ಬಾಹುಬಲಿ.. ಸೌತ್ ಸಿನಿದುನಿಯಾದ ದಿಕ್ಕನ್ನೇ ಬದಲಿಸಿದ ಮಾಸ್ಟರ್‌ಪೀಸ್ ಸಿನಿಮಾಗಳು. ರಾಜಮೌಳಿ ಫಿಲ್ಮ್ ಮೇಕಿಂಗ್ ಗತ್ತು, ಗಮ್ಮತ್ತನ್ನು ವಿಶ್ವ ಸಿನಿದುನಿಯಾಗೆ ಪರಿಚಯಿಸಿದ ಸಿನಿಮಾ. ಎರಡೂ ಸಿನಿಮಾಗಳಿಂದ ಎರಡು ಸಾವಿರ ಕೋಟಿ ಗಳಿಸಿದ್ದ ಮೌಳಿ, ಇದೀಗ ಮತ್ತೊಂದು ಬಾಹುಬಲಿ ಅನೌನ್ಸ್ ಮಾಡಿದ್ದಾರೆ. ಅದ್ರ ಬಿಗ್ ಅಪ್ಡೇಟ್ ಇಲ್ಲಿದೆ.
- ಚಿತ್ರಪ್ರೇಮಿಗಳಿಗೆ ಗುಡ್ ನ್ಯೂಸ್.. ಮೌಳಿ ಹೊಸ ‘ಬಾಹುಬಲಿ’
- 10 ವರ್ಷದ ನಂತ್ರ ಹೊರಬಿತ್ತು ನಯಾ ಬಾಹುಬಲಿ ಅಪ್ಡೇಟ್
- ಮಹೇಶ್ ಬಾಬು ಜೊತೆ SSMB29 ಬಿಟ್ಟು ಇದಕ್ಕೆ ಕೈ ಹಾಕಿದ್ರಾ?
- ಅಕ್ಟೋಬರ್ 31ಕ್ಕೆ ರಿಲೀಸ್.. ನೋಡುಗರಿಗೆ ಮಸ್ತ್ ಮನರಂಜನೆ
ಎಸ್. ಎಸ್. ರಾಜಮೌಳಿ, ಭಾರತೀಯ ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ಡೈರೆಕ್ಟರ್. ಪ್ಯಾನ್ ಇಂಡಿಯಾ ಸಿನಿಮಾಗಳ ಮಾಸ್ಟರ್. ನಮ್ಮ ಇಂಡಿಯನ್ ಚಿತ್ರರಂಗದ ಸ್ಪೀಲ್ ಬರ್ಗ್ ಅಂದ್ರೆ ತಪ ್ಪಾಗಲ್ಲ. ಕಾರಣ ಅವ್ರ ಸಕ್ಸಸ್ ರೇಟ್ 100%. ಮಾಡಿದ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್. ಪರಭಾಷಿಗರು ಹಾಗೂ ವಿದೇಶಿಗರು ಕೂಡ ನಿಬ್ಬೆರಗಾಗುವಂತೆ ಸಿನಿಮಾಗಳನ್ನ ಕಟ್ಟುವ ರಾಜಮೌಳಿ, ಬಾಹುಬಲಿ ಸಿನಿಮಾದಿಂದ ಮತ್ತಷ್ಟು ಉತ್ತುಂಗಕ್ಕೇರಿದ್ರು.
2015ರ ಜುಲೈ 10ಕ್ಕೆ ಬಾಹುಬಲಿ ಮೊದಲ ಭಾಗ, 2017 ಏಪ್ರಿಲ್ 28ಕ್ಕೆ ಎರಡನೇ ಭಾಗದ ಬಾಹುಬಲಿ ಸಿನಿಮಾ ತೆರೆಗೆ ಬಂದಿತ್ತು. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ತಮನ್ನಾ ಸೇರಿದಂತೆ ಬಹುದೊಡ್ಡ ತಾರಾಗಣದ ಬಾಹುಬಲಿ ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ರು. ಅದ್ರ ಮೇಕಿಂಗ್ ನೋಡಿ ಹಾಲಿವುಡ್ ಮಂದಿಯೇ ಹುಬ್ಬೇರಿಸಿದ್ರು. ಮೊದಲ ಭಾಗ 650 ಕೋಟಿ ಗಳಿಸಿದ್ರೆ, ಎರಡನೇ ಭಾಗ 1811 ಕೋಟಿ ಬೃಹತ್ ಮೊತ್ತ ಕಲೆ ಹಾಕಿತ್ತು.
ಬಾಹುಬಲಿ-3 ಯಾವಾಗ ಮಾಡ್ತಾರೆ ಮೌಳಿ ಅಂತ ಜನ ಕಾಯ್ತಿದ್ದಾಗ ತ್ರಿಬಲ್ ಆರ್ ಸಿನಿಮಾ ಅನೌನ್ಸ್ ಮಾಡಿದ್ರು. ತ್ರಿಬಲ್ ಆರ್‌ಗೆ ಆಸ್ಕರ್ ಕೂಡ ತಂದುಕೊಟ್ಟರು. ಇದೀಗ ಮಹೇಶ್ ಬಾಬು ಜೊತೆ SSMB29 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ಮೌಳಿ. ಅದರ ಮಧ್ಯೆ ಮತ್ತೊಂದು ಬಾಹುಬಲಿ ಸಿನಿಮಾದ ಅಪ್ಡೇಟ್ ಕೊಟ್ಟಿದ್ದಾರೆ. ಹೌದು, ಬಾಹುಬಲಿ ಮೊದಲ ಭಾಗ ತೆರೆಕಂಡು ಒಂದು ದಶಕ ಕಂಪ್ಲೀಟ್ ಆದ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 31ಕ್ಕೆ ಹೊಸ ಬಾಹುಬಲಿ ಸಿನಿಮಾನ ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ಅದನ್ನ ಸ್ವತಃ ಅವರೇ ಅನೌನ್ಸ್ ಮಾಡಿದ್ದಾರೆ.
ಅರೇ.. ಬಾಹುಬಲಿ-3 ಯಾವಾಗ ಶುರು ಮಾಡಿದ್ರು..? ಇಷ್ಟು ಬೇಗ ರಿಲೀಸ್ ಮಾಡ್ತಿದ್ದಾರಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಅಕ್ಟೋಬರ್ 31ಕ್ಕೆ ಬರ್ತಿರೋದು ಎರಡೂ ಬಾಹುಬಲಿ ಚಿತ್ರಗಳ ಒಟ್ಟಾರೆ ಹೂರಣ. ಹೌದು, ಎರಡು ಭಾಗಗಳನ್ನ ಬ್ಲೆಂಡ್ ಮಾಡಿ ಒಂದು ಸಿನಿಮಾಗೆ ಇಳಿಸಿರೋ ಮೌಳಿ, ಪ್ರೇಕ್ಷಕರ ಅಭಿರುಚಿಗೆ ತಕ್ಕನಾಗಿ ಐದೂವರೆ ಗಂಟೆಗಳ ಕಾಲದ ಎರಡು ಚಿತ್ರಗಳನ್ನ ಒಂದೇ ಚಿತ್ರಕ್ಕೆ 3 ಗಂಟೆಗೆ ಇಳಿಸ್ತಿದ್ದಾರೆ. ಹೊಸ ರೂಪದಲ್ಲಿ ಮನರಂಜನೆಯ ರಸಪಾಕ ಉಣಬಡಿಸಲಿದ್ದಾರಂತೆ.