ಕಳೆದ ಕೆಲವು ತಿಂಗಳುಗಳಿಂದಲೇ ಚಿನ್ನದ ಮಾರುಕಟ್ಟೆಯು ಒಂದೇ ದಿಕ್ಕಿನಲ್ಲಿ ಸಾಗುತ್ತಿದೆ. ಇಂದು ಮತ್ತೊಮ್ಮೆ ಚಿನ್ನದ ಬೆಲೆ ಗರಿಷ್ಠ ಮಟ್ಟವನ್ನು ಮುಟ್ಟಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ 24 ಕ್ಯಾರಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆ ₹1,24,870 ಕ್ಕೆ ಏರಿಕೆಯಾಗಿದೆ. ಇದು ಕಳೆದ ವಾರ ಗಣನೀಯ ಏರಿಕೆಯೇ ಆಗಿದೆ.
ಜಾಗತಿಕ ಮಟ್ಟದಲ್ಲಿ ಡಾಲರ್ ದುರ್ಬಲಗೊಳ್ಳುತ್ತಿರುವುದು, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಕೇಂದ್ರೀಯ ಬ್ಯಾಂಕುಗಳ ಚಿನ್ನದ ಖರೀದಿ ಹಾಗೂ ಹೂಡಿಕೆದಾರರಲ್ಲಿ ಸುರಕ್ಷಿತ ಆಸ್ತಿಯೆಂದು ಚಿನ್ನದ ಮೇಲಿನ ಬೇಡಿಕೆ ಇವೆಲ್ಲವೂ ಈ ಏರಿಕೆಗೆ ಕಾರಣವಾಗಿವೆ. ಭಾರತದಲ್ಲಿ ಮದುವೆ ಸೀಸನ್, ದೀಪಾವಳಿ-ದಸರಾ ಹಬ್ಬಗಳ ಹಿನ್ನೆಲೆಯಲ್ಲಿ ಆಭರಣಗಳ ಬೇಡಿಕೆಯೂ ಗರಿಷ್ಠ ಮಟ್ಟದಲ್ಲಿದೆ. ಆದರೆ ಈ ಏರಿಕೆಯಿಂದ ಮಧ್ಯಮ ವರ್ಗದ ಖರೀದಿದಾರರು ತೀವ್ರ ನಿರಾಶೆಗೊಳಗಾಗಿದ್ದಾರೆ.
ಬೆಂಗಳೂರು ಮಾರುಕಟ್ಟೆಯ ಇಂದಿನ ದರಗಳು
ಬೆಂಗಳೂರು ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಇಂದು ಈ ದರಗಳಲ್ಲಿ ವ್ಯಾಪಾರವಾಗಿದೆ.
-
24 ಕ್ಯಾರಟ್ ಚಿನ್ನ (10 ಗ್ರಾಂ): ₹1,24,870
-
22 ಕ್ಯಾರ್ಟ್ ಚಿನ್ನ (10 ಗ್ರಾಂ): ₹1,14,460
-
ಬೆಳ್ಳಿ (1 ಕೆಜಿ): ₹1,71,900
ಕೋಲಾರ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲೂ ಇದೇ ಮಟ್ಟದ ದರಗಳಿದ್ದು, ಅಲ್ಲಿ ಮೇಕಿಂಗ್ ಚಾರ್ಜ್, GST, ಹಾಗೂ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಸ್ವಲ್ಪ ವ್ಯತ್ಯಾಸ ಕಂಡುಬರುತ್ತಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ
ಒಂದು ಗ್ರಾಂ (1GM):
-
18 ಕ್ಯಾರೆಟ್ – ₹9,365
-
22 ಕ್ಯಾರೆಟ್ – ₹11,446
-
24 ಕ್ಯಾರೆಟ್ – ₹12,487
ಎಂಟು ಗ್ರಾಂ (8GM):
-
18 ಕ್ಯಾರೆಟ್ – ₹74,920
-
22 ಕ್ಯಾರೆಟ್ – ₹91,568
-
24 ಕ್ಯಾರೆಟ್ – ₹99,896
ಹತ್ತು ಗ್ರಾಂ (10GM):
-
18 ಕ್ಯಾರೆಟ್ – ₹93,650
-
22 ಕ್ಯಾರೆಟ್ – ₹1,14,460
-
24 ಕ್ಯಾರೆಟ್ – ₹1,24,870
ನೂರು ಗ್ರಾಂ (100GM):
-
18 ಕ್ಯಾರೆಟ್ – ₹9,36,500
-
22 ಕ್ಯಾರೆಟ್ – ₹11,44,600
-
24 ಕ್ಯಾರೆಟ್ – ₹12,48,700
ವಿವಿಧ ನಗರಗಳ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
-
ಚೆನ್ನೈ – ₹11,399
-
ಮುಂಬೈ – ₹11,334
-
ದೆಹಲಿ – ₹11,349
-
ಕೋಲ್ಕತ್ತಾ – ₹11,334
-
ಬೆಂಗಳೂರು – ₹11,334
-
ಹೈದರಾಬಾದ್ – ₹11,334
-
ಕೇರಳ – ₹11,334
-
ಪುಣೆ – ₹11,334
-
ವಡೋದರಾ – ₹11,339
-
ಅಹಮದಾಬಾದ್ – ₹11,339
ವಿವಿಧ ನಗರಗಳ ಬೆಳ್ಳಿ ದರ (100 ಗ್ರಾಂ)
-
ಚೆನ್ನೈ – ₹16,990
-
ಮುಂಬೈ – ₹16,190
-
ದೆಹಲಿ – ₹16,190
-
ಕೋಲ್ಕತ್ತಾ – ₹16,190
-
ಬೆಂಗಳೂರು – ₹16,190
-
ಹೈದರಾಬಾದ್ – ₹16,990
-
ಕೇರಳ – ₹16,990
-
ಪುಣೆ – ₹16,190
-
ವಡೋದರಾ – ₹16,190
-
ಅಹಮದಾಬಾದ್ – ₹16,190
ಬೆಲೆ ವ್ಯತ್ಯಾಸಕ್ಕೆ ಪ್ರಮುಖ ಕಾರಣಗಳಾಗಿ ಅಬಕಾರಿ ಸುಂಕ, ಮೇಕಿಂಗ್ ಚಾರ್ಜ್, GST ಮತ್ತು ಸ್ಥಳೀಯ ಮಾರುಕಟ್ಟೆಯ ಬೇಡಿಕೆ-ಪೂರೈಕೆಗಳನ್ನು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.
ಈ ಬೆಲೆಯಲ್ಲಿ ಖರೀದಿ ಮಾಡುವ ಮುನ್ನ ಎರಡು ಬಾರಿ ಯೋಚಿಸಿ, ಖರೀದಿ ಮಾಡುವ ಜ್ಯುವೆಲರ್‌ನ ಬಿಲ್, ಹಾಲ್‌ಮಾರ್ಕ್, ಶುದ್ಧತೆ ಎಲ್ಲವನ್ನೂ ಪರಿಶೀಲಿಸಿ. ಈಗಿನ ಪರಿಸ್ಥಿತಿಯಲ್ಲಿ ಸ್ವಲ್ಪ ಹಣ ಉಳಿಸಲು ಪ್ರಿ-ಓನ್ಡ್ ಆಭರಣ ಅಥವಾ ಡಿಜಿಟಲ್ ಗೋಲ್ಡ್ ಕೂಡ ಒಳ್ಳೆಯ ಆಯ್ಕೆಯಾಗಬಹುದು.





