ಡಿಬಾಸ್ ಹಾಗೂ ಡಿ ಗ್ಯಾಂಗ್ ಸೇರಿ ಮಾಡಿದ್ದಾರೆ ಎನ್ನಲಾಗ್ತಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್, ಇದೀಗ ಸಿನಿಮಾ ರೂಪದಲ್ಲಿ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ. ಇತ್ತೀಚೆಗೆ ಬಾಸ್ ಚಿತ್ರದ ಟೀಸರ್ ಬಿಡುಗಡೆ ಆಗಿ, ಸಂಚಲನ ಮೂಡಿಸಿತ್ತು. ಆದ್ರೀಗ ಬಾಸ್ ಟೀಂಗೆ ಖುದ್ದು ವಿಜಯಲಕ್ಷ್ಮೀ ದರ್ಶನ್ ಬಿಗ್ ಶಾಕ್ ನೀಡಿದ್ದಾರೆ. ನೋಟಿಸ್ ಕಳಿಸಿ, ಸಿನಿಮಾ ರಿಲೀಸ್ ಆಗದಂತೆ ಸ್ಟೇ ತಂದಿದ್ದಾರೆ. ಅದ್ರ ಕಂಪ್ಲೇಟ್ ಕಹಾನಿ ಇಲ್ಲಿದೆ..
- ‘ಬಾಸ್’ ಚಿತ್ರತಂಡಕ್ಕೆ ಡಿ ಬಾಸ್ ಪತ್ನಿಯಿಂದ ಬಿಗ್ ಶಾಕ್
- ಸೆನ್ಸಾರ್ ನೀಡದಂತೆ ಬೋರ್ಡ್‌ಗೆ ಲಾಯರ್ ನೋಟಿಸ್
- ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿರೋ ತನುಷ್
- ರೇಣುಕಾಸ್ವಾಮಿ ಮರ್ಡರ್ ಕೇಸ್, ಡಿ ಗ್ಯಾಂಗ್ ಕುರಿತ ಚಿತ್ರ
ಕಳೆದ ವಾರ ಬಾಸ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು.. ಅದಾದ ನಂತ್ರ ಒಂದು ಚರ್ಚೆ ಶುರುವಾಯ್ತು.. ಅದೇನು ಅಂದ್ರೆ ಇದು ನಟ ದರ್ಶನ್ ಅವರ ರಿಯಲ್ ಕಥೆ ಅಂತ. ಹೌದು ಟೀಸರ್ ರಿಲೀಸ್ ಆದ ಮೇಲೆ ಗೊತ್ತಾಗಿದ್ದು ರೇಣುಕಾ ಸ್ವಾಮಿ ಕೊಲೆ ಕೇಸ್ ಸಂಬಂಧ ಪಟ್ಟಂತೆ ದರ್ಶನ್ ಜೈಲು ಸೇರಿದ್ದಾರೆ.. ಅದನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅಂತ ಆಯ್ತು. ಆದ್ರೆ ಈ ಬಗ್ಗೆ ಸಿನಿಮಾದ ನಿರ್ದೇಶಕ ಲವ ಆಗಿರಲಿ ಅಥವಾ ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ಆಗಲಿ, ಹೌದು ಇದು ಅವರದ್ದೇ ಸ್ಟೋರಿ ಅಂತ ಒಪ್ಪಿಕೊಳ್ಳಲಿಲ್ಲ. ಬದಲಾಗಿ ಟೀಸರ್ ನೋಡಿ ಸಿನಿಮಾ ಕಥೆ ಹೇಗೆ ಹೇಳ್ತೀರಾ ಅಂತ ಮಾಧ್ಯಮದವರಿಗೇ ಪ್ರಶ್ನೆ ಮಾಡಿದ್ರು. ಜೊತೆಗೆ ನಾವು ಮಾಡಿರೋದು ನೈಜ ಘಟನೆಗಳ ಆಧಾರಿತ ಸಿನಿಮಾ ಅಂತ ಹೇಳಿದ್ರು.
ಇಷ್ಟೆಲ್ಲಾ ಆದ ನಂತ್ರ ಈ ಸಿನಿಮಾ ವಿಚಾರವಾಗಿ ದರ್ಶನ್ ಆಗಲಿ ಅಥವಾ ದರ್ಶನ್ ಕುಟುಬಂದವರಾಗಲಿ ಯಾಕೆ ಏನೂ ಮಾತ್ನಾಡ್ತಾಯಿಲ್ಲ ಅಂತ ಅಂದುಕೊಳ್ಳುವಷ್ಟರಲ್ಲಿ ಇಂದು ದರ್ಶನ್ ಪರ ವಕೀಲರಿಂದ ಒಂದು ನೋಟಿಸ್ ಬಾಸ್ ಸಿನಿಮಾ ವಿರುದ್ಧ ಸೆನ್ಸಾರ್ ಮಂಡಳಿಗೆ ನೋಟಿಸ್ ತಲುಪಿದೆ. ಅದರಲ್ಲೇನಿದೆ ಅಂದ್ರೆ, ಬಾಸ್ ಸಿನಿಮಾದ ಟೀಸರ್ ಪ್ರಕಾರ ಇದು ದರ್ಶನ್ ಅವರ ರಿಯಲ್ ಕಥೆ.. ಆದ್ರೆ ಈ ವಿಚಾರ ಈಗ ಕೋರ್ಟ್ನಲ್ಲಿದೆ.. ಹಾಗಾಗಿ ಸೆನ್ಸಾರ್ ಮಂಡಳಿಯವರು, U , UA , A ಅಥವಾ S ಸರ್ಟಿಫಿಕೇಟ್ನ್ನು ನೀಡಬಾರದು ಅಂತ ಸೆಕ್ಷನ್ 5B, ಸಿನಿಮಾಟೋಗ್ರಾಫ್ ACT 1952 ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.
ನಿಜ ಹೇಳಬೇಕು ಅಂದ್ರೆ ಟೀಸರ್ ಕೂಡ ಅದೇ ರೀತಿಯಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಅನುಭವಿಸುತ್ತಿರೋ ಎಲ್ಲಾ ಎಲಿಮೆಂಟ್ಸ್ಗಳು ಟೀಸರ್ನಲ್ಲಿದೆ. ಈ ಸಿನಿಮಾದಲ್ಲಿನ ಪಾತ್ರಗಳ ಹೆಸರುಗಳೂ ವಿವಾದಕ್ಕೆ ಕಾರಣವಾಗಿವೆ ಎನ್ನಲಾಗುತ್ತಿದೆ. ಪವಿತ್ರಾ ಗೌಡ ಪಾತ್ರಕ್ಕೆ ‘ಶೀಲಾ ಗೌಡ’, ದರ್ಶನ್ ಪತ್ನಿಯ ಪಾತ್ರಕ್ಕೆ ‘ಲಕ್ಷ್ಮೀ’ ಹಾಗೂ ರೇಣುಕಾಸ್ವಾಮಿ ಪಾತ್ರಕ್ಕೆ ‘ಶಿವಸ್ವಾಮಿ’ ಎಂಬ ಹೆಸರನ್ನು ಬಳಸಲಾಗಿದೆ. ಇದೇ ಕಾರಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಪರವಾಗಿ ಲಾಯರ್ ನೋಟಿಸ್ ಕಳುಹಿಸಲಾಗಿದ್ದು, ಸಿನಿಮಾ ಸೆನ್ಸಾರ್ ಪ್ರಕ್ರಿಯೆಗೂ ಹೋಗದಂತೆ ತಡೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ದೇಶದಲ್ಲಿ ನಡೆಯೋ ಯಾವುದೇ ನೈಜ ಘಟನೆಗಳ ಆಧಾರದ ಮೇಲೆ ಸಿನಿಮಾ ಮಾಡಬಹುದು. ಆ ರೀತಿಯ ಸಿನಿಮಾಗಳು ಸಾಕಷ್ಟು ಬಂದಿವೆ, ಈಗಲೂ ಬರ್ತಾಯಿವೆ. ಆದ್ರೆ ಆ ಘಟನೆಗಳು ಕೋರ್ಟ್ನಲ್ಲಿದ್ರೆ ಆಗುತ್ತಾ ಅನ್ನೋದೇ ಚರ್ಚೆ. ಹೌದು..ಯಾವುದೇ ಕೇಸ್ ಇನ್ನೂ ಕೋರ್ಟ್ನಲ್ಲಿದ್ರೆ ಆ ಘಟನೆಗಳ ಬಗ್ಗೆ ಸಿನಿಮಾ ಮಾಡಲು ಅನುಮತಿ ಸಿಗುವುದಿಲ್ಲ. ಆ ಧೈರ್ಯವನ್ನು ಯಾರೂ ಮಾಡೋಲ್ಲ.. ಆದ್ರೆ ಬಾಸ್ ಸಿನಿಮಾ ತಂಡ ಈ ಧೈರ್ಯಕ್ಕೆ ಕೈ ಹಾಕಿ ಈಗ ನೋಟಿಸ್ ವರೆಗೂ ಬಂದು ನಿಂತಿದ್ದಾರೆ.
ಬಾಸ್ ಸಿನಿಮಾ ತಂಡದ ವಿರುದ್ಧ ನೋಟಿಸ್ ಕೊಟ್ಟಾಗಿದೆ.. ಸೆನ್ಸಾರ್ ಮಂಡಳಿಗೆ 50 ಪುಟಗಳ ವಿವರಣೆಯನ್ನೂ ಕೊಟ್ಟಿದ್ದಾರೆ. ಹಾಗಾದ್ರೆ ಬಾಸ್ ಸಿನಿಮಾ ಟೀಂ ನ ಮುಂದಿನ ನಡೆ ಏನು..? ನೋಟೀಸ್ಗೆ ಯಾವ ರೀತಿ ರೀಪ್ಲೇ ಕೊಡ್ತಾರೆ..? ಸೆನ್ಸಾರ್ ಮಂಡಳಿ ಬಾಸ್ ಸಿನಿಮಾದ ಸೆನ್ಸಾರ್ ಮಾಡುತ್ತಾ..?ಅಥವಾ ಯಾವುದಾದರೂ ಸೀನ್ಗಳಿಗೆ ಕತ್ತರಿ ಹಾಕಿ ರಿಲೀಸ್ಗೆ ಅನುಮತಿ ಕೊಡುತ್ತಾ..? ಒಂದು ವೇಳೆ ಸೆನ್ಸಾರ್ ಮಂಡಳಿ ಒಕೆ ಅಂದ್ರು ಕೋರ್ಟ್ ಏನ್ ಹೇಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್..
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





