ಕಡಲ ನಾಡಿನ ಗತ್ತು, ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳದ ಅಸಲಿ ತಾಕತ್ತು ಈಗ ಬೆಳ್ಳಿಪರದೆ ಮೇಲೆ ಘರ್ಜಿಸೋಕೆ ರೆಡಿಯಾಗಿದೆ. ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಮತ್ತು ಕರಾವಳಿ ಕುವರ ರಾಜ್ ಬಿ. ಶೆಟ್ಟಿ ಕಾಂಬಿನೇಷನ್‌ನ ‘ಕರಾವಳಿ’ ಸಿನಿಮಾದ ಸಾಂಗ್ ಪ್ರಮೋಷನ್ ಜೋರಾಗಿದೆ. ಇದೀಗ ಚಿತ್ರದ ಸೋಲ್ ಆಫ್ ಕರಾವಳಿ ಎನಿಸಿಕೊಂಡಿರೋ ‘ಬಾ ಕರಾವಳಿಗೆ…’ ಅನ್ನೋ ಖಡಕ್ ಟೈಟಲ್ ಸಾಂಗ್ ರಿಲೀಸ್ ಆಗಿದೆ.
ಪ್ರಜ್ವಲ್ ದೇವರಾಜ್ – ರಾಜ್ ಬಿ. ಶೆಟ್ಟಿ ಕರಾವಳಿ ಜುಗಲ್‌ಬಂದಿ..!
ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಚಿತ್ರೀಕರಣ..!
700 ವರ್ಷಗಳ ಇತಿಹಾಸವಿರೋ ಕಂಬಳದಲ್ಲಿ ಶೂಟಿಂಗ್
ಸಚಿನ್ ಬಸ್ರೂರು ಮ್ಯೂಸಿಕ್.. ಸಾಯಿ ವಿಗ್ನೇಶ್ ವಾಯ್ಸ್ ಜಾದೂ!
ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿಬರ್ತಿರೋ ‘ಕರಾವಳಿ’ ಸಿನಿಮಾದಲ್ಲಿ ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಮತ್ತು ಸೊಲ್ ಸ್ಟಾರ್ ರಾಜ್ ಬಿ. ಶೆಟ್ಟಿ ಮುಖಾಮುಖಿಯಾಗುತ್ತಿದ್ದು, ಇವರಿಬ್ಬರ ಕಾಂಬಿನೇಷನ್ ನೋಡೋಕೆ ಫ್ಯಾನ್ಸ್ ತುದಿಗಾಲಲ್ಲಿ ಕಾಯ್ತಿದ್ದಾರೆ. ಇದೀಗ ಈ ಚಿತ್ರದ ‘ಬಾ ಕರಾವಳಿಗೆ…’ ಅನ್ನೋ ಟೈಟಲ್ ಸಾಂಗ್ ರಿಲೀಸ್ ಆಗಿದ್ದು, ಈ ಹಾಡಿನ ಕಂಪ್ಲೀಟ್ ಶೂಟಿಂಗ್ ಅನ್ನು ಸುಮಾರು 700 ವರ್ಷಗಳ ಭವ್ಯ ಇತಿಹಾಸವಿರೋ ಸಾಂಪ್ರದಾಯಿಕ ಕಟಪಾಡಿ ಕಂಬಳದ ಟ್ರ್ಯಾಕ್‌ನಲ್ಲಿ ಅತ್ಯಂತ ನೈಜವಾಗಿ ಮಾಡಲಾಗಿದೆ. ಇಷ್ಟು ದೊಡ್ಡ ಹಿಸ್ಟರಿ ಇರೋ ಕಟಪಾಡಿ ಕಂಬಳದಲ್ಲಿ ಶೂಟಿಂಗ್‌ಗೆ ಪರ್ಮಿಷನ್ ಸಿಕ್ಕಿರೋದು ಇದೇ ಮೊದಲು. ಈ ಸವಾಲಿನ ಚಿತ್ರೀಕರಣವನ್ನು ಕ್ಯಾಮೆರಾಮನ್ ಅಭಿಮನ್ಯೂ ಸದಾನಂದನ್ ಅದ್ಭುತವಾಗಿ ಸೆರೆಹಿಡಿದು ಪ್ರೇಕ್ಷಕರಿಗೆ ಕರಾವಳಿ ದರ್ಶನ ಮಾಡಿಸಿದ್ದಾರೆ.
ಕಡಲಿಂದ ನಾಡು… ಕಡಲಿಂದ ಕಾಡು… ಅಂತ ಸಾಗೋ ಈ ಅದ್ಭುತ ಹಾಡಿಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸೋದರ ಸಚಿನ್ ಬಸ್ರೂರು ಮಸ್ತ್ ಆಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಕರಾವಳಿ ಸೊಗಡಿನ ಲಿರಿಕ್ಸ್ ಅನ್ನು ಪ್ರಮೋದ್ ಮರವಂತೆ ಗೀಚಿದ್ರೆ, ಖ್ಯಾತ ಗಾಯಕ ಸಾಯಿ ವಿಗ್ನೇಶ್ ತಮ್ಮ ಖಡಕ್ ಧ್ವನಿಯಲ್ಲಿ ಹಾಡಿಗೆ ಜೀವ ತುಂಬಿದ್ದಾರೆ. ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಸಂಪದಾ ನಟಿಸಿದ್ದು, ಮಿತ್ರ, ರಮೇಶ್ ಇಂದಿರಾ ಹಾಗೂ ಶ್ರೀಧರ್ ಅವರ ಪವರ್‌ಫುಲ್ ತಾರಾಬಳಗವೇ ಚಿತ್ರದಲ್ಲಿದೆ.
ಗಾಣಿಗ ಫಿಲ್ಮ್ಸ್ ಮತ್ತು ವಿಕೆ ಫಿಲ್ಮ್ಸ್ ಅಸೋಸಿಯೇಷನ್‌ನಲ್ಲಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ಈಗ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಕೈ ಜೋಡಿಸಿದೆ. ಹೌದು, ಚಿತ್ರವನ್ನು KVN ಪ್ರೊಡಕ್ಷನ್ಸ್ ಪ್ರೆಸೆಂಟ್ ಮಾಡುವುದರ ಜೊತೆಗೆ ವಿತರಣೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದೆ. ಆಲ್ರೆಡಿ ಪ್ರಮೋಷನ್‌ನಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋ ಕರಾವಳಿ ಸಿನಿಮಾ ಬರುವ ಜುಲೈ 24ಕ್ಕೆ ಅದ್ದೂರಿಯಾಗಿ ಥಿಯೇಟರ್‌ಗೆ ಲಗ್ಗೆ ಇಡಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಾವ ರೇಂಜ್‌ಗೆ ಧೂಳೆಬ್ಬಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





