ಸಿಎಂ ದಳಪತಿ ವಿಜಯ್ ಮಗ ಜೇಸನ್ ಸಂಜಯ್ ಚಿತ್ರರಂಗಕ್ಕೆ ಅಫಿಶಿಯಲಿ ಎಂಟ್ರಿ ಕೊಡೋಕೆ ಕೌಂಟ್‌ಡೌನ್ ಶುರುವಾಗಿದೆ. ಮೊದಲು ಡೈರೆಕ್ಟರ್ ಆಗಿ ಕಾಲಿಡ್ತಿದ್ದು, ಚೊಚ್ಚಲ ನಿರ್ದೇಶನದ ಸಿಗ್ಮಾ ಸಿನ್ಮಾದ ಟ್ರೈಲರ್ ಇತ್ತೀಚೆಗೆ ಲಾಂಚ್ ಆಗಿದೆ. ಇಂಡಿಯನ್ ಸ್ಪೀಲ್‌ಬರ್ಗ್ ರಾಜಮೌಳಿ ಸಿಗ್ಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅದು ಹೇಗಿದೆ..? ಮೌಳಿ ಹೇಳಿದ್ದೇನು ಅನ್ನೋದ್ರ ಫುಲ್ ಡಿಟೇಲ್ಸ್ ಇಲ್ಲಿದೆ…
- ‘ಸಿಗ್ಮಾ’ಗೆ ರಾಜಮೌಳಿ ಜೈ.. ಹೇಗಿದೆ s/o ಸಿಎಂ ವಿಜಯ್ ಸಿನ್ಮಾ?
- ಆ್ಯಕ್ಷನ್ ಅಡ್ವೆಂಚರ್ ಹೀಸ್ಟ್ ಮೂವಿಗೆ ಜಕ್ಕಣ್ಣನೇ ಗ್ರೀನ್ ಸಿಗ್ನಲ್
- ಡೈರೆಕ್ಟರ್ ಜೇಸನ್ ಸಿನಿಮೋತ್ಸಾಹ ಹೆಚ್ಚಿಸಿದ ಬಾಹುಬಲಿ ಡೈರೆಕ್ಟರ್
- ಅಕ್ಟೋಬರ್ 2ಕ್ಕೆ ದಳಪತಿ ವಿಜಯ್ ಮಗನ ಚೊಚ್ಚಲ ಚಿತ್ರ ತೆರೆಗೆ
ಇದು ಇದೇ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ತೆರೆಗೆ ಬರೋಕೆ ಸಜ್ಜಾಗಿರೋ ಸಿಗ್ಮಾ ಸಿನಿಮಾದ ಟ್ರೈಲರ್ ಝಲಕ್. ತಮಿಳು ಹಾಗೂ ತೆಲುಗು ಎರಡೆರಡು ಭಾಷೆಗಳಲ್ಲಿ ತಯಾರಾಗಿರೋ ಈ ಚಿತ್ರದ ಟ್ರೈಲರ್ ಕಂಟೆಂಟ್ ಹಾಗೂ ಮೇಕಿಂಗ್‌ನಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಹಂಡ್ರೆಡ್ ಪರ್ಸೆಂಟ್ ಆ್ಯಕ್ಷನ್ ಅಡ್ವೆಂಚರ್ ಹೀಸ್ಟ್ ಮೂವಿ ಇದಾಗಿದ್ದು, ನೋಡುಗರ ಕೌತುಕತೆ ಹೆಚ್ಚಿಸಿದೆ. ಆದ್ರೆ ಇದರ ಹಿಂದಿನ ಅಸಲಿ ಮಾಸ್ಟರ್‌ಮೈಂಡ್ ತಮಿಳುನಾಡು ಸಿಎಂ ದಳಪತಿ ವಿಜಯ್ ಮುದ್ದಿನ ಮಗ ಜೇಸನ್ ಸಂಜಯ್.
ಹೌದು.. ತಂದೆಯಂತೆ ಸೂಪರ್ ಸ್ಟಾರ್ ಆಗುವ ಕನಸು ಬಿಟ್ಟು, ಬಣ್ಣದ ಜಗತ್ತಿನಲ್ಲಿ ಸ್ಟಾರ್ ಡೈರೆಕ್ಟರ್ ಆಗೋಕೆ ಮುಂದಾಗಿದ್ದಾರೆ. ಸಿಗ್ಮಾ ಸಿನಿಮಾ ಜೇಸನ್ ಸಂಜಯ್‌ರ ಚೊಚ್ಚಲ ನಿರ್ದೇಶನದ ಚಿತ್ರ. ಅವರೇ ಕಥೆ ಬರೆದು, ಆ್ಯಕ್ಷನ್ ಕಟ್ ಹೇಳಿದ್ದು, ಸಂದೀಪ್ ಕಿಶನ್ ಹಾಗೂ ಫರಿಯಾ ಅಬ್ದುಲ್ಲಾ ಸಿನಿಮಾದ ಲೀಡ್‌ನಲ್ಲಿ ಅಭಿನಿಯಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೈಲರ್, ಆಡಿಯೋ ಲಾಂಚ್ ಇವೆಂಟ್ಸ್ ಹಾಗೂ ಪ್ರೀ ರಿಲೀಸ್ ಇವೆಂಟ್ಸ್ ನಡೆದವು. ಅವುಗಳಲ್ಲೆಲ್ಲಾ ಜೇಸನ್ ಸಂಜಯ್ ಮಾತುಗಳು ಎಲ್ಲರ ಗಮನ ಸೆಳೆದಿವೆ.
ಇಂಟರೆಸ್ಟಿಂಗ್ ಅಂದ್ರೆ.. ನಿರ್ದೇಶನದ ಕನಸು ಕಂಡು ಅದ್ರ ಬೆನ್ನ ಹತ್ತಿ, ಸಾಕಾರಗೊಳಿಸಿಕೊಳ್ತಿರೋ ಸಿಎಂ ಮಗನ ಆಶಯಕ್ಕೆ ಬಾಹುಬಲಿ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಸಾಥ್ ನೀಡಿದ್ದಾರೆ. ಯೆಸ್.. ಇಂಡಿಯನ್ ಸ್ಪೀಲ್ ಬರ್ಗ್ ಅಂತಲೇ ಕರೆಯಲ್ಪಡುವ ರಾಜಮೌಳಿ, ಈ ಉದಯೋನ್ಮುಖ ಹಾಗೂ ಸಿನಿಮೋತ್ಸಾಹಿ ಯಂಗೆಸ್ಟ್ ಡೈರೆಕ್ಟರ್ ಕೆಲಸವನ್ನ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯೆಸ್.. ಟ್ರೈಲರ್ ಲಾಂಚ್ ಇವೆಂಟ್‌ಗೂ ಮೊದಲೇ ಸಿಗ್ಮಾ ಟ್ರೈಲರ್ ನೋಡಿ, ಕಲಾವಿದರು, ತಂತ್ರಜ್ಞರ ಎಫರ್ಟ್‌ಗಳನ್ನ ಮನಸಾರೆ ಪ್ರಶಂಸಿಸಿದ್ದಾರೆ. ಅಲ್ಲದೆ ಜೇಸನ್ ಸಂಜಯ್‌ಗೆ ಆಲ್ ದಿ ಬೆಸ್ಟ್ ಹೇಳಿ, ತಮ್ಮದೇ ಶೈಲಿಯಲ್ಲಿ GenZಗೆ ಇಷ್ಟವಾಗುವಂತಹ ಫನ್ ರೈಡ್ ಆ್ಯಕ್ಷನ್ ಸಿನಿಮಾದ ಟ್ರೈಲರ್ ರಿವ್ಯೂ ಮಾಡಿರೋದು ವಿಶೇಷ. ರಾಜಮೌಳಿಯ ಡೈರೆಕ್ಷನ್ ನೋಡಿ ಸ್ಫೂರ್ತಿಗೊಂಡು ಚಿತ್ರರಂಗಕ್ಕೆ ಬಂದವರು ಸಾಕಷ್ಟು ಮಂದಿ ಇದ್ದಾರೆ. ಅಂಥದ್ರಲ್ಲಿ ಖುದ್ದು ಮೌಳಿಯೇ ಈ ರೀತಿ ಜೇಸನ್ ಮೊದಲ ಸಿನಿಮಾನ ಹಾಡಿ, ಹೊಗಳಿರೋದು ಗ್ರೇಟ್.
ಮನಿ ಹೀಸ್ಟ್ ಸೀರೀಸ್‌ನಂತೆ ಈ ಸಿನಿಮಾದ ಕಥೆ ಇಂಪ್ರೆಸ್ಸೀವ್ ಹಾಗೂ ಇಂಟರೆಸ್ಟಿಂಗ್ ಆಗಿದೆ. ಜೇಸನ್ ಕೂಡ ಒಳ್ಳೆಯ ಕಲಾವಿದರೊಂದಿಗೆ ಅದ್ಭುತ ಮೇಕಿಂಗ್ ಮಾಡಿದ್ದಾರೆ. ಸ್ಟಂಟ್ಸ್ ಡಿಫರೆಂಟ್ ಆಗಿದ್ದು, ಶಾಟ್ ಕಂಪೊಸಿಷನ್ ಕೂಡ ಮೆಚ್ಚುವಂತಿದೆ. ಒಟ್ಟಾರೆ ಚೊಚ್ಚಲ ಪ್ರಯತ್ನದಲ್ಲೇ ಇಂಥದ್ದೊಂದು ರಿಸ್ಕಿ ಕಾನ್ಸೆಪ್ಟ್ ಸಿನಿಮಾನ ಕಟ್ಟಿಕೊಟ್ಟಿರೋ ಜೇಸನ್ ಗಟ್ಸ್‌ನ ಮೆಚ್ಚಲೇಬೇಕು. ದಳಪತಿ ವಿಜಯ್ ಫ್ಯಾನ್ಸ್ ಕೂಡ ಈ ಸಿನಿಮಾಗೆ ಸಪೋರ್ಟ್ ಮಾಡಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಅಂತ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





