ಹಿಸ್ಟರಿ ರಿಪೀಟಿಂಗ್. ಯೆಸ್.. ಸಾರಥಿ ಸಿನಿಮಾದ ರಿಲೀಸ್ ಸಮಯದ ಸಂದಿಗ್ಧ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ. ದರ್ಶನ್ ಒನ್ಸ್ ಅಗೈನ್ ಜೈಲು ಪಾಲಾಗಿದ್ದಾರೆ. ಡೆವಿಲ್ ಅವ್ರ ಅನುಪಸ್ಥಿತಿಯಲ್ಲೇ ತೆರೆಗೆ ಬರ್ತಿದೆ. ಅದಕ್ಕಾಗಿ ಚಿತ್ರತಂಡ ಡಿಬಾಸ್ ಫ್ಯಾನ್ಸ್ ಜೊತೆ ಸ್ಪೆಷಲ್ ಇವೆಂಟ್ ಕೂಡ ಮಾಡಿದೆ. ಖುಷಿ ಅಂದ್ರೆ ದರ್ಶನ್ ಕುಟುಂಬ ಟೀಂ ಡೆವಿಲ್‌ಗೆ ಬಿಗ್ ಸಾಥ್ ನೀಡಿದೆ. ಅದ್ರ ಹೈಲೈಟ್ಸ್ ಇಲ್ಲಿದೆ.
- ದಚ್ಚು ಇಲ್ಲದೆ ಇವೆಂಟ್.. ಡೆವಿಲ್‌ಗೆ ‘D’ ಕುಟುಂಬ ಬಲ..!
- ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ದರ್ಶನ್ ಫ್ಯಾನ್ಸ್
- ಅಂದು ಸಾರಥಿ.. ಇಂದು ಡೆವಿಲ್.. ಹಿಸ್ಟರಿ ರಿಪೀಟಿಂಗ್ ಗುರು
- ಪ್ರಕಾಶ್ ವೀರ್‌ಗೆ ವಿಜಿ ದರ್ಶನ್ & ದಿನಕರ್ ನೈತಿಕ ಬೆಂಬಲ
ಡೆವಿಲ್.. ಡೆವಿಲ್.. ಡೆವಿಲ್.. ಹತ್ತು ಹಲವು ಕಾರಣಗಳಿಂದಾಗಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ಡಿ ಬಾಸ್ ದರ್ಶನ್ ಅನುಪಸ್ಥಿತಿಯಲ್ಲಿ ಕೂಡ ಡೆವಿಲ್ ರಿಲೀಸ್‌ಗೆ ಸಜ್ಜಾಗ್ತಿದೆ. ಈ ರೀತಿ ದರ್ಶನ್ ಸಿನಿ ಕರಿಯರ್‌ನಲ್ಲಿ ಆಗ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಸಾರಥಿ ಸಿನಿಮಾದ ವೇಳೆಯೂ ಸಹ ಪತ್ನಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ರು ದರ್ಶನ್. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಪಾಲಾಗಿದ್ದಾರೆ.
ಸೋ.. ಹಿಸ್ಟರಿ ಒನ್ಸ್ ಅಗೈನ್ ರಿಪೀಟ್ ಆಗ್ತಿದೆ. ಅಂದು ಸಾರಥಿ ರಿಲೀಸ್‌ಗೆ ಹೇಗೆ ಕ್ರೇಜ್ ಇತ್ತೋ, ಇದೀಗ ಡೆವಿಲ್‌ಗಾಗಿ ಅದಕ್ಕಿಂತ ಕೊಂಚ ಜಾಸ್ತಿನೇ ಹೈಪ್ ಇದೆ. ಅದಕ್ಕೆ ಕಾರಣ ದರ್ಶನ್ ಅವ್ರ ಅಸಂಖ್ಯಾತ ಅಭಿಮಾನಿಗಳು. ಮಿಲನ ಖ್ಯಾತಿಯ ಡೈರೆಕ್ಟರ್ ಪ್ರಕಾಶ್ ವೀರ್ ನಿರ್ದೇಶನ ಸಾಮರ್ಥ್ಯ ಹಾಗೂ ದರ್ಶನ್ ಕುಟುಂಬ. ಯೆಸ್.. ಈಗಾಗ್ಲೇ ಡೆವಿಲ್ ಟೀಸರ್‌ಗಳು ಹಾಗೂ ಮೂರು ಸಾಂಗ್ಸ್ ಜೊತೆ ಮೇಕಿಂಗ್ ಝಲಕ್‌ಗಳಿಂದ ನೋಡುಗರಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದೆ.
ಮೊದಲಿನಿಂದಲೂ ಸಹ ಚಿತ್ರತಂಡದ ಜೊತೆ ನಿಂತಿರೋ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ, ಈ ಬಾರಿ ಸಹ ಡೆವಿಲ್ ಪ್ರಮೋಷನ್ಸ್‌ಗೆ ನಿರ್ದೇಶಕ ಕಮ್ ನಿರ್ಮಾಪಕ ಪ್ರಕಾಶ್ ವೀರ್‌ಗೆ ಸಾಥ್ ನೀಡಿದ್ದಾರೆ. ಅದೂ ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ದರ್ಶನ್ ಅಭಿಮಾನಿಗಳು ಹಾಗೂ ಅಭಿಮಾನಿ ಸಂಘಗಳ ಅಧ್ಯಕ್ಷರುಗಳೊಂದಿಗೆ ಅನ್ನೋದು ಇಂಟರೆಸ್ಟಿಂಗ್. ಯೆಸ್.. ಕಳೆದ ಭಾನುವಾರ ಉಲ್ಲಾಳದ ಬಳಿ ಇರೋ ಜಿ.ಎಂ ಪಾರ್ಟಿ ಹಾಲ್‌ನಲ್ಲಿ ಡೆವಿಲ್ ಫ್ಯಾನ್ಸ್ ಇವೆಂಟ್ ಜರುಗಿದೆ. ಅದ್ರ ಹೈಲೈಟ್ಸ್ ಇಲ್ಲಿದೆ ನೋಡಿ.
ಪ್ರತಿ ಸಲ ನಮ್ಮೊಂದಿಗೆ ನೀವು ಇದ್ದೀರಿ. ಆದ್ರೆ ಈ ಸಿನಿಮಾಗೆ ಸ್ವಲ್ಪ ಜಾಸ್ತಿ ಪ್ರೀತಿ ಕೊಡಿ ಅಂತ ವಿಜಯಲಕ್ಷ್ಮೀ ಮಾತನಾಡಿದ್ರೆ, ದರ್ಸನ್ ಅವರು ಡೈರೆಕ್ಟರ್ ಆರ್ಟಿಸ್ಟ್, ಅಭಿಮಾನಿಗಳಿಗೆ ಈ ಸಿನಿಮಾ ರುಚಿಸುತ್ತೆ ಅಂತ ನಂಬಿದ್ದೇನೆ ಅಂತ ದಿನಕರ್ ತೂಗುದೀಪ ಮಾತನಾಡಿದ್ರು.
ಡೆವಿಲ್ ಸಿನಿಮಾದ ಪ್ರಾಸಸ್‌ನ ತುಂಬಾ ಎಂಜಾಯ್ ಮಾಡ್ಕೊಂಡ್ ಮಾಡಿದ್ದೀವಿ ಅಂದ್ರು ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್. ಪಕ್ಕಾ ಮಾಸ್ ಎಂಟರ್‌ಟೈನ್ಮೆಂಟ್ ಮೂವಿ ಡೆವಿಲ್ ಎಂದ ಡೈರೆಕ್ಟರ್ ಪ್ರಕಾಶ್ ವೀರ್, ಡೆವಿಲ್ ಎಕ್ಸ್‌ಕ್ಲೂಸಿವ್ ಡೈಲಾಗ್ ಹೊಡೆದು ದಚ್ಚು ಫ್ಯಾನ್ಸ್ ಶಿಳ್ಳೆ, ಚಪ್ಪಾಳೆಗೆ ಪಾತ್ರರಾದ್ರು.
ಅಲೋಹೋಮೊರಾ ಸಾಂಗ್ ಜೊತೆ ಅದ್ರ ಮೇಕಿಂಗ್ ಕೂಡ ರಿವೀಲ್ ಆಗಿದ್ದು, ಸಖತ್ ರಿಚ್ ಆಗಿ ಮೂಡಿಬಂದಿದೆ ಡೆವಿಲ್. ಇನ್ನು ಸಿನಿಮಾದ ಬ್ಯುಸಿನೆಸ್ ವಿಚಾರ ಹತ್ತು ಹಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡ್ತಿದ್ದು, ಅದ್ಯಾವುದೂ ಅಫಿಶಿಯಲ್ ಅಲ್ಲ. ದರ್ಶನ್ ತಮ್ಮ ವೈಯಕ್ತಿಕ ಜೀವನದಲ್ಲಿ ಎದೆಗುಂದಿರಬಹುದು. ಆದ್ರೆ ಸಿನಿಮಾಗೆ ನ್ಯಾಯ ಒದಗಿಸುವಲ್ಲಿ ದರ್ಶನ್ ಹಾಗೂ ಚಿತ್ರತಂಡ ತುಂಬಾ ಶ್ರಮಿಸಿದೆ. ಅದ್ರ ಪ್ರತಿಫಲ ಡಿಸೆಂಬರ್ 12ಕ್ಕೆ ಒಂದೊಳ್ಳೆ ಕಮರ್ಷಿಯಲ್ ಪ್ಯಾಕ್ಡ್ ಎಂಟರ್‌ಟೈನರ್ ಪ್ರೇಕ್ಷಕರ ಮುಂದೆ ಬರ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





