ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಕ್ರಿಮಿನಲ್ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಡಿಸೆಂಬರ್ 24ಕ್ಕೆ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಲಿದ್ದು, ನಾಯಕನಟಿ ವಿವರದಲ್ಲಿ ರಚಿತಾ ರಾಮ್ ಚಿತ್ರದಿಂದ ಔಟ್ ಎನ್ನಲಾಗಿತ್ತು. ಆದರೆ ಈ ಚಿತ್ರದ ನಾಯಕ ಧ್ರುವಗೆ ರಚ್ಚುನೇ ಜೋಡಿ. ಅಷ್ಟೇ ಅಲ್ ಈ ಸಿನಿಮಾದಲ್ಲಿ ಮತ್ತೊಬ್ಬ ಹೀರೋಯಿನ್ ಕೂಡ ಇರಲಿದ್ದಾರೆ.
ಕ್ರಿಮಿನಲ್.. ಸ್ಯಾಂಡಲ್‌ವುಡ್‌ನ ಮಾಸ್ ಹೀರೋ ಧ್ರುವ ಸರ್ಜಾ ಕರಿಯರ್‌ನ ಹೊಚ್ಚ ಹೊಸ ಆ್ಯಕ್ಷನ್ ವೆಂಚರ್. ಉತ್ತರ ಕರ್ನಾಟಕದಲ್ಲಿ ನಡೆದಿರೋ ನೈಜ ಘಟನೆ ಆಧಾರಿತ ಕಥಾನಕ ಇದಾಗಿದ್ದು, ಶಿರಸಿ, ಸಿದ್ಧಾಪುರ, ಸೊರಬ ಹಾಗೂ ಶಿವಮೊಗ್ಗದಲ್ಲಿ ಭರದಿಂದ ಸಾಗ್ತಿದೆ ಶೂಟಿಂಗ್. ಇತ್ತೀಚೆಗೆ ಮುಹೂರ್ತ ಮಾಡಿದ ಚಿತ್ರತಂಡ, ಶೂಟಿಂಗ್ ಕೂಡ ಬೇಗ ಕಿಕ್‌ಸ್ಟಾರ್ಟ್ ಮಾಡಿತ್ತು.
ಸಿದ್ದಾಪುರದಲ್ಲಿ ಕ್ರಿಮಿನಲ್ ಶುರು.. ಧ್ರುವಗೆ ರಚ್ಚುನೇ ಜೋಡಿ
ಫಸ್ಟ್ ಶೆಡ್ಯೂಲ್ ಕಂಪ್ಲೀಟ್.. ಡಿಸೆಂಬರ್ 24ಕ್ಕೆ ರಿಟರ್ನ್..!
ಸದ್ಯ ಮೊಬೈಲ್ ನೆಟ್‌ವರ್ಕ್ ಕೂಡ ಸಿಗದೇ ಇರೋ ಅಂತಹ ಶಿರಸಿ, ಸಿದ್ದಾಪುರದ ದಟ್ಟ ಕಾಡುಗಳ ನಡುವೆ ಮುಂಜಾನೆ 6 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯ ವರೆಗೂ ನಾನ್‌ಸ್ಟಾಪ್ ಶೂಟಿಂಗ್ ನಡೆಸ್ತಿದೆ ಟೀಂ. ಡಬಲ್ ಕಾಲ್‌ಶೀಟ್ ಮೂಲಕ ಡೇ ಅಂಡ್ ನೈಟ್ ಚಿತ್ರೀಕರಣ ನಡೆಯುತ್ತಿದ್ದು, ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯೋ ಒಳಗಾಗಿ ರಿಲೀಸ್ ಮಾಡಿದ್ರೂ ಅಚ್ಚರಿಯಿಲ್ಲ.
ಕ್ರಿಮಿನಲ್ ಅಂದಾಕ್ಷಣ ಜೈಲು ನೆನಪಾಗುತ್ತೆ. ಇನ್ನು ಈ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಜೈಲು. ಹಾಗಾಗಿ ಶಿವಮೊಗ್ಗದ ಹಳೇ ಜೈಲನ್ನೇ ಚಿತ್ರದ ಶೂಟಿಂಗ್ ತಾಣವಾಗಿಸಿಕೊಂಡಿದೆ ಚಿತ್ರತಂಡ. ಧ್ರುವ ಸರ್ಜಾ ಸಿಕ್ಕಾಪಟ್ಟೆ ರಾ ಅಂಡ್ ರಗಡ್ ಆಗಿ ಕಾಣಸಿಗಲಿದ್ದು, ಮುಹೂರ್ತದಲ್ಲೇ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂದಲು ಹಿಡಿದು ಡೈಲಾಗ್ ಹೊಡೆದಿದ್ದನ್ನ ಸ್ಮರಿಸಿಕೊಳ್ಳಬಹುದು.
ಶಿವಮೊಗ್ಗ ಹಳೇ ಜೈಲ್‌ನಲ್ಲಿ ಕ್ರಿಮಿನಲ್ ಚಿತ್ರದ ಶೂಟಿಂಗ್
ಲೇಡಿ ಸೂಪರ್ ಸ್ಟಾರ್ ಜೊತೆ ಇರ್ತಾರಾ ತಮಿಳು ನಟಿ..?!
ಅಂದಹಾಗೆ ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಕ್ರಿಮಿನಲ್ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿತ್ತು. ಆದ್ರೆ ಅದೆಲ್ಲಾ ಸೋಶಿಯಲ್ ಮೀಡಿಯಾ ವದಂತಿಗಳು. ಖುದ್ದು ರಚಿತಾ ರಾಮ್ ಹಾಗೂ ಧ್ರುವ ಸರ್ಜಾ ಹೇಳಿಕೆ ಮೇರೆಗೆ ರಚ್ಚುನೇ ಕ್ರಿಮಿನಲ್‌ಗೆ ಜೋಡಿ ಆಗಿದ್ದಾರೆ. ಇದರಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇಲ್ಲವೇ ಇಲ್ಲ. ರಚ್ಚು ಕೂಡ ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ಜೋರಾಗಿ ವರ್ಕೌಟ್ ಮಾಡ್ತಿದ್ದು, ಲ್ಯಾಂಡ್‌ಲಾರ್ಡ್ ಗಾಗಿ ತೂಕ ಹೆಚ್ಚಿಸಿಕೊಂಡಿದ್ದ ರಚಿತಾ ಸದ್ಯ ತೂಕ ಇಳಿಸೋ ಪ್ರಯತ್ನದಲ್ಲಿದ್ದಾರೆ.
ಕ್ರಿಮಿನಲ್ ಸಿನಿಮಾಗೆ ಮತ್ತೊಬ್ಬ ನಾಯಕನಟಿ ಕೂಡ ಎಂಟ್ರಿ ಕೊಡಲಿದ್ದು, ಅದಕ್ಕೆ ತಮಿಳಿನ ಖ್ಯಾತ ನಟಿ ಐಶ್ವರ್ಯಾ ರಾಜೇಶ್ ಅಥ್ವಾ ನಿಶ್ವಿಕಾ ನಾಯ್ಡು ಆಯ್ಕೆ ಬಹುತೇಕ ಫಿಕ್ಸ್. ಚಿತ್ರತಂಡ ಮೊದಲ ಹಂತದ ಶೂಟಿಂಗ್ ಮುಗಿಸಿ ಬಂದು, ಇಬ್ಬರಲ್ಲಿ ಒಬ್ಬರನ್ನ ಫೈನಲ್ ಮಾಡಲಿದ್ದು, ಎರಡನೇ ಶೆಡ್ಯೂಲ್ ಕೂಡ ಬಹುಬೇಗ ಶುರುವಾಗಲಿದೆ. ಇಯರ್ ಎಂಡ್, ನ್ಯೂ ಇಯರ್, ಪಾರ್ಟಿ ಮೋಡ್ ಇದ್ಯಾವುದಕ್ಕೂ ಆಸ್ಪಾದ ನೀಡದೆ ಡೇ ಅಂಡ್ ನೈಟ್ ಚಿತ್ರತಂಡ ಇದಕ್ಕಾಗಿ ಶ್ರಮಿಸುತ್ತಿರೋದು ವಿಶೇಷ. ಕೆರೆಬೇಟೆ ಚಿತ್ರದ ನಿರ್ದೇಶಕ ರಾಜ್‌ಗುರು ಆ್ಯಕ್ಷನ್ ಕಟ್ ಹೇಳ್ತಿದ್ದು, ಪ್ರತಿಷ್ಠಿತ ಗೋಲ್ಡ್‌ಮೈನ್ಸ್ ಸಂಸ್ಥೆಯಡಿ ಮನೀಶ್ ಶಾ ನಿರ್ಮಾಣ ಮಾಡ್ತಿದ್ದಾರೆ.





