ಗೋಲ್ಡನ್ ಸ್ಟಾರ್ ಗಣೇಶ್ ಈಗ ಬೃಂದಾವಿಹಾರಿ. ಯೆಸ್.. ಕೃಷ್ಣಂ ಪ್ರಣಯ ಸಖಿ ಚಿತ್ರದ ಮೂಲಕ ನೋಡುಗರ ಕಣ್ಮನ ತಣಿಸಿದ್ದ ಶ್ರೀನಿವಾಸ್ ರಾಜು-ಗಣಿ ಜೋಡಿ ಮಗದೊಮ್ಮೆ ಮೋಡಿ ಮಾಡೋಕೆ ಸಜ್ಜಾಗಿದೆ. ಸೈಲೆಂಟ್ ಆಗಿ ಶೂಟಿಂಗ್ ಮಾಡಿ ಮುಗಿಸಿರೋ ಟೀಂ, ಶ್ರೀರಾಮ ನವಮಿ ವಿಶೇಷ ರಾಮನ ಹಾಡಿನ ಮೂಲಕ ಗಾನ ಬಜಾನ ಶುರುವಿಟ್ಟಿದೆ. ಅದರ ಫುಲ್ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ..
- ರಾಮನಾಮ ಜಪದಲ್ಲಿ ‘ಬೃಂದಾವಿಹಾರಿ’ ಗಣೇಶ್ ಝಲಕ್
- ಇದು ಶ್ರೀರಾಮ ನವಮಿ ಹಬ್ಬದ ವಿಶೇಷ ಗೋಲ್ಡನ್ ಗಿಫ್ಟ್..!
- ‘ಕೃಷ್ಣಂ ಪ್ರಣಯ ಸಖಿ’ ಜೋಡಿ ಮತ್ತೆ ಮಾಡಲಿದೆ ಮೋಡಿ
- ಅಂದು ದ್ವಾಪರ ಸಾಂಗ್.. ಇಂದು ರಾಮಾ ರಾಮಾ ಗೀತೆ..!
2024ರ ಇಂಡಸ್ಟ್ರಿ ಹಿಟ್ ಮೂವಿಗಳಲ್ಲಿ ಕೃಷ್ಣಂ ಪ್ರಣಯ ಸಖಿ ಕೂಡ ಒಂದು. ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿದ್ದ ಫೀಲ್ ಗುಡ್ ಲವ್ ಕಮ್ ಎಮೋಷನಲ್ ಜರ್ನಿ ಕೃಷ್ಣಂ ಪ್ರಣಯ ಸಖಿ, ಗೋಲ್ಡನ್ ಸ್ಟಾರ್ ಗಣೇಶ್ ನಟನಾ ಗಮ್ಮತ್ತನ್ನ ಮತ್ತೊಮ್ಮೆ ಪ್ರೇಕ್ಷಕರಿಗೆ ಸಾರಿದ ಚಿತ್ರ. ಅದಕ್ಕೆ ಡೈರೆಕ್ಟರ್ ಶ್ರೀನಿವಾಸ್ ರಾಜು ಕೂಡ ಕಾರಣೀಭೂತರು. ಇದೀಗ ಈ ಜೋಡಿ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಮೋಡಿ ಮಾಡೋಕೆ ಸಜ್ಜಾಗಿದೆ. ಯಾರಿಗೂ ಗೊತ್ತಾಗದಂತೆ ಸದ್ದಿಲ್ಲದೆ ಸೈಲೆಂಟ್ ಆಗಿ ಶೂಟಿಂಗ್ ಮಾಡಿ ಮುಗಿಸಿದೆ. ಅದಕ್ಕೆ ಬೃಂದಾವಿಹಾರಿ ಅನ್ನೋ ಹಾರ್ಟ್ ಟಚಿಂಗ್ ಟೈಟಲ್ ಕೂಡ ಇಟ್ಟಿದೆ.
ಬೃಂದಾವಿಹಾರಿ ಅಂದ್ರೆ ಶ್ರೀಕೃಷ್ಣ. ಈ ಬಾರಿಯೂ ಕೃಷ್ಣನಾಗಿ ಗಣಿ ಕಮಾಲ್ ಮಾಡಲಿದ್ದು, ಇಲ್ಲಿ ಡೈರೆಕ್ಟರ್ ಶ್ರೀನಿವಾಸ್ ರಾಜು, ಶ್ರೀರಾಮನವಮಿ ಹಬ್ಬದ ವಿಶೇಷ ಚಿತ್ರದ ಮೊದಲ ಸಾಂಗ್ ರಿಲೀಸ್ ಮಾಡಿ, ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಶ್ರೀಕೃಷ್ಣ ಶ್ರೀರಾಮನ ಕುರಿತ ಹಾಡಿಗೆ ಸ್ಟೆಪ್ ಹಾಕಿರೋದು. ಗೋಲ್ಡನ್ ಸ್ಟಾರ್ ಗಣೇಶ್ ಇಲ್ಲಿ ಯುನಿಕ್ ಹಾಗೂ ಡಿಫರೆಂಟ್ ಸ್ಟೆಪ್ಸ್ ಹಾಕಿದ್ದು, ನೋಡುಗರ ಕಣ್ಮನ ತಣಿಸುತ್ತಿದೆ ರಾಮಾ ರಾಮಾ ದೇವಾ ಸಾಂಗ್.
ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆಯ ಈ ಹಾಡಿಗೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ಅನುರಾಗ್ ಕುಲಕರ್ಣಿ ಕಂಠದಲ್ಲಿ ಮೂಡಿಬಂದಿದೆ ಸಾಂಗ್. ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇಲ್ಲಿ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ಇಬ್ಬರು ನಾಯಕಿಯರಿದ್ದು, ಖುದ್ದು ಡೈರೆಕ್ಟರ್ ಹಾಗೂ ಹೀರೋ ಈ ಹಾಡಿನ ವಿಶೇಷತೆ ಬಿಟ್ಟಿಚ್ಚಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ದ್ವಾಪರ ಸಾಂಗ್ ಮಾಡಿ ಎಲ್ಲರನ್ನ ಗುಂಗಿಡಿಸಿದ್ರು ಗಣೇಶ್-ಶ್ರೀನಿವಾಸ್ ರಾಜು. ಇದೀಗ ಒನ್ಸ್ ಅಗೈನ್ ಅಂಥದ್ದೇ ಫೀಲ್ ಗುಡ್ ಸಾಂಗ್ ಮೂಲಕ ಈ ಆಲ್ಬಮ್‌ನ ಅರ್ಪಿಸುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಅವರೇ ಸಾಹಿತ್ಯ ರಚಿಸಿರೋದು ಇಂಟರೆಸ್ಟಿಂಗ್. ಅಂದು ದ್ವಾಪರದ ಕೃಷ್ಣ ಇಂದು ತ್ರೇತಾಯುಗದ ಶ್ರೀರಾಮ.. ಇದು ನಿಜಕ್ಕೂ ಸಂಥಿಂಗ್ ಸ್ಪೆಷಲ್. ಅಂದಹಾಗೆ ಈ ಸಿನಿಮಾಗೆ ಶಾಸಕರು ಹಾಗೂ ಚಿತ್ರ ನಿರ್ಮಾಪಕರೂ ಆದಂತಹ ಸಮೃದ್ಧಿ ಮಂಜುನಾಥ್ ಬಂಡವಾಳ ಹಾಕಿ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





