ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಗಲ್ಲಿ ಗಲ್ಲಿಲೂ ಇಂದು ಒಂದೇ ಹೆಸರು ಗುನುಗುತ್ತಿದೆ ಅದುವೇ ಗಿಲ್ಲಿ. ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ಸಾಮಾನ್ಯ ಕಾಮಿಡಿಯನ್ ಆಗಿ ಜನರನ್ನು ನಗಿಸುತ್ತಿದ್ದ ಹುಡುಗ, ಈಗ ಜನಮನದ ಹೀರೋ ಆಗಿ ರಾಜ್ಯವನ್ನೇ ಕಬಳಿಸಿದ್ದಾನೆ. ಗಲ್ಲಿಯಿಂದ ಗ್ಯಾಲಕ್ಸಿವರೆಗೂ ಗಿಲ್ಲಿಯೇ ಟ್ರೆಂಡ್.
ಬಡವರ ಮಕ್ಳು ಬೆಳಿಬೇಕು ರೈತನ ಮಗ ವಿನ್ ಆಗ್ಬೇಕು ಈ ಸಾಲುಗಳು ಕೇವಲ ಡೈಲಾಗ್ ಅಲ್ಲ, ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾವನ್ನೇ ಟ್ರೆಂಡ್ ಆದ ಸ್ಲೊಗನ್. ಗಿಲ್ಲಿ ಗೆಲುವು ಜನರಿಗೆ ಯಾಕೆ ಇಷ್ಟ ಆಯ್ತು ಅಂದ್ರೆ, ಅವನ ಕಥೆ ನಮ್ಮಂತೆಯೇ ಇದೆ. ಏನೇ ಕಷ್ಟ ಬಂದಿದ್ದರೂ ಸದನ್ನ ನಗು ನಗುತ್ತಾ ಎದುರಿಸಿದ. ಎಷ್ಟೇ ಅವಮಾನ ಅನುಭವಿಸಿದರೂ, ಅದನ್ನ ಸೋಲಿಸಿ ಎದ್ದು ನಿಂತಿದ್ದಾನೆ. ಅದಕ್ಕೇ ಗಿಲ್ಲಿ ಜನರ ಮಗನಾಗಿಬಿಟ್ಟಿದ್ದಾನೆ. ಈ ಕ್ರೇಜ್ ಸೋಶಿಯಲ್ ಮೀಡಿಯಾದಲ್ಲೇ ನಿಲ್ಲದೆ, ನೇರವಾಗಿ ಸ್ಯಾಂಡಲ್‌ವುಡ್‌ನ ಸ್ಟಾರ್ ಮನೆಗಳಿಗೂ ತಲುಪಿದೆ.
ಗಲ್ಲಿಯಿಂದ ಗ್ಯಾಲಕ್ಸಿವರೆಗೂ ಗಿಲ್ಲಿಯೇ ಟ್ರೆಂಡ್..!
ಕಿಚ್ಚನ ಭೇಟಿ, ಶಿವಣ್ಣನ ಆಶೀರ್ವಾದ..ಗಿಲ್ಲಿ ಗೆಲುವಿಗೆ ಸ್ಟಾರ್ ಮುದ್ರೆ
ಗಿಲ್ಲಿ ಬಿಗ್ ಬಾಸ್ ಟ್ರೋಫಿ ಗೆದ್ದ ತಕ್ಷಣ ಶುರು ಆಯ್ತು ಸ್ಟಾರ್ ಭೇಟಿ. ಎಸ್, ಮೊದಲು ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ಗಿಲ್ಲಿ ನಟ ಆಮೇಲೆ ನೇರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗಿಲ್ಲಿ ಬಿಗ್ ಬಾಸ್ ಒಳಗೆ ಇದ್ದ ಸಂದರ್ಭದಲ್ಲಿ ಶಿವಣ್ಣ ಗಿಲ್ಲಿ ಗೆಲ್ತಾನೆ ಅಂತ ಮೊದಲೇ ಶುಭ ಹಾರೈಸಿದ್ದವರು. ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಆಟ ನೋಡಿದ ಶಿವಣ್ಣ, “ಈ ಹುಡುಗನಲ್ಲಿ ನಿಜವಾದ ವ್ಯಕ್ತಿತ್ವ ಇದೆ” ಅಂತ ಮೆಚ್ಚಿಕೊಂಡಿದ್ದರು. ಆ ಮಾತುಗಳೇ ಇವತ್ತು ಸತ್ಯವಾಗಿ, ಗಿಲ್ಲಿ ವಿಜಯದ ರೂಪದಲ್ಲಿ ಕಾಣಿಸಿವೆ.
ಬಿಗ್ ಬಾಸ್ ಅಂದ್ರೆ ಕೇವಲ ಆಟ ಅಲ್ಲ ಅದು ವ್ಯಕ್ತಿತ್ವದ ಪರೀಕ್ಷೆ. ಅಲ್ಲಿ ನಿಜವಾಗಿರೋದು ಕಷ್ಟ, ನಾಟಕ ಮಾಡಿದ್ರೆ ಜನ ಹಿಡಿದುಬಿಡ್ತಾರೆ. ಸದ್ಯ ಗಿಲ್ಲಿ ಕ್ರೇಜ್ ಸಿನಿ ದುನಿಯಾನೇ ಬೆರಗಾಗುವ ಮಟ್ಟಿಗೆ ಹಬ್ಬಿದೆ. ಅಂದಹಾಗೆ ಗಿಲ್ಲಿ ಈ ಮೊದಲು ಹಲವು ರಿಯಾಲಿಟಿ ಶೋಗಳಲ್ಲಿ ಕಾಮಿಡಿಯಿಂದ ಕಮಾಲ್ ಮಾಡಿದ್ದರು. ಆದರೆ ಈ ಮಟ್ಟದ ಜನಪ್ರಿಯತೆ, ಈ ರೀತಿ ಹೃದಯಸ್ಪರ್ಶಿ ಸ್ವೀಕಾರ ಆಗಿರಲಿಲ್ಲ. ರೈಟ್ ಟೈಮ್‌ಗೆ ಬಿಗ್ ಬಾಸ್ ಎಂಟ್ರಿ, ರೈಟ್ ಆಟ, ರೈಟ್ ವ್ಯಕ್ತಿತ್ವ ಗಿಲ್ಲಿಯನ್ನು ಮಂಡ್ಯ ಜನತೆ ಮಾತ್ರವಲ್ಲ, ಇಡೀ ರಾಜ್ಯದ ಬಡವರ ಮಕ್ಕಳಿಗೆ ಸ್ಪೂರ್ತಿಯನ್ನಾಗಿ ಮಾಡಿದೆ. ನಾವು ಕೂಡ ಜೀವನದಲ್ಲಿ ಗೆಲ್ಲಬಹುದು ಅನ್ನೋ ನಂಬಿಕೆ ಗಿಲ್ಲಿ ಮೂಲಕ ಹುಟ್ಟಿದೆ.
ರೈಟ್ ಟೈಮ್, ರೈಟ್ ಗೇಮ್, ರೈಟ್ ವಿನ್ನರ್ ಗಿಲ್ಲಿ..!
ಶಿವಣ್ಣ ಜೊತೆ ಗಿಲ್ಲಿ ಸಿಲ್ವರ್ ಸ್ಕ್ರೀನ್ ಡೆಬ್ಯೂ ಯಾವಾಗ..?
ಇನ್ನೂ ವಿಶೇಷ ಅಂದ್ರೆ ಶಿವಣ್ಣ ಮನೆಗೆ ಭೇಟಿ ಕೊಟ್ಟ ಗಿಲ್ಲಿ, ಗೀತಕ್ಕ ಹಾಗೂ ಶಿವಣ್ಣ ಆಶೀರ್ವಾದ ಪಡೆದು ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಶಿವಣ್ಣ, ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗಿಲ್ಲಿಗೆ ಅವಕಾಶ ಕೊಡೋದಾಗಿ ಹೇಳಿಕೊಂಡಿದ್ದ ಮಾತು ಈಗ ಮತ್ತೆ ಚರ್ಚೆಗೆ ಬಂದಿದೆ.ಅಂದರೆ ಗಿಲ್ಲಿ ಜೀವನದಲ್ಲಿ ಮತ್ತೊಂದು ದೊಡ್ಡ ಅಧ್ಯಾಯ ಬರೆಯೋ ಸಮಯ ಹತ್ತಿರದಲ್ಲಿದೆ. ಬಿಗ್ ಬಾಸ್ ಟ್ರೋಫಿಯಿಂದ ಸಿನಿ ಪರದೆವರೆಗೂ ಗಿಲ್ಲಿ ಕನಸುಗಳು ಈಗ ನಿಜವಾಗೋ ಹಂತದಲ್ಲಿವೆ.





