ಕರಿಯ ಬಳಿಕ ಮತ್ತೊಮ್ಮೆ ಮ್ಯಾಜಿಕ್ ಮಾಡೋಕೆ ಡಿಬಾಸ್-ಪ್ರೇಮ್ ಒಂದಾಗೋ ಸೂಚನೆ ನೀಡಿದ್ರು. ಆದ್ರೆ ಅದು ಯಾವಾಗ ಅನ್ನೋದೇ ಯಕ್ಷ ಪ್ರಶ್ನೆ ಆಗಿತ್ತು. ಅದಕ್ಕೀಗ ಅಧಿಕೃತ ಉತ್ತರ ಸಿಕ್ಕಾಗಿದೆ. ದರ್ಶನ್ ಜೈಲಿಂದ ಹೊರಬರ್ತಿದ್ದಂತೆ ಫ್ರೇಮ್ ಇಡ್ತಾರಂತೆ ಪ್ರೇಮ್. ಕಿಷ್ಟಕ್ಕೂ ಯಾವುದು ಆ ಸಿನಿಮಾ..? ಹೇಗಿರಲಿದೆ..? ಅನ್ನೋದ್ರ ಎಕ್ಸ್‌ಕ್ಲೂಸಿವ್ ನಿಮಗಾಗಿ ಕಾಯ್ತಿದೆ.
ಕರಿಯ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಡಿಬಾಸ್ ದರ್ಶನ್ ನಟನೆಯಲ್ಲಿ ತಯಾರಾದ ಸಿನಿಮಾ ಮಾಡಿದ ಮೋಡಿ ಎಂಥದ್ದು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಮತ್ತೊಮ್ಮೆ ಈ ಜೋಡಿ ಮ್ಯಾಜಿಕ್ ಮಾಡೋಕೆ ಒಂದಾಗ್ತಿದೆ. ಈ ವಿಷಯ ಏನೂ ಹೊಸತಲ್ಲ. ಆದ್ರೆ ಯಾವಾಗ ಈ ಕಾಂಬಿನೇಷನ್ ಒಂದಾಗ್ತಿದೆ ಅನ್ನೋದಕ್ಕೆ ಕ್ಲ್ಯಾರಿಟಿ ಇರಲಿಲ್ಲ.

ದಾಸ ದರ್ಶನ್‌ಗೆ ಫ್ರೇಮ್ ಇಡೋಕೆ ಪ್ರೇಮ್ ವೆಯ್ಟಿಂಗ್..!
ದಚ್ಚು ರಿಲೀಸ್ ಬಳಿಕ ಮೊದಲ ಸಿನಿಮಾ ಪ್ರೇಮ್ ಕಾಂಬೋ
ಕಳೆದ ವರ್ಷ ಡಿಬಾಸ್ ದರ್ಶನ್ ಬರ್ತ್ ಡೇಗೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋದ್ರ ವಿಡಿಯೋ ಲಾಂಚ್ ಆಗಿತ್ತು. ಅದರ ಜೊತೆ ಚಿತ್ರದ ಫಸ್ಟ್‌ಲುಕ್ ಮೋಷನ್ ಪೋಸ್ಟರ್ ಕೂಡ ರಿವೀಲ್ ಆಗಿತ್ತು. ಅದರಲ್ಲಿ ಒಂದು ಮಾಸ್ ಡೈಲಾಗ್ ಕೂಡ ಇತ್ತು. ನನ್ನ ಕೊನೆಯ ಉಸಿರಿರೋವರೆಗೂ ಈ ಭೂಮಿ ಮೇಲೆ ನಿನ್ನ ಒಂದು ಹನಿ ರಕ್ತ ಕೂಡ ಸೋಕೋದಕ್ಕೆ ನಾನು ಬಿಡಲ್ಲ ಅನ್ನೋ ದಾಸನ ಡೈಲಾಗ್‌ನಿಂದ ಇದೊಂದು ಪ್ರೊಟೆಕ್ಟರ್ ಕಥೆ ಅನ್ನೋದ್ರ ಹಿಂಟ್ ಸಿಕ್ಕಿತ್ತು. ಜೈ ಶ್ರೀರಾಮ್ ಅನ್ನೋ ಹಿನ್ನೆಲೆ ಧ್ವನಿ, ಅಯೋಧ್ಯೆಯ ರಾಮಮಂದಿರ, ಹನುಮನ ಹೋಲುವ ಪಾತ್ರ ಹೀಗೆ ಎಲ್ಲವೂ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು.

KVN ಪ್ರೊಡಕ್ಷನ್ಸ್‌ನ ಬಹುಕೋಟಿ ಚಿತ್ರ..ಫಸ್ಟ್ ಲುಕ್ ಕಿಕ್
ಡಿ ಬಾಸ್ ಜೊತೆ ನ್ಯೂ ಪ್ರಾಜೆಕ್ಟ್..KD ರಿಲೀಸ್ ಅಪ್ಡೇಟ್..!
ಅಂದಹಾಗೆ ಪ್ರೇಮ್-ಕೆವಿಎನ್-ದಚ್ಚು ಕಾಂಬೋನ ಈ ಚಿತ್ರ ನೆಕ್ಸ್ಟ್ ಪ್ರೇಮ್ ಆ್ಯಕ್ಷನ್ ಕಟ್ ಹೇಳೋಕೆ ಹೊರಟಿರೋ ಸಿನಿಮಾ ಆಗಲಿದೆ. ಹೌದು.. ಈ ಬಗ್ಗೆ ಮಾಧ್ಯಮಗಳಿಗೆ ಅಧಿಕೃತವಾಗಿ ಹೇಳಿಕೆ ನೀಡಿರೋ ಶೋಮ್ಯಾನ್ ಪ್ರೇಮ್, ದರ್ಶನ್ ಹೊರಗೆ ಬರ್ತಿದ್ದಂತೆ ಫಸ್ಟ್ ಸಿನಿಮಾ ನಾನೇ ಮಾಡ್ತೀನಿ ಎಂದಿದ್ದಾರೆ. ಇದು ದಾಸನ ಫ್ಯಾನ್ಸ್‌ಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ.
ಕೆಡಿ ರಿಲೀಸ್ ಇಲ್ಲ ಯಾಕೆ ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಘಟಾನುಘಟಿ ಕಲಾವಿದರನ್ನ ಇಟ್ಕೊಂಡು ಸಿನಿಮಾ ಮಾಡಿದ್ದಾರೆ ಪ್ರೇಮ್. ಧ್ರುವ ಸರ್ಜಾ-ಸಂಜಯ್ ದತ್ ಕೆಡಿ ಚಿತ್ರವನ್ನು ದೀಪಾವಳಿಗೆ ರಿಲೀಸ್ ಮಾಡೋದಾಗಿ ಹೇಳಿರೋ ಪ್ರೇಮ್, ಪರಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯಗಳನ್ನ ನಡೆಸ್ತಿರೋದ್ರ ಬಗ್ಗೆ ಅಫಿಶಿಯಲಿ ಸ್ಟೇಟ್‌ಮೆಂಟ್ ನೀಡಿದ್ದಾರೆ.

ಇನ್ನು ಎಮ್ಮೆಗಳನ್ನ ತರಿಸಲು ಹೋಗಿ ಮೋಸ ಹೋಗಿದ್ದ ಬಗ್ಗೆಯೂ ಪ್ರೇಮ್ ಮಾಹಿತಿ ಹಂಚಿಕೊಂಡಿದ್ದಾರೆ.
ಅದೇನೇ ಇರಲಿ, ದರ್ಶನ್ ತನ್ನನ್ನ ಪುಡಾಂಗ್ ಅಂದ್ರೂ ಕೂಡ, ಸ್ನೇಹಕ್ಕಾಗಿ ಮತ್ತೆ ಅದೇ ದಾಸನ ಜೊತೆ ಸಿನಿಮಾ ಮಾಡೋಕೆ ಹೊರಟಿರೋ ಪ್ರೇಮ್ ಧೈರ್ಯ, ಪ್ರೀತಿ, ಸ್ನೇಹವನ್ನು ಮೆಚ್ಚಲೇಬೇಕು.





