• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ಕಾನ್ಫಿಡೆಂಟ್ ಗ್ರೂಪ್‌ ಒಡೆಯ.. ಕಳ್ಕೊಂಡೇಬಿಟ್ರು ಕಾನ್ಫಿಡೆನ್ಸ್

ಮೋಹನ್‌‌ಲಾಲ್, ಸುದೀಪ್, ಯಶ್‌ಗೆ ಆತ್ಮೀಯ ರಾಯ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 31, 2026 - 3:51 pm
in ಕಿರುತೆರೆ, ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2026 01 31T153901.129

ಆಗರ್ಭ ಶ್ರೀಮಂತ, ಉದ್ಯಮಿ ಸಿಜೆ ರಾಯ್‌‌ ತನ್ನ ಕೋಟಿ ರೂಪಾಯಿ ಗನ್‌ನಿಂದ ಶೂಟ್ ಮಾಡ್ಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಸುದ್ದಿ ಸದ್ಯ ಟಾಕ್ ಆಫ್ ದಿ ವರ್ಲ್ಡ್‌ ಆಗಿದೆ. ಗ್ಲಾಮರ್ ಲೋಕಕ್ಕೂ ರಾಯ್‌ಗೂ ಅವಿನಾಭಾವ ಸಂಬಂಧ ಇದೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಸಿನಿಮಾ, ರಿಯಾಲಿಟಿ ಶೋಗಳಿಗೂ ಹಣ ಇನ್ವೆಸ್ಟ್ ಮಾಡಿದ್ದ ರಾಯ್ ಮೋಜು, ಮಸ್ತಿ ಸಖತ್ ಜೋರಿತ್ತು. ತನ್ನದೇ ಅನೋಮಿ-ದಿ ಈಕ್ವೇಷನ್ ಆಫ್ ಡೆತ್ ಸಿನಿಮಾದ ರಿಲೀಸ್‌ಗೂ ಮೊದ್ಲೇ ಜೀವ ಚೆಲ್ಲಿದ್ದಾರೆ ಪ್ರೊಡ್ಯೂಸರ್ ರಾಯ್ .

RelatedPosts

‘ದಿ ವಿಲನ್’ ಕಾಂಬೋ ಈಸ್ ಬ್ಯಾಕ್..ಪ್ರೇಮ್ ಡೈರೆಕ್ಟ್ಸ್ ಕಿಚ್ಚ ಸುದೀಪ್

ಕೊಹ್ಲಿ-ಅನುಷ್ಕಾ ಬಗ್ಗೆ ಸ್ಫೋಟಕ ಹೇಳಿಕೆ; ಸೀಕ್ರೆಟ್ ಬಿಚ್ಚಿಟ್ಟ ಮಾಧುರಿ ದೀಕ್ಷಿತ್ ಪತಿ!

ಪವನ್ ಕಲ್ಯಾಣ್ ಆಸ್ತಿ ಎಷ್ಟು? ಐಷಾರಾಮಿ ಕಾರುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ರಾಮಾಯಣ ಬಳಿಕ ಯಶ್ ಯಾರ ಜೊತೆ ಸಿನಿಮಾ? ಆದಿತ್ಯ ಧಾರ್ ಪೋಸ್ಟ್‌ನಿಂದ ಹೆಚ್ಚಿದ ಕುತೂಹಲ!

ADVERTISEMENT
ADVERTISEMENT

ಕಾನ್ಫಿಡೆಂಟ್ ಗ್ರೂಪ್‌ ಒಡೆಯ.. ಕಳ್ಕೊಂಡೇಬಿಟ್ರು ಕಾನ್ಫಿಡೆನ್ಸ್

ಸಿನಿಮೋತ್ಸಾಹಿ, ಜೀವನೋತ್ಸಾಹಿ ರಾಯ್ ಸೂಸೈಡ್ ಮಿಸ್ಟರಿ

ಹಲ್ಲಿದ್ದವ್ರಿಗೆ ಕಡಲೆ ಇರಲ್ಲ.. ಕಡಲೆ ಇದ್ದವ್ರಿಗೆ ಹಲ್ಲೇ ಇರಲ್ಲ ಅನ್ನೋ ಮಾತಿದೆ. ಅದ್ರಂತೆ ಬಡವನಿಗೆ ಶ್ರೀಮಂತನಾಗೋ ಆಸೆ. ಶ್ರೀಮಂತನಿಗೆ ನೆಮ್ಮದಿ ಬೇಕು ಅನ್ನೋ ತುಡಿತ. ಸದ್ಯ ಸಾವಿರಾರು ಕೋಟಿಗಳ ಒಡೆಯ, ಆಗರ್ಭ ಶ್ರೀಮಂತ, ಹತ್ತಾರು ಐಷಾರಾಮಿ ರೋಲ್ಸ್ ರಾಯ್ಸ್, ಬುಗಟ್ಟಿ ಕಾರ್‌ಗಳ ಮಾಲೀಕ, ಪ್ರತಿಷ್ಠಿತ ಕಾನ್ಫಿಡೆಂಟ್ ಗ್ರೂಪ್‌‌ನ ಸಿಇಓ ಸಿಜೆ ರಾಯ್ ತಮ್ಮ ಲೈಫ್‌‌ನಲ್ಲಿ ಕಾನ್ಫಿಡೆನ್ಸ್ ಕಳ್ಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಪಾರ ಜೀವನೋತ್ಸಾಹಿ ಆಗಿದ್ದ ರಾಯ್, ರಾಯಲ್ ಲೈಫ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ರು. ಆದ್ರೀಗ ಐಟಿ ಅಧಿಕಾರಿಗಳ ದಾಳಿ ಬೆನ್ನಲ್ಲೇ ಹೀಗೆ ತನ್ನ ಬಳಿ ಇದ್ದ ಒಂದು ಕೋಟಿ ರೂಪಾಯಿ ಗನ್‌‌ನಿಂದ ತನಗೆ ತಾನೇ ಶೂಟ್ ಮಾಡಿಕೊಂಡು ಜೀವ ಬಿಟ್ಟಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗ್ತಿದೆ. ಅದೇ ಫಿಲ್ಮ್ ಪ್ರೋಗ್ರಾಮ್‌ನಲ್ಲಿ ರಾಯ್ ಬಗ್ಗೆ ಏನು ಹೇಳೋಕೆ ಹೊರಟಿದ್ದಾರೆ ಅಂತ ಕನ್ಫ್ಯೂಸ್ ಆಗ್ಬೇಡಿ. ಯಾಕಂದ್ರೆ ಸಿಜೆ ರಾಯ್ ಕಲಾ ಪೋಷಕರೂ ಹೌದು. ಅಂದ್ರೆ ಸಿನಿಮಾಗಳನ್ನ ನಿರ್ಮಾಣ ಮಾಡೋ ಮೂಲಕ ಅನ್ನದಾತನಾಗಿಯೂ ಗುರ್ತಿಸಿಕೊಂಡಿದ್ದಾರೆ.

ಮೋಹನ್‌‌ಲಾಲ್, ಸುದೀಪ್, ಯಶ್‌ಗೆ ಆತ್ಮೀಯ ರಾಯ್

ಐಡೆಂಟಿಟಿ, ಮರಕ್ಕಾರ್, ಅನೋಮಿ ಚಿತ್ರಗಳ ಪ್ರೊಡ್ಯೂಸರ್..!

ಯೆಸ್.. ಸಿ. ಜೆ. ರಾಯ್ ಬರೀ ಉದ್ಯಮಿ ಅಷ್ಟೇ ಅಲ್ಲ, ಬಹುದೊಡ್ಡ ಸಿನಿಮೋತ್ಸಾಹಿ ಆಗಿದ್ರು. ಅದೇ ಕಾರಣದಿಂದ ಚಿತ್ರರಂಗದ ಬಹುತೇಕ ಸೂಪರ್ ಸ್ಟಾರ್ಸ್‌ ಜೊತೆ ಉತ್ತಮ ಒಡನಾಟ, ಬಾಂಧವ್ಯ ಹೊಂದಿದ್ದಾರೆ. ಅದ್ರಲ್ಲೂ ಮಲಯಾಳಂನ ಮೋಹನ್‌ಲಾಲ್, ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾದ್‌ಷಾ ಕಿಚ್ಚ ಸುದೀಪ್‌‌ರಿಗೆ ರಾಯ್‌ ಅತ್ಯಾಪ್ತರಾಗಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ 2012ರಲ್ಲೇ ಮೋಹನ್‌ಲಾಲ್‌ಗೆ 12 ಕೋಟಿ ರೂಪಾಯಿ ಬಂಡವಾಳ ಹಾಕಿ ಕ್ಯಾಸನೋವಾ ಸಿನಿಮಾನ ಪ್ರೊಡ್ಯೂಸ್ ಮಾಡಿದ್ರು ರಾಯ್. ಅದಾದ ಬಳಿಕ ಇತ್ತೀಚೆಗೆ ಮರಕ್ಕಾರ್ ಸಿನಿಮಾನ ಒನ್ಸ್ ಅಗೈನ್ ಲಾಲೆಟ್ಟನ್‌ಗೆ ನಿರ್ಮಿಸಿದ್ರು.

 

ಫೆ-6ಕ್ಕೆ ಈಕ್ವೇಷನ್ ಆಫ್ ಡೆತ್..

               ರಿಲೀಸ್‌ಗೂ ಮೊದ್ಲೇ ಜೀವ ಚೆಲ್ಲಿದ ಪ್ರೊಡ್ಯೂಸರ್

ತಮಿಳಿನ ಐಡೆಂಟಿಟಿ, ಮಲಯಾಳಂನ ಮೈ ಹೂಮ್ ಮೂಸಾ ಚಿತ್ರಗಳ ನಿರ್ಮಾಪಕರು ಕೂಡ ಸಿಜೆ ರಾಯ್. ಅಲ್ಲದೆ, ಸದ್ಯ ಇದೇ ಫೆಬ್ರವರಿ 6ಕ್ಕೆ ತೆರೆಗೆ ಬರ್ತಿರೋ ಅನೋಮಿ- ದಿ ಈಕ್ವೇಷನ್ ಆಫ್ ಡೆತ್ ಸಿನಿಮಾಗೂ ರಾಯ್ ಹೂಡಿಕೆ ಮಾಡಿದ್ರು. ಭಾವನಾ ಮೆನನ್ ಲೀಡ್‌‌ನಲ್ಲಿ ನಟಿಸಿರೋ ಈ ಸಿನಿಮಾ, ಡೆತ್ ಕುರಿತ ಮಿಸ್ಟರಿ ಥ್ರಿಲ್ಲರ್ ಆಗಿದ್ದು, ಅದು ತೆರೆಗಪ್ಪಳಿಸೋಕೆ ಮೊದಲೇ ತಾವೇ ಜೀವ ಚೆಲ್ಲಿರೋ ರಾಯ್ ನಡೆ ನಿಜಕ್ಕೂ ನಿಗೂಢ.

ರಿಯಾಲಿಟಿ ಶೋ ಟ್ಯಾಲೆಂಟ್ಸ್‌ ಕೈಹಿಡಿಯುತ್ತಿದ್ದ CJ ರಾಯ್

ಬಿಗ್‌ಬಾಸ್ ವಿನ್ನರ್‌‌ಗೆ ಫ್ಲ್ಯಾಟ್ ಕೊಟ್ಟಿದ್ದ ರಾಯಲ್ ಮ್ಯಾನ್

ಯೆಸ್.. ಸಿಜೆ ರಾಯ್ ಬರೀ ಸಿನಿಮಾಗಳಿಗಷ್ಟೇ ಸೀಮಿತ ಆಗಿರಲಿಲ್ಲ. ರಿಯಾಲಿಟಿ ಶೋಗಳಿಗೆ ಸ್ಪಾನ್ಸರರ್ ಆಗಿದ್ರು. ಆ ಮೂಲಕ ಅದೆಷ್ಟೋ ಮಂದಿ ರಿಯಲ್ ಟ್ಯಾಲೆಂಟ್ಸ್‌ ಬಾಳಿಗೆ ಬೆಳಕಾಗಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ದೊಡ್ಡ ಮಟ್ಟಕ್ಕೆ ಸುದ್ದಿಯಾಗೋಕೆ ಕಾರಣ ಆಗಿದ್ದೇ ರಿಯಾಲಿಟಿ ಶೋಗಳು. ಅದ್ರಲ್ಲೂ ಕನ್ನಡದ ಬಿಗ್‌ಬಾಸ್ ಶೋ ವಿನ್ನರ್ ಹನುಮಂತುಗೆ ಫ್ಲ್ಯಾಟ್ ಕೊಡೋದಾಗಿ ಹೇಳಿದ್ದ ರಾಯ್, ನುಡಿದಂತೆ ನಡೆದರು. ಆದ್ರೆ ಬೆಂಗಳೂರಲ್ಲಿ ವಾಸಿಸೋಕೆ ಇಚ್ಚಿಸದ ಹನುಮಂತು, ಅದರ ಬದಲಿಗೆ 35 ಲಕ್ಷ ರೂಪಾಯಿ ಹಣವನ್ನ ರಾಯ್‌ ಮೂಲಕ ಪಡೆದಿದ್ರು.

ಹಣ ಇದ್ದವ್ರೇ ಹಿಂಗ್ ಮಾಡ್ಕೊಂಡ್ರೆ ಏನ್ ಮಾಡೋದ್ರಿ’..?!

ಸಿ. ಜೆ. ರಾಯ್ ಅಗಲಿಕೆಗೆ ಮಿಡಿದ ಕುರಿಗಾಹಿ ಹನುಮಂತು

ಬಿಗ್‌‌ಬಾಸ್ ಸೀಸನ್-12ರ ವಿನ್ನರ್ ಹನುಮಂತ ಲಮಾಣಿ ಮಾತಾಡ್ತಾ, ಸಿಜೆ ರಾಯ್ ಅವರ ಸಾವಿನ ಸುದ್ದಿ ಕೇಳಿ ಬಹಳ ದುಃಖವಾಯ್ತು. ನನ್ನ ಬಹಳ ಪ್ರೀತಿ ಮಾಡ್ತಿದ್ರು. ಐದು ಕುರಿ ಬೇಕು ಅಂತಲೂ ಕೇಳಿದ್ರು. ಊರಲ್ಲಿ ಮನೆ ಕಟ್ಟಿ, ನನ್ನ ಕರಿ.. ನಾ ಬರ್ತೀನಿ ಅಂದಿದ್ರು. ಹಣ ಇದ್ದವ್ರೇ ಹಿಂಗ್ ಮಾಡಿಕೊಂಡ್ರೆ ಏನ್ ಮಾಡೋದ್ರಿ..? ಅಂತ ಜವಾರಿ ಹುಡ್ಗ ಹನುಮ ರಾಯ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಅಷ್ಟೇ ಅಲ್ಲ, ಸಿಜೆ ರಾಯ್ ಅವ್ರ ರೆಸಾರ್ಟ್‌‌ನಲ್ಲಿ ತಂಗಿದ್ದ ಹನುಮನನ್ನ ಬಹಳ ಚೆನ್ನಾಗಿ ನೋಡಿಕೊಂಡು, ಒಳ್ಳೆಯ ಆತಿಥ್ಯ ನೀಡಿದ್ರಂತೆ. ಹನುಮನ ಬಾಳಲ್ಲಿ ಬಹುಮುಖ್ಯ ವ್ಯಕ್ತಿಯಾಗಿರೋ ರಾಯ್‌, ಅಷ್ಟು ರಾಯಲ್ ಆಗಿ ಬದುಕಿ ಹೀಗೆ ಜೀವ ಚೆಲ್ಲಿದರ ವಿಚಾರ ಹನುಮಂತನೇ ಬೇಸರಗೊಂಡಿದ್ದಾನೆ.

ರೆಸಾರ್ಟ್‌‌ನಲ್ಲಿ ನಟಿ ಜೊತೆ CJR ರಾಯಲ್ ಮೋಜು, ಮಸ್ತಿ..!

7 ವರ್ಷಗಳ ಹಿಂದೆ.. ದೊಡ್ಡಬಳ್ಳಾಪುರದಲ್ಲಿ ನಟಿ ಜೊತೆ ವಿವಾದ

ಹಣ ಇದ್ದವ್ರ ಲೈಫ್ ಸಿಂಪಲ್ ಆಗಿ ಇರೋಕೆ ಸಾಧ್ಯವೇ ಇಲ್ಲ. ಸಿಕ್ಕಾಪಟ್ಟೆ ಐಷಾರಾಮಿ ಜೀವನ ನಡೆಸ್ತಿದ್ದ ಸಿ. ಜೆ. ರಾಯ್ ಮೋಜು ಮಸ್ತಿಗೂ ಕಮ್ಮಿ ಇರಲಿಲ್ಲ. ಈ ಹಿಂದೆ ಒಮ್ಮೆ ದೊಡ್ಡಬಳ್ಳಾಪುರದ ಬಳಿ ಇರೋ ರೆಸಾರ್ಟ್‌‌‌ಗೆ ನಟಿಯೊಬ್ಬರನ್ನ ಕರೆಸಿಕೊಂಡಿದ್ದರು. ಆ ನ್ಯೂಸ್ ಹೊರಗೆ ಲೀಕ್ ಆಗಿ, ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಆರೇಳು ವರ್ಷಗಳ ಹಿಂದೆ ಆಂಧ್ರದ ತೆಲುಗು ಇಂಡಸ್ಟ್ರಿ ನಟಿಯನ್ನ ರೆಸಾರ್ಟ್‌ಗೆ ಕರೆಸಿಕೊಂಡಿದ್ರು ಎನ್ನಲಾಗಿತ್ತು. ಸದ್ಯ ಈ ಬಗ್ಗೆ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಕೂಡ ಬಹಿರಂಗವಾಗಿ ವಿಡಿಯೋವೊಂದರಲ್ಲಿ ಮಾತನಾಡಿದ್ದಾರೆ.

ಒಟ್ಟಾರೆ.. ಸಿ ಜೆ ರಾಯ್ ಅವರ ಈ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನಗಳ ಹುತ್ತವೇ ಬೆಳೆದು ನಿಂತಿದೆ. ಕೆಲವರು ಇದೊಂದು ಇಂಟರ್ ನ್ಯಾಷನಲ್ ಮನಿ ಮಾಫಿಯಾ ಅಂತಿದ್ದಾರೆ. ಆದ್ರೆ ತನಿಖೆ ಚುರುಕಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಲಿದೆ. ಕಾಫಿ ಡೇ ಸಿದ್ದಾರ್ಥ್, ಡಿ ಕೆ ರವಿ ಸೇರಿದಂತೆ ಸಾಕಷ್ಟು ದೊಡ್ಡವ್ರ ಸಾವುಗಳು ಈ ಹಿಂದೆ ಸುದ್ದಿಯಾಗಿದ್ದವು. ಇದೀಗ ಅವುಗಳ ಸಾಲಿಗೆ ಸಿಜೆ ರಾಯ್‌ ಡೆತ್ ಮಿಸ್ಟರಿ ಕೂಡ ಸೇರಿಕೊಳ್ತಿದೆ.

ಸಿಜೆ ರಾಯ್‌ಗೆ ಆಪ್ತರಾಗಿದ್ದ ಉದ್ಯಮಿಗಳು, ಚಿತ್ರರಂಗದ ಸ್ಟಾರ್‌ಗಳು, ರಾಜಕಾರಣಿಗಳೆಲ್ಲಾ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದು, ಈ ದುಃಖವನ್ನು ಭರಿಸೋ ಶಕ್ತಿ ದೇವರು ಅವ್ರ ಕುಟುಂಬಕ್ಕೆ ಕರುಣಿಸಲಿ. ಸಾವಿಗೆ ನ್ಯಾಯ ಸಿಗಲಿ ಅನ್ನೋದಷ್ಟೇ ನಮ್ಮ ಆಶಯ.

 

 

 

 

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

‘ದಿ ವಿಲನ್’ ಕಾಂಬೋ ಈಸ್ ಬ್ಯಾಕ್.. ಪ್ರೇಮ್ ಡೈರೆಕ್ಟ್ಸ್ ಕಿಚ್ಚ ಸುದೀಪ್

‘ದಿ ವಿಲನ್’ ಕಾಂಬೋ ಈಸ್ ಬ್ಯಾಕ್..ಪ್ರೇಮ್ ಡೈರೆಕ್ಟ್ಸ್ ಕಿಚ್ಚ ಸುದೀಪ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 2, 2026 - 5:34 pm
0

Untitled design 2026 09 02T161754.975

ಕೊಹ್ಲಿ-ಅನುಷ್ಕಾ ಬಗ್ಗೆ ಸ್ಫೋಟಕ ಹೇಳಿಕೆ; ಸೀಕ್ರೆಟ್ ಬಿಚ್ಚಿಟ್ಟ ಮಾಧುರಿ ದೀಕ್ಷಿತ್ ಪತಿ!

by ಶಾಲಿನಿ ಕೆ. ಡಿ
September 2, 2026 - 5:16 pm
0

ತರಗತಿ ನಡೆಯುವಾಗಲೇ ಶಾಲೆಯ ಮೇಲ್ಛಾವಣಿ ಕುಸಿತ ತಪ್ಪಿದ ಭಾರೀ ಅನಾಹುತ

ತರಗತಿ ನಡೆಯುವಾಗಲೇ ಶಾಲೆಯ ಮೇಲ್ಛಾವಣಿ ಕುಸಿತ: ತಪ್ಪಿದ ಭಾರೀ ಅನಾಹುತ

by ಶಾಲಿನಿ ಕೆ. ಡಿ
September 2, 2026 - 5:14 pm
0

Untitled design 2026 09 02T164232.331

ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಿದ್ರು?: ಹೆಚ್‌ಡಿಕೆ

by ಶಾಲಿನಿ ಕೆ. ಡಿ
September 2, 2026 - 4:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪಶ್ಚಾತ್ತಾಪ (1)
    ‘Z’ ಮತ್ತು Google Search’s ನಿಂದ ಹೊಸ ಹೆಜ್ಜೆ; Zee TV ಮೂಲಕ ಧಾರಾವಾಹಿಗಳ ಕಥಾಲೋಕಕ್ಕೆ AI Mode ಪ್ರವೇಶ!
    August 31, 2026 | 0
  • ChatGPT Image Aug 29, 2026, 11 18 00 AM
    ನಂದಗೋಕುಲ’ಕ್ಕೆ ಕೇಶವ ಗುಡ್‌ಬೈ; ಯಶ್ವಂತ್ ಕುಮಾರ್ ಸೀರಿಯಲ್ ತೊರೆದಿದ್ದೇಕೆ?
    August 29, 2026 | 0
  • Untitled design (98)
    ಆ. 22, 23ರಂದು ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆ: ಯಾರ ಮುಡಿಗೆ ಚಾಂಪಿಯನ್ ಕಿರೀಟ?
    August 21, 2026 | 0
  • Untitled design (22)
    ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ
    July 10, 2026 | 0
  • 12
    ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸ ರಿ ಗ ಮ ಪ’ ಆಡಿಷನ್ಸ್
    June 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version