ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಯಾವಾಗ ಹೊರಗೆ ಬರ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿತ್ತು. ಆದ್ರೀಗ ಸಮಸ್ತ ದರ್ಶನ್ ಫ್ಯಾನ್ಸ್, ಕುಟುಂಬ ಹಾಗೂ ಚಿತ್ರರಂಗಕ್ಕೆ ಬಿಗ್ ಬ್ರೇಕಿಂಗ್ ನ್ಯೂಸ್ ಸಿಗ್ತಿದೆ. ಯೆಸ್.. ದಾಸ ಜೈಲಿಂದ ಹೊರ ಬರೋದು ಪಕ್ಕಾ ಎನ್ನಲಾಗ್ತಿದೆ. ಅದೂ ಒಬ್ಬ ಪ್ರಭಾವಿ ಮಿನಿಸ್ಟರ್ ಮಗನೇ ಇಂಥದ್ದೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಚಾಲೆಂಜ್‌ಗಳಿಗೆ ಚಾಲೆಂಜ್ ಮಾಡ್ತಾ, ಕಷ್ಟ ಪಟ್ಟು ಬೆವರು ಸುರಿಸಿ ದುಡಿದು, ಝೀರೋದಿಂದ ಹೀರೋ ಆಗಿ, ಚಿತ್ರರಂಗದಲ್ಲಿ ಗಾಡ್‌ಫಾದರ್ ಅಂತ ಯಾರೂ ಇಲ್ಲ ಅಂದ್ರೂ ತನ್ನ ಖದರ್ ಹಾಗೂ ನಟನಾ ಗಮ್ಮತ್ತಿನಿಂದ ಬಹುದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡವರು ಚಾಲೆಂಜಿಂಗ್ ಸ್ಟಾರ್ ದರ್ಶನ್. 55ಕ್ಕೂ ಅಧಿಕ ಸಿನಿಮಾಗಳನ್ನ ಮಾಡಿರೋ ಡಿಬಾಸ್ ದರ್ಶನ್, ನಟನಾಗಿ ಅಷ್ಟೇ ಅಲ್ಲದೆ, ನಿರ್ಮಾಪಕ, ವಿತರಕರಾಗಿಯೂ ಚಿತ್ರರಂಗಕ್ಕೆ ಆಸರೆ ಆಗಿದ್ರು. ಆದ್ರೀಗ ಕೊಲೆ ಪ್ರಕರಣವೊಂದರಲ್ಲಿ ಸದ್ಯ ಪರಪ್ಪನ ಅಗ್ರಹಾರ ಸೇರಿರೋ ದಾಸ, ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಗುಡ್ ನ್ಯೂಸ್ ಗುಡ್ ನ್ಯೂಸ್.. ಡಿಬಾಸ್ ಹೊರ ಬರೋದು ಫಿಕ್ಸ್
ಇದು ಪ್ರಭಾವಿ ಮಿನಿಸ್ಟರ್ ಮಗನೇ ಹೇಳ್ತಿರೋ 100% ಪಕ್ಕಾ ನ್ಯೂಸ್

ನಟ ದರ್ಶನ್ ನಿಜಕ್ಕೂ ರೇಣುಕಾಸ್ವಾಮಿ ಹತ್ಯೆಯನ್ನ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ. ಅವರ ಮೇಲೆ ಆರೋಪವಿದೆಯಷ್ಟೇ. ಆದ್ರೆ ಅವರ ಅನುಪಸ್ಥಿತಿಯಂತೂ ಚಿತ್ರರಂಗಕ್ಕೆ ಬಹುದೊಡ್ಡ ಲಾಸ್ ಆಗಿ ಪರಿಣಮಿಸಿದೆ. ಕುಟುಂಬಸ್ಥರು ಕಣ್ಣೀರ ಕೋಡಿ ಹರಿಸಿದ್ದಾರೆ. ಅಸಂಖ್ಯಾತ ಅಭಿಮಾನಿ ಬಳಗ ತಮ್ಮ ನೆಚ್ಚಿನ ನಾಯಕನಟ ಹೊರಗೆ ಬರೋದನ್ನೇ ಚಾತಕ ಪಕ್ಷಿಯಂತೆ ಕಾಯ್ತಾ ಕೂತಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 5 ತಿಂಗಳಾಯ್ತು. ಇನ್ನೂ ಬೇಲ್ ಸಿಕ್ಕಿಲ್ಲ. ಸಿಕ್ಕಿದ್ದ ಬೇಲ್ ಕ್ಯಾನ್ಸಲ್ ಆಗಿಯೇ ಆಗಸ್ಟ್ 14, 2025ರಂದು ಸರೆಂಡರ್ ಆಗಿದ್ದರು ದರ್ಶನ್.
ಐದು ತಿಂಗಳಿಂದ ಜೈಲಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್
ಗ್ಯಾರಂಟಿ ನ್ಯೂಸ್‌ನಲ್ಲಿ ದಚ್ಚು ಜೈಲು ಭವಿಷ್ಯದ ಖಚಿತ ಮಾಹಿತಿ

ದಚ್ಚು ಇಲ್ಲದೇನೇ ಡೆವಿಲ್ ಸಿನಿಮಾ ರಿಲೀಸ್ ಆಯ್ತು. 50 ಕೋಟಿ ಬ್ಯುಸಿನೆಸ್ ಕೂಡ ಮಾಡಿತು. ಆದ್ರೆ ದಾಸ ಹೊರಗೆ ಬರೋದು ಯಾವಾಗ ಅನ್ನೋದು ಮಾತ್ರ ಬಿಲಿಯನ್ ಡಾಲರ್ ಪ್ರಶ್ನೆಯಾಗೇ ಉಳಿದಿತ್ತು. ಅದಕ್ಕೀಗ ಗ್ಯಾರಂಟಿ ನ್ಯೂಸ್ ಒಂದೊಳ್ಳೆ ಗುಡ್ ನ್ಯೂಸ್ ಹೊತ್ತು ಬಂದಿದೆ. ಡಿಬಾಸ್ ದರ್ಶನ್ ಜೈಲಿಂದ ಹೊರಗೆ ಬರೋದು ಕನ್ಫರ್ಮ್ ಅಂತೆ. ಇದನ್ನ ನಾವಾಗಿ ನಾವೇ ಹೇಳ್ತಿರೋದು ಅಲ್ಲ. ಒಬ್ಬ ಬಹು ದೊಡ್ಡ ಹಾಗೂ ಪ್ರಭಾವಿ ಮಿನಿಸ್ಟರ್ ಮಗನೇ ಕೊಟ್ಟಿರೋ ಸ್ಟೇಟ್‌ಮೆಂಟ್ ಆಗಿದೆ.
ಕಲ್ಟ್ ಚಿತ್ರದ ನಾಯಕನಟ ಝೈದ್ ಖಾನ್ ದರ್ಶನ್‌ರನ್ನ ಸ್ವಂತ ಅಣ್ಣನಂತೆ ಭಾವಿಸ್ತಾರೆ. ಇನ್ನೂ ಸಿಎಂ ಆಪ್ತರಾಗಿರೋ ಝೈದ್ ಖಾನ್ ತಂದೆ ಸಚಿವ ಜಮೀರ್ ಖಾನ್ ಕೂಡ ದಾಸನಿಗೆ ಎಷ್ಟು ಖಾಸಾ ಅನ್ನೋದು ಗೊತ್ತೇಯಿದೆ. ಇದೇ ತಿಂಗಳಲ್ಲಿ ದರ್ಶನ್‌ಗೆ ಬೇಲ್ ಸಿಕ್ಕಿ, ಹೊರಬರ್ತಾರೆ ಅಂತ ಮಿನಿಸ್ಟರ್ ಮಗನೇ ಹೇಳ್ತಿರೋದು ಖುಷಿಯ ವಿಚಾರ.

ಅಂದಹಾಗೆ ದರ್ಶನ್ ಈ ಹಿಂದೆ ಬ್ಯಾಕ್‌ಪೇನ್ ನೆಪವೊಡ್ಡಿ ಮೆಡಿಕಲ್ ಬೇಲ್ ಪಡೆದಿದ್ದರು. ನಂತ್ರ ರೆಗ್ಯುಲರ್ ಬೇಲ್ ಪಡೆದರು. ಆದ್ರೆ ಸುಪ್ರೀಂನಲ್ಲಿ ಆ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಒಳಗೆ ಹೋಗುವಂತಾಯ್ತು. ಆದ್ರೀಗ ಕೇಸ್ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ಸ್ ಪಡೆಯುತ್ತಿದೆ. ಝೈದ್ ಖಾನ್‌ಗೆ ಗೊತ್ತಿರೋ ನುರಿತ ವಕೀಲರ ತಂಡವೇ ನೀಡಿರೋ ಪಕ್ಕಾ ಮಾಹಿತಿ ಪ್ರಕಾರ, ಈ ಬಾರಿ ಪ್ರಾಪರ್ ಬೇಲ್ ಪಡೆದೇ ಹೊರಕ್ಕೆ ಬರಲಿದ್ದಾರಂತೆ ನಟ ದರ್ಶನ್.
ರೇಣುಕಾಸ್ವಾಮಿ ತಾಯಿ ಎಡವಟ್.. ವಕೀಲರು ಹೇಳಿದ್ದೇನು..?!
ಇಡೀ ಚಿತ್ರರಂಗ ಖುಷಿ ಪಡೋ.. ರಾಜ್ಯವೇ ನೋಡ್ಬೇಕಾದ ಸುದ್ದಿ
ಡಿಬಾಸ್ ದರ್ಶನ್ ಆರೋಪ ಎದುರಿಸುತ್ತಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್ ಸದ್ಯ ಕೋರ್ಟ್ ಟ್ರಯಲ್ಸ್ ಆರಂಭವಾಗಿದೆ. ಆದ್ರೀಗ ಸ್ವತಃ ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರೇ ಕೋರ್ಟ್‌ನಲ್ಲಿ ಉಲ್ಟಾ ಸ್ಟೇಟ್‌ಮೆಂಟ್ ನೀಡಿದ್ದಾರೆ. ಇದು ಕೇಸ್‌ಗೆ ವೆರಿ ವೆರಿ ಬಿಗ್ ಟ್ವಿಸ್ಟ್ ನೀಡ್ತಿದೆ. ಯೆಸ್.. ಮಗ ಹತ್ಯೆಯಾಗೋಕೆ ಮುನ್ನ ಕರೆ ಮಾಡಿದ್ದ, ನಾನು ಅವನ ನಂಬರ್‌ನ ನನ್ನ ಮೊಬೈಲ್‌ನಲ್ಲಿ ಸೇವ್ ಮಾಡಿದ್ದೀನಿ ಅಂತ ಆರಂಭದಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ್ರು ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ.

ಆ ಒಂದು ಉಲ್ಟಾ ಸ್ಟೇಟ್‌ಮೆಂಟ್.. ಬದಲಾಗ್ತಿದೆ ದಚ್ಚು ನಸೀಬು
ರತ್ನಪ್ರಭಾ ಅಂದು ಹೇಳಿದ್ದೇ ಬೇರೆ ಇಂದು ಹೇಳ್ತಿರೋದೇ ಬೇರೆ..!
ಆದ್ರೀಗ ಕೋರ್ಟ್ ಟ್ರಯಲ್ಸ್ ವೇಳೆ ವಕೀಲರು ಕ್ರಾಸ್ ಎಕ್ಸಾಮಿನ್ ಮಾಡುವಾಗ ತನ್ನ ಮಗನ ನಂಬರ್ ತನಗೇ ಗೊತ್ತಿಲ್ಲ ಎಂದಿದ್ದಾರೆ ರೇಣುಕಾಸ್ವಾಮಿ ತಾಯಿ. ಅಷ್ಟೇ ಅಲ್ಲ, ಮಗನ ನಂಬರ್ ಸೇವ್ ಆಗಿರೋದು ತಾಯಿಯ ಮೊಬೈಲ್‌ನಲ್ಲಿ ಅಲ್ಲ. ಬದಲಿಗೆ ತಂದೆ ಕಾಶಿನಾಥಯ್ಯನ ಮೊಬೈಲ್‌ನಲ್ಲಿ ಅನ್ನೋದು ಹೊರಬಿದ್ದಿದೆ. ಹೀಗೆ ಮೃತನ ತಾಯಿಯೇ ಗೊಂದಲದ ಹೇಳಿಕೆ ನೀಡಿರೋದು ದರ್ಶನ್‌ಗೆ ವರದಾನ ಆಗ್ತಿದೆ. ಇದೊಂದು ಹೇಳಿಕೆ ದರ್ಶನ್ ಕೇಸ್‌ಗೆ ಮೆಗಾ ಟ್ವಿಸ್ಟ್ ನೀಡ್ತಿದ್ದು, ದಾಸನ ನಸೀಬು ಬದಲಾಗೋ ಸಾಧ್ಯತೆ ಹೆಚ್ಚಾಗಿದೆ.

ರೇಣುಕಾಸ್ವಾಮಿ ತಾಯಿ ಎಡವಟ್‌ನಿಂದ ವಕೀಲರಿಗೆ ಈ ಕೇಸ್‌ನಿಂದ ದರ್ಶನ್‌ನ ಹೊರತರೋದು ಸುಲಭವಾಗ್ತಿದೆ ಅನ್ನೋದು ಮತ್ತೊಂದು ಮೂಲದ ಮಾಹಿತಿ. ಈ ಬಗ್ಗೆಯೇ ಝೈದ್ ಖಾನ್ ನಮ್ಮ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಒಂದು ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಅದು ಯಾವ ರೀತಿ..? ಹೇಗೆ ಅನ್ನೋದನ್ನ ಸಮರ್ಪಕವಾಗಿ ಹೇಳದಿದ್ರೂ, ದರ್ಶನ್ ಪರ ವಾದಿಸ್ತಿರೋ ವಕೀಲರ ಜೊತೆ ಮಾತುಕತೆ ನಡೆಸಿರೋ ಝೈದ್, ಜ್ಯೋತಿಷಿಯಂತೆ ದಾಸನ ಜೈಲ್ ಭವಿಷ್ಯ ನುಡಿದಿರೋದು ಅಚ್ಚರಿ ಮೂಡಿಸಿದೆ. ಒಂದು ವೇಳೆ ದಚ್ಚು ಹೊರಬರೋದು ನಿಜವಾದ್ರೆ ಇದು ಇಡೀ ಚಿತ್ರರಂಗದ ಖುಷಿ ಪಡೋ ಸುದ್ದಿಯಾಗಿದ್ದು, ರಾಜ್ಯವೇ ನೋಡಬಯಸೋ ಬಿಗ್ಗೆಸ್ಟ್ ಬ್ರೇಕಿಂಗ್ ನ್ಯೂಸ್ ಕೂಡ ಆಗಲಿದೆ.





