ಕಿಚ್ಚ-ದಚ್ಚು ಹುಡುಗರ ಹಯಗ್ರೀವ ಸಿನಿಮಾ ಯಶಸ್ವೀ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಅರೇ.. ದರ್ಶನ್ ಆಪ್ತ ಧನ್ವೀರ್ ಹೀರೋ ಓಕೆ. ಸುದೀಪ್ ಆಪ್ತ ಯಾರಿದ್ದಾರೆ ಈ ಚಿತ್ರದಲ್ಲಿ ಅಂತ ಹುಬ್ಬೇರಿಸಬೇಡಿ. ಅದ್ಯಾರು ಅನ್ನೋ ಸರ್‌ಪ್ರೈಸ್ ಸ್ಟೋರಿ ಜೊತೆ ಮೂರೇ ದಿನಕ್ಕೆ 3 ಕೋಟಿ ಗಡಿ ಮುಟ್ಟಿದ ಹಯಗ್ರೀವ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಕೂಡ ಕೊಡ್ತೀವಿ ನೋಡಿ…
- ಕಿಚ್ಚ- ದಚ್ಚು ಹುಡುಗರ ‘ಹಯಗ್ರೀವ’.. 3 ದಿನಕ್ಕೆ 3 ಕೋಟಿ..?!
- ಹೀರೋ ಧನ್ವೀರ್‌ಗೆ ಸುದೀಪ್ ಹುಡ್ಗ ಸುನಿಲ್ ರಾವ್ ವಿಲನ್
- ಎಲ್ಲೆಡೆ ಹೌಸ್‌ಫುಲ್.. 2ನೇ ವಾರದತ್ತ ಹಯಗ್ರೀವ ದಾಂಗುಡಿ
- ಅಭಿಮಾನಿಗಳ ಜೊತೆ ಚಿತ್ರಪ್ರೇಮಿಗಳಿಗೂ ರುಚಿಸಿದ ಹಯಗ್ರೀವ
ಕಥೆಯಲ್ಲಿ ಹೊಸತನ ಇದ್ದು, ಪಾತ್ರಗಳಲ್ಲಿ ಜೀವಂತಿಕೆ ಇದ್ರೆ ಸಾಕು ಆ ಸಿನಿಮಾ ಸೌಂಡ್ ಮಾಡಿ ಬಿಡುತ್ತೆ. ಸದ್ಯ ಕಳೆದ ಶುಕ್ರವಾರ ತೆರೆಕಂಡ ಹಯಗ್ರೀವ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗ್ತಿದೆ. ಧನ್ವೀರ್ ಗೌಡ- ಸಂಜನಾ ಆನಂದ್ ಲೀಡ್‌ನಲ್ಲಿರೋ ಈ ಸಿನಿಮಾ ಮಲಯಾಳಂ ಕಂಟೆಂಟ್ ಬೇಸ್ಡ್ ಚಿತ್ರಗಳಂತೆ ನೋಡುಗರಿಗೆ ಮಸ್ತ್ ಮನರಂಜನೆ ನೀಡ್ತಿದೆ. ಹಾಗಾಗಿ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ.
ರಘು ಕುಮಾರ್ ಓ ಆರ್ ನಿರ್ದೇಶನದ ಹಾಗೂ ಸಮೃದ್ಧಿ ಮಂಜುನಾಥ್ ನಿರ್ಮಾಣದ ಹಯಗ್ರೀವಗೆ ಮೈಥಾಲಜಿ ಟಚ್ ನೀಡಿರೋದ್ರಿಂದ ನೋಡುಗರಿಗೆ ಬೇಗ ಕನೆಕ್ಟ್ ಆಗ್ತಿದೆ. ಮೆಡಿಕಲ್ ಸೈನ್ಸ್ ಟಚ್ ಕೂಡ ಇರೋ ಈ ಸಿನಿಮಾದಲ್ಲಿ ಲವ್, ಆ್ಯಕ್ಷನ್, ರೊಮ್ಯಾನ್ಸ್, ಎಮೋಷನ್, ಕಾಮಿಡಿ.. ಹೀಗೆ ಎಲ್ಲವೂ ಹದವಾಗಿ ಬ್ಲೆಂಡ್ ಆಗಿವೆ. ಹಾಗಾಗಿಯೇ ಸಿನಿಮಾಗೆ ಅಭೂತಪೂರ್ವ ಪ್ರಶಂಸೆ, ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ.
ಅಂದಹಾಗೆ ಈ ಸಿನಿಮಾ ಕಿಚ್ಚ-ದಚ್ಚು ಹುಡುಗರ ಸಿನಿಮಾ ಅಂದ್ರೆ ತಪ್ಪಾಗಲ್ಲ. ಅರೇ.. ಧನ್ವೀರ್ ಗೌಡ ಏನೋ ಡಿಬಾಸ್ ದರ್ಶನ್ ಹುಡುಗ ಓಕೆ. ಸುದೀಪ್ ಹುಡುಗ ಯಾರಿದ್ದಾರೆ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಹಯಗ್ರೀವ ಚಿತ್ರದ ಖಡಕ್ ಖಳನಾಯಕ ಸುನಿಲ್ ರಾವ್ ಅಪ್ಪಟ ಬಾದ್‌ಷಾ ಕಿಚ್ಚನ ಹುಡುಗ. ಅದಕ್ಕೆ ಇತ್ತೀಚೆಗೆ ಸಿಸಿಎಲ್‌ನಲ್ಲಿ ಬೌಲಿಂಗ್ ಮೂಲಕ ಮಿಂಚಿದ ಸುನಿಲ್ ಸಾಕ್ಷಿಯಾಗಿದ್ದಾರೆ.
ಹೌದು.. ಎಕ್ಸ್ ಕ್ಯೂಸ್ ಮೀ ಖ್ಯಾತಿಯ ಸುನಿಲ್ ರಾವ್, ಹಯಗ್ರೀವದ ವಿಲನ್. ಧನ್ವೀರ್ ಗೌಡಗೆ ಚಳ್ಳೆ ಹಣ್ಣು ತಿನಿಸುತ್ತಾ ಸಿನಿಮಾನ ಕ್ಲೈಮ್ಯಾಕ್ಸ್‌ವರೆಗೂ ಕರೆದೊಯ್ಯುವ ನಟನಾಗಿ ಮಿಂಚಿದ್ದಾರೆ. ಸುನಿಲ್ ರಾವ್ ಈ ಚಿತ್ರದ ಖಳನಾಯಕ ಅನ್ನೋದು ಸಖತ್ ಸರ್‌ಪ್ರೈಸಿಂಗ್ ಆಗಿತ್ತು. ಆದ್ರೀಗ ಧನ್ವೀರ್-ಸುನಿಲ್ ಗೇಮ್ ನೋಡೋಕೆ ಇಂಪ್ರೆಸ್ಸೀವ್ ಆಗಿದ್ದು, ನೋಡುಗರನ್ನ ಸೀಟ್ ಎಡ್ಜ್‌ನಲ್ಲಿ ಕೂರಿಸಲಿದೆ ಸಿನಿಮಾ. ಇದ್ರಿಂದ ಬಾಕ್ಸ್ ಆಫೀಸ್ ಕೂಡ ಜೋರಾಗೇ ಸದ್ದು ಮಾಡ್ತಿದ್ದು, ಮೂರೇ ದಿನದಲ್ಲಿ 2 ಕೋಟಿ 78 ಲಕ್ಷ ಗಳಿಸಿದೆ ಎನ್ನಲಾಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





