ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ ಭಜರಂಗಿ ಭಾಯಿಜಾನ್ ತೆರೆಕಂಡು ಇಂದಿಗೆ ಬರೋಬ್ಬರಿ 10 ವರ್ಷಗಳು. ನಮ್ಮ ಕನ್ನಡಿಗ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮಾಸ್ಟರ್‌ಪೀಸ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 970 ಕೋಟಿ ಗಳಿಸಿತ್ತು. ಅಂದು ಏಳು ವರ್ಷದ ಮಗುವಾಗಿದ್ದ ಮುನ್ನಿ ಈಗ ಹೇಳಿದ್ದಾಳೆ ಅನ್ನೋದ್ರ ಜೊತೆಗೆ ಒಂದಷ್ಟು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
- ಭಜರಂಗಿ ಭಾಯಿಜಾನ್‌ಗೆ ದಶಕ.. ಈಗ ಹೇಗಿದ್ದಾಳೆ ಮುನ್ನಿ?
- ಆಗ 7 ವರ್ಷದ ಮಗು.. ಈಗ 17 ವರ್ಷದ ಬ್ಯೂಟಿ ಹರ್ಷಾಲಿ
- ಕನ್ನಡಿಗ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮಾಸ್ಟರ್‌ಪೀಸ್
- ಭಾವನಾತ್ಮಕ ಬೆಸುಗೆಯ ಚಿತ್ರದಲ್ಲಿ ಸಲ್ಲು ಏಕಾಂಗಿ ಹೋರಾಟ
ಭಜರಂಗಿ ಭಾಯಿಜಾನ್.. ಹತ್ತು ವರ್ಷಗಳ ಹಿಂದೆ ಇದೇ ದಿನ ಅಂದ್ರೆ ಜುಲೈ 17ರಂದು ತೆರೆಕಂಡು, ಪ್ರೇಕ್ಷಕರನ್ನ ಭಾವುಕಗೊಳಿಸಿದ ಸಿನಿಮಾ. ಯೆಸ್.. 2015ರಂದು ತೆರೆಕಂಡ ಭಜರಂಗಿ ಭಾಯಿಜಾನ್‌ಗೆ ದಶಕದ ಸಂಭ್ರಮ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಹರ್ಷಾಲಿ ಮಲ್ಹೋತ್ರಾ, ಕರೀನಾ ಕಪೂರ್ ಹಾಗೂ ನವಾಜುದ್ದೀನ್ ಸಿದ್ದಿಕಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ನಮ್ಮ ಕನ್ನಡಿಗ ಧೀರ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಿತ್ತು ಈ ಸಿನಿಮಾ.
75 ಕೋಟಿ ಬಜೆಟ್‌ನಲ್ಲಿ ರಾಕ್‌ಲೈನ್, ಸಲ್ಮಾನ್ ಖಾನ್ ಹಾಗೂ ಕಬೀರ್ ಖಾನ್ ಮೂವರೂ ಜಂಟಿಯಾಗಿ ನಿರ್ಮಿಸಿದ ಭಜರಂಗಿ ಭಾಯಿಜಾನ್, ಬಾಕ್ಸ್ ಆಫೀಸ್‌ನಲ್ಲಿ 970 ಕೋಟಿ ಲೂಟಿ ಮಾಡಿತ್ತು. ಅದಕ್ಕೆ ಕಾರಣ ಚಿತ್ರದ ಕಥೆ. ಯೆಸ್.. ಒಂದೊಳ್ಳೆ ಭಾವನಾತ್ಮಕ ಬೆಸುಗೆಯ ಎವರ್‌ಗ್ರೀನ್ ಮಾಸ್ಟರ್‌ಪೀಸ್ ಸಿನಿಮಾ ಇದು. ಯಾಕಂದ್ರೆ ಇಂಡಿಯಾದಲ್ಲಿ ತಪ್ಪಿ ಹೋದಂತಹ ಪಾಕ್ ಮೂಲದ ಮಾತು ಬಾರದ ಮುನ್ನಿ ಅನ್ನೋ ಬಾಲಕಿಯನ್ನ ಪವನ್ ಅನ್ನೋ ವ್ಯಕ್ತಿ, ಅಕ್ರಮವಾಗಿ ಪಾಕ್ ಗಡಿ ದಾಟಿ, ಆಕೆಯನ್ನ ತಾಯಿ ಬಳಿ ಸೇರಿದುವಂತಹ ಕಥೆ ಇದಾಗಿತ್ತು.
ಸಲ್ಮಾನ್ ಖಾನ್ ಹಾಗೂ ಮುನ್ನಿ ಪಾತ್ರಗಳೇ ಇಡೀ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಈ ಸಿನಿಮಾ ಒಂಥರಾ ಅಡ್ವೆಂಚರಸ್ ಜರ್ನಿ ಆಗಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ಎಂಥವ್ರು ಕೂಡ ಕಣ್ಣೀರು ಹಾಕದೆ ಹೊರಬಂದ ನಿದರ್ಶನವೇ ಇರಲಿಲ್ಲ. ಅಷ್ಟೊಂದು ಬೌಂಡ್ ಸ್ಕ್ರಿಪ್ಟ್‌ನೊಂದಿಗೆ ಈ ಕಥೆ, ಪಾತ್ರಗಳು, ಅವುಗಳಲ್ಲಿದ್ದ ಎಮೋಷನಲ್ ಎಲಿಮೆಂಟ್ಸ್ ನೋಡುಗರನ್ನ ಮೋಡಿ ಮಾಡಿತ್ತು. ಅಂದಹಾಗೆ ಆಗ 7 ವರ್ಷದ ಮಗುವಾಗಿದ್ದ ಮುನ್ನಿ ಪಾತ್ರಧಾರಿ ಹರ್ಷಾಲಿ ಮಲ್ಹೋತ್ರಾ ಈಗ ದಂತದ ಬೊಂಬೆಯಂತೆ, ಸೌಂದರ್ಯ ದೇವತೆಯಾಗಿ ಮಿಂಚುತ್ತಿದ್ದಾರೆ. ಯೆಸ್.. ಹರ್ಷಾಲಿಗೆ ಈಗ 17 ವರ್ಷಗಳು.
ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ-2 ಸಿನಿಮಾದ ಮೂಲಕ ನಾಯಕನಟಿಯಾಗಿ ಬೆಳ್ಳಿಪರದೆಗೆ ರೀ-ಎಂಟ್ರಿ ಕೊಡ್ತಿದ್ದಾರೆ ಹರ್ಷಾಲಿ. ಅಬ್ಬಬ್ಬಾ.. ಆಕೆಯ ಚೆಲುವು ನೋಡಿದ್ರೆ ನೀವು ನಾಚಿ ನೀರಾಗ್ತೀರಾ. ಮುಂಬೈ ಮೂಲದ ಹರ್ಷಾಲಿ ಮಾಡೆಲಿಂಗ್ ಜಗತ್ತಿನಲ್ಲಿ ಇಷ್ಟು ದಿನ ಬ್ಯುಸಿಯಾಗಿದ್ರು. ಪಂಜಾಬಿ ಹಿಂದೂ ಕುಟುಂಬದ ಈಕೆ ಖಾತ್ರಿ ಅನ್ನೋ ಟ್ರೈಬ್ ಹುಡುಗಿ. ಹಾಗಾಗಿಯೇ ಈಕೆಯ ಮುಖದಲ್ಲಿ ಯಾರಲ್ಲೂ ಇಲ್ಲದ ತೇಜಸ್ಸು ಇದೆ. ಭವಿಷ್ಯದ ಮೋಸ್ಟ್ ಡಿಮ್ಯಾಂಡಿಂಗ್ ಹೀರೋಯಿನ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ ಅನ್ನುವಂತಿದ್ದಾರೆ ಹರ್ಷಾಲಿ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಭಜರಂಗಿ ಭಾಯಿಜಾನ್-2ಗೆ ಕತೆ ಬರೆಯುತ್ತಿದ್ದು, ಅದರಲ್ಲಿ ಕೂಡ ಹರ್ಷಾಲಿ ನಟಿಸಲಿ ಅನ್ನೋದು ಎಷ್ಟೋ ಮಂದಿಯ ಆಶಯವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್.





