ಬಾಕ್ಸ್ ಆಫೀಸ್ ಸುನಾಮಿ, ಸುಂಟರಗಾಳಿ ಅನಿಸಿಕೊಂಡ ಧುರಂಧರ್ ಸಿನಿಮಾದ ಸೀಕ್ವೆಲ್ ರಿವೆಂಜ್ ತೀರಿಸಿಕೊಳ್ಳೋಕೆ ಬರ್ತಿದೆ. ರಣ್‌ವೀರ್ ಸಿಂಗ್‌ಗೆ ಮರು ಜನ್ಮ ಕೊಟ್ಟ ಈ ಸಿನಿಮಾ, ಇದೀಗ ಡಬಲ್ ಶೇಡ್ಸ್ ಮೂಲಕ ಡಬಲ್ ಡೋಸ್ ಕೊಡೋಕೆ ಸಜ್ಜಾಗಿದೆ. ರಿವೆಂಜ್ ಯಾರ ಮೇಲೆ..? ಏತಕ್ಕಾಗಿ..? ಹೈ ವೋಲ್ಟೇಜ್ ಆ್ಯಕ್ಷನ್ ಸ್ವ್ಯಾಗ್ ಟೀಸರ್ ಹೇಗಿದೆ ಅಂತೀರಾ..?
ಇದು ಧುರಂಧರ್-2 ಚಿತ್ರದ ಟೀಸರ್ ಝಲಕ್. ಅತೀವ ನಿರೀಕ್ಷೆಯಿಂದ ಕಾಯ್ತಿದ್ದ ಸಿನಿದುನಿಯಾ ಹಾಗೂ ಚಿತ್ರಪ್ರೇಮಿಗಳಿಗೆ ಅಕ್ಷರಶಃ ಈ ಟೀಸರ್ ಬೇಸರ ತಂದಿದೆ. ಆ ನಿರೀಕ್ಷೆ ಹುಸಿ ಮಾಡಿದೆ. ಯಾಕಂದ್ರೆ ಧುರಂಧರ್ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿದ್ದ ಅದೇ ದೃಶ್ಯಗಳನ್ನ ಜೋಡಿಸಿ ಇದೀಗ ಧುರಂಧರ್-2 ಟೀಸರ್ ಅಂತ ಬಿಡುಗಡೆ ಮಾಡಿದೆ ಚಿತ್ರತಂಡ. ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡು ಕಾಯ್ತಿದ್ದವರಂತೂ ಇಷ್ಟೇನಾ ಅಂತಿದ್ದಾರೆ.

ಅಕ್ಷಯ್ ಖನ್ನಾ ಕಥೆ ಖತಂ.. ಅರ್ಜುನ್ ರಾಂಪಾಲ್ ಬಾಕಿ..!
ದೇಶಪ್ರೇಮದ ಕಿಚ್ಚು.. 1428Cr ಗಳಿಸಿದ ಕಥೆ ಮುಂದಿನ ಭಾಗ

ಆದ್ರೆ ಈ ಬಾರಿ ರಿವೆಂಜ್ ಮೊದಲ ಭಾಗಕ್ಕಿಂತ ಜೋರಿರಲಿದೆ. ಯಾಕಂದ್ರೆ ನಮ್ಮ ಸ್ಪೈ ಏಜೆಂಟ್ ಅಲ್ಲಿನ ಗ್ಯಾಂಗ್‌ಸ್ಟರ್ ಜೊತೆಗೇ ಸೇರಿಕೊಂಡು ರೆಹಮಾನ್ ಡಕಾಯಿತ್‌ನ ಶಿವನ ಪಾದ ಸೇರಿಸಿದ್ರು ಮೊದಲ ಭಾಗದಲ್ಲಿ. ಅಂದ್ರೆ ಅಕ್ಷಯ್ ಖನ್ನಾ ರೋಲ್ ಖತಂ. ಇದೀಗ ಐಎಸ್ಐ ಮೇಜರ್ ಇಕ್ಬಾಲ್ ಪಾತ್ರಧಾರಿ ಅರ್ಜುನ್ ರಾಂಪಾಲ್ ಭಾಗ-2ರ ಖಳನಾಯಕ. ಆತನ ಜೊತೆ ನಾಯಕನಟ ರಣ್‌ವೀರ್, ಹಂಜಾ ಅಲಿ ಮಸೂರಿಯಾಗಿ ಹೇಗೆ ಕಾದಾಡ್ತಾರೆ ಅನ್ನೋದು ಕಾದು ನೋಡಬೇಕಿದೆ.

‘ಧುರಂಧರ್’ ರಿವೆಂಜ್..ಸೀಕ್ವೆಲ್‌ನಲ್ಲಿ ಮತ್ತಷ್ಟು ರೋಚಕ..!
ಹೈ-ವೋಲ್ಟೇಜ್ ಆ್ಯಕ್ಷನ್ ಟೀಸರ್..ರಣ್‌ವೀರ್ ಡಬಲ್ ಶೇಡ್

ರಣ್‌ವೀರ್ ಸಿಂಗ್ ಕರಿಯರ್‌ಗೆ ಮರು ಜನ್ಮ ನೀಡಿದ ಸಿನಿಮಾ ಧುರಂಧರ್. ಇದು ಬಾಕ್ಸ್ ಆಫೀಸ್‌ನಲ್ಲಿ 1428 ಕೋಟಿ ಗಳಿಸಿ ಎಲ್ಲರ ಹುಬ್ಬೇರಿಸಿತ್ತು. ಎ ಸರ್ಟಿಫೈಡ್ ಮೂವಿಯೊಂದು ಹೀಗೆ ದೊಡ್ಡ ಮೊತ್ತ ಕಲೆ ಹಾಕಿದ್ದು ಇದೇ ಮೊದಲು. ಇದೀಗ ರಣ್‌ವೀರ್ ಸಿಂಗ್ ಎರಡೆರಡು ಶೇಡ್‌ಗಳಲ್ಲಿ ಕಾಣಸಿಗಲಿದ್ದು, ಮೊದಲ ಭಾಗದ ಆ ಉದ್ದನೆಯ ಕೂದಲು, ಉದ್ದವಾದ ಗಡ್ಡವನ್ನ ತೆಗೆದಿದ್ದಾರೆ. ಪಿಯು ಹುಡುಗನ ರೀತಿ ಕ್ಲೀನ್ ಶೇವ್‌ನಲ್ಲಿ ಯಂಗ್ ಆಗಿ ಕಾಣ್ತಿದ್ದಾರೆ. ಸೋ.. ಎರಡೂ ಶೇಡ್ಸ್ ಎಷ್ಟರ ಮಟ್ಟಿಗೆ ಎಫೆಕ್ಟೀವ್ ಆಗಿ ಇರಲಿವೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ಅಲ್ಲದೆ, ಈ ಬಾರಿ ಮಾರ್ಚ್ 19ಕ್ಕೆ ಪಂಚಭಾಷೆಗಳಲ್ಲಿ ಧುರಂಧರ್-2 ಬರ್ತಿದ್ದು, ನಮ್ಮ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಎದುರು ಬರ್ತಿರೋದು ವಿಶೇಷ.





