ಕಿಚ್ಚ-ದಚ್ಚು.. ನಮ್ಮ ಸ್ಯಾಂಡಲ್‌ವುಡ್‌ನ ಎರಡು ಕಣ್ಣುಗಳು. ಇವರಿಬ್ಬರಿಗೂ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಇವರಿಬ್ಬರ ಸಿನಿಮಾಗಳು ಕೂಡ ಡಿಸೆಂಬರ್‌ನಲ್ಲೇ ತೆರೆಗಪ್ಪಳಿಸಿದ್ದವು. ಆದ್ರೀಗ ಡೆವಿಲ್ ಹಾಗೂ ಮಾರ್ಕ್ ಚಿತ್ರಗಳಲ್ಲಿ ಯಾವ್ಯಾವ ಮೂವಿ ಎಷ್ಟೆಷ್ಟು ಕೋಟಿ ಗಳಿಸಿವೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ. ಅದಕ್ಕೀಗ ಉತ್ತರ ಕೊಡೋ ಸಮಯ ಬಂದಿದೆ.

ಡೆವಿಲ್, ಡಿಸೆಂಬರ್ 11ರಂದು ತೆರೆಕಂಡ ಡಿಬಾಸ್ ದರ್ಶನ್ ನಟನೆಯ ಮಾಸ್ ಮಸಾಲ ಎಂಟರ್‌ಟೈನರ್. ಅದೇ ರೀತಿ ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ ಮಾಸ್ ವೆಂಚರ್ ಮಾರ್ಕ್ ಕೂಡ ಡಿಸೆಂಬರ್ 25ಕ್ಕೆ ತೆರೆಗಪ್ಪಳಿಸಿತ್ತು. ಒಬ್ಬರು ಬಾಕ್ಸ್ ಆಫೀಸ್ ಸುಲ್ತಾನನಾದ್ರೆ, ಮತ್ತೊಬ್ರು ಬಾಕ್ಸ್ ಆಫೀಸ್‌ಗೆ ಬಾದ್‌ಷಾ. ಇಬ್ಬರೂ ಕೂಡ ನಮ್ಮ ಸ್ಯಾಂಡಲ್‌ವುಡ್ ಪಾಲಿಗೆ ಎರಡು ಕಣ್ಣುಗಳು. ಆದ್ರೆ ಇವರಿಬ್ಬರಲ್ಲಿ ಯಾವ ಚಿತ್ರ ಎಷ್ಟು ಕೋಟಿ ಗಳಿಸಿದೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇರಲಿದೆ.

ಡೆವಿಲ್ 25 ಡೇಸ್ ಕಲೆಕ್ಷನ್.. 2 ವಾರದಲ್ಲಿ ಮಾರ್ಕ್ ಧ್ವಂಸ
ಡಿಬಾಸ್ 25ದಿನಕ್ಕೆ 48Cr.. 14 ದಿನದಲ್ಲಿ ಕಿಚ್ಚನ ಗಳಿಕೆ 51Cr
ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸಿದ್ದ ಡೆವಿಲ್ ಚಿತ್ರ ನಟ ದರ್ಶನ್ ಅನುಪಸ್ಥಿತಿಯಲ್ಲಿ ಕೂಡ ನಿರ್ಮಾಪಕರಿಗೆ 30 ಕೋಟಿ ಲಾಭ ತಂದುಕೊಟ್ಟಿದೆ. ಯಶಸ್ವಿ 50ನೇ ದಿನದತ್ತ ಮುನ್ನುಗ್ಗುತ್ತಿರೋ ಡೆವಿಲ್ ಚಿತ್ರ, ದರ್ಶನ್ ಡಬಲ್ ಆ್ಯಕ್ಟಿಂಗ್‌ನಿಂದ 25 ದಿನದ ವೇಳೆಗೆ ಬರೋಬ್ಬರಿ 48 ಕೋಟಿ ಗಳಿಸಿ ಹಾಫ್ ಸೆಂಚುರಿ ಬಾರಿಸಿದೆ.

ಇನ್ನೂ ಕಿಚ್ಚನ ಮಾರ್ಕ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೂತನ ದಾಖಲೆ ಬರೆದಿದೆ. 2024ರಲ್ಲಿ ಮ್ಯಾಕ್ಸ್ ಚಿತ್ರ ನೀಡಿದ್ದ ಸುದೀಪ್-ವಿಜಯ್ ಕಾರ್ತಿಕೇಯ ಜೋಡಿಯೇ ಒನ್ಸ್ ಅಗೈನ್ ಮಾರ್ಕ್ ಮೂಲಕ ರಿಮಾರ್ಕಬಲ್ ಕಲೆಕ್ಷನ್ ಮಾಡಿದೆ. ದರ್ಶನ್ ಡೆವಿಲ್ ಸಿನಿಮಾ 25 ದಿನದಲ್ಲಿ 48 ಕೋಟಿ ಗಳಿಸಿದ್ರೆ, ಕಿಚ್ಚನ ಮಾರ್ಕ್ ಕೇವಲ ಎರಡೇ ವಾರದಲ್ಲಿ ಅಂದ್ರೆ 14 ದಿನದಲ್ಲಿ 51 ಕೋಟಿ ಕಲೆಕ್ಷನ್ ಮಾಡಿದೆ. ಇದು ಬರೀ ಥಿಯೇಟ್ರಿಕಲ್ ಕಲೆಕ್ಷನ್ ಅಷ್ಟೇ. ಇಂದಿಗೂ ಮೂರು ವಾರ ಕಂಪ್ಲೀಟ್ ಮಾಡಿರೋ ಮಾರ್ಕ್, ಯಶಸ್ವೀ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ.

ಕಿಚ್ಚ-ದಚ್ಚು 2 ಕಣ್ಣು.. ಬಾಕ್ಸ್ ಆಫೀಸ್‌ಗೆ ಸುಲ್ತಾನ ಯಾರು..?!
ಇದು ಜಸ್ಟ್ ಕಲೆಕ್ಷನ್ ರಿಪೋರ್ಟ್.. ಫ್ಯಾನ್ಸ್ ವಾರ್ ಬೇಡ..!
ಅಂದಹಾಗೆ ಇದು ಬರೀ ಕಲೆಕ್ಷನ್ ರಿಪೋರ್ಟ್ ಅಷ್ಟೇ. ಚಿತ್ರತಂಡಗಳಿಂದಲೇ ಬಂದಿರೋ ಅಧಿಕೃತ ಮಾಹಿತಿ ಮೇರೆಗೆ ಮಾಡಿರೋ ಸುದ್ದಿ. ಹೀಗಂತ ನಮ್ಮ ಹೀರೋ ಗ್ರೇಟ್, ನಿಮ್ಮ ಹೀರೋ ಕಡಿಮೆ ಅನ್ನೋ ಭೇದ-ಭಾವ ಬೇಡ. ಅಥ್ವಾ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಬೇಡವೇ ಬೇಡ. ಕಾಂಪಿಟೇಷನ್ ಆರೋಗ್ಯಕರವಾಗಿದ್ರೆ ಒಳ್ಳೆಯದು. ಮುಂದಿನ ಸಿನಿಮಾಗಳನ್ನ ಇವುಗಳಿಗಿಂತ ಬೆಟರ್ ಆಗಿ ಮಾಡೋ ನಿಟ್ಟಿನಲ್ಲಿ ಸ್ಟಾರ್ಸ್ ಕೂಡ ಎಫರ್ಟ್ ಹಾಕ್ತಾರೆ. ಸೋ.. ಸಿನಿಮಾನ ಸಿನಿಮಾ ರೀತಿ ನೋಡೋಣ. ಜಸ್ಟ್ ಎಂಜಾಯ್ ಮಾಡೋಣ.





