ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಗಳಿಗೆ ಒಂದರ ನಂತರ ಒಂದರಂತೆ ಆಘಾತಗಳ ಸಾಲು ಉಂಟಾಗಿದೆ. ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದ ನಂತರ ಸ್ಪರ್ಧಿಗಳನ್ನು ತ್ವರಿತಗತಿಯಲ್ಲಿ ಈಗಲ್ಟನ್ ರೆಸಾರ್ಟ್ಗೆ ಸ್ಥಳಾಂತರಿಸಲಾಗಿತ್ತು. ಆದರೆ ಇಂದು ಮತ್ತೆ ಅವರಿಗೆ ದೊಡ್ಡ ಶಾಕ್ ನೀಡಲಾಗಿದೆ.
ರೆಸಾರ್ಟ್ ನಿರ್ವಹಣೆಯಿಂದ ಸ್ಪರ್ಧಿಗಳಿಗೆ 7 ಗಂಟೆಯೊಳಗೆ ರೆಸಾರ್ಟ್ ಖಾಲಿ ಮಾಡಿ ಹೊರಬರಬೇಕೆಂದು ಸೂಚನೆ ನೀಡಲಾಗಿದೆ. ಆಯೋಜಕರು 24 ಗಂಟೆಗಳ ಕಾಲ ರೆಸಾರ್ಟ್ ಬುಕ್ ಮಾಡಿದ್ದರು. ಆದರೆ ರೆಸಾರ್ಟ್ ನಿರ್ವಹಣೆಯು ಬೇರೆ ಈವೆಂಟ್ಗೆ ರೆಸಾರ್ಟ್ ಬುಕ್ ಆಗಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದೆ.
ಈ ಪರಿಸ್ಥಿತಿಯಿಂದಾಗಿ ಸ್ಪರ್ಧಿಗಳನ್ನು ತ್ವರಿತಗತಿಯಲ್ಲಿ ಬೇರೆ ರೆಸಾರ್ಟ್‌ಗೆ ಶಿಫ್ಟ್ ಮಾಡುವ ನಿರ್ಧಾರ ಆಯೋಜಕರು ತೆಗೆದುಕೊಂಡಿದ್ದಾರೆ. ಸ್ಪರ್ಧಿಗಳು ಪ್ರಸ್ತುತ ರೆಸಾರ್ಟ್‌ನಿಂದ ಹೊರಬರುವ ಸಿದ್ಧತೆ ನಡೆಸುತ್ತಿದ್ದಾರೆ.ಸ್ಪರ್ಧಿಗಳು ನಿನ್ನೆ ರಾತ್ರಿ ರೆಸಾರ್ಟ್ಗೆ ತಲುಪಿದ್ದರು. ಅವರಿಗೆ ಸಿಗಬೇಕಾದ ವಿಶ್ರಾಂತಿ ಸಿಗುವ ಮುನ್ನವೇ ಮತ್ತೆ ಸ್ಥಳಾಂತರದ ಆಘಾತ ಎದುರಾಗಿದೆ. ಬಿಗ್ ಬಾಸ್ ಶೋ ಮುಂದಿನ ಭವಿಷ್ಯ ಇನ್ನೂ ಅನಿಶ್ಚಿತವಾಗಿದೆ.