ರಾಮಾಯಣ ಮತ್ತು ಮಹಾಭಾರತದ ಮೇಲೆ ಎಷ್ಟೇ ಸಿನಿಮಾ, ಸೀರೀಸ್‌ಗಳು ಬಂದರೂ ಸಹ ಅವುಗಳ ಮೇಲಿನ ಕ್ರೇಜ್ ಕಿಂಚಿತ್ತೂ ಕಮ್ಮಿ ಆಗಿಲ್ಲ. ಅದು ಅವುಗಳಿಗಿರೋ ಮಹತ್ವ. ಅದು ಅವುಗಳ ಅಸಲಿ ತೂಕ. ಅಂದಹಾಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ತನ್ನ ಡ್ರೀಮ್ ಪ್ರಾಜೆಕ್ಟ್ ಮಹಾಭಾರತಕ್ಕೆ ಕೈ ಹಾಕ್ತಿದ್ದಾರೆ.
- ‘ಮಹಾಭಾರತ’ಕ್ಕೆ ಆಮೀರ್ ಸ್ಕೆಚ್.. ಆಗಸ್ಟ್‌ನಿಂದ್ಲೇ ಶುರು
- ಸೀರೀಸ್ ಆಫ್ ಸಿನಿಮಾ.. ಕೃಷ್ಣನ ಅವತಾರದಲ್ಲಿ ಆಮೀರ್
- ನಟನೆ, ನಿರ್ದೇಶನ ಜೊತೆ ನಿರ್ಮಾಣಕ್ಕೂ ಮಿ.ಪರ್ಫೆಕ್ಷನಿಸ್ಟ್ ಕೈ
- ಮಹಾಭಾರತ ಚಿತ್ರದ ಬಳಿಕ ಇಂಡಸ್ಟ್ರಿಗೆ ಗುಡ್ ಬೈ ಹೇಳ್ತಾರಾ?
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅದ್ಯಾಕೋ ಚಿತ್ರರಂಗ ತೊರೆಯುವ ಮನಸ್ಸು ಮಾಡಿದ್ರು. ಆದ್ರೆ ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಸೇರಿ ಆಮೀರ್‌ನ ಮತ್ತೆ ಭರ್ಜರಿ ಕಂಬ್ಯಾಕ್ ಮಾಡುವಂತೆ ಮಾಡಿದ್ರು. ಅದಾದ ಬಳಿಕ ಆದದ್ದು ಗೊತ್ತೇಯಿದೆ. ಸಿತಾರೆ ಜಮೀನ್ ಪರ್ ಸಿನಿಮಾ ಬಿಗ್ಗೆಸ್ಟ್ ಹಿಟ್ ಆಯ್ತು. ನಮ್ಮ ಸಿಎಂ ಸಿದ್ದು ಸೇರಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮುವರೆಗೂ ಎಲ್ಲರನ್ನ ಭೇಟಿ ಮಾಡಿ, ಇಂಥದ್ದೊಂದು ಸಿನಿಮಾ ಮಾಡಿದ್ದಕ್ಕೆ ಮೆಚ್ಚುಗೆ ಪಡೆದರು.
ಇದೀಗ ಆಮೀರ್ ಖಾನ್ ತಮ್ಮ ಮುಂದಿನ ಡ್ರೀಮ್ ಪ್ರಾಜೆಕ್ಟ್‌ಗೆ ರೂಪರೇಷೆಗಳನ್ನ ಸಿದ್ದಗೊಳಿಸಿದ್ದಾರೆ. ಅಂದಹಾಗೆ ಆಮೀರ್ ನೆಕ್ಸ್ಟ್ ವೆಂಚರ್ ಮಹಾಭಾರತ. ಹೌದು, ಕುರುಕ್ಷೇತ್ರಕ್ಕೆ ಕಾರಣವಾದ ಮಹಾಕಾವ್ಯ ಮಹಾಭಾರತವನ್ನು ಸೀರೀಸ್ ಆಫ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಉಣಬಡಿಸುವ ಧಾವಂತದಲ್ಲಿದ್ದಾರೆ ಆಮೀರ್ ಖಾನ್. ಇತ್ತೀಚೆಗೆ ಮಹಾಭಾರತ ಸಿನಿಮಾದ ಬಗ್ಗೆ ಮೌನ ಮುರಿದಿರುವ ಖಾನ್, ತನ್ನಲ್ಲಿ ಆ ಚಿತ್ರದ ಬಗೆಗೆ ಇರುವ ವಿಷನ್, ಪ್ಯಾಷನ್ ಬಗ್ಗೆ ಮಾತನಾಡಿದ್ದಾರೆ.
ಅಂದಹಾಗೆ ಒಂದೇ ಒಂದು ಸಿನಿಮಾ ಮೂಲಕ ಮಹಾಭಾರತವನ್ನು ಪ್ರೇಕ್ಷಕರ ಮುಂದೆ ತರೋದು ಕಷ್ಟಸಾಧ್ಯ. ಹಾಗಾಗಿಯೇ ಸೀರೀಸ್ ಆಫ್ ಸಿನಿಮಾಗಳಿಂದ ತಯಾರಿಸೋಕೆ ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ಅದಕ್ಕೆ ಸ್ವತಃ ಅವರೇ ಡೈರೆಕ್ಷನ್ ಕೂಡ ಮಾಡ್ತಿದ್ದು, ಮುಂದುವರಿದ ಭಾಗಗಳಿಗೆ ಬೇರೆ ಡೈರೆಕ್ಟರ್‌ಗಳಿಂದ ಆ್ಯಕ್ಷನ್ ಕಟ್ ಹೇಳಿಸಲಿದ್ದಾರಂತೆ. ಇನ್ನು ಮಹಾಭಾರತವನ್ನು ತಮ್ಮದೇ ಹೋಮ್ ಬ್ಯಾನರ್‌ನಡಿ ಅದ್ದೂರಿಯಾಗಿ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ ಮಿಸ್ಟರ್ ಪರ್ಫೆಕ್ಷನಿಸ್ಟ್.
ಯಾವ್ಯಾವ ಸ್ಟಾರ್ ಯಾವ್ಯಾವ ಪಾತ್ರ ಪೋಷಿಸ್ತಾರೆ ಅನ್ನೋ ಕುತೂಹಲ ಗರಿಗೆದರಿದೆ. ಆಮೀರ್ ಸ್ವತಃ ಶ್ರೀಕೃಷ್ಣನ ಪಾತ್ರ ಪೋಷಿಸಲಿದ್ದಾರಂತೆ. ಮಹಾಭಾರದ ಅಸಲಿ ಸೂತ್ರಧಾರ ಶ್ರೀಕೃಷ್ಣನೇ. ಸದ್ಯ ಬಾಲಿವುಡ್‌ನಲ್ಲಿ ತಯಾರಾಗಲಿರೋ ಈ ಮಹಾಭಾರತಕ್ಕೆ ಆಮೀರ್ ಸೂತ್ರಧಾರ ಆಗಿರೋದ್ರಿಂದ ಕೃಷ್ಣನ ಪಾತ್ರ ಹೇಳಿ ಮಾಡಿಸಿದಂತಿರಲಿದೆ ಎನ್ನಲಾಗ್ತಿದೆ.
ರಾಜಮೌಳಿ ಕೂಡ ಮಹಾಭಾರತ ಸಿನಿಮಾ ಮಾಡುವ ಕನಸು ಕಂಡಿದ್ರು. ಈ ಮಧ್ಯೆ ಸೌತ್ ಸಿನಿದುನಿಯಾದ ಜೊತೆ ಒಳ್ಳೆಯ ಬಾಂಡಿಂಗ್ ಇಟ್ಟುಕೊಂಡಿರೋ ಆಮೀರ್, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಸ್ಟಾರ್ಸ್ ಜೊತೆ ಉತ್ತಮ ಒಡನಾಟ, ಬಾಂಧವ್ಯವಿದೆ. ಹಾಗಾಗಿ ಸೌತ್ ಸ್ಟಾರ್‌ಗಳನ್ನ ಕೂಡ ಆಮೀರ್ ಮಹಾಭಾರತದಲ್ಲಿ ನಿರೀಕ್ಷಿಸಬಹುದು ಎನ್ನಲಾಗ್ತಿದೆ.
ಇದೇ ಆಗಸ್ಟ್‌ನಿಂದಲೇ ಮಹಾಭಾರತ ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯಗಳಿಗೆ ಚಾಲನೆ ನೀಡ್ತಿರೋ ಆಮೀರ್, ಅಷ್ಟರಲ್ಲಿ ಕೂಲಿ ಸಿನಿಮಾದ ಪ್ರಮೋಷನ್ಸ್ ಮುಗಿಸಲಿದ್ದಾರಂತೆ. 70ರ ದಶಕದಲ್ಲೇ ಬಾಲನಟನಾಗಿದ್ದ ಆಮೀರ್, ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಡೈರೆಕ್ಟರ್, ಆ್ಯಕ್ಟರ್, ಪ್ರೊಡ್ಯೂಸರ್, ಬರಹಗಾರನಾಗಿ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಭಾರತೀಯ ಚಿತ್ರರಂಗದ ಜೊತೆಗೆ ವಿಶ್ವ ಸಿನಿದುನಿಯಾ ಮೆಚ್ಚುವಂತಹ ವ್ಹಾವ್ ಸಿನಿಮಾಗಳ ರೂವಾರಿಯೂ ಹೌದು. ಹೀಗಾಗಿ ಮಹಾಭಾರತ ಸಿನಿಮಾ, ಇಂದಿನ ಸೂಪರ್ ಸ್ಟಾರ್‌ಗಳ ಅಭಿನಯದಲ್ಲಿ ಹೊರಹೊಮ್ಮುವುದು ಪಕ್ಕಾ ಆಗಿದೆ.





