• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಾರೆಯರ ತಾಕತ್ತು..AVRಗೆ ಭರ್ಜರಿ ಬೆಂಬಲ..!

ಗ್ಲೋಬಲ್ OTT ವಿರುದ್ಧ ಕನ್ನಡದ ಮಹಾ ಒಗ್ಗಟ್ಟು..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 22, 2026 - 11:11 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 06 22T230950.130

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಇತ್ತೀಚಿನ ದಿನಗಳಲ್ಲಿ ಒಟ್ಟಿಗೆ ಘಟಾನುಘಟಿಗಳು ಒಂದೇ ವೇದಿಕೆಯಲ್ಲಿ ಸೇರಿದ ಉದಾಹರಣೆ ಇಲ್ಲ. ‘AVR ಸಿನಿಮ್ಯಾಕ್ಸ್’ ಲೋಗೋ ಲಾಂಚ್ ನಲ್ಲಿ ಇಡೀ ಚಿತ್ರರಂಗವೇ ಒಂದೆಡೆ ಜಮಾಯಿಸಿತ್ತು. ಈ ಕಾರ್ಯಕ್ರಮದಲ್ಲಿ ತಾರೆಯರ ಬೆಂಬಲ ಹೇಗಿತ್ತು..? ವೇದಿಕೆಯಲ್ಲಿ ಜಯಮಾಲಾ, ದೊಡ್ಡಣ್ಣ ಮತ್ತು ನಾಗಾಭರಣ ಅವರು ಆಡಿದ ಆ ಖಾರವಾದ ಮಾತುಗಳೇನು..? ಸ್ಟಾರ್‌ಗಳ ಸಮ್ಮಿಲನದ ಕಂಪ್ಲೀಟ್ ಝಲಕ್ ಇಲ್ಲಿದೆ ನೋಡಿ.

  • ತಾರೆಯರ ತಾಕತ್ತು…AVRಗೆ ಭರ್ಜರಿ ಬೆಂಬಲ..!
  • ಗ್ಲೋಬಲ್ OTT ವಿರುದ್ಧ ಕನ್ನಡದ ಮಹಾ ಒಗ್ಗಟ್ಟು..!
  • 10 ವರ್ಷಗಳ ಹಿಂದೆಯೇ ಆಗಬೇಕಿತ್ತು ನಾಗಾಭರಣ ಅಭಿಪ್ರಾಯ
  • ಕನ್ನಡ ಕಂಟೆಂಟ್‌ಗೆ ಕನ್ನಡದ ವೇದಿಕೆ ಬೇಕೆಂದ ಹಿರಿಯರ ಕರೆ
  • ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರ ಪರ ನಿಂತ AVR..!

ನಿರೂಪಕ ಅಕುಲ್ ಬಾಲಾಜಿ ತಮ್ಮದೇ ಹೈ-ವೋಲ್ಟೇಜ್ ಸ್ಟೈಲ್‌ನಲ್ಲಿ ನಡೆಸಿಕೊಟ್ಟ AVR ಸಿನಿಮ್ಯಾಕ್ಸ್‌ನ ಲೋಗೋ ಲಾಂಚ್ ಇವೆಂಟ್ ಭರ್ಜರಿಯಾಗಿ ಸಾಗಿತು. ಹಿರಿಯ ನಟರಾದ ದೊಡ್ಡಣ್ಣ, ಸುಂದರ್ ರಾಜ್,ಮುಖ್ಯಮಂತ್ರಿ ಚಂದ್ರು, ಸುಧಾರಾಣಿ, ತಾರಾ ಅನುರಾಧ, ಗಿರಿಜಾ ಲೋಕೇಶ್, ನಟಿ ಹರ್ಷಿಕಾ ಪೂನಚ್ಚ,ಶ್ರೀನಗರ ಕಿಟ್ಟಿ, ರವಿ ವರ್ಮಾ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಎಪಿ ಅರ್ಜುನ್, ಶಶಾಂಕ್, ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಗುರುಕಿರಣ್ ಸೇರಿದಂತೆ ಉದ್ಯಮದ ಇಡೀ ದಂಡೇ ವೇದಿಕೆಯಲ್ಲಿ ಒಂದಾಗಿ ನಿಂತಿದ್ದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು.

RelatedPosts

ತಪಸ್ವಿನಿ ಪೂಣಚ್ಚ ನಾಯಕಿಯಾಗಿ ನಟಿಸಿರುವ “MR ಜಾಕ್” ಚಿತ್ರ ಡಿ. 4 ರಂದು ತೆರೆಗೆ

“ರಾಮಾಯಣ” ಇವೆಂಟ್‌ನಲ್ಲಿ ಟಾಕ್ಸಿಕ್ ಸೋಲಿನ ಬಗ್ಗೆ ರಾಕಿಂಗ್ ಸ್ಟಾರ್ ಫಸ್ಟ್ ರಿಯಾಕ್ಷನ್

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?

ADVERTISEMENT
ADVERTISEMENT

ವೇದಿಕೆಯಲ್ಲಿ ಮೈಕ್ ಹಿಡಿದ ಚಲನಚಿತ್ರ ವಾಣಿಜ್ಯ ಮಂಡಳಿ  ಅಧ್ಯಕ್ಷೆ, ಹಿರಿಯ ನಟಿ ಜಯಮಾಲಾ ಓಟಿಟಿಯ ಕರಾಳ ಸತ್ಯವನ್ನು ನೇರವಾಗಿಯೇ ಒಪ್ಪಿಕೊಂಡರು. “OTT ಅಂದರೆ ಒಂದು ಕಡೆ ಭಯ ಆಗುತ್ತದೆ. ಇದರ ಉಪಯೋಗ ನಮಗೆ ಬೇಕಿದ್ದರೂ, ದೊಡ್ಡ ಕಂಪನಿಗಳ ಜಾಲದಲ್ಲಿ ಸಿಲುಕಿ ನಾವು ಬಾಂಡ್ಲಿಯಿಂದ ನೇರವಾಗಿ ಉರಿಯುವ ಬೆಂಕಿಗೆ ಬೀಳಬಾರದು” ಎಂದು AVR ಸಂಸ್ಥೆಗೆ ಅತ್ಯಂತ ಖಡಕ್ ಆಗಿ ಎಚ್ಚರಿಸಿದರು.

ಇನ್ನು ನಿರ್ದೇಶಕ ಟಿ.ಎಸ್. ನಾಗಾಭರಣ ಅತ್ಯಂತ ಕಟುವಾಗಿ ಮಾತನಾಡುತ್ತಾ, “ಇದು ಹತ್ತು ವರ್ಷಗಳ ಹಿಂದೆಯೇ ನಮ್ಮ ಚಿತ್ರರಂಗದಲ್ಲಿ ಆಗಬೇಕಿದ್ದ ಕೆಲಸ. ಮಾರ್ಕೆಟಿಂಗ್‌ನಲ್ಲಿ ನಾವು ತುಂಬಾ ಹಿಂದೆ ಬಿದ್ದಿದ್ದೇವೆ, ಹಾಗಾಗಿ ಈಗ ಬಂದಿರುವ ನೀವು ಡಿಜಿಟಲ್ ಮಾರ್ಕೆಟ್‌ನಲ್ಲಿ ದೊಡ್ಡ ಪ್ರಳಯವನ್ನೇ ಸೃಷ್ಟಿಸಬೇಕು” ಎಂದು ಅರಂವಿಂದ್ ರೆಡ್ಡಿ ತಂಡಕ್ಕೆ ಚಾಲೆಂಜ್ ಹಾಕಿದರು. ಜೊತೆಗೆ, “ಯಾವಾಗ ಕಥೆ ಬರೆಯುವವರಿಗೆ, ನಿರ್ದೇಶಕರಿಗೆ ಹಾಗೂ ತಂತ್ರಜ್ಞರಿಗೆ ಸರಿಯಾದ ಗೌರವ ಮತ್ತು ದುಡ್ಡು ಸಿಗುತ್ತದೆಯೋ, ಆಗ ಮಾತ್ರ ಭಾಷೆ ಉದ್ಧಾರ ಆಗುತ್ತದೆ. ಮೊದಲು ನಟರ ಬೆನ್ನ ಹಿಂದೆ ಇರೋ ಶಕ್ತಿಯನ್ನು ಗುರುತಿಸಿ” ಎಂದು ಈ ವೇದಿಕೆ ಹೊಸಬರಿಗೆ ನ್ಯಾಯ ಒದಗಿಸಲಿ ಎಂದು ಸಾಥ್ ನೀಡಿದರು.

ಹಿರಿಯ ನಟ ದೊಡ್ಡಣ್ಣ ಅತ್ಯಂತ ಭಾವುಕರಾಗಿ, “ಚಿತ್ರರಂಗದಲ್ಲಿ ಅನ್ನ ಹಾಕುವ ನಿರ್ಮಾಪಕನೇ ತಂದೆಗೆ ಸಮಾನ. ಆ ನಿರ್ಮಾಪಕ ಸೋತರೆ ಇಡೀ ಕಲಾವಿದರ ಸಂಕುಲವೇ ಬೀದಿಗೆ ಬರುತ್ತದೆ. ಅರವಿಂದ್ ರೆಡ್ಡಿ ಅವರು ಮುಳುಗುತ್ತಿರುವ ಕನ್ನಡ ಸಿನಿಮಾ ನಿರ್ಮಾಪಕರ ಕೈ ಹಿಡಿದು ಎತ್ತೋ ಸಾಹಸಕ್ಕೆ ಕೈ ಹಾಕಿದ್ದಾರೆ” ಎಂದು ಬೆನ್ನು ತಟ್ಟಿದರು. ಇವರ ಜೊತೆಗೆ ನಿಂತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮತ್ತು ಸುಂದರ್ ರಾಜ್ ಅವರು, ಕನ್ನಡದ ಅಸ್ಮಿತೆಯನ್ನು ಕಾಪಾಡುವ ಇಂತಹ ದೇಸಿ ಓಟಿಟಿಗಳು ಉದ್ಯಮದ ಆರ್ಥಿಕ ಬೆನ್ನೆಲುಬಾಗಬೇಕು ಎಂದು ಹಾರೈಸಿ ತಮ್ಮ ಪೂರ್ಣ ಬೆಂಬಲ ಘೋಷಿಸಿದರು.

ನಟಿ ಸುಧಾರಾಣಿ, ತಾರಾ ಅನುರಾಧ ಮತ್ತು ಗಿರಿಜಾ ಲೋಕೇಶ್ ಅವರು ಮಾತನಾಡಿ, ಮಹಿಳಾ ಪ್ರಧಾನ ಚಿತ್ರಗಳಿಗೆ ಹಾಗೂ ಸಣ್ಣ ಬಜೆಟ್‌ನ ಕಲಾತ್ಮಕ ಚಿತ್ರಗಳಿಗೆ ಗ್ಲೋಬಲ್ ಓಟಿಟಿಗಳು ವೇದಿಕೆ ಕೊಡುತ್ತಿಲ್ಲ, AVR ಸಿನಿಮ್ಯಾಕ್ಸ್ ಆ ಕೊರತೆಯನ್ನು ನೀಗಿಸಲಿ ಎಂದು ಆಶಿಸಿದರು. ನಟಿ ಹರ್ಷಿಕಾ ಪೂನಚ್ಚ ಅವರು ಈ ಪ್ಲಾಟ್‌ಫಾರ್ಮ್ ಇಂದಿನ ಜನರೇಶನ್‌ಗೆ ಪಕ್ಕಾ ಕನೆಕ್ಟ್ ಆಗುವಂತಿದೆ ಎಂದು ಯೂತ್ ಪರವಾಗಿ ಸಾಥ್ ಕೊಟ್ಟರೆ, ಸಂಗೀತ ನಿರ್ದೇಶಕ ಗುರುಕಿರಣ್ ಅವರು ಇಲ್ಲಿ ಕನ್ನಡ ಮ್ಯೂಸಿಕ್ ಮತ್ತು ರೇಡಿಯೋಗೂ ಅವಕಾಶ ಇರುವುದು ಅದ್ಭುತ ಕಲ್ಪನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಎಪಿ ಅರ್ಜುನ್, ಶಶಾಂಕ್, ಆ್ಯಕ್ಷನ್ ಡೈರೆಕ್ಟರ್ ಥ್ರಿಲ್ಲರ್ ಮಂಜು ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಅವರು, ಚಿತ್ರರಂಗದ ತಂತ್ರಜ್ಞರ ಸಂಕಷ್ಟಗಳಿಗೆ ಈ ವೇದಿಕೆ ಮುಕ್ತಿ ನೀಡಲಿ ಎಂದು ಹಾರೈಸಿದರು.

ಕೊನೆಯಲ್ಲಿ ಎಲ್ಲರ ಪ್ರೀತಿಯ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ AVR ಗ್ರೂಪ್ ಸಿಇಒ ಅಭಿಷೇಕ್ ಹಾಗು AVR ಸಿನಿಮ್ಯಾಕ್ಸ್ CEO ಅವಿನಾಶ್ ದೊಡ್ಡ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸಬರ ಚಿತ್ರಗಳಿಗೂ ಅದ್ದೂರಿ ಮಾರುಕಟ್ಟೆ ಒದಗಿಸುವುದೇ ನಮ್ಮ ಪ್ರಮುಖ ಧೇಯ ಎಂದು ಸಾರಿದರು.

ಸ್ಯಾಂಡಲ್‌ವುಡ್‌ನ ಈ ಒಗ್ಗಟ್ಟಿನ ಬೆಂಬಲದೊಂದಿಗೆ ಅಖಾಡಕ್ಕಿಳಿದಿರುವ ‘AVR ಸಿನಿಮ್ಯಾಕ್ಸ್’ ಮುಂದಿನ ದಿನಗಳಲ್ಲಿ ಜಾಗತಿಕ ದೈತ್ಯರನ್ನು ಹೇಗೆ ಎದುರಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text (94)

ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ ಆಟ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ!

by ದಿಶಾ ಕೆ. ಎಸ್.
October 16, 2026 - 6:57 pm
0

Your paragraph text (92)

ಭಾರತ-ವೆಸ್ಟ್ ಇಂಡೀಸ್ ಟಿ20 ಪಂದ್ಯ: ಅಭಿಮಾನಿಗಳಿಗೆ ಗುಡ್‌ನ್ಯೂಸ್, ನಮ್ಮ ಮೆಟ್ರೋ ಸೇವೆ ವಿಸ್ತರಣೆ

by ದಿಶಾ ಕೆ. ಎಸ್.
October 16, 2026 - 6:04 pm
0

Your paragraph text (90)

ತಪಸ್ವಿನಿ ಪೂಣಚ್ಚ ನಾಯಕಿಯಾಗಿ ನಟಿಸಿರುವ “MR ಜಾಕ್” ಚಿತ್ರ ಡಿ. 4 ರಂದು ತೆರೆಗೆ

by ದಿಶಾ ಕೆ. ಎಸ್.
October 16, 2026 - 5:15 pm
0

Your paragraph text (89)

ಬೆಂಗಳೂರು ಹೊರವಲಯದಲ್ಲಿ ಅಕ್ರಮ ಪಿಜಿಗಳ ಹಾವಳಿ: 35ಕ್ಕೂ ಹೆಚ್ಚು ಪಿಜಿಗಳಿಗೆ ಪಂಚಾಯಿತಿ ನೋಟಿಸ್!

by ದಿಶಾ ಕೆ. ಎಸ್.
October 16, 2026 - 4:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (90)
    ತಪಸ್ವಿನಿ ಪೂಣಚ್ಚ ನಾಯಕಿಯಾಗಿ ನಟಿಸಿರುವ “MR ಜಾಕ್” ಚಿತ್ರ ಡಿ. 4 ರಂದು ತೆರೆಗೆ
    October 16, 2026 | 0
  • Your paragraph text (83)
    “ರಾಮಾಯಣ” ಇವೆಂಟ್‌ನಲ್ಲಿ ಟಾಕ್ಸಿಕ್ ಸೋಲಿನ ಬಗ್ಗೆ ರಾಕಿಂಗ್ ಸ್ಟಾರ್ ಫಸ್ಟ್ ರಿಯಾಕ್ಷನ್
    October 16, 2026 | 0
  • Your paragraph text (80)
    ‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!
    October 16, 2026 | 0
  • 11 (6)
    ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?
    October 15, 2026 | 0
  • 11 (5)
    ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್
    October 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version