ರೆಕಾರ್ಡ್ ಕಾ ಬಾಪ್ ಆಗಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ ಪುಷ್ಪರಾಜ್ ಅಲ್ಲು ಅರ್ಜುನ್. ನ್ಯಾಷನಲ್ ಅವಾರ್ಡ್‌ನಿಂದ ಶುರುವಾದ ಪುಷ್ಪ ಜರ್ನಿ, ಇದೀಗ ಸ್ಟೇಟ್ ಗದ್ದರ್ ಅವಾರ್ಡ್‌ವರೆಗೂ ಬಂದು ನಿಂತಿದೆ. ಅಲ್ಲು-ಅಟ್ಲೀ ಮೆಗಾ ಪ್ರಾಜೆಕ್ಟ್ ಸಮೇತ ಹೊಸ ಇತಿಹಾಸ ಬರೆದ ಐಕಾನ್ ಸ್ಟಾರ್ ಐಕಾನಿಕ್ ಮೈಲ್‌ಸ್ಟೋನ್ ಬಗ್ಗೆ ಎಳೆ ಎಳಯಾಗಿ ಬಿಚ್ಚಿಡ್ತೀವಿ.
ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಭಾರತೀಯ ಚಿತ್ರರಂಗದ ಮೋಸ್ಟ್ ಸೆನ್ಸೇಷನಲ್ ಸೂಪರ್ ಸ್ಟಾರ್. ಕೆಜಿಎಫ್ ಮೂಲಕ ನಮ್ಮ ರಾಕಿಂಗ್ ಸ್ಟಾರ್ ಯಶ್ ಹೇಗೆ ರಾಕಿಭಾಯ್ ಆಗಿ ಕನ್ನಡದ ಕೀರ್ತಿ ಪತಾಕೆಯನ್ನ ವಿಶ್ವದೆಲ್ಲೆಡೆ ಹಾರಿಸಿದ್ರೋ, ಅದೇ ರೀತಿ ಆಂಧ್ರದ ಘನತೆ, ಗೌರವವನ್ನು ಪುಷ್ಪ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಗಂಗೋತ್ರಿಯಿಂದ ಶುರುವಾದ ಅಲ್ಲು ಅರ್ಜುನ್ ಸಿನಿಯಾನ, ಪುಷ್ಪ ಸಿನಿಮಾವರೆಗೂ ಬಂದು ನಿಂತಿದೆ. ಮಾಡಿದ 21 ಸಿನಿಮಾಗಳಲ್ಲಿ ಬಹುತೇಕ ಎಲ್ಲವೂ ಬ್ಲಾಕ್ ಬಸ್ಟರ್ ಹಿಟ್. ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಆಗಿದ್ದ ಅಲ್ಲು ಅರ್ಜುನ್, ಐಕಾನ್ ಸ್ಟಾರ್ ಆಗಿ ಬದಲಾದ್ರು. ಆ ಟೈಟಲ್‌ಗೆ ತಕ್ಕನಾಗಿ ಸೌತ್ ಸಿನಿಮಾನ ಪ್ಯಾನ್ ಇಂಡಿಯಾ ಲೆವೆಲ್‌ಗೆ ರೀಚ್ ಮಾಡಿದ್ರು. ಪುಷ್ಪ ಸಿನಿಮಾದ ಎರಡೂ ಭಾಗಗಳು ಒಂದಕ್ಕಿಂತ ಒಂದು ಎಂಟರ್‌ಟೈನಿಂಗ್ ಆಗಿವೆ.
ಮೊದಲ ಭಾಗ ಪುಷ್ಪ ದಿ ರೈಸ್ ಸಿನಿಮಾ 394 ಕೋಟಿ ಪೈಸಾ ವಸೂಲ್ ಮಾಡಿದ್ರೆ, ಎರಡನೇ ಭಾಗ ಪುಷ್ಪ ದಿ ರೂಲ್ ಅಕ್ಷರಶಃ ಬಾಕ್ಸ್ ಆಫೀಸ್ ರೂಲ್ ಮಾಡಿತು. 1800 ಕೋಟಿ ದಾಖಲೆ ಕಲೆಕ್ಷನ್‌ನಿಂದ ಇತಿಹಾಸ ಸೃಷ್ಟಿಸಿತು. ಚರಿತ್ರೆ ಸೃಷ್ಠಿಸಿರೋ ಅಂತಹ ಮೆಗಾಸ್ಟಾರ್ ಕುಟುಂಬದಿಂದ ಬಂದಿರೋ ಅಲ್ಲು ಅರ್ಜುನ್, ತಗ್ಗೋದೇ ಇಲ್ಲ ಅಂತ ತಾನು ಕೂಡ ಸಾಕಷ್ಟು ದಾಖಲೆಗಳನ್ನ ಬರೆದಿದ್ದಾರೆ.
ತೆಲುಗು ಚಿತ್ರರಂಗಕ್ಕೆ ರಾಜಮೌಳಿ ತನ್ನ ಬಾಹುಬಲಿ ಹಾಗೂ ತ್ರಿಬಲ್ ಆರ್ ಚಿತ್ರಗಳಿಂದ ಒಂದು ಆಯಾಮ ತಂದುಕೊಟ್ರೆ, ಇತ್ತ ಪುಷ್ಪ ಚಿತ್ರದಿಂದ ಸುಕುಮಾರ್ ಜೊತೆಗೂಡಿ ಅಲ್ಲು ಅರ್ಜುನ್ ಕೂಡ ಹೊಸ ಜೋಶ್ ತಂದರು. ಮೊದಲ ಭಾಗಕ್ಕೆ ಬೆಸ್ಟ್ ಆ್ಯಕ್ಟರ್ ಕ್ಯಾಟಗರಿಯಲ್ಲಿ ಅಲ್ಲು ಅರ್ಜುನ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ನ್ಯಾಷನಲ್ ಅವಾರ್ಡ್ ದೊರಕಿತ್ತು. ಇದೀಗ ಆಂಧ್ರ ಸರ್ಕಾರ ನೀಡುವ ಗದ್ದರ್ ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಅನೌನ್ಸ್ ಆಗಿದ್ದು, ಇಲ್ಲಿಯೂ ಸಹ ಪುಷ್ಪಸ್ಟಾರ್ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನ್ಯಾಷನಲ್ ಅಷ್ಟೇ ಅಲ್ಲ, ಲೋಕಲ್‌ನಿಂದಲೇ ಅಲ್ಲಿವರೆಗೂ ಹೋಗಿರೋ ನನಗೆ, ಸ್ಟೇಟ್ ಗವರ್ನಮೆಂಟ್ ಕೊಡೋ ಸ್ಟೇಟ್ ಅವಾರ್ಡ್ ಕೂಡ ನಂದೇ ಅಂದಿದ್ದಾರೆ ಅಲ್ಲು ಅರ್ಜುನ್. ಇದೊಂಥರಾ ನಿಜಕ್ಕೂ ಅಪರೂಪದಲ್ಲಿ ಅಪರೂಪ. ಪುಷ್ಪ ಫ್ರಾಂಚೈಸ್‌ನ ಎರಡೂ ಚಿತ್ರಗಳಿಗೆ ಸ್ಟೇಟ್ ಹಾಗೂ ನ್ಯಾಷನಲ್ ಅವಾರ್ಡ್ಸ್ ದೊರೆತಿರುವುದು ಗ್ರೇಟ್. ಅಂದಹಾಗೆ ಆಫ್ಟರ್ ಪುಷ್ಪ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಐಕಾನ್ ಸ್ಟಾರ್. ಅದೇ ಅಟ್ಲೀ ಜೊತೆಗಿನ ತಮ್ಮ 22ನೇ ಸಿನಿಮಾ AA22XA6.
ಈಗಾಗ್ಲೇ ಸಕ್ಸಸ್‌ಫುಲ್ ಡೈರೆಕ್ಟರ್ ಅಟ್ಲೀ ಜೊತೆ 800 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡೋಕೆ ಹಾಲಿವುಡ್ ಸ್ಟುಡಿಯೋಗಳ ವರೆಗೆ ಸಕಲ ತಯಾರಿಗಳು ನಡೆಯುತ್ತಿವೆ. ಸೈನ್ಸ್ ಫಿಕ್ಷನ್ ಎಂಟರ್‌ಟೈನರ್‌ನ ಹಾಲಿವುಡ್ ಸ್ಟಾಂಡರ್ಡ್ಸ್‌ನಲ್ಲಿ ಕಟ್ಟಿಕೊಡಲು ಅಲ್ಲು ಅರ್ಜುನ್ ಈ ಬಾರಿ ಪ್ಲ್ಯಾನ್ ಮಾಡಿರೋದು ಇಂಟರೆಸ್ಟಿಂಗ್. ಒಂದಷ್ಟು ಅಪಮಾನಗಳ ನಡುವೆ ಮುಗಿಲೆತ್ತರಕ್ಕೆ ಬೆಳೆಯುತ್ತಿರೋ ಅಲ್ಲು ಅರ್ಜುನ್ ನಿಜಕ್ಕೂ ಎಲ್ಲರ ಹುಬ್ಬೇರಿಸುತ್ತಿದ್ದಾರೆ.