ರಿ ಆಗಿದೆ. ಬಹುಭಾಷಾ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಪಳಗಿರೋ ಕಿರೀಟಿಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ, ಶ್ರೀಲೀಲಾ ಅಂತಹ ಕಲಾವಿದರ ಸಾಥ್ ಸಿಕ್ಕಿರೋದು ಇಂಟರೆಸ್ಟಿಂಗ್.
ಆಂಧ್ರ ಹಾಗೂ ಕರ್ನಾಟಕದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಸ್ಕ್ರೀನ್ಸ್‌ನಲ್ಲಿ ತೆರೆಕಂಡಿರೋ ಈ ಸಿನಿಮಾದ ಅಸಲಿ ಸ್ಟ್ರೆಂಥ್ ಎಸ್ ಎಸ್ ರಾಜಮೌಳಿ. ಅಂದು ಬೆಂಗಳೂರಿನಲ್ಲಿ ಸೆಟ್ಟೇರಿದ ಜೂನಿಯರ್ ಸಿನಿಮಾದ ಮುಹೂರ್ತ ಪೂಜೆಯಲ್ಲಿ ಭಾಗಿಯಾಗಿದ್ದ ಮೌಳಿ, ಕ್ಲಾಪ್ ಮಾಡಿ ಶುಭ ಹಾರೈಸಿದ್ರು. ಇನ್ನು ರಿಲೀಸ್‌ಗೂ ಮುನ್ನ ನಡೆದ ಪ್ರೀ-ರಿಲೀಸ್ ಇವೆಂಟ್‌ನಲ್ಲೂ ಭಾಗಿಯಾಗಿ ಕಿರೀಟಿ ಸೇರಿದಂತೆ ಇಡೀ ತಂಡಕ್ಕೆ ಶುಭ ನುಡಿದಿದ್ದಾರೆ.