• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, June 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಜಿಮ್‌ನಿಂದ ಬಂದ ತಕ್ಷಣ ಮಲಗ್ತೀರಾ? ಹಾಗಾದ್ರೆ ಈ ಸಮಸ್ಯೆ ನಿಮ್ಮನ್ನು ಕಾಡೋದು ಪಕ್ಕಾ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 27, 2026 - 7:17 am
in ಆರೋಗ್ಯ-ಸೌಂದರ್ಯ
0 0
0
Untitled design 2026 02 27T071635.122

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜಿಮ್‌ ಜೀವನಶೈಲಿಯ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ದೇಹ ತೂಕ ಇಳಿಸಿಕೊಳ್ಳಲು, ಸ್ನಾಯು ಬಲ ಹೆಚ್ಚಿಸಿಕೊಳ್ಳಲು, ಆರೋಗ್ಯ ಸುಧಾರಿಸಿಕೊಳ್ಳಲು ಅಥವಾ ಫಿಟ್‌ ಲುಕ್‌ಗಾಗಿ ಪ್ರತಿ ವ್ಯಕ್ತಿಗೂ ಜಿಮ್‌ಗೆ ಹೋಗಲು ಕಾರಣವಿರುತ್ತದೆ. ಆದರೆ ಆರೋಗ್ಯಕ್ಕಾಗಿ ಬೆವರು ಸುರಿಸುತ್ತಿರುವ ಜಾಗದಲ್ಲೇ ರೋಗಾಣುಗಳ ಅಪಾಯ ಅಡಗಿದೆ ಎಂಬುದನ್ನು ಹಲವರು ಗಮನಿಸುವುದಿಲ್ಲ.

ಕೆಲವು ಅಧ್ಯಯನಗಳ ಪ್ರಕಾರ, ಜಿಮ್‌ನ ಟ್ರೆಡ್‌ಮಿಲ್‌ಗಳ ಮೇಲಿನ ಬ್ಯಾಕ್ಟೀರಿಯಾ ಪ್ರಮಾಣವು ಸಾರ್ವಜನಿಕ ಶೌಚಾಲಯಗಳಿಗಿಂತ ಹಲವಾರು ಪಟ್ಟು ಹೆಚ್ಚು ಇರಬಹುದು ಎಂದು ಹೇಳಲಾಗಿದೆ. ತೂಕ ಎತ್ತುವ ಡಂಬೆಲ್‌ಗಳು ಮತ್ತು ಬಾರ್‌ಬೆಲ್‌ಗಳ ಮೇಲೂ ಅಪಾರ ಪ್ರಮಾಣದ ಜೀವಾಣುಗಳು ಕಂಡುಬಂದಿರುವ ವರದಿಗಳಿವೆ. ಈ ಅಂಕಿಅಂಶಗಳು ಸ್ವಲ್ಪ ಅತಿರಂಜಿತವಾಗಿರಬಹುದು ಎಂದು ಕೆಲವರು ಭಾವಿಸಿದರೂ, ಜಿಮ್‌ ಉಪಕರಣಗಳ ಮೇಲೆ ಜೀವಾಣುಗಳ ಪ್ರಮಾಣ ಕಡಿಮೆ ಎನ್ನಲು ಸಾಧ್ಯವಿಲ್ಲ.

RelatedPosts

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿ: ಕೈಗೆಟುಕುವ ದರದ ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!

ಐಫೋನ್ ಬಳಕೆದಾರರಿಗೆ ಮಕ್ಕಳೇ ಆಗಲ್ವಾ..? ಏನಿದು ವರದಿ..?

ಹೇರ್ ಡೈ ಬಳಸುವುದರಿಂದ ಕ್ಯಾನ್ಸರ್ ಬರುತ್ತಾ? ವೈಜ್ಞಾನಿಕ ಸತ್ಯ ಏನು?

ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ ‘ವೇರಿಪಲ್ಸ್ ಪ್ಲಾಟ್‌ಫಾರ್ಮ್’

ADVERTISEMENT
ADVERTISEMENT

ಜಿಮ್‌ನಲ್ಲಿ ಬೆವರು, ತೇವಾಂಶ ಮತ್ತು ಗಾಳಿಯ ಹರಿವಿನ ಕೊರತೆ ಬ್ಯಾಕ್ಟೀರಿಯಾ ಮತ್ತು ಫಂಗಸ್‌ ಬೆಳವಣಿಗೆಗೆ ಸೂಕ್ತ ವಾತಾವರಣ ಒದಗಿಸುತ್ತದೆ. ಏರ್‌ ಕಂಡೀಷನ್‌ ಇರುವ ಮುಚ್ಚಿದ ವಾತಾವರಣದಲ್ಲಿ ಸಾಕಷ್ಟು ತಾಜಾ ಗಾಳಿ ಸಿಗದಿದ್ದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಕಾಲು ಮತ್ತು ಉಗುರುಗಳಲ್ಲಿ ಫಂಗಲ್‌ ಸೋಂಕು ಕಾಣಿಸಿಕೊಳ್ಳುವುದು ಸಾಮಾನ್ಯ. ಶೇರ್‌ ಮಾಡಿಕೊಳ್ಳುವ ಮ್ಯಾಟ್‌, ಯಂತ್ರಗಳ ಹಿಡಿಕೆಗಳು, ಲಾಕರ್‌ ರೂಮ್‌ ಮತ್ತು ಶವರ್‌ ಪ್ರದೇಶಗಳು ಹೆಚ್ಚಿನ ಅಪಾಯದ ಸ್ಥಳಗಳು.

ವರ್ಕೌಟ್‌ ಮುನ್ನ ಮತ್ತು ನಂತರ ಏನು ಮಾಡಬೇಕು?

ಜಿಮ್‌ನಲ್ಲಿ ಉಪಕರಣ ಬಳಸುವ ಮುನ್ನ ಅದರ ಹಿಡಿಕೆಗಳನ್ನು ಸ್ಯಾನಿಟೈಸಿಂಗ್‌ ವೈಪ್‌ನಿಂದ ಒರೆಸುವುದು ಒಳ್ಳೆಯ ಅಭ್ಯಾಸ. ಟ್ರೆಡ್‌ಮಿಲ್‌, ಸ್ಟೇಷನರಿ ಬೈಕ್‌, ಕ್ರಾಸ್‌ ಟ್ರೈನರ್‌ ಮುಂತಾದ ಯಂತ್ರಗಳ ಮೇಲೆ ಅನೇಕರು ಸ್ಪರ್ಶ ಮಾಡಿರುವುದರಿಂದ ಸ್ವಚ್ಛತೆ ಅತ್ಯಗತ್ಯ. ತೂಕದ ಡಂಬೆಲ್‌ಗಳು, ಕೆಟಲ್‌ಬೆಲ್‌ಗಳು ಮುಂತಾದವುಗಳನ್ನು ಬಳಸಿದ ಬಳಿಕ ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಬೇಕು.

ನಿಮ್ಮದೇ ಟವೆಲ್‌ – ಅತ್ಯಂತ ಮುಖ್ಯ!

ಜಿಮ್‌ನಲ್ಲಿ ಬೆವರು ಬರುವುದು ಸಾಮಾನ್ಯ… ಆದರೆ ಅದನ್ನು ಕೈಯಲ್ಲಿ, ಟೀ-ಶರ್ಟ್‌ನಲ್ಲಿ ಅಥವಾ ಉಪಕರಣಗಳ ಮೇಲೆ ಒರೆಸಿಕೊಳ್ಳುವುದು ತಪ್ಪು. ನಿಮ್ಮದೇ ಪ್ರತ್ಯೇಕ ಟವೆಲ್‌ ತೆಗೆದುಕೊಂಡು ಹೋಗಿ, ಅದನ್ನು ಬೇರೆ ಯಾರೂ ಬಳಸದಂತೆ ನೋಡಿಕೊಳ್ಳಿ. ಉಪಕರಣ ಬಳಸುವ ಮುನ್ನ ಮತ್ತು ನಂತರ ಟವೆಲ್‌ನಿಂದ ಒರೆಸಿಕೊಳ್ಳುವುದರಿಂದ ನಿಮ್ಮ ಬೆವರು ಇತರರಿಗೆ ತಗುಲುವುದನ್ನು ಮತ್ತು ಇತರರ ಬೆವರು ನಿಮಗೆ ತಗುಲುವುದನ್ನು ಕಡಿಮೆ ಮಾಡಬಹುದು.

ಜಿಮ್‌ನ ಶವರ್‌, ಸೌನಾ ಅಥವಾ ಸ್ಟೀಮ್‌ ರೂಮ್‌ ಬಳಸುವವರು ಹೆಚ್ಚುವರಿ ಎಚ್ಚರಿಕೆ ವಹಿಸಬೇಕು. ಸಾಧ್ಯವಾದರೆ ನಿಮ್ಮದೇ ಸ್ಲಿಪರ್‌, ಸಾಬೂನು, ಟವೆಲ್‌ ಬಳಸಿ. ಶೇರ್‌ ಮಾಡಿಕೊಳ್ಳುವ ವಸ್ತುಗಳು ಸೋಂಕಿನ ಪ್ರಮುಖ ಮೂಲವಾಗಬಹುದು.

ಗಾಯಗಳಿದ್ದರೆ ನಿರ್ಲಕ್ಷ್ಯ ಬೇಡ

ದೇಹದಲ್ಲಿ ತೆರೆದ ಗಾಯಗಳಿದ್ದರೆ, ಚರ್ಮ ಬಿರುಕು ಬಿಟ್ಟಿದ್ದರೆ ಅಥವಾ ಹಿಮ್ಮಡಿ ಒಡೆದಿದ್ದರೆ ಜಿಮ್‌ಗೆ ಹೋಗುವಾಗ ವಿಶೇಷ ಜಾಗ್ರತೆ ಅಗತ್ಯ. ತೆರೆದ ಗಾಯಗಳು ಜೀವಾಣುಗಳಿಗೆ ಸುಲಭ ಪ್ರವೇಶ ದ್ವಾರವಾಗುತ್ತವೆ. ಗಾಯದ ಮೇಲೆ ಬ್ಯಾಂಡೇಜ್‌ ಹಾಕಿ ಹೋಗುವುದು ಒಳಿತು. ಜಿಮ್‌ನಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಿ. ಸದಾ ಶೂ ಅಥವಾ ಚಪ್ಪಲಿ ಧರಿಸಬೇಕು.

ಮನೆಗೆ ಬಂದ ನಂತರವೂ ಜಾಗ್ರತೆ

ಬಹಳಷ್ಟು ಮಂದಿ ಜಿಮ್‌ನಿಂದ ಬಂದು ಸುಸ್ತಾಗಿ ನೇರವಾಗಿ ಮಲಗುತ್ತಾರೆ. ಇದು ದೊಡ್ಡ ತಪ್ಪು. ವರ್ಕೌಟ್‌ ನಂತರ ತಕ್ಷಣ ಸ್ನಾನ ಮಾಡುವುದು ಮುಖ್ಯ. ಬೆವರು ಒಣಗಿದರೆ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಜಿಮ್‌ನಲ್ಲಿ ಧರಿಸಿದ ಬಟ್ಟೆಗಳನ್ನು ಬೇರೆ ಬಟ್ಟೆಗಳಿಂದ ಪ್ರತ್ಯೇಕವಾಗಿ ತೊಳೆಯಬೇಕು. ಜಿಮ್‌ ಬ್ಯಾಗ್‌, ಗ್ಲೋವ್ಸ್‌, ನೀರಿನ ಬಾಟಲಿ ಇತ್ಯಾದಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

ಶುಚಿತ್ವವೇ ರಕ್ಷಣಾ ಕವಚ

ಜಿಮ್‌ನಲ್ಲಿ ಆರೋಗ್ಯ ಹೆಚ್ಚಿಸಿಕೊಳ್ಳಲು ಹೋಗಿ, ಸೋಂಕು ಬರುವಂತಾಗಬಾರದು. ವೈಯಕ್ತಿಕ ಶುಚಿತ್ವ, ಉಪಕರಣಗಳ ಸ್ವಚ್ಛತೆ ಮತ್ತು ಸರಿಯಾದ ಅಭ್ಯಾಸಗಳನ್ನು ಪಾಲಿಸಿದರೆ ಬಹುತೇಕ ಸೋಂಕುಗಳನ್ನು ತಪ್ಪಿಸಬಹುದು. ವರ್ಕೌಟ್‌ ಎಷ್ಟು ಮುಖ್ಯವೋ, ಅದರ ನಂತರದ ಹೈಜೀನ್‌ ಅಷ್ಟೇ ಮುಖ್ಯ.

ಆರೋಗ್ಯಕರ ದೇಹಕ್ಕಾಗಿ ಬೆವರು ಸುರಿಸುವುದು ಒಳ್ಳೆಯದು. ಆದರೆ ಸ್ವಚ್ಛತೆ ಕಡೆಗಣಿಸಿದರೆ ಅದೇ ಬೆವರು ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಜಿಮ್‌ನಿಂದ ಬಂದು ನೇರವಾಗಿ ಮಲಗುವ ಅಭ್ಯಾಸ ಬಿಟ್ಟು, ಸರಿಯಾದ ಆರೈಕೆ ಕ್ರಮಗಳನ್ನು ಅನುಸರಿಸಿ…

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 06 19T135619.133

NEET ಪರೀಕ್ಷೆಗೆ ಟೆಲಿಗ್ರಾಂ ಬ್ಯಾನ್: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by ದಿಶಾ ಕೆ. ಎಸ್.
June 19, 2026 - 1:59 pm
0

Untitled design (54)

ಗಗನಕ್ಕೇರಿದ್ದ ಚಿನ್ನಕ್ಕೆ ಬ್ರೇಕ್: ಆಭರಣ ಪ್ರಿಯರಿಗೆ ಬಿಗ್ ರಿಲೀಫ್!

by ಕವಿತಾ
June 19, 2026 - 1:24 pm
0

Untitled design 2026 06 19T131753.127

ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

by ದಿಶಾ ಕೆ. ಎಸ್.
June 19, 2026 - 1:19 pm
0

Untitled design (53)

NEET-UG ಮರು ಪರೀಕ್ಷೆ: ಟೆಲಿಗ್ರಾಮ್ ನಿಷೇಧಕ್ಕೆ ಹೈಕೋರ್ಟ್ ಒಪ್ಪಿಗೆ

by ಕವಿತಾ
June 19, 2026 - 12:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 18T120202.243
    ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿ: ಕೈಗೆಟುಕುವ ದರದ ಅತ್ಯಾಧುನಿಕ ಚಿಕಿತ್ಸೆಗೆ ಫುಲ್‌ ಫಿದಾ!
    June 18, 2026 | 0
  • Untitled design 2026 06 09T140123.600
    ಐಫೋನ್ ಬಳಕೆದಾರರಿಗೆ ಮಕ್ಕಳೇ ಆಗಲ್ವಾ..? ಏನಿದು ವರದಿ..?
    June 9, 2026 | 0
  • BeFunky collage (3)
    ಹೇರ್ ಡೈ ಬಳಸುವುದರಿಂದ ಕ್ಯಾನ್ಸರ್ ಬರುತ್ತಾ? ವೈಜ್ಞಾನಿಕ ಸತ್ಯ ಏನು?
    June 5, 2026 | 0
  • Untitled design 2026 06 04T174108.541
    ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ ‘ವೇರಿಪಲ್ಸ್ ಪ್ಲಾಟ್‌ಫಾರ್ಮ್’
    June 4, 2026 | 0
  • BeFunky collage (37)
    ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ತೂಕ ಹೇಗೆ ಇಳಿಯುತ್ತದೆ? ಪೂರ್ಣ ವಿವರ
    June 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version