ಕಳೆದ ಕೆಲವು ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಚಿನ್ನ-ಬೆಳ್ಳಿಯಂತೆಯೇ ದುಬಾರಿಯಾಗುತ್ತಿದೆ. ಒಂದು ದಿನ ಇಳಿಕೆಯಾದರೆ ಮತ್ತೊಂದು ದಿನ ಏರಿಕೆಯಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇಂದು ಬೆಳಗ್ಗೆಯಿಂದಲೇ ದೇಶದ ಮಹಾನಗರಗಳಲ್ಲಿ ಇಂಧನ ದರದಲ್ಲಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ₹102.92ಕ್ಕೆ ತಲುಪಿದ್ದು, ಡೀಸೆಲ್ ₹90.99 ಆಗಿದೆ. ನಿನ್ನೆಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರದಲ್ಲಿ ಪೆಟ್ರೋಲ್ 44 ಪೈಸೆ ಏರಿಕೆಯಾಗಿ ₹102.99 ಆಗಿದೆ.
ಮಹಾನಗರಗಳಲ್ಲಿ ಇಂದಿನ ಇಂಧನ ದರ
- ದೆಹಲಿ: ಪೆಟ್ರೋಲ್ ₹94.77, ಡೀಸೆಲ್ ₹87.62
- ಮುಂಬೈ: ಪೆಟ್ರೋಲ್ ₹103.50, ಡೀಸೆಲ್ ₹90.03
- ಚೆನ್ನೈ: ಪೆಟ್ರೋಲ್ ₹100.90, ಡೀಸೆಲ್ ₹92.49
- ಕೊಲ್ಕತ್ತಾ: ಪೆಟ್ರೋಲ್ ₹105.41, ಡೀಸೆಲ್ ₹92.02
- ಬೆಂಗಳೂರು: ಪೆಟ್ರೋಲ್ ₹102.92, ಡೀಸೆಲ್ ₹90.99
ದೆಹಲಿಯಲ್ಲಿ ಕಡಿಮೆ ದರ ಇದ್ದರೂ ಮುಂಬೈ ಮತ್ತು ಕೊಲ್ಕತ್ತಾದಲ್ಲಿ ಪೆಟ್ರೋಲ್ ₹103-105 ದಾಟಿದೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ತೆರಿಗೆ ಹೆಚ್ಚಳದಿಂದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
ಕರ್ನಾಟಕದ ಜಿಲ್ಲಾವಾರು ಪೆಟ್ರೋಲ್ ದರ (ಇಂದಿನ ನವೀಕರಣ)
- ಬಾಗಲಕೋಟೆ: ₹103.62
- ಬೆಂಗಳೂರು: ₹102.92
- ಬೆಂಗಳೂರು ಗ್ರಾಮಾಂತರ: ₹102.99
- ಬೆಳಗಾವಿ: ₹103.41
- ಬಳ್ಳಾರಿ: ₹104.09
- ಬೀದರ್: ₹103.52
- ವಿಜಯಪುರ: ₹102.70
- ಚಾಮರಾಜನಗರ: ₹102.91
- ಚಿಕ್ಕಬಳ್ಳಾಪುರ: ₹103.40
- ಚಿಕ್ಕಮಗಳೂರು: ₹104.08
- ಚಿತ್ರದುರ್ಗ: ₹104.08
- ದಕ್ಷಿಣ ಕನ್ನಡ: ₹102.44
- ದಾವಣಗೆರೆ: ₹104.08
- ಧಾರವಾಡ: ₹102.73
- ಗದಗ: ₹103.80
- ಕಲಬುರಗಿ: ₹103.29
- ಹಾಸನ: ₹103.09
- ಹಾವೇರಿ: ₹103.30
- ಕೊಡಗು: ₹103.70
- ಕೋಲಾರ: ₹102.85
- ಕೊಪ್ಪಳ: ₹104.09
- ಮಂಡ್ಯ: ₹103.03
- ಮೈಸೂರು: ₹102.69
- ರಾಯಚೂರು: ₹104.09
- ರಾಮನಗರ: ₹103.28
- ಶಿವಮೊಗ್ಗ: ₹104.08
- ತುಮಕೂರು: ₹103.98
- ಉಡುಪಿ: ₹102.90
- ಉತ್ತರ ಕನ್ನಡ: ₹103.12
- ವಿಜಯನಗರ: ₹104.08
- ಯಾದಗಿರಿ: ₹103.44
ಜಿಲ್ಲಾವಾರು ಡೀಸೆಲ್ ದರ
- ಬಾಗಲಕೋಟೆ: ₹91.67
- ಬೆಂಗಳೂರು: ₹90.99
- ಬೆಂಗಳೂರು ಗ್ರಾಮಾಂತರ: ₹91.05
- ಬೆಳಗಾವಿ: ₹91.47
- ಬಳ್ಳಾರಿ: ₹92.22
- ಬೀದರ್: ₹91.57
- ವಿಜಯಪುರ: ₹90.81
- ಚಾಮರಾಜನಗರ: ₹90.98
- ಚಿಕ್ಕಬಳ್ಳಾಪುರ: ₹91.43
- ಚಿಕ್ಕಮಗಳೂರು: ₹92.17
- ಚಿತ್ರದುರ್ಗ: ₹91.91
- ದಕ್ಷಿಣ ಕನ್ನಡ: ₹90.51
- ದಾವಣಗೆರೆ: ₹92.22
- ಧಾರವಾಡ: ₹90.84
- ಗದಗ: ₹91.83
- ಕಲಬುರಗಿ: ₹91.36
- ಹಾಸನ: ₹90.98
- ಹಾವೇರಿ: ₹91.37
- ಕೊಡಗು: ₹91.67
- ಕೋಲಾರ: ₹90.93
- ಕೊಪ್ಪಳ: ₹92.23
- ಮಂಡ್ಯ: ₹91.10
- ಮೈಸೂರು: ₹90.79
- ರಾಯಚೂರು: ₹92.18
- ರಾಮನಗರ: ₹91.33
- ಶಿವಮೊಗ್ಗ: ₹92.22
- ತುಮಕೂರು: ₹91.98
- ಉಡುಪಿ: ₹90.93
- ಉತ್ತರ ಕನ್ನಡ: ₹91.20
- ವಿಜಯನಗರ: ₹92.22
- ಯಾದಗಿರಿ: ₹91.49
ಏರಿಕೆಗೆ ಕಾರಣಗಳೇನು?
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ, ಡಾಲರ್ ವಿರುದ್ಧ ರೂಪಾಯಿಯ ಮೌಲ್ಯ ಕುಸಿತ, ರಾಜ್ಯ ಸರ್ಕಾರಗಳ VAT ಹೆಚ್ಚಳ ಇವೆಲ್ಲವೂ ಒಟ್ಟಾರೆಯಾಗಿ ಗ್ರಾಹಕರ ಮೇಲೆ ಹೊರೆ ಹಾಕುತ್ತಿವೆ. ಉತ್ತರ ಕನ್ನಡದಲ್ಲಿ 98 ಪೈಸೆ ಇಳಿಕೆಯಾದರೂ ಹೆಚ್ಚಿನ ಜಿಲ್ಲೆಗಳಲ್ಲಿ ಏರಿಕೆಯೇ ಪ್ರಮುಖವಾಗಿದೆ.
ವಾಹನ ಸವಾರರು ಈಗ ಫುಲ್ ಟ್ಯಾಂಕ್ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಸಾರ್ವಜನಿಕ ಸಾರಿಗೆ ಬಳಕೆ, ಕಾರ್ ಪೂಲಿಂಗ್, ಎಲೆಕ್ಟ್ರಿಕ್ ವಾಹನಗಳತ್ತ ಒಲವು ಹೆಚ್ಚಿಸುವುದು ಮಾತ್ರ ಉಳಿದ ಆಯ್ಕೆಯಾಗಿ ಕಾಣುತ್ತಿದೆ.





