ಪದ್ಮ ಭೂಷಣ ಡಾ. ಅನಂತ್ನಾಗ್ ನಟನೆಯ 70ರ ದಶಕದ ಎವರ್ಗ್ರೀನ್ ಸಿನಿಮಾ ಬಯಲು ದಾರಿಯ ಸಾಂಗ್ ಬಾಲಿವುಡ್ ಬಾದ್ಷಾ ಶಾರೂಖ್ ಚಿತ್ರದಲ್ಲಿ ಮಾರ್ದನಿಸಿದೆ. ಇದು ಎಷ್ಟೋ ಮಂದಿಗೆ ಗೊತ್ತಿಲ್ಲ. ಅದ್ರ ವೆರಿ ವೆರಿ ಇಂಟರೆಸ್ಟಿಂಗ್ ಹಾಗೂ ಕಲರ್ಫುಲ್ ಕಹಾನಿ ನಿಮಗಾಗಿ ಕಾಯ್ತಿದೆ. ಜಸ್ಟ್ ಎಂಜಾಯ್.
ಕನಸಲೂ ನೀನೇ ಮನಸಲೂ ನೀನೇ1976ರಲ್ಲಿ ತೆರೆಕಂಡ ಬಯಲುದಾರಿ ಸಿನಿಮಾದ ಎವರ್ಗ್ರೀನ್ ಸಾಂಗ್. ದೊರೆ ಭಗವಾನ್ ನಿರ್ದೇಶನದ ಈ ಸಿನಿಮಾದಲ್ಲಿ ಅನಂತ್ನಾಗ್ ಹಾಗೂ ಕಲ್ಪನಾ ಲೀಡ್ನಲ್ಲಿ ನಟಿಸಿದ್ದರು. ಈ ಸಿನಿಮಾ ಮ್ಯೂಸಿಕ್ನಿಂದಲೇ ಕನ್ನಡ ಚಿತ್ರಪ್ರೇಮಿಗಳನ್ನ ದೊಡ್ಡ ಮಟ್ಟಕ್ಕೆ ಸೆಳೆದಿತ್ತು. ಅದ್ರಲ್ಲೂ ಕನಸಲೂ ನೀನೇ ಸಾಂಗ್ ಇಂದಿಗೂ ಎಲ್ಲಾ ಜನರೇಷನ್ ಮಂದಿ ಗುನುಗುವವಂತಿದೆ.
ರಾಜನ್ ನಾಗೇಂದ್ರ ಸಂಗೀತ ಸಂಯೋಜನೆಯ ಈ ಹಾಡು ಸೇರಿದಂತೆ ಬಯಲುದಾರಿ ಚಿತ್ರದ ಎಲ್ಲಾ ಸಾಂಗ್ಸ್ಗೆ ಚಿ. ಉದಯ್ ಶಂಕರ್ ಸಾಹಿತ್ಯ ಪೋಣಿಸಿದ್ದರು. ಇನ್ನು ಎಸ್. ಪಿ. ಬಾಲಸುಬ್ರಮಣ್ಯಂ ಈ ಹಾಡನ್ನು ಅಷ್ಟೇ ಸೊಗಸಾಗಿ ತಮ್ಮ ಕಂಠದಲ್ಲಿ ಹಾಡಿದ್ರು. ವಿಶೇಷ ಅಂದ್ರೆ ಈ ಹಾಡಿಗೆ ಇಸೈಜ್ಞಾನಿ ಇಳಯರಾಜರ ಕೊಡುಗೆ ಕೂಡ ಇದೆ. ಹೌದು.. ಈ ಹಾಡಿಗೆ ಇಳಯರಾಜ ಗಿಟಾರ್ ಪ್ಲೇಯರ್ ಆಗಿ ಕಾರ್ಯ ನಿರ್ವಹಿಸಿದ್ರು ಅನ್ನೋದು ವಿಶೇಷ.
70ರ ದಶಕದ ಈ ಹಾಡನ್ನ 90ರ ದಶಕದ ಬಾಲಿವುಡ್ ಸಿನಿಮಾದಲ್ಲಿ ಬಳಸಿದ್ದಾರೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಶಾರೂಖ್ ಖಾನ್ ಹಾಗೂ ದಿವ್ಯಾ ಭಾರತಿ ನಟನೆಯ ದೀವಾನ ಚಿತ್ರದಲ್ಲಿ ಇದೇ ಟ್ಯೂನ್ನ ಎಥಾವತ್ ಬಟ್ಟಿ ಇಳಿಸಲಾಗಿದೆ. 1992ರಲ್ಲಿ ತೆರೆಕಂಡ ದೀವಾನ ಚಿತ್ರದ ಐಸಿ ದೀವಾಂಗಿ ಹಾಡು ಕನಸಲೂ ನೀನೇ ಹಾಡಿನ ರಿಮೇಕ್ ಅನ್ನೋದು ಅಚ್ಚರಿಯ ಸಂಗತಿ.
ನದೀಶ್ ಶ್ರವಣ್ ಕಂಪೋಸ್ ಮಾಡಿದ್ದ ಐಸಿ ದೀವಾಂಗಿ ಹಾಡು ಬಾಲಿವುಡ್ನ ಗ್ರೇಟೆಸ್ಟ್ 100 ಸಾಂಗ್ಸ್ನಲ್ಲಿ ಇದು ಕೂಡ ಒಂದಾಗಿರೋದು ಇಂಪ್ರೆಸ್ಸೀವ್. ಶಾರೂಖ್ ನಮ್ಮ ಅನಂತ್ನಾಗ್ ಅವರ ಹಾಡನ್ನ ಬಳಸಿ ರೊಮ್ಯಾನ್ಸ್ ವಿತ್ ಮೆಲೋಡಿ ಟ್ರ್ಯಾಕ್ಗೆ ಕುಣಿದಿರೋದು ನಿಜಕ್ಕೂ ಕನ್ನಡಿಗರು ಖುಷಿ ಪಡಬೇಕಾದ ವಿಷಯವಾಗಿದೆ.
ಅಂದಹಾಗೆ 70ರ ದಶಕದಲ್ಲೇ ಪಂತುಲಮ್ಮ ತೆಲುಗು ಚಿತ್ರದಲ್ಲೂ ಈ ನಮ್ಮ ಕನ್ನಡದ ಆಲ್ ಟೈಂ ಸೂಪರ್ ಹಿಟ್ ಹಾಡನ್ನ ಬಳಸಲಾಗಿದೆ. ಇಷ್ಟೇ ಅಲ್ಲ, ಕನ್ನಡದ ಸಾಕಷ್ಟು ರೆಟ್ರೋ ಸಾಂಗ್ಸ್ ಬಾಲಿವುಡ್ ಸೇರಿದಂತೆ ಪರಭಾಷೆಗಳಲ್ಲಿ ಬಳಸಿಕೊಂಡಿದ್ದಾರೆ. ಗಮನವಿಟ್ಟು ಕೇಳಿದಾಗಲಷ್ಟೇ ಅವು ಗಮನಕ್ಕೆ ಬರಲಿವೆ. ಸದ್ಯ ಪದ್ಮಭೂಷಣರಾಗಿರೋ ಅನಂತ್ನಾಗ್ ಅವರನ್ನ ಸ್ಮರಿಸಿ ಮತ್ತೊಮ್ಮೆ ಈ ಹಾಡು ಎಲ್ಲೆಡೆ ವೈರಲ್ ಆಗ್ತಿದೆ. ಸಿರಿಗನ್ನಡಂ ಗೆಲ್ಗೆ. ಸಿಗಿಗನ್ನಡಂ ಬಾಳ್ಗೆ.