• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ

38ನೇ ವಸಂತಕ್ಕೆ ಕಾಲಿಟ್ಟ ಆ್ಯಕ್ಷನ್ ಪ್ರಿನ್ಸ್.. ಅಭಿಮಾನದ ಹೂಮಳೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 6, 2026 - 6:05 pm
in ಸಿನಿಮಾ
0 0
0
ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ

38ನೇ ವಸಂತಕ್ಕೆ ಕಾಲಿಟ್ಟಿರೋ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಫ್ಯಾನ್ಸ್‌ಗೆ ಭರ್ಜರಿ ಬಿಗ್ ನ್ಯೂಸ್ ನೀಡಿದ್ದಾರೆ. ಮತ್ತೆ ಫೈಟ್ ಮಾಡೋಕೆ ಸಜ್ಜಾಗಿದ್ದು, ಈ ಬಾರಿ ಅದು ಪ್ರೀತಿಗಾಗಿ ಅಂತ ಪ್ರೀತ್ಸೋ ಹೃದಯಗಳನ್ನ ಗೆದ್ದಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಕೆಮಿಸ್ಟ್ರಿ ಸಿನಿಮಾದ ಫಸ್ಟ್‌ಲುಕ್ ಕೂಡ ರಿವೀಲ್ ಆಗಿದ್ದು, ಮಿಡ್ ನೈಟ್‌‌ನಿಂದಲೇ ಜನುಮ ದಿನವನ್ನು ಹಬ್ಬವಾಗಿಸಿದ ಅಭಿಮಾನಿಗಳ ಅಭಿಮಾನದ ಜಾತ್ರೆ ನೋಡೋಕೆ ಎರಡು ಕಣ್ಣು ಸಾಲದಂತಿದೆ.

  • ಪ್ರೀತಿಗಾಗಿ ಧ್ರುವ ಫೈಟ್.. ಮಳೆ ನಡುವೆಯೂ ಭರ್ಜರಿ ಬರ್ತ್ ಡೇ
  • 38ನೇ ವಸಂತಕ್ಕೆ ಕಾಲಿಟ್ಟ ಆ್ಯಕ್ಷನ್ ಪ್ರಿನ್ಸ್.. ಅಭಿಮಾನದ ಹೂಮಳೆ
  • ಲವರ್ ಬಾಯ್ ಆದ ಧ್ರುವ.. ನಭಾ ನಟೇಶ್ ಜೊತೆ ಕೆಮಿಸ್ಟ್ರಿ ಕಿಕ್
  • ಕೆಮಿಸ್ಟ್ರಿ 100% ಅನಿರೀಕ್ಷಿತ ಕಾಂಬೋ.. ಹೊಚ್ಚ ಹೊಸ ದೃಷ್ಠಿಕೋನ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಅದ್ಯಾಕೋ ಆರಂಭದ ದಿನಗಳಂತೆ ಅವ್ರ ಇತ್ತೀಚಿನ ಸಿನಿಜರ್ನಿ ಸಕ್ಸಸ್‌‌ಫುಲ್ ಆಗಿಲ್ಲ. ಅದಕ್ಕೆ ಅವರ ಸ್ಕ್ರಿಪ್ಟ್‌ಗಳ ಆಯ್ಕೆಯಲ್ಲಿನ ಎಡವಟ್ ಕೂಡ ಆಗಿರಬಹುದು. ಮಾರ್ಟಿನ್ ಹಾಗೂ ಕೆಡಿ ಸಿನಿಮಾಗಳಲ್ಲಿ ಕಹಿ ಉಂಡ ಬಳಿಕ ಇದೀಗ ಮತ್ತೆ ಫೈಟ್ ಮಾಡೋಕೆ ಸಜ್ಜಾಗಿದ್ದಾರೆ. ಆದ್ರೆ ಈ ಬಾರಿಯ ಫೈಟ್ ಪ್ರೀತಿಗಾಗಿ ಅನ್ನೋದು ವಿಶೇಷ. ಯೆಸ್.. ಅನಿರೀಕ್ಷಿತ ಹಾಗೂ ವೆರಿ ವೆರಿ ಇಂಟರೆಸ್ಟಿಂಗ್ ಕಾಂಬೋನಲ್ಲಿ ಕೆಮಿಸ್ಟ್ರಿ ಅನ್ನೋ ಸಿನಿಮಾ ಅನೌನ್ಸ್ ಆಗಿದೆ.

RelatedPosts

424Cr ಬಾಕ್ಸ್ ಆಫೀಸ್ ಬಾಂಬ್..ಸೌತ್‌‌ಗೆ ಹನುಮಾನ್ ಅಂಶ್

‘ಜೈಲರ್’ ಈಸ್ ಬ್ಯಾಕ್..ಮಲ್ಟಿ ಸ್ಟಾರ್ಸ್ ಜೊತೆ ‘ಟೈಗರ್’ ಬೇಟೆ

ಯಶ್ ರಾಮಾಯಣ ಸೆಟ್‌ಗೆ ಬೆಂಕಿ..ಲಾಸ್ ಆಗಿದ್ದೆಷ್ಟು ಕೋಟಿ..?

ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ADVERTISEMENT
ADVERTISEMENT

ಇದು 38ನೇ ವಸಂತಕ್ಕೆ ಕಾಲಿಟ್ಟಿರೋ ಧ್ರುವ ಸರ್ಜಾ ಬರ್ತ್ ಡೇ ಗಿಫ್ಟ್ ಕೂಡ ಹೌದು. ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಕೆಮಿಸ್ಟ್ರಿ ಅನ್ನೋ ಆಕರ್ಷಕ ಟೈಟಲ್ ಇಡಲಾಗಿದ್ದು, ನಟಿ ನಭಾ ನಟೇಶ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌‌ನಡಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಮಾಸ್ ಅಬ್ಬರ ಬಿಟ್ಟು ಭಾವನೆಗಳ ಲೋಕಕ್ಕೆ ಕಾಲಿಟ್ಟಿದ್ದಾರೆ ಧ್ರುವ ಸರ್ಜಾ. ಯೆಸ್.. ಈವರೆಗೂ ಭರ್ಜರಿ ಸಾಹಸ, ಮಾಸ್ ಡೈಲಾಗ್‌ಗಳ ಮೂಲಕವೇ ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಧ್ರುವ ಈ ಬಾರಿ ಮನಮಿಡಿಯುವ ಪ್ರೇಮಕಥೆ ಮತ್ತು ಅಪ್ಪಟ ಕೌಟುಂಬಿಕ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿರುವುದು ಹೊಸ ಸಂಚಲನ ಮೂಡಿಸಿದೆ. ಚಿತ್ರದಲ್ಲಿ ಅವರ ರೊಮ್ಯಾನ್ಸ್, ಮಮತೆ ಹಾಗೂ ಭಾವನಾತ್ಮಕ ಅಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ಕುತೂಹಲ ಮನೆಮಾಡಿದೆ. ಮಾಸ್‌, ಆ್ಯಕ್ಷನ್‌ ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ಹೀರೋ ಆಗಿರುವ ಧ್ರುವ, ಈಗ ಕೌಟುಂಬಿಕ ಪ್ರೇಕ್ಷಕರು, ಮಹಿಳೆಯರು ಹಾಗೂ ಯುವ ಜೋಡಿಗಳ ಹೃದಯ ಗೆಲ್ಲಲು ಹೊರಟಿದ್ದಾರೆ.

ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಬದುಕಿಗೆ ಕನೆಕ್ಟ್ ಮಾಡಿಕೊಳ್ಳುವಂತಹ ಕೌಟುಂಬಿಕ ಬಾಂಧವ್ಯ ಮತ್ತು ಲವ್‌ ಸ್ಟೋರಿ ಈ ಚಿತ್ರದ ಪ್ರಮುಖ ಆಕರ್ಷಣೆ. ಅಭಿಮಾನಿಗಳು ತಮ್ಮ ಇಡೀ ಕುಟುಂಬದೊಂದಿಗೆ ಚಿತ್ರಮಂದಿರಕ್ಕೆ ಬಂದು ಆನಂದಿಸುವಂತಹ ಸಂಪೂರ್ಣ ಮನರಂಜನೆಯನ್ನು ಚಿತ್ರತಂಡ ಕಟ್ಟಿಕೊಡಲಿದೆ. ಧ್ರುವ ಭರ್ಜರಿ ಸ್ಟಾರ್‌ಡಮ್ ಜೊತೆಗೆ ಭಾವನೆಗಳು ಮೇಳೈಸಿದ ಈ ಸಿನಿಮಾ, ಅದ್ಧೂರಿ ಮೇಕಿಂಗ್ ಮೂಲಕ ತೆರೆಯ ಮೇಲೆ ಅರಳಲಿದೆ.

ಯುವ ಪ್ರತಿಭೆ ವಿಶಾಲ್ ಆತ್ರೇಯ ಈ ಪ್ರಾಜೆಕ್ಟ್‌ನ ಮತ್ತೊಂದು ವಿಶೇಷತೆ. ಒಬ್ಬ ಖ್ಯಾತ ಮಾಸ್ ಹೀರೋ ಯುವ ನಿರ್ದೇಶಕನ ಕ್ರಿಯೇಟಿವ್ ವಿಷನ್‌ಗೆ ಕೈಜೋಡಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಈಗಾಗಲೇ ಕನ್ನಡದ ಸ್ಟಾರ್ ನಟರಾದ  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗಣೇಶ್, ಉಪೇಂದ್ರ ಅವರೊಂದಿಗೆ ಕೈಜೋಡಿಸಿದೆ. ಈಗ ಧ್ರುವ ಸರ್ಜಾ ಜೊತೆ ದೊಡ್ಡ ಪ್ರಾಜೆಕ್ಟ್‌ಗೆ ಕೈಹಾಕಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ಬೇರೂರುವ ಹಾಗೂ ವಿಭಿನ್ನ ಕಥೆಗಳನ್ನು ಕನ್ನಡಿಗರಿಗೆ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಧ್ರುವ ಸರ್ಜಾ ಅವರ ವೃತ್ತಿಜೀವನದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಈ ಸಿನಿಮಾದ ಮೂಲಕ ಗೋಚರಿಸುತ್ತಿವೆ.

ಇನ್ನೂ ತ್ಯಾಗರಾಜನಗರದ ತಮ್ಮ ನಿವಾಸದ ಮುಂದೆ ನಟ ಧ್ರುವ ಸರ್ಜಾ ಅದ್ಧೂರಿ ಬರ್ತ್ ಡೇ ಸಂಭ್ರಮ ಜೋರಿತ್ತು. ನಿನ್ನೆ ತಡರಾತ್ರಿಯಿಂದಲೇ ಮಳೆಯ ನಡುವೆಯೂ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದಂತಹ ಅಸಂಖ್ಯಾತ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭ ಕೋರಿದ್ರು. ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ರು. ಅವರಿಗೆಲ್ಲಾ ಅನ್ನ ಸಂತರ್ಪಣೆ ಕೂಡ ಮಾಡಿದ್ದು ವಿಶೇಷ.

ಪ್ರತೀ ವರ್ಷದಂತೆ ಈ ವರ್ಷ ಕೂಡ ಜಾತ್ರೆಯ ರೀತಿ ಧ್ರುವ ಬರ್ತ್ ಡೇ ನಡೆದದ್ದು ಇಂಟರೆಸ್ಟಿಂಗ್. ದೊಡ್ಡ ದೊಡ್ಡ ಬ್ಯಾನರ್, ಫ್ಲೆಕ್ಸ್, ಮದ್ವೆ ಮನೆಗೆ ಲೈಟಿಂಗ್ಸ್ ಮಾಡಿಸಿದಂತೆ ಇಡೀ ಬೀದಿಯೆಲ್ಲಾ ಲಕ ಲಕ ಹೊಳೆಯುವ ಬಣ್ಣ ಬಣ್ಣದ ಬೀದಿ ದೀಪಗಳು, ಕೇಕ್, ಹಾರ, ಅಭಿಮಾನದ ಗಿಫ್ಟ್ಸ್.. ಹೀಗೆ ಸಾಕಷ್ಟು ವರ್ಣಮಯ, ಅರ್ಥಪೂರ್ಣ ಹಾಗೂ ಅವಿಸ್ಮರಣೀಯ ಅನಿಸಿತು ಬಹದ್ದೂರ್ ಗಂಡು ಧ್ರುವ ಜನುಮ ದಿನ.

ಒಟ್ಟಾರೆ ಧ್ರುವ ಈ ಜನುಮ ದಿನಕ್ಕೆ ಒಂದಷ್ಟು ಕಠಿಣ ನಿರ್ಧಾರಗಳನ್ನ ಕೂಡ ತೆಗೆದುಕೊಂಡಿದ್ದು, ಸಿನಿಮಾಗಳ ಆಯ್ಕೆ, ಮಾಡುವ ಸಂಘ ಸೇರಿದಂತೆ ಎಲ್ಲದರಲ್ಲೂ ಬದಲಾವಣೆ ಅನ್ನೋದು ಇದ್ದೇ ಇರುತ್ತೆ ಅನ್ನೋದ್ರ ಹಿಂಟ್ ನೀಡಿದ್ದಾರೆ. ನಾವು ಕೂಡ ಆ್ಯಕ್ಷನ್ ಪ್ರಿನ್ಸ್‌ಗೆ ಬರ್ತ್ ಡೇ ಶುಭಾಶಯ ಕೋರೋಣ. ಹ್ಯಾಪಿ ಹುಟ್ದಬ್ಬ ಹೀರೋ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 06T184031.184

ರಷ್ಯಾದಲ್ಲಿ ಪ್ಲೇಗ್ ಸೋಂಕಿಗೆ ಮತ್ತೊಂದು ಜೀವ ಬಲಿ

by ಶಾಲಿನಿ ಕೆ. ಡಿ
October 6, 2026 - 6:42 pm
0

Untitled design 2026 10 06T182820.280

424Cr ಬಾಕ್ಸ್ ಆಫೀಸ್ ಬಾಂಬ್..ಸೌತ್‌‌ಗೆ ಹನುಮಾನ್ ಅಂಶ್

by ಶಾಲಿನಿ ಕೆ. ಡಿ
October 6, 2026 - 6:31 pm
0

Untitled design 2026 10 06T181730.135

ರಾಜ್ಯದ ಜನರಿಗೆ ಸರ್ಕಾರದಿಂದ ಮಿಲ್ಕ್ ಶಾಕ್: ಹಾಲಿನ ದರ 8 ರೂ. ಹೆಚ್ಚಳ

by ಶಾಲಿನಿ ಕೆ. ಡಿ
October 6, 2026 - 6:19 pm
0

ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ

ಪ್ರೀತಿಗಾಗಿ ಧ್ರುವ ಫೈಟ್..ಮಳೆ ನಡುವೆಯೂ ಭರ್ಜರಿ ಬರ್ತ್ ಡೇ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 6, 2026 - 6:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 06T182820.280
    424Cr ಬಾಕ್ಸ್ ಆಫೀಸ್ ಬಾಂಬ್..ಸೌತ್‌‌ಗೆ ಹನುಮಾನ್ ಅಂಶ್
    October 6, 2026 | 0
  • Untitled design 2026 10 06T172746.143
    ‘ಜೈಲರ್’ ಈಸ್ ಬ್ಯಾಕ್..ಮಲ್ಟಿ ಸ್ಟಾರ್ಸ್ ಜೊತೆ ‘ಟೈಗರ್’ ಬೇಟೆ
    October 6, 2026 | 0
  • Untitled design 2026 10 06T160309.142
    ಯಶ್ ರಾಮಾಯಣ ಸೆಟ್‌ಗೆ ಬೆಂಕಿ..ಲಾಸ್ ಆಗಿದ್ದೆಷ್ಟು ಕೋಟಿ..?
    October 6, 2026 | 0
  • Untitled design 2026 10 06T125111.195
    ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌
    October 6, 2026 | 0
  • Untitled design (15)
    ಅ-23ಕ್ಕೆ ನೋಡುಗರನ್ನ ನಡುಗಿಸಲು ಬರ್ತಿದ್ದಾಳೆ ದೇವಿಕಾ
    October 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version