• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

40ನೇ ವಯಸ್ಸಲ್ಲಿ ಗರ್ಭಿಣಿ.. ಶಾಕ್ ಕೊಟ್ಟ ಭಾವನಾ

IVF ಮೂಲಕ ಅವಳಿ ಮಕ್ಕಳಿಗೆ ಗರ್ಭಧರಿಸಿದ ನಟಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 4, 2025 - 4:58 pm
in Flash News, ಸಿನಿಮಾ
0 0
0
Untitled design 2025 07 04t165809.500

ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ನಟಿ ಭಾವನಾ ರಾಮಣ್ಣ, ಅವಳಿ ಮಕ್ಕಳಿಗೆ ಗರ್ಭ ಧರಿಸೋ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಭಾವನಾ ತೆಗೆದುಕೊಂಡ ಬೋಲ್ಡ್ ನಿರ್ಧಾರಕ್ಕೆ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಕರುನಾಡೇ ಬೆಚ್ಚಿ ಬಿದ್ದಿದೆ. ಇಷ್ಟಕ್ಕೂ ಇದರ ಹಿಂದಿನ ಅಸಲಿಯತ್ತೇನು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ. ಜಸ್ಟ್ ವಾಚ್.

  • 40ನೇ ವಯಸ್ಸಲ್ಲಿ ಗರ್ಭಿಣಿ.. ಶಾಕ್ ಕೊಟ್ಟ ಭಾವನಾ
  • IVF ಮೂಲಕ ಅವಳಿ ಮಕ್ಕಳಿಗೆ ಗರ್ಭಧರಿಸಿದ ನಟಿ

RelatedPosts

ಕಾಫಿನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆ ಅಬ್ಬರ: ಧರೆಗುರುಳಿದ ಮರಗಳು, ಟ್ರಾಫಿಕ್ ಜಾಮ್

ಪ್ರಧಾನಿ ಮೋದಿ ಭೇಟಿಯಿಂದ ರಾತ್ರೋರಾತ್ರಿ ವೈರಲ್‌ ಆದ ಚುರುಮುರಿ ವ್ಯಾಪಾರಿ

ಇರಾನ್-ಅಮೆರಿಕ ಸಂಘರ್ಷ: ಮಾತುಕತೆಗೆ ಇರಾನ್ ತಿರಸ್ಕಾರ; ಪಾಕಿಸ್ತಾನಕ್ಕೆ ಜೆಡಿ ವ್ಯಾನ್ಸ್

ಬೆಂಗಳೂರಲ್ಲಿ 36 ಡಿಗ್ರಿ ಉರಿ ಬಿಸಿಲು: ಇನ್ನು 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

ADVERTISEMENT
ADVERTISEMENT

ಭಾವನಾ ರಾಮಣ್ಣ.. ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿಮಣಿಯರಲ್ಲಿ ಒಬ್ಬರು. ಚಂದ್ರಮುಖಿ ಪ್ರಾಣಸಖಿ ಚಿತ್ರ ಖ್ಯಾತಿಯ ಈಕೆ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ಸ್ಟೇಟ್ ಅವಾರ್ಡ್‌ ಪಡೆದಿದ್ದಾರೆ. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಕೂಡ ಛಾಪು ಮೂಡಿಸಿರೋ ಭಾವನಾ, ಒಂಥರಾ ಪಂಚಭಾಷಾ ಅಭಿನೇತ್ರಿ.

ದಾವಣಗೆರೆ ಮೂಲದ ನಂದಿನಿ ರಾಮಣ್ಣನಿಗೆ ನಿರ್ದೇಶಕ ಕೋಡ್ಲು ರಾಮಕೃಷ್ಣ ಭಾವನಾ ರಾಮಣ್ಣ ಅಂತ ಹೆಸರು ಬದಲಿಸಿದ್ರು. ಶಾಸ್ತ್ರೀಯ ನೃತ್ಯಗಾರ್ತಿ ಆಗುವ ಕನಸು ಕಂಡಿದ್ದ ಭಾವನಾ, ಭರತನಾಟ್ಯ ಮಾಡುವಾಗ ಮರಿಬೆಲೆ ಚಿತ್ರತಂಡದ ಕಣ್ಣಿಗೆ ಬೀಳ್ತಾರೆ. ಅಲ್ಲಿಂದ ಆಕೆ ಸಿನಿಮಾ, ಸೀರಿಯಲ್, ರಾಜಕಾರಣ ಹೀಗೆ ಸಿಕ್ಕಾಪಟ್ಟೆ ಬ್ಯುಸಿ ಆಗ್ತಾರೆ. 40 ವರ್ಷಗಳಾಗಿದ್ರೂ ಇಂದಿಗೂ ಭಾವನಾ ಮದ್ವೆ ಆಗಿಲ್ಲ. ಆದ್ರೆ ಅವಳಿ ಮಕ್ಕಳಿಗೆ ಗರ್ಭ ಧರಿಸೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಯೆಸ್.. ಭಾವನಾ ರಾಮಣ್ಣ ತಂದೆ ಇಲ್ಲದೆ ತಾಯಿ ಆಗ್ತಿರೋ ವಿಷಯ ತಿಳಿದು ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಕರುನಾಡೇ ಅಚ್ಚರಿಗೊಂಡಿದೆ. ಆದ್ರೆ ಆಕೆ ಮಾತ್ರ ತನ್ನ ನಿರ್ಧಾರವನ್ನು ಸ್ಪಷ್ಟತೆಯಿಂದ, ದಿಟ್ಟವಾಗಿ ತೆಗೆದುಕೊಂಡು ಆಗಿದೆ. ಆರು ತಿಂಗಳ ಗರ್ಭಿಣಿಯಾಗಿರೋ ಭಾವನಾ, ಬೇಬಿ ಬಂಪ್ ಫೋಟೋಸ್ ಸಮೇತ ತಾಯಿ ಆಗ್ತಿರೋ ಸಂಭ್ರಮವನ್ನು ಸಮಾಜದ ಮುಂದೆ ತೆರೆದಿಟ್ಟಿದ್ದಾರೆ.

ಭಾವನಾ ಹೊಸ ಅಧ್ಯಾಯ.. ಅವಳಿ ಮಕ್ಕಳಿಗೆ 6 ತಿಂಗಳ ಗರ್ಭಿಣಿ

ಹೊಸ ಅಧ್ಯಾಯ.. ಹೊಸ ಲಯ. ನಾನು ಇದನ್ನ ಹೇಳ್ತೀನಿ ಅಂತ ಎಂದಿಗೂ ಊಹಿಸಿರಲಿಲ್ಲ. ಆದ್ರೆ ನಾನಿಲ್ಲಿ ಅವಳಿ ಮಕ್ಕಳಿಗೆ 6 ತಿಂಗಳ ಗರ್ಭಿಣಿ ಆಗಿದ್ದೇನೆ. ಟ್ವೆಂಟೀಸ್ ಅಥ್ವಾ ಥರ್ಟೀಸ್‌‌ನಲ್ಲಿ ನನ್ನ ಮನಸ್ಸಲ್ಲಿ ತಾಯ್ತನದ ಆಸೆ ಇರಲಿಲ್ಲ. ಆದ್ರೆ 40 ವರ್ಷ ತುಂಬಿದಾಗ ನನಗೆ ಆ ಆಸೆಯನ್ನ ನಿರಾಕರಿಸಲಾಗಲಿಲ್ಲ. ಒಂಟಿ ಹೆಣ್ಣಾಗಿ, ಆ ದಾರಿ ಅಷ್ಟು ಸುಲಭವಾಗಿರಲಿಲ್ಲ. ಅನೇಕ IVF ಚಿಕಿತ್ಸಾಲಯಗಳು ನನ್ನನ್ನು ಸಂಪೂರ್ಣವಾಗಿ ತಿರಸ್ಕರಿಸಿದವು. ಆದ್ರೆ ನಂತ್ರ ನಾನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರೋ ರೈನ್ಬೋ ಆಸ್ಪತ್ರೆಯಲ್ಲಿ ಡಾ. ಸುಷ್ಮಾರನ್ನು ಭೇಟಿಯಾದೆ. ನನ್ನ ನಿರ್ಧಾರವನ್ನು ಪ್ರಶ್ನಿಸದೆ ಸ್ವಾಗತಿಸಿದರು. ಆಕೆಯ ಸಹಾಯದಿಂದ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾದೆ.

ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಬಹಳ ಹೆಮ್ಮೆ ಹಾಗೂ ಪ್ರೀತಿಯಿಂದ ನನ್ನ ಜೊತೆ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು. ಆದ್ರೆ ನನ್ನ ಮನಸ್ಸಿಗೆ ಗೊತ್ತಿತ್ತು, ನಾ ಸಿದ್ದಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು. ಆದ್ರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ಅವರು ದಯೆ, ಆತ್ಮವಿಶ್ವಾಸ ಹಾಗೂ ಎಲ್ಲಿಂದ ಬಂದರು ಅನ್ನೋದ್ರ ಬಗ್ಗೆ ಹೆಮ್ಮೆ ಪಡುವಂತೆ ಬೆಳೆಯುತ್ತಾರೆ.

ನಾನು ದಂಗೆ ಏಳಲು ಈ ಮಾರ್ಗ ಆರಿಸಿಕೊಂಡಿಲ್ಲ. ನನ್ನ ಸತ್ಯವನ್ನು ಗೌರವಿಸಲು ಈ ಮಾರ್ಗ ಆರಿಸಿಕೊಂಡೆ. ನನ್ನ ಕಥೆ ಒಬ್ಬ ಹೆಣ್ಣಿಗಾದ್ರೂ ಸ್ಫೂರ್ತಿಯಾದ್ರೆ ಅಷ್ಟೇ ಸಾಕು. ಸದ್ಯದಲ್ಲೇ ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ. ಅದೇ ಎಲ್ಲವೂ ಆಗಲಿದೆ. ನನ್ನ ಜೊತೆ ಹೆಜ್ಜೆ ಹಾಕಿದ ವೈದ್ಯರಿಗೆ ಧನ್ಯವಾದ ಎಂದು ನಟಿ ಭಾವನಾ ರಾಮಣ್ಣ ತಿಳಿಸಿದ್ದಾರೆ.

ಇದು ನಿಜಕ್ಕೂ ಸಿಕ್ಕಾಪಟ್ಟೆ ಬೋಲ್ಡ್ ಡಿಸಿಷನ್. ಪರಭಾಷೆಗಳಲ್ಲಿ ಹಾಗೂ ವಿದೇಶಿಗರು ಇಂತಹ ನಿರ್ಧಾರಗಳನ್ನು ತೆಗೆದುಕೊಂಡ ನಿದರ್ಶನವಿದೆ. ಆದ್ರೆ ಕನ್ನಡ ಹಾಗೂ ಕರ್ನಾಟಕದ ಮಟ್ಟಿಗೆ ಇದು ನಿಜಕ್ಕೂ ಅಚ್ಚರಿಯೇ ಸರಿ. ಆದ್ರೆ ಎಲ್ಲರಿಗೂ ಅವರದ್ದೇ ಆದ ಆಯ್ಕೆಗಳಿರುತ್ತೆ. ಅವುಗಳನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು. ಭಾವನಾ ಅವರ ಈ ನಡೆ, ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ತಾಯ್ತನವನ್ನು ಅನುಭವಿಸೋಕೆ ಕಾತರಳಾಗಿರೋ ಆಕೆಗೆ ಶುಭ ಕೋರೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 20T225938.289

ಕಾಫಿನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆ ಅಬ್ಬರ: ಧರೆಗುರುಳಿದ ಮರಗಳು, ಟ್ರಾಫಿಕ್ ಜಾಮ್

by ಶಾಲಿನಿ ಕೆ. ಡಿ
April 20, 2026 - 11:01 pm
0

Untitled design 2026 04 20T222701.767

ಪ್ರಧಾನಿ ಮೋದಿ ಭೇಟಿಯಿಂದ ರಾತ್ರೋರಾತ್ರಿ ವೈರಲ್‌ ಆದ ಚುರುಮುರಿ ವ್ಯಾಪಾರಿ

by ಶಾಲಿನಿ ಕೆ. ಡಿ
April 20, 2026 - 10:39 pm
0

Untitled design 2026 04 20T220843.103

ಇರಾನ್-ಅಮೆರಿಕ ಸಂಘರ್ಷ: ಮಾತುಕತೆಗೆ ಇರಾನ್ ತಿರಸ್ಕಾರ; ಪಾಕಿಸ್ತಾನಕ್ಕೆ ಜೆಡಿ ವ್ಯಾನ್ಸ್

by ಶಾಲಿನಿ ಕೆ. ಡಿ
April 20, 2026 - 10:19 pm
0

Untitled design 2026 04 20T212134.329

ಬೆಂಗಳೂರಲ್ಲಿ 36 ಡಿಗ್ರಿ ಉರಿ ಬಿಸಿಲು: ಇನ್ನು 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

by ಶಾಲಿನಿ ಕೆ. ಡಿ
April 20, 2026 - 9:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 20T225938.289
    ಕಾಫಿನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆ ಅಬ್ಬರ: ಧರೆಗುರುಳಿದ ಮರಗಳು, ಟ್ರಾಫಿಕ್ ಜಾಮ್
    April 20, 2026 | 0
  • Untitled design 2026 04 20T222701.767
    ಪ್ರಧಾನಿ ಮೋದಿ ಭೇಟಿಯಿಂದ ರಾತ್ರೋರಾತ್ರಿ ವೈರಲ್‌ ಆದ ಚುರುಮುರಿ ವ್ಯಾಪಾರಿ
    April 20, 2026 | 0
  • Untitled design 2026 04 20T220843.103
    ಇರಾನ್-ಅಮೆರಿಕ ಸಂಘರ್ಷ: ಮಾತುಕತೆಗೆ ಇರಾನ್ ತಿರಸ್ಕಾರ; ಪಾಕಿಸ್ತಾನಕ್ಕೆ ಜೆಡಿ ವ್ಯಾನ್ಸ್
    April 20, 2026 | 0
  • Untitled design 2026 04 20T212134.329
    ಬೆಂಗಳೂರಲ್ಲಿ 36 ಡಿಗ್ರಿ ಉರಿ ಬಿಸಿಲು: ಇನ್ನು 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
    April 20, 2026 | 0
  • Untitled design 2026 04 20T205224.129
    ಮೇ 15 ರಂದು ಕಿರಣ್ ರಾಜ್-ಕ್ರಿಶ್ ಅಭಿನಯದ “ಶೇರ್” ಚಿತ್ರ ತೆರೆಗೆ
    April 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version