ಆಭರಣ ಪ್ರಿಯರಿಗೆ ಶಾಕ್‌: ಇಂದು ಚಿನ್ನದ ಬೆಲೆಯಲ್ಲಿ ಏರಿಕೆ

Untitled design 2025 11 20T095015.949

ಕಳೆದ ಕೆಲವು ತಿಂಗಳುಗಳಿಂದಲೇ ಚಿನ್ನದ ಮಾರುಕಟ್ಟೆಯು ಒಂದೇ ದಿಕ್ಕಿನಲ್ಲಿ ಸಾಗುತ್ತಿದೆ. ಇಂದು ಮತ್ತೊಮ್ಮೆ ಚಿನ್ನದ ಬೆಲೆ ಗರಿಷ್ಠ ಮಟ್ಟವನ್ನು ಮುಟ್ಟಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ 24 ಕ್ಯಾರಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆ ₹1,24,870 ಕ್ಕೆ ಏರಿಕೆಯಾಗಿದೆ. ಇದು ಕಳೆದ ವಾರ ಗಣನೀಯ ಏರಿಕೆಯೇ ಆಗಿದೆ.

ಜಾಗತಿಕ ಮಟ್ಟದಲ್ಲಿ ಡಾಲರ್ ದುರ್ಬಲಗೊಳ್ಳುತ್ತಿರುವುದು, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಕೇಂದ್ರೀಯ ಬ್ಯಾಂಕುಗಳ ಚಿನ್ನದ ಖರೀದಿ ಹಾಗೂ ಹೂಡಿಕೆದಾರರಲ್ಲಿ ಸುರಕ್ಷಿತ ಆಸ್ತಿಯೆಂದು ಚಿನ್ನದ ಮೇಲಿನ ಬೇಡಿಕೆ ಇವೆಲ್ಲವೂ ಈ ಏರಿಕೆಗೆ ಕಾರಣವಾಗಿವೆ. ಭಾರತದಲ್ಲಿ ಮದುವೆ ಸೀಸನ್, ದೀಪಾವಳಿ-ದಸರಾ ಹಬ್ಬಗಳ ಹಿನ್ನೆಲೆಯಲ್ಲಿ ಆಭರಣಗಳ ಬೇಡಿಕೆಯೂ ಗರಿಷ್ಠ ಮಟ್ಟದಲ್ಲಿದೆ. ಆದರೆ ಈ ಏರಿಕೆಯಿಂದ ಮಧ್ಯಮ ವರ್ಗದ ಖರೀದಿದಾರರು ತೀವ್ರ ನಿರಾಶೆಗೊಳಗಾಗಿದ್ದಾರೆ.

ಬೆಂಗಳೂರು ಮಾರುಕಟ್ಟೆಯ ಇಂದಿನ ದರಗಳು

ಬೆಂಗಳೂರು ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಇಂದು ಈ ದರಗಳಲ್ಲಿ ವ್ಯಾಪಾರವಾಗಿದೆ.

ಕೋಲಾರ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲೂ ಇದೇ ಮಟ್ಟದ ದರಗಳಿದ್ದು, ಅಲ್ಲಿ ಮೇಕಿಂಗ್ ಚಾರ್ಜ್, GST, ಹಾಗೂ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಸ್ವಲ್ಪ ವ್ಯತ್ಯಾಸ ಕಂಡುಬರುತ್ತಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ

ಒಂದು ಗ್ರಾಂ (1GM):

ಎಂಟು ಗ್ರಾಂ (8GM):

ಹತ್ತು ಗ್ರಾಂ (10GM):

ನೂರು ಗ್ರಾಂ (100GM):

ವಿವಿಧ ನಗರಗಳ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
ವಿವಿಧ ನಗರಗಳ ಬೆಳ್ಳಿ ದರ (100 ಗ್ರಾಂ)

ಬೆಲೆ ವ್ಯತ್ಯಾಸಕ್ಕೆ ಪ್ರಮುಖ ಕಾರಣಗಳಾಗಿ ಅಬಕಾರಿ ಸುಂಕ, ಮೇಕಿಂಗ್ ಚಾರ್ಜ್, GST ಮತ್ತು ಸ್ಥಳೀಯ ಮಾರುಕಟ್ಟೆಯ ಬೇಡಿಕೆ-ಪೂರೈಕೆಗಳನ್ನು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.

ಈ ಬೆಲೆಯಲ್ಲಿ ಖರೀದಿ ಮಾಡುವ ಮುನ್ನ ಎರಡು ಬಾರಿ ಯೋಚಿಸಿ, ಖರೀದಿ ಮಾಡುವ ಜ್ಯುವೆಲರ್‌ನ ಬಿಲ್, ಹಾಲ್‌ಮಾರ್ಕ್, ಶುದ್ಧತೆ ಎಲ್ಲವನ್ನೂ ಪರಿಶೀಲಿಸಿ. ಈಗಿನ ಪರಿಸ್ಥಿತಿಯಲ್ಲಿ ಸ್ವಲ್ಪ ಹಣ ಉಳಿಸಲು ಪ್ರಿ-ಓನ್ಡ್ ಆಭರಣ ಅಥವಾ ಡಿಜಿಟಲ್ ಗೋಲ್ಡ್ ಕೂಡ ಒಳ್ಳೆಯ ಆಯ್ಕೆಯಾಗಬಹುದು.

Exit mobile version