ಟೈಟಲ್ ಹಾಗೂ ಟೀಸರ್‌ನಿಂದ ಟಾಕ್ ಆಫ್ ದಿ ಟೌನ್ ಆಗಿದ್ದ ಬಾಸ್ ಚಿತ್ರದ ರಿಲೀಸ್‌ಗೆ ತಡೆ ಕೋರಿ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಕೋರ್ಟ್ ಮೆಟ್ಟಿಲೇರಿದ್ರು. ಆದ್ರೆ ಕೋರ್ಟ್‌ನಲ್ಲಿ ಬಾಸ್ ಚಿತ್ರತಂಡದ ಪರ ತೀರ್ಪು ಬಂತು. ಇದೇ ಜೂನ್ 19ಕ್ಕೆ ಸಿನಿಮಾ ರಿಲೀಸ್‌ಗೆ ಸಜ್ಜಾಗಿತ್ತು. ಇದೀಗ ಮತ್ತೆ ತಡೆ ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ ಡಿಬಾಸ್ ದಂಪತಿ. ಏನೀ ವಿವಾದ ಅಂತೀರಾ..? ಜಸ್ಟ್ ವಾಚ್.
- ಬಾಸ್ ಚಿತ್ರಕ್ಕೆ ಮತ್ತೆ ಸಂಕಷ್ಟ.. ಹೈ-ಕೋರ್ಟ್ ಮೆಟ್ಟಿಲೇರಿದ ದರ್ಶನ್ ದಂಪತಿ
- ಜೂ- 19ಕ್ಕೆ ತೆರೆಗೆ ಬರಬೇಕಿದ್ದ ತನುಷ್ ಶಿವಣ್ಣ ನಟನೆಯ ಬಾಸ್
- ರೇಣುಕಾಸ್ವಾಮಿ ಮರ್ಡರ್ ಕೇಸ್ & ಡಿ ಗ್ಯಾಂಗ್ ಕುರಿತ ಕಥೆ..?!
- ಕೋರ್ಟ್‌ನಲ್ಲಿ ಬಾಸ್ ವಿವಾದ.. ಸದ್ಯ ಚಿತ್ರಕ್ಕಿಲ್ಲ ರಿಲೀಸ್ ಭಾಗ್ಯ..!
ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ನಟ ದರ್ಶನ್, ಆತನ ಆಪ್ತ ಗೆಳತಿ ಪವಿತ್ರಾ ಗೌಡ ಸೇರಿದಂತೆ ಸಾಕಷ್ಟು ಮಂದಿ ಡಿ ಗ್ಯಾಂಗ್ ಮಂದಿ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಕೋರ್ಟ್ ಟ್ರಯಲ್ಸ್ ಕೂಡ ಭರದಿಂದ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ವರ್ಷದ ಒಳಗಾಗಿ ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿಯಬೇಕಿದೆ. ಒಂದು ವೇಳೆ ವರ್ಷದೊಳಗೆ ಸಾಕ್ಷಿಗಳ ವಿಚಾರಣೆ ಮುಗಿಯದಿದ್ದರೆ, ಆಗ ದರ್ಶನ್ ಬೇಲ್ ಪಡೆಯಲು ಅರ್ಹರಾಗಿರ್ತಾರೆ ಅನ್ನೋದು ಕೂಡ ಸ್ಪಷ್ಟವಾಗಿದೆ.
ಸುಮ್ಮನಹಳ್ಳಿ ಮೋರಿ, ಪಟ್ಟಣಗೆರೆ ಶೆಡ್, ಲಾರಿ ಚಕ್ರ, ರೇಣುಕಾಸ್ವಾಮಿ ಅಂತಹ ಒಬ್ಬ ವ್ಯಕ್ತಿ, ಇಬ್ಬ ಸ್ಟಾರ್ ಹೀರೋ, ಆತನ ಜೊತೆ ಆಪ್ತ ಗೆಳತಿ, ಪೊಲೀಸ್ ಸ್ಟೇಷನ್, ವಿಚಾರಣೆ.. ಇವೇ ಮೊದಲಾದ ವಿಚಾರಗಳ ಬಗ್ಗೆ ಬಾಸ್ ಅನ್ನೋ ಸಿನಿಮಾ ಬೆಳಕು ಚೆಲ್ಲಿದೆ. ಅದ್ರ ಟೈಟಲ್‌ನಿಂದ ಹಿಡಿದು, ಟೀಸರ್ ಹಾಗೂ ಮೊದಲ ಸಾಂಗ್‌ನಲ್ಲಿರೋ ದೃಶ್ಯಗಳನ್ನ ಅವಲೋಕಿಸಿದ್ರೆ, ಅದು ಔಟ್ & ಔಟ್ ರೇಣುಕಾಸ್ವಾಮಿ ಮರ್ಡರ್ ಕೇಸ್ ಹಾಗೂ ಅದನ್ನ ಮಾಡಿದ ಡಿ ಬಾಸ್ & ಗ್ಯಾಂಗ್ ಕುರಿತ ಚಿತ್ರ ಎನಿಸಲಿದೆ.
ಆದ್ರೆ ಬಾಸ್ ಚಿತ್ರದ ನಾಯಕನಟ ಕಮ್ ನಿರ್ಮಾಪಕ ತನುಷ್ ಶಿವಣ್ಣ ಹಾಗೂ ಚಿತ್ರದ ನಿರ್ದೇಶಕ ಲವ ಮಾತ್ರ.. ಈ ಸಿನಿಮಾಗೂ ರೇಣುಕಾಸ್ವಾಮಿ ಮರ್ಡರ್ ಕೇಸ್‌ಗೂ ಸಂಬಂಧ ಇಲ್ಲ. ಅದೇ ಬೇರೆ ಇದೇ ಬೇರೆ. ಇನ್ ಫ್ಯಾಕ್ಟ್ ಸೆನ್ಸಾರ್ ಆಫೀಸರ್‌ಗಳು ಕೂಡ ಸಿನಿಮಾ ನೋಡಿದ್ದಾರೆ. ಅವರಿಂದಲೂ ಯಾವುದೇ ಆಕ್ಷೇಪವಿಲ್ಲ ಅಂತಿದ್ದಾರೆ.
ಯಾವಾಗ ಬಾಸ್ ಸಿನಿಮಾ ಡಿ ಬಾಸ್ ಮಾಡಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್‌ನ ಹೋಲುವಂತಿದೆ ಅನ್ನೋದು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಬಿತ್ತರ ಆಯ್ತೋ.. ಆಗ್ಲೇ ನಟ ದರ್ಶನ್ ಹಾಗೂ ಅವ್ರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಎಚ್ಚೆತ್ತುಕೊಂಡರು. ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಿನಿಮಾ ರಿಲೀಸ್‌ಗೆ ಮಧ್ಯಂತರ ತಡೆ ತಂದರು. ಸಿನಿಮಾ ರಿಲೀಸ್ ಆಗಬಾರದು. ಯಾಕಂದ್ರೆ ಇದು ಕೋರ್ಟ್ ಟ್ರಯಲ್ಸ್‌ಗೆ ತೊಂದರೆ ಆಗಲಿದೆ. ಒಪೀನಿಯಲ್ ಬ್ಯುಲ್ಡ್ ಮಾಡಲಿದೆ ಅಂತೆಲ್ಲಾ ಕೋರ್ಟ್ ಮೆಟ್ಟಿಲೇರಿದ್ರು.
ಈ ಪ್ರಕರಣದ ವಿರುದ್ಧ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಹೋರಾಟ ನಡೆಸಿದ ನಟ, ನಿರ್ಮಾಪಕ ತನುಷ್ ಶಿವಣ್ಣ ಹಾಗೂ ಲವ, ಕೊನೆಗೆ ಕೇಸ್ ಗೆದ್ದು, ಬಾಸ್ ಸಿನಿಮಾನ ರಿಲೀಸ್ ಮಾಡಲು ಸಜ್ಜಾದರು. ಇದೇ ಜೂನ್ 19ಕ್ಕೆ ಸಿನಿಮಾನ ಗ್ರ್ಯಾಂಡ್ ಆಗಿ ತೆರೆಗೆ ತರೋ ಧಾವಂತದಲ್ಲಿ ಸಿನಿಮಾದ ಭರ್ಜರಿ ಪ್ರಮೋಷನ್ಸ್ ಹಮ್ಮಿಕೊಂಡರು. ಆದ್ರೆ ಮತ್ತೆ ಹೈ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರೋ ದರ್ಶನ್ ಹಾಗೂ ಅವ್ರ ಪತ್ನಿ ವಿಜಯಲಕ್ಷ್ಮೀ ದರ್ಶನ್, ಬಾಸ್ ಚಿತ್ರತಂಡಕ್ಕೆ ಒನ್ಸ್ ಅಗೈನ್ ಆಘಾತ ತಂದೊಡ್ಡಿದ್ದಾರೆ.
ನಟ ದರ್ಶನ್ ಶ್ರೀನಿವಾಸ್ ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರು ಈ ಬಾಸ್ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ MFA No. 4257/2026 ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಬಾಸ್ ಚಿತ್ರದ ಭವಿಷ್ಯ ಇದೀಗ ಹೈಕೋರ್ಟ್‌ನ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಜೂನ್ 19ಕ್ಕೆ ರಿಲೀಸ್ ಆಗ್ತಿಲ್ಲ ಅನ್ನೋದು ಕೂಡ ಸ್ಪಷ್ಟವಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಂತ್ರ ನಿರ್ಮಾಪಕರು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಕೂರುವಂತಾಗಿದೆ. ಯಾಕಂದ್ರೆ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡಿರೋ ಇವರು, ರಿಲೀಸ್‌ಗೆ ಸ್ಟೇ ಬಂದಿರೋದ್ರಿಂದ ಅಕ್ಷರಶಃ ಆತಂಕಕ್ಕೆ ಒಳಗಾಗಿದ್ದಾರೆ. ನಿರ್ಮಾಪಕರಿಗಾಗುವ ಈ ನಷ್ಟಕ್ಕೆ ಹೊಣೆ ಯಾರಾಗ್ತಾರೆ ಅನ್ನೋದೇ ಯಕ್ಷ ಪ್ರಶ್ನೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





