ದಳಪತಿ ವಿಜಯ್ ಜನನಾಯಗನ್ ಸಿನಿಮಾಗೆ ಡಿಎಂಕೆ ಸ್ಟಾಲಿನ್ ಹಾಗೂ ಬಿಜೆಪಿ ಅಷ್ಟದಿಗ್ಬಂಧನ ವಿಧಿಸಿವೆ. ಇಲ್ಲಿಯವರೆಗೂ ಸೆನ್ಸಾರ್ ಒಂದೇ ಸಮಸ್ಯೆ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಆಗೋದೇ ಡೌಟು ಎನ್ನಲಾಗ್ತಿದೆ. ಹೌದು.. ಫೆಬ್ರವರಿಯಲ್ಲಿ ಎಲೆಕ್ಷನ್ಸ್ ಅನೌನ್ಸ್ ಆದ್ರೆ ಮೇ ವರೆಗೂ ಜನ ನಾಯಗನ್ ಸಿನಿಮಾಗೆ ಬಿಡುಗಡೆ ಭಾಗ್ಯ ಇಲ್ಲ. ಈ ಕುರಿತ ಶಾಕಿಂಗ್ & ಬ್ರೇಕಿಂಗ್ ನ್ಯೂಸ್ ಇಲ್ಲಿದೆ…
- ದಳಪತಿಗೆ ಬಿಗ್ ಶಾಕ್.. DMK, ಬಿಜೆಪಿ ಅಷ್ಟದಿಗ್ಬಂಧನ..!
- ಎಲೆಕ್ಷನ್ಸ್ ಅನೌನ್ಸ್.. ಜನನಾಯಗನ್‌ಗಿಲ್ಲ ರಿಲೀಸ್ ಭಾಗ್ಯ
- 300ಕೋಟಿ ಬಜೆಟ್.. KVNಗೆ ಇದು ಬಿಸಿ ತುಪ್ಪವಾಯ್ತಾ?
- ಜ-21ಕ್ಕೆ ಕೋರ್ಟ್ ವಿಚಾರಣೆ.. ವಿಜಯಕ್ಕೆ ಸಿಂಪಥಿ ಗೇಮ್
ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಹಾಗೂ ಆತನ ಸಿನಿಮಾ ಜನನಾಯಗನ್ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಪೊಂಗಲ್ ವಿಶೇಷ ಜನವರಿ 9ಕ್ಕೆ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಡಬೇಕಿದ್ದ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದಾಗಿ ರಿಲೀಸ್ ಪೋಸ್ಟ್‌ಪೋನ್ ಆಗಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಿದ್ದವರಿಗೆ ಬರೋಬ್ಬರಿ 42 ಕೋಟಿ ರೂಪಾಯಿ ಹಣವನ್ನು ರೀಫಂಡ್ ಕೂಡ ಮಾಡಲಾಗಿದೆ.
ಒಂದ್ಕಡೆ ತಮಿಳುನಾಡಿದ ಡಿಎಂಕೆ ಸರ್ಕಾರದ ಸಿಎಂ ಸ್ಟಾಲಿನ್. ಮತ್ತೊಂದ್ಕಡೆ ಕೇಂದ್ರ ಸರ್ಕಾರ ಬಿಜೆಪಿ ಎರಡೂ ಸಹ ವಿಜಯ್ ಸಿನಿಮಾಗೆ ಅಷ್ಟದಿಗ್ಬಂಧನ ವಿಧಿಸಿವೆ. ಮೊದಲಿಗೆ ಕಟ್ಸ್ ಅಂಡ್ ಮ್ಯೂಟ್ಸ್ ಹೇಳಿದ್ದ ಸೆನ್ಸಾರ್ ಬೋರ್ಡ್, ಆಕ್ಷೇಪಾರ್ಹ ವಿಷಯಗಳ ಬದಲಾವಣೆಗೆ ಸೂಚಿಸಿತ್ತು. ಅದನ್ನ ಬದಲಿಸಿ ಕೊಟ್ಟರೂ ಸಹ, ಐದು ಮಂದಿಯ ಸೆನ್ಸಾರ್ ಬೋರ್ಡ್ ಸದಸ್ಯರಲ್ಲಿ ಒಬ್ಬರಿಂದ ತಗಾದೆ ಬಂದಿದೆ. ಆ ನಿಟ್ಟಿನಲ್ಲಿ 300 ಕೋಟಿ ರೂಪಾಯಿ ಬಂಡವಾಳ ಸುರಿದಿದ್ದ ನಿರ್ಮಾಪಕರಿಗೂ ಸಂಕಷ್ಟ ಶುರುವಾಗಿದೆ.
ಈ ಬಗ್ಗೆ ಸ್ವತಃ ಕನ್ನಡದ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಎಲ್ಲರಿಗೂ ಕ್ಷಮೆ ಕೋರಿ, ನ್ಯಾಯಾಲಾಯದ ನಿರ್ಧಾರವನ್ನು ಗೌರವಿಸುವುದಾಗಿ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ಬಹುಮುಖ್ಯವಾಗಿ ವಿಜಯ್ ಫ್ಯಾನ್ಸ್, ಡಿಸ್ಟ್ರಿಬ್ಯೂಟರ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ ಇಲ್ಲಿಯವರೆಗೂ ಏನೆಲ್ಲಾ ಆಯ್ತು ಅನ್ನೋದನ್ನ ಡಿಟೈಲ್ಡ್ ಆಗಿ ವಿವರಿಸಿದ್ದಾರೆ.
ಮದ್ರಾಸ್ ಹೈ ಕೋರ್ಟ್‌ನಿಂದ ಜಸ್ಟೀಸ್ ಪಿ. ಟಿ. ಆಶಾ ಅವರು ಜನನಾಯಗನ್ ಚಿತ್ರಕ್ಕೆ U/A 16+ ಸೆನ್ಸಾರ್ ಪ್ರಮಾಣ ಪತ್ರ ನೀಡಲು CBFCಗೆ ಸೂಚಿಸಿ ಆದೇಶ ನೀಡಿದ್ರು. ಆದ್ರೆ ಅದನ್ನೇ ಪ್ರಶ್ನಿಸಿರೋ ಸೆನ್ಸಾರ್ ಬೋರ್ಡ್, ಕೋರ್ಟ್ ಆದೇಶವನ್ನು ಪ್ರಶ್ನಿಸಿದೆ. ಸೋ.. ಜನ ನಾಯಗನ್ ಚಿತ್ರದ ಈ ಸೆನ್ಸಾರ್ ತಿಕ್ಕಾಟ ಸದ್ಯ ಜನವರಿ 21ಕ್ಕೆ ಹೋಗಿದೆ. ಅಂದು ಕೋರ್ಟ್‌ನ ಮುಂದಿನ ವಿಚಾರಣೆ ನಡೆಯಲಿದ್ದು, ಅಂದೇ ಎಲ್ಲವೂ ಫೈನಲ್ ಆಗೋ ಸಾಧ್ಯತೆಯಿದೆ. ಅಥ್ವಾ ಮತ್ತೊಮ್ಮೆ ವಿಚಾರಣೆ ಮುಂದೂಡಿದ್ರೆ ಅದು ಸಿನಿಮಾದ ರಿಲೀಸ್‌ಗೆ ಬಹುದೊಡ್ಡ ಹೊಡೆತ ಕೂಡ ಬೀಳಲಿದೆ.
ಯೆಸ್.. ತಮಿಳುನಾಡು ವಿಧಾನಸಭಾ ಚುನಾವಣೆಗಳು ಫೆಬ್ರವರಿ ಮೊದಲ ವಾರದಲ್ಲಿ ಅನೌನ್ಸ್ ಆಗುವ ಸಾಧ್ಯತೆಯಿದ್ದು, ಒಂದು ವೇಳೆ ಎಲೆಕ್ಷನ್ಸ್ ಘೋಷಣೆ ಆದ್ರೆ ನಟ ವಿಜಯ್‌ಗೆ ಕೋಡ್ ಆಫ್ ಕಂಡಕ್ಟ್ ಸಮಸ್ಯೆಯಾಗಲಿದೆ. ಯಾಕಂದ್ರೆ ಸ್ವತಃ ವಿಜಯ್ ಕೂಡ ಟಿವಿಕೆ ಪಕ್ಷ ಕಟ್ಟಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಂದ ಸ್ಪರ್ಧಿಸೋಕೆ ಸಜ್ಜಾಗಿದ್ದಾರೆ. ಹೀಗಾಗಿ ಎಲೆಕ್ಷನ್ ಮುಗಿದು, ರಿಸಲ್ಟ್ಸ್ ಬರೋವರೆಗೂ ಜನನಾಯಗನ್‌ಗೆ ಬಿಡುಗಡೆ ಭಾಗ್ಯ ದೊರೆಯುವುದು ಬಹುತೇಕ ಡೌಟು.
ಏಪ್ರಿಲ್-ಮೇನಲ್ಲಿ ಎಂಎಲ್‌ಎ ಎಲೆಕ್ಷನ್ಸ್ ನಡೆಯಲಿದ್ದು, ಅಲ್ಲಿಗೆ ಸಿನಿಮಾ ರಿಲೀಸ್‌ಗೆ ಇನ್ನೂ ನಾಲ್ಕೈದು ತಿಂಗಳು ಕಾಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದೇನಾದ್ರೂ ನಿಜವಾದಲ್ಲಿ ಇದು ವಿಜಯ್‌ಗಿಂತ ಡಿಎಂಕೆ ಪಕ್ಷ ಹಾಗೂ ಸ್ಟಾಲಿನ್‌ಗೆ ಬಹುದೊಡ್ಡ ಪೆಟ್ಟು ಕೊಡಲಿದೆ. ಇದೇ ಸಿಂಪಥಿತಿಂದ ವಿಜಯ್‌ಗೆ ವಿಜಯದ ಗೆಲುವಿನ ಹಾದಿ ಬಹಳಷ್ಟು ಸುಲಭ ಹಾಗೂ ಸುಗಮವಾಗಲಿದೆ. ಆದ್ರೆ ಕೋಟ್ಯಂತರ ರೂಪಾಯಿ ಸಾಲ, ಬಡ್ಡಿಗೆ ತಂದು ಸುರಿದಿರೋ ನಿರ್ಮಾಪಕನ ಗತಿ ಏನು ಅನ್ನೋದೇ ಯಕ್ಷಪ್ರಶ್ನೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





