ಸ್ವಲ್ಪ ಸಿಹಿ.. ಸ್ವಲ್ಪ ಕಹಿ.. ಅನ್ನುವಂತಾಗಿದೆ ಡಿಬಾಸ್ ದರ್ಶನ್‌ರ ಸದ್ಯದ ಪರಿಸ್ಥಿತಿ. ಯೆಸ್.. ಸುಪ್ರೀಂ ಕೋರ್ಟ್ ಸದ್ಯಕ್ಕೆ ಬೇಲ್ ಇಲ್ಲ ಅಂತ ಶಾಕ್ ನೀಡಿದ ಬೆನ್ನಲ್ಲೇ 23ನೇ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ದಚ್ಚು ದಂಪತಿ. ಇಂಟರೆಸ್ಟಿಂಗ್ ಅಂದ್ರೆ ಇಂದು ದರ್ಶನ್‌ಗೆ ಸ್ವತಃ ಜೈಲರ್ ಡಬಲ್ ಗಿಫ್ಟ್ ನೀಡಿ, ಜೀವನವನ್ನ ಕೊಂಚ ನೆಮ್ಮದಿಗೊಳಿಸಿದ್ದಾರೆ. ಆ ಗಿಫ್ಟ್‌ಗಳು ಏನು ಅಂತೀರಾ ಈ ಸ್ಟೋರಿ ನೋಡಿ….
- ಡಿಬಾಸ್ ದರ್ಶನ್‌ಗೆ ಕಡುಕಷ್ಟದಲ್ಲೊಂದು ಗುಡ್ ನ್ಯೂಸ್
- ‘ಜಗತ್ತೇ ವಿರುದ್ಧ ನಿಲ್ಲಲಿ.. ನಾ ನಿನ್ನ ಬಿಡಲಾರೆ’ ಎಂದ ವಿಜಿ
- 23ನೇ ವಿವಾಹ ವಾರ್ಷಿಕೋತ್ಸವ.. ಸೆಲೆಬ್ರೇಷನ್‌ಗೆ ಬ್ರೇಕ್
- ದಚ್ಚು ದಂಪತಿ ವೆಡ್ಡಿಂಗ್ ಆ್ಯನಿವರ್ಸರಿಗೆ ಜೈಲರ್‌ನಿಂದ ಗಿಫ್ಟ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಮುಖ ಆರೋಪಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಬೇಲ್ ಕ್ಯಾನ್ಸಲ್ ಮಾಡಿದ್ದು ಗೊತ್ತೇಯಿದೆ. ಅದಾದ ಬಳಿಕ ಮಗದೊಮ್ಮೆ ಸುಪ್ರೀಂ ಮೆಟ್ಟಿಲೇರಿದ್ದ ದಾಸನಿಗೆ ಇನ್ನೊಂದು ವರ್ಷ ಬೇಲ್ ಇಲ್ಲ ಅಂತ ಜಾಮೀನು ಅರ್ಜಿ ವಜಾಗೊಳಿಸಿ ಶಾಕ್ ನೀಡಿತ್ತು. ಅದೇ ಬೇಸರದಲ್ಲಿದ್ದ ಚಾಲೆಂಜಿಂಗ್ ಸ್ಟಾರ್‌ಗೆ ಈಗ ಸಣ್ಣದೊಂದು ಗುಡ್ ನ್ಯೂಸ್ ಸಿಕ್ಕಿದೆ. ಅದ್ರಿಂದ ಬರೀ ದಚ್ಚು ಅಷ್ಟೇ ಅಲ್ಲ, ಇಡೀ ದರ್ಶನ್ ಕುಟುಂಬಸ್ಥರು, ಹಿತೈಷಿಗಳು ಹಾಗೂ ಫ್ಯಾನ್ಸ್ ಎಲ್ಲಾ ಖುಷಿ ಪಟ್ಟಿದ್ದಾರೆ.
ಇಂದು ದರ್ಶನ್-ವಿಜಯಲಕ್ಷ್ಮೀಗೆ 23ನೇ ವೆಡ್ಡಿಂಗ್ ಆ್ಯನಿವರ್ಸರಿ. ಕಳೆದ ವರ್ಷ ರೆಸಾರ್ಟ್‌ವೊಂದರಲ್ಲಿ ಗ್ರ್ಯಾಂಡ್ ಆಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ದರ್ಶನ್ ದಂಪತಿ ಈ ಬಾರಿ ಜೈಲೊಳಗೊಬ್ರು, ಹೊರಗೊಬ್ರು ಅನ್ನೋ ತರಹ ಆಗಿದೆ. ಆದ್ರೂ ಸಹ, ಪರಪ್ಪನ ಅಗ್ರಹಾರಕ್ಕೆ ಮಗನ ಸಮೇತ ತೆರಳಿರೋ ವಿಜಯಲಕ್ಷ್ಮೀ ತಮ್ಮ ಯಜಮಾನರನ್ನ ಭೇಟಿ ಆಗಿ, ಕಷ್ಟ ಸುಖಗಳನ್ನ ಹಂಚಿಕೊಂಡಿದ್ದಾರೆ. ಆ್ಯನಿವರ್ಸರಿಗೆ ವಿಶ್ ಕೂಡ ಮಾಡಿದ್ದಾರೆ.
ಇನ್ನೂ ದರ್ಶನ್-ವಿಜಯಲಕ್ಷ್ಮೀ ಆ್ಯನಿವರ್ಸರಿಗೆ ಜೈಲರ್ ಡಬಲ್ ಗಿಫ್ಟ್ ನೀಡಿದ್ದಾರೆ. ಒಂದು ತನ್ನ ಆರೋಪಿ ಪತಿ ದಾಸನನ್ನ ಭೇಟಿಯಾಗೋಕೆ ಅನುಮತಿ ನೀಡಿರೋದು. ಮತ್ತೊಂದು ಅರ್ಧ ಗಂಟೆ ಕಾಲ ಒಳ ಸಂದರ್ಶನಕ್ಕೆ ಅನುವು ಮಾಡಿಕೊಟ್ಟಿರೋದು. ಯೆಸ್.. ಇಷ್ಟು ದಿನ ದರ್ಶನ್ ಜೈಲೊಳಗಿದ್ರೆ, ಪತ್ನಿ, ಮಗ ಹೊರಗಿನಿಂದಲೇ ಕಿಟಕಿ ಮೂಲಕ ಮಾತನಾಡಿಸಬೇಕಿತ್ತು. ಆದ್ರೀಗ ದರ್ಶನ್ ಮನವಿ ಪುರಸ್ಕರಿಸಿರೋ ಜೈಲರ್, ಇಂದಿನಿಂದ ಒಳ ಸಂದರ್ಶನಕ್ಕೆ ಅಂದ್ರೆ ನೇರವಾಗಿ ಮುಖಾಮುಖಿ ಭೇಟಿ ಆಗಲು ಅವಕಾಶ ಕಲ್ಪಿಸಿದ್ದಾರೆ. ಇದಕ್ಕಿಂತ ಬಿಗ್ ಗಿಫ್ಟ್ ಬೇರೇನು ಬೇಕು ಅಲ್ಲವೇ..?
ಅಂದಹಾಗೆ ಒಳ ಸಂದರ್ಶನ ಸಿಸಿ ಕ್ಯಾಮೆರಾ ಅಥ್ವಾ ಜೈಲಾಧಿಕಾರಿಗಳ ಸಮ್ಮುಖದಲ್ಲಿ ಆಗಬೇಕು. ಪತ್ನಿ, ಮಗನ ಸಮೇತ ಐದು ಮಂದಿಗಷ್ಟೇ ಭೇಟಿ ಮಾಡಲು ಅವಕಾಶ ನೀಡಿದ್ದು, 30 ನಿಮಿಷಗಳ ಕಾಲಮಿತಿ ಕೂಡ ನಿಗದಿ ಮಾಡಲಾಗಿದೆ. ಅಲ್ಲದೆ, ಮನೆಯಿಂದ ತಂದಂತಹ ಹಣ್ಣು, ತಿನಿಸುಗಳಿಗೂ ಅವಕಾಶ ನೀಡಿರೋದು ಖುಷಿಯ ವಿಚಾರ. ಇಂದು ಮುಂಜಾನೆಯಷ್ಟೇ ಪತಿ ಜೊತೆಗಿನ ಫೋಟೋ ಹಂಚಿಕೊಂಡು, ಇಡೀ ಪ್ರಪಂಚವೇ ನಿನ್ನ ಎದುರು ನಿಂತರೂ ನಾ ಮಾತ್ರ ನಿನ್ನ ಪಕ್ಕದಲ್ಲೇ ಇರುವೆ ಅನ್ನೋ ಸಂದೇಶದ ಮೂಲಕ ಬಿಟ್ಟುಕೊಡೋ ಮಾತೇ ಇಲ್ಲ ಅಂತ ಪೋಸ್ಟ್ ಮಾಡಿದ್ರು ದಚ್ಚು ಪತ್ನಿ ವಿಜಿ.
ಪ್ರತಿ ಚಂಡಮಾರುತ, ಮೌನದಲ್ಲೂ ನಿನ್ನ ಕೈ ಬಿಡುವುದಿಲ್ಲ. ಪರಿಸ್ಥಿತಿ ದೂರ ಮಾಡಿದ್ರೂ ನನ್ನ ಹೃದಯ ನಿನಗಾಗಿಯೇ ಪರಿತಪಿಸುತ್ತೆ.. ಅನ್ನೋ ಆಶಾದಾಯಕ ಹಾಗೂ ಆತ್ಮ ವಿಶ್ವಾಸ ತುಂಬುವ ಮಾತುಗಳನ್ನ ಪ್ರೀತಿಯಿಂದ ಹಂಚಿಕೊಂಡಿದ್ರು ವಿಜಯಲಕ್ಷ್ಮೀ ದರ್ಶನ್. ಇದೀಗ ಡಿಬಾಸ್‌ಗೆ ಆ್ಯನಿವರ್ಸರಿ ದಿನ ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ಸಿಕ್ಕಿರೋದು ಎಲ್ಲಿಲ್ಲದ ಖುಷಿ ನೀಡಿದೆಯಂತೆ. ಇಷ್ಟು ದಿನ ಚಿಂತಾಕ್ರಾಂತನಾಗಿ, ದಿಗ್ಭ್ರಾಂತನಾಗಿದ್ದ ದರ್ಶನ್‌ಗೆ ಇಂದಿನಿಂದ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





