ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಅಯ್ಯೋ ಶಿವನೇ ಸಾಂಗ್‌ನಿಂದ ಹಂಡ್ರೆಡ್ ಪರ್ಸೆಂಟ್ ಕ್ಲಾಸಿಕ್ ಫೀಲ್ ನೀಡಿದ್ದ ಕಲ್ಟ್ ಚಿತ್ರ, ಇದೀಗ ವೆಸ್ಟ್ರನ್ ಹಾಡೊಂದರ ಮೂಲಕ ಯೂತ್ ಹುಬ್ಬೇರಿಸಿದೆ. ಝೈದ್ ಖಾನ್ ಮತ್ತೊಮ್ಮೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದು, ಕಿತ್ತೂರು ಉತ್ಸವದಲ್ಲಿ ಲಾಂಚ್ ಆದ ಕಲ್ಟ್ ಡ್ಯಾನ್ಸಿಂಗ್ ನಂಬರ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬನಾರಸ್ ಚಿತ್ರದ ಮೂಲಕ ಎಲ್ಲರ ಗಮನ ಸೆಳಿದಿದ್ದ ನಟ ಝೈದ್ ಖಾನ್ ಈಗ ಕಲ್ಟ್ ಮೂಲಕ ಕ್ಲಾಸಿಕ್ ಆಗಿ ತೆರೆಗೆ ಅಪ್ಪಳಿಸೋಕೆ ಸಜ್ಜಾಗಿದ್ದಾರೆ. ಇನ್ನು ಉಪಾಧ್ಯಕ್ಷ ಸೇರಿದಂತೆ ಯಶಸ್ವಿ ಚಿತ್ರಗಳ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ಹಾಗೂ ರಚಿತರಾಮ್ ಮತ್ತು ಮಲೈಕಾ ನಾಯಕಿಯರಾಗಿ ಅಭಿನಯಿಸಿರುವ ಕಲ್ಟ್ ಚಿತ್ರದ ಎರಡನೇ ಹಾಡು ಬ್ಲಡಿ ಲವ್ ಕಿತ್ತೂರು ಉತ್ಸವದಲ್ಲಿ ಬಿಡುಗಡೆಯಾಗಿದೆ.
ಅಂದು ಕ್ಲಾಸಿಕ್.. ಇಂದು ವೆಸ್ಟ್ರನ್.. ಝೈದ್ ಕಲ್ಟ್ ಕಮಾಲ್
ಹಾಟ್ ಗರ್ಲ್ಸ್ ನಡುವೆ ಝೈದ್ ಖಾನ್ ಮಾಸ್ ಮೂವ್ಸ್..!
ಅಯ್ಯೋ ಶಿವನೇ ಮೆಲೋಡಿ ಸಾಂಗ್ ನಂತರ ಪಬ್ ಅಲ್ಲಿ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ ಝೈದ್. ನಿರ್ದೇಶಕ ಅನಿಲ್ ಕುಮಾರ್ ಅವರೆ ಬರೆದಿರುವ ಈ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಬಿಡುಗಡೆ ಆಗಿ ಕೆಲವೇ ಗಂಟೆಯಲ್ಲೂ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಕಲ್ಟ್ ಚಿತ್ರ 2026 ರ ಜನವರಿ 23 ರಂದು ಬಿಡುಗಡೆಯಾಗುತ್ತಿದೆ.
ಕಿತ್ತೂರು ಉತ್ಸವಕ್ಕೆ ಮೊದಲ ಬಾರಿಗೆ ಭೇಟಿ ಕೊಟ್ಟ ಝೈದ್ ಗೆ ಅಲ್ಲಿದ ಜನರು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಲವ್, ಆಕ್ಷನ್, ಸೆಂಟಿಮೆಂಟ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ ಎಂದು ಝೈದ್ ಹೇಳಿಕೊಂಡಿದ್ದಾರೆ.
ಬ್ಲಡಿ ಲವ್ ಗೀತೆಗೆ ಪ್ರೇಕ್ಷಕರು ಫಿದಾ.. ಕಿತ್ತೂರು ಉತ್ಸವ ರಂಗು
ಅನಿಲ್ ಸಾಹಿತ್ಯ.. ಅರ್ಜುನ್ ಸಂಗೀತ.. ಚಂದನ್ ಗಾಯನ..!
ಇನ್ನು ದಾವಣಗೆರೆ ಹುಡುಗಿ ಮಲೈಕಾ ನಾಯಕಿಯಾಗಿ ಅಭಿನಯಿಸಿರುವ ಎರಡನೇ ಚಿತ್ರ ಕಲ್ಟ್. ಅಯ್ಯೋ ಶಿವನೇ ಹಾಡಲ್ಲಿ ನಶೆ ಏರಿಸಿದ್ದ ಮಲೈಕ ಇನ್ನು ಸಿನಿಮಾದಲ್ಲಿ ಪರ್ಫಾರ್ಮೆನ್ಸ್ ಹೇಗಿರಬಹುದು ಎಂದು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.





