ಈ ವರ್ಷ ಆದ್ರೂ ನಮ್ ಬಾಸ್‌ಗೆ ಬಿಡುಗಡೆ ಭಾಗ್ಯ ಸಿಗುತ್ತಾ ಅನ್ನೋ ಆಶಾಭಾವನೆಯಲ್ಲಿದ್ದಾರೆ ಡಿಬಾಸ್ ಫ್ಯಾನ್ಸ್. ಆದ್ರೆ ಕೆಲ ಮೂಲಗಳ ಪ್ರಕಾರ ದರ್ಶನ್ ಸದ್ಯದಲ್ಲೇ ಹೊರಕ್ಕೆ ಬರ್ತಾರಂತೆ. ಅದ್ಹೇಗೆ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ 2025 ಸಿಕ್ಕಾಪಟ್ಟೆ ಬ್ಯಾಡ್ ಇಯರ್ ಆಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರೋ ದಾಸ ಜೈಲೂಟ ಸವಿಯುವಂತಾಗಿತ್ತು. ಆದ್ರೀಗ 2026ರ ಈ ಹೊಸ ವರುಷ, ದಚ್ಚು ಬಾಳಿಗೆ ಹರುಷ ತರುವ ಮುನ್ಸೂಚನೆ ನೀಡಿದೆ.
ಡಿಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ಹೊರ ಬರ್ತಾರಾ ದಚ್ಚು..?
‘ಐ’ ವಿಟ್ನೆಸ್ ಕೊರತೆ.. ಕೇಸ್ ಆಗುತ್ತಾ ಖುಲಾಸೆ..?!
ಡೆವಿಲ್ ಸಿನಿಮಾ ಯಶಸ್ವಿ 25 ದಿನ ಪೂರೈಸಿದ್ದು, ಬಾಕ್ಸ್ ಆಫೀಸ್ ನಲ್ಲಿ 50 ಕೋಟಿಯ ಗಡಿ ಮುಟ್ಟಿದೆ. ಅಲ್ಲದೆ ಝೀರೋ ಪೈರಸಿಯಿಂದ ಇಂದಿಗೂ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಿದೆ. ಈ ಮಧ್ಯೆ ದರ್ಶನ್‌ಗೆ ಬಿಡುಗಡೆ ಭಾಗ್ಯ ಸಿಗುತ್ತೆ ಅನ್ನೋ ಸಣ್ಣದೊಂದು ಹಿಂಟ್ ಕೂಡ ಸಿಕ್ಕಿದೆ.
ಮೂಲಗಳ ಪ್ರಕಾರ ರೇಣುಕಾಸ್ವಾಮಿ ಮರ್ಡರ್ ವೇಳೆ ಅದನ್ನು ಕಣ್ಣಾರೆ ಕಂಡಂತಹ ಪ್ರತ್ಯಕ್ಷ್ಯದರ್ಶಿಗಳ ಕೊರತೆ ಇದೆ ಎನ್ನಲಾಗ್ತಿದೆ. ಪ್ರಕರಣದ ಆರೋಪಿಗಳನ್ನ ಹೊರತುಪಡಿಸಿ ಐ ವಿಟ್ನೆಸ್ ಯಾರೂ ಇಲ್ಲ ಎನ್ನಲಾಗ್ತಿದೆ. ಸೆಕ್ಯೂರಿಟಿ ಗಾರ್ಡ್ 164 ಸ್ಟೇಟ್ಮೆಂಟ್ ಒಂದೇ ಆಧಾರ ಅನ್ನೋದು ಮತ್ತೊಂದು ಮೂಲದ ಮಾಹಿತಿ.
ರೇಣುಕಾಸ್ವಾಮಿ ತಾಯಿ ಉಲ್ಟಾ ಸ್ಟೇಟ್ಮೆಂಟ್..ದಚ್ಚುಗೆ ವರದಾನ?
ಕ್ರಾಸ್ ಎಕ್ಸಾಮಿನ್ ವೇಳೆ ರತ್ನಪ್ರಭಾ ಮಹಾ ಎಡವಟ್
ಎಲ್ಲಕ್ಕಿಂತ ಮಿಗಿಲಾಗಿ ಕೋರ್ಟ್ ಟ್ರಯಲ್ಸ್ ಶುರುವಾಗಿದ್ದು, ರೇಣುಕಾಸ್ವಾಮಿ ತಾಯಿ ರತ್ನಪ್ರಭ ದರ್ಶನ್ ಪರ ವಕೀಲ ಸಿವಿ ನಾಗೇಶ್ ಕ್ರಾಸ್ ಎಕ್ಸಾಮಿನ್ ವೇಳೆ ಎಡವಟ್ ಹೇಳಿಕೆ ನೀಡಿದ್ದಾರೆ. ಪೊಲೀಸರ ತನಿಖೆ ವೇಳೆ ನೀಡಿದ ಹೇಳಿಕೆಗೂ ವಕೀಲರ ಕ್ರಾಸ್ ಎಕ್ಸಾಮಿನ್ ವೇಳೆ ನೀಡಿದ ಹೇಳಿಕೆಗಳು ಬೇರೆ ಬೇರೆ ಆಗಿದ್ದು, ಇದು ದರ್ಶನ್‌ಗೆ ವರದಾನ ಆಗುವ ಸಾಧ್ಯತೆಯಿದೆ.
ಈ ಹೊಸ ಬೆಳವಣಿಗೆಯನ್ನು ನೋಡ್ತಿದ್ರೆ ದಾಸ ಸದ್ಯದಲ್ಲೇ ಹೊರಗಡೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಇದು ನಿಜವಾದಲ್ಲಿ ದಾಸನ ಕುಟುಂಬ, ಅಸಂಖ್ಯಾತ ಅಭಿಮಾನಿ ಬಳಗ ಹಾಗೂ ಚಿತ್ರರಂಗಕ್ಕೆ ಈ ನ್ಯೂ ಇಯರ್‌ಗೆ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದು ಇರಲ್ಲ.





