ಕಳೆದ ಎರಡು ದಿನಗಳಲ್ಲಿ ಗ್ರಾಮ್‌ಗೆ ₹355ರಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆ ಕಂಡಿದೆ. ಸೆಪ್ಟೆಂಬರ್ 30ರ ಬುಧವಾರ ಚಿನ್ನದ ದರ ಗ್ರಾಮ್‌ಗೆ ₹70ರಷ್ಟು ಹೆಚ್ಚಳವಾಗಿದೆ. ಭಾರತ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಹಲವು ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಮತ್ತು ಸ್ಪಾಟ್ ಸಿಲ್ವರ್ ದರಗಳಲ್ಲೂ ತುಸು ಏರಿಕೆ ದಾಖಲಾಗಿದೆ.
ಇನ್ನೊಂದೆಡೆ, ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಒಂದು ಗ್ರಾಮ್ ಬೆಳ್ಳಿ ₹240ರ ದರದಲ್ಲೇ ಮುಂದುವರಿದಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,37,100 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,49,570 ಇದೆ. 100 ಗ್ರಾಂ ಬೆಳ್ಳಿಯ ಬೆಲೆ ₹24,000ರಷ್ಟಿದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ
ಸೆಪ್ಟೆಂಬರ್ 30ರ ಪ್ರಮುಖ ದರಗಳು ಹೀಗಿವೆ:
| ಲೋಹ | ಪ್ರಮಾಣ | ಬೆಲೆ |
|---|---|---|
| 24 ಕ್ಯಾರಟ್ ಚಿನ್ನ | 1 ಗ್ರಾಂ | ₹14,957 |
| 22 ಕ್ಯಾರಟ್ ಚಿನ್ನ | 1 ಗ್ರಾಂ | ₹13,710 |
| 18 ಕ್ಯಾರಟ್ ಚಿನ್ನ | 1 ಗ್ರಾಂ | ₹11,218 |
| ಬೆಳ್ಳಿ | 1 ಗ್ರಾಂ | ₹240 |
| 22 ಕ್ಯಾರಟ್ ಚಿನ್ನ | 10 ಗ್ರಾಂ | ₹1,37,100 |
| 24 ಕ್ಯಾರಟ್ ಚಿನ್ನ | 10 ಗ್ರಾಂ | ₹1,49,570 |
| ಬೆಳ್ಳಿ | 100 ಗ್ರಾಂ | ₹24,000 |
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ.
| ನಗರ | 1 ಗ್ರಾಂ 22K ಚಿನ್ನ |
|---|---|
| ಬೆಂಗಳೂರು | ₹13,710 |
| ಚೆನ್ನೈ | ₹13,710 |
| ಮುಂಬೈ | ₹13,710 |
| ದೆಹಲಿ | ₹13,725 |
| ಕೋಲ್ಕತಾ | ₹13,710 |
| ಕೇರಳ | ₹13,710 |
| ಅಹ್ಮದಾಬಾದ್ | ₹13,715 |
| ಜೈಪುರ | ₹13,725 |
| ಲಕ್ನೋ | ₹13,725 |
| ಭುವನೇಶ್ವರ್ | ₹13,710 |
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ
| ದೇಶ | 1 ಗ್ರಾಂ 24K ಚಿನ್ನ |
|---|---|
| ಭಾರತ | ₹14,957 |
| ಮಲೇಷ್ಯಾ | ₹13,169 |
| ದುಬೈ | ₹13,096 |
| ಅಮೆರಿಕ | ₹13,135 |
| ಸಿಂಗಾಪುರ | ₹13,675 |
| ಕತಾರ್ | ₹13,229 |
| ಸೌದಿ ಅರೇಬಿಯಾ | ₹13,214 |
| ಓಮನ್ | ₹13,248 |
| ಕುವೇತ್ | ₹12,934 |
ವಿವಿಧ ನಗರಗಳಲ್ಲಿ ಬೆಳ್ಳಿ ದರ
| ನಗರ | 1 ಗ್ರಾಂ ಬೆಳ್ಳಿ |
|---|---|
| ಬೆಂಗಳೂರು | ₹240 |
| ಚೆನ್ನೈ | ₹245 |
| ಮುಂಬೈ | ₹240 |
| ದೆಹಲಿ | ₹240 |
| ಕೋಲ್ಕತಾ | ₹240 |
| ಕೇರಳ | ₹245 |
| ಅಹ್ಮದಾಬಾದ್ | ₹240 |
| ಜೈಪುರ | ₹240 |
| ಲಕ್ನೋ | ₹240 |
| ಭುವನೇಶ್ವರ್ | ₹245 |
| ಪುಣೆ | ₹240 |





