ವಾರದ ಮೊದಲ ದಿನವೇ ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ ಬಂದಿದೆ. ದೇಶದ ಸರಬರಾಜು ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಕಂಡುಬಂದ ಇಳಿಕೆ ಖರೀದಿದಾರರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ವಿಶೇಷವಾಗಿ ದೀಪಾವಳಿ, ಮದುವೆ ಹಾಗೂ ಇತರೆ ಶುಭ ಸಂದರ್ಭಗಳ ವೇಳೆ ಚಿನ್ನದ ಬೇಡಿಕೆ ಹೆಚ್ಚಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಮದ್ಯಮ ವರ್ಗದ ಗ್ರಾಹಕರಿಗೂ ದೊಡ್ಡ ರಿಲೀಫ್ ಸಿಕ್ಕಿದಂತಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಚಿನ್ನದ ದರ ತಾತ್ಕಾಲಿಕವಾಗಿ ಇಳಿದರೂ ಮುಂದಿನ ತಿಂಗಳುಗಳಲ್ಲಿ ಪುನಃ ಏರಿಕೆ ಕಾಣುವ ಸಾಧ್ಯತೆ ಜಾಸ್ತಿ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಮಾರುಕಟ್ಟೆಯ ಇಂದಿನ ಚಿನ್ನ-ಬೆಳ್ಳಿ ದರ
ಇಂದು ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೀಗಿದೆ:
-
24 ಕ್ಯಾರೆಟ್ (10 ಗ್ರಾಂ): ₹1,25,070
-
22 ಕ್ಯಾರೆಟ್ (10 ಗ್ರಾಂ): ₹1,14,640
-
ಬೆಳ್ಳಿ 1 ಕೆಜಿ: ₹1,71,900
ಕರ್ನಾಟಕದ ದರಗಳ ವಿವರ:
ಒಂದು ಗ್ರಾಂ ಚಿನ್ನ
-
18K ಚಿನ್ನ: ₹9,380
-
22K ಚಿನ್ನ: ₹11,464
-
24K ಚಿನ್ನ: ₹12,507
ಎಂಟು ಗ್ರಾಂ ಚಿನ್ನ
-
18K: ₹75,040
-
22K: ₹91,712
-
24K: ₹1,00,056
ಹತ್ತು ಗ್ರಾಂ ಚಿನ್ನ
-
18K: ₹93,800
-
22K: ₹1,14,640
-
24K: ₹1,25,070
ನೂರು ಗ್ರಾಂ ಚಿನ್ನ
-
18K: ₹9,38,000
-
22K: ₹11,46,400
-
24K: ₹12,50,700
ವಿವಿಧ ನಗರಗಳಲ್ಲಿನ ಚಿನ್ನದ ದರ (22K – 1 ಗ್ರಾಂ)
| ನಗರ | ಇಂದು 22K |
|---|---|
| ಚೆನ್ನೈ | ₹11,549 |
| ಮುಂಬೈ | ₹11,464 |
| ದೆಹಲಿ | ₹11,479 |
| ಕೋಲ್ಕತ್ತಾ | ₹11,464 |
| ಬೆಂಗಳೂರು | ₹11,464 |
| ಹೈದರಾಬಾದ್ | ₹11,464 |
| ಕೇರಳ | ₹11,464 |
| ಪುಣೆ | ₹11,464 |
| ವಡೋದರಾ | ₹11,469 |
| ಅಹಮದಾಬಾದ್ | ₹11,469 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
| ನಗರ | ಬೆಳ್ಳಿ ದರ |
|---|---|
| ಚೆನ್ನೈ | ₹17,490 |
| ಮುಂಬೈ | ₹16,890 |
| ದೆಹಲಿ | ₹16,890 |
| ಕೋಲ್ಕತ್ತಾ | ₹16,890 |
| ಬೆಂಗಳೂರು | ₹16,890 |
| ಹೈದರಾಬಾದ್ | ₹17,490 |
| ಕೇರಳ | ₹17,490 |
| ಪುಣೆ | ₹16,890 |
| ವಡೋದರಾ | ₹16,890 |
| ಅಹಮದಾಬಾದ್ | ₹16,890 |
ಭಾರತದಲ್ಲಿ ಚಿನ್ನದ ಬೆಲೆ ಹಲವು ಅಂಶಗಳಿಂದ ಪ್ರಭಾವಿತವಾಗುತ್ತದೆ. ಅಬಕಾರಿ ಸುಂಕ (Excise Duty), ಮೇಕಿಂಗ್ ಚಾರ್ಜ್, ಸರಕು ಸೇವಾ ತೆರಿಗೆ (GST) ಮತ್ತು ರಾಜ್ಯವಾರು ತೆರಿಗೆ ನೀತಿಗಳು ಸಾಮಾನ್ಯವಾಗಿ ದರದಲ್ಲಿ ವ್ಯತ್ಯಾಸಕ್ಕೆ ಕಾರಣ.
ಗ್ರಾಹಕರಿಗೆ: ಬೆಲೆ ಇಳಿಕೆಯ ಈ ಪರಿಸ್ಥಿತಿ ಚಿನ್ನಾಭರಣ ಖರೀದಿಸಲು ಅತ್ಯುತ್ತಮ ಸಮಯ. ಮದುವೆ ಅಥವಾ ವಿಶೇಷ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಖರೀದಿಸಲು ಇದು ಸೂಕ್ತ ಅವಧಿ.
ಹೂಡಿಕೆದಾರರಿಗೆ: ಇಳಿಕೆ ದೀರ್ಘಾವಧಿಯಲ್ಲಿ ಲಾಭ ನೀಡಬಹುದು. ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಚಿನ್ನವನ್ನು ‘ಸೆಫ್ ಹೇವನ್’ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ವಿಶ್ಲೇಷಕರು, ಮುಂದಿನ ಕೆಲವು ದಿನಗಳು ಚಿನ್ನದ ದರದ ದಿಕ್ಕು ನಿರ್ಧರಿಸುವ ಮಹತ್ವದ ಅವಧಿ ಎಂದು ಅಭಿಪ್ರಾಯಪಟ್ಟಿದ್ದಾರೆ.





