ಜನ್ಮಸಂಖ್ಯೆ 1(10,19,28) ಬಹಳ ದಿನಗಳಿಂದ ಮಾಡಿದ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಉತ್ತಮ ದಿನ. ಕೆಲಸದಲ್ಲಿ ಮೆಚ್ಚುಗೆ, ಬಡ್ತಿ ಅಥವಾ ಬೋನಸ್ ಸಿಗಬಹುದು. ಸಹೋದ್ಯೋಗಿಗಳ ಜೊತೆ ಟೀಮ್ ಔಟಿಂಗ್, ಪಿಕ್ನಿಕ್ ಅಥವಾ ಡಿನ್ನರ್‌ಗೆ ಹೋಗಿ ಸಂತೋಷದ ಸಮಯ ಕಳೆಯುವ ಯೋಗ. ಪ್ರೀತಿಪಾತ್ರರಿಂದ ಉಡುಗೊರೆಗಳು ಬರುತ್ತವೆ. ಕುಟುಂಬದೊಂದಿಗೆ ರೆಸ್ಟೋರೆಂಟ್ ಅಥವಾ ರೆಸಾರ್ಟ್‌ಗೆ ತೆರಳುವ ಸಾಧ್ಯತೆ ಜಾಸ್ತಿ. ಹೆಲ್ತ್ ಇನ್ಷೂರೆನ್ಸ್ ಖರೀದಿ ಅಥವಾ ಪಾಲಿಸಿ ಮೊತ್ತ ಹೆಚ್ಚಿಸುವ ಯೋಜನೆ ಇಂದು ತೀರ್ಮಾನವಾಗಬಹುದು. ಪರ್ಸ್‌ನಲ್ಲಿ ಹಣ ಎಚ್ಚರಿಕೆಯಿಂದ ಇಟ್ಟುಕೊಳ್ಳಿ, ಏನನ್ನಾದರೂ ತಪ್ಪಿ ಇಟ್ಟು ಹುಡುಕಾಡುವ ಸ್ಥಿತಿ ಬರಬಹುದು.
ಜನ್ಮಸಂಖ್ಯೆ 2(11,20,29) ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಯೋಜನೆಗಳು ತಡವಾಗಬಹುದು ಅಥವಾ ರದ್ದಾಗಬಹುದು. ಯಾವ ಕೆಲಸವೂ ಪೂರ್ಣಗೊಳ್ಳುವ ಮೊದಲೇ ಜನರಿಗೆ ಹೇಳಿಕೊಂಡು ಸೆಲಬ್ರೇಟ್ ಮಾಡದಿರಿ. ಕುಟುಂಬ ಸದಸ್ಯರಿಂದ ಸಾಲ ಪಡೆದಿದ್ದರೆ ಇಂದು ವಾಪಸ್ ಕೊಡುವ ಪ್ರಯತ್ನ ಮಾಡಿ. ಬೆಟ್ಟಗಾಡು ಪ್ರದೇಶಕ್ಕೆ ಚಿಕ್ಕ ಪ್ರವಾಸದ ಯೋಗವಿದೆ. ನೇರತ್ವ ಮತ್ತು ಪಾರದರ್ಶಕತೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ.
ಜನ್ಮಸಂಖ್ಯೆ 3(12,21,30) ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಮನೆಗೆ ಬಳಸುವ ಪೀಠೋಪಕರಣ, ಉಡುಗೊರೆ ಖರೀದಿ ಮಾಡುವ ದಿನ. ಕಣ್ಣಿನ ಕಿರಿಕಿರಿ ಇದ್ದರೆ ವೈದ್ಯರನ್ನು ಭೇಟಿಯಾಗಿ. ರಾಜಕಾರಣಿಗಳಿಗೆ ವಿಶ್ವಾಸ ದ್ರೋಹದ ಸತ್ಯ ತಿಳಿಯುವ ಸಾಧ್ಯತೆ. ಯುಪಿಐ ಮೂಲಕ ದೊಡ್ಡ ಮೊತ್ತ ಕಳಿಸುವಾಗ ನಾಲ್ಕು ಬಾರಿ ಪರಿಶೀಲಿಸಿ.
ಜನ್ಮಸಂಖ್ಯೆ 4(13,22,31)ಹಣದ ಲೆಕ್ಕಾಚಾರ ಎಚ್ಚರಿಕೆಯಿಂದ ಮಾಡಿ. ಕೈಯಲ್ಲಿರುವ ಮೊತ್ತಕ್ಕೆ ಮಾತ್ರ ಖರ್ಚು-ಹೂಡಿಕೆ ಯೋಜನೆ ಹಾಕಿ. ಅರ್ಧಕ್ಕೆ ನಿಂತ ಪ್ರಾಜೆಕ್ಟ್‌ಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಕುಟುಂಬದ ತುರ್ತು ವಿಚಾರಗಳು ಗಮನ ಬೇಡಬಹುದು. ಯಾರಿಗಾದರೂ ಸಾಲ ಕೊಟ್ಟಿದ್ದರೆ ಇಂದು ವಾಪಸ್ ಕೇಳುವ ಸ್ಥಿತಿ ಬರಬಹುದು.
ಜನ್ಮಸಂಖ್ಯೆ 5(14,23) ಬೆಲೆಬಾಳುವ ಸೀರೆ, ಒಡವೆ, ಉಡುಗೊರೆ ಖರೀದಿಗೆ ಉತ್ತಮ ದಿನ. ತವರು ಮನೆಯ ಕಾರ್ಯಕ್ರಮಕ್ಕೆ ಹೆಣ್ಣುಮಕ್ಕಳಿಗೆ ಆಹ್ವಾನ ಬರಬಹುದು. ಸೋದರ-ಸೋದರಿಯರ ನಡುವೆ ಭಿನ್ನಾಭಿಪ್ರಾಯ ಇದ್ದರೆ ಇಂದು ಸಮಾಧಾನ ಮಾಡಿಸುವ ಜವಾಬ್ದಾರಿ ನಿಮ್ಮ ಮೇಲೆ ಬರಬಹುದು. ಹವ್ಯಾಸವನ್ನು ಆದಾಯದ ಮಾರ್ಗವಾಗಿ ಬದಲಾಯಿಸುವ ಚಿಂತನೆ ಶುರುವಾಗುತ್ತದೆ. ಸಂಗಾತಿಯಿಂದ ಪೂರ್ಣ ಬೆಂಬಲ.
ಜನ್ಮಸಂಖ್ಯೆ 6(15,24) ಹಣದ ವಿಷಯದಲ್ಲಿ ತುಂಬಾ ಗಂಭೀರವಾಗಿ ಮಾತನಾಡುತ್ತೀರಿ. ಕೋಳಿ ಸಾಕಣೆ, ಪೋಲ್ಟ್ರಿ ವ್ಯಾಪಾರಿಗಳಿಗೆ ಒಳ್ಳೆಯ ಲಾಭ. ದೀರ್ಘಾವಧಿ ಆರ್ಡರ್‌ಗಳು ಬರುತ್ತವೆ. ಪ್ರೇಮಿಗಳಿಗೆ ಮನಸ್ತಾಪ ದೂರ ಮಾಡಿಕೊಳ್ಳಲು ಸೂಕ್ತ ದಿನ. ಆತುರದ ನಿರ್ಧಾರಗಳನ್ನು ತಪ್ಪಿಸಿ.
ಜನ್ಮಸಂಖ್ಯೆ 7(16,25)ಆನ್‌ಲೈನ್ ಕನ್ಸಲ್ಟೇಷನ್, ಫ್ರೀಲ್ಯಾನ್ಸಿಂಗ್ ಮಾಡುವವರಿಗೆ ಉತ್ತಮ ಆದಾಯ. ಹೊಸ ಆಹಾರ ಪ್ರಯೋಗಿಸುತ್ತೀರಿ. ಗೆಳೆಯರ ಮೂಲಕ ಉದ್ಯೋಗ ರೆಫರೆನ್ಸ್ ಬರಬಹುದು – ತಕ್ಷಣ ಅಪ್ಲೈ ಮಾಡಿ. ೪೦+ ವಯಸ್ಸಿನವರು ಆರೋಗ್ಯ ಚೆಕಪ್ ಮಾಡಿಸಿಕೊಳ್ಳಿ. ಪಿಎಫ್‌ನಿಂದ ಹಣ ತೆಗೆದು ರಿಯಲ್ ಎಸ್ಟೇಟ್‌ಗೆ ಹಾಕುವ ಯೋಜನೆ ಗಟ್ಟಿಯಾಗುತ್ತದೆ.
ಜನ್ಮಸಂಖ್ಯೆ 8(17,26) ಭಾವನಾತ್ಮಕವಾಗಿ ಬಲಿಷ್ಠರಾಗುತ್ತೀರಿ. ಹಿಂದೆ ಚಿಂತೆ ತಂದಿದ್ದ ವಿಷಯಗಳು ಈಗ ಪರಿಣಾಮ ಬೀರದಂತಾಗುತ್ತವೆ. ವಿದೇಶಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಮಾರ್ಗದರ್ಶನ ಸಿಗುತ್ತದೆ. ಚಿಕ್ಕ ಕೆಲಸಗಳನ್ನು ಸ್ವತಃ ಮಾಡಿದರೆ ದೊಡ್ಡ ಅವಕಾಶಗಳು ಬರುತ್ತವೆ. ಅಕಸ್ಮಾತ್ ದೇಗುಲ ದರ್ಶನದಿಂದ ಮನಸ್ಸಿಗೆ ಶಾಂತಿ.
ಜನ್ಮಸಂಖ್ಯೆ 9(18,27) ಎಲ್ಲ ಕೆಲಸದಲ್ಲೂ ಅಚ್ಚುಕಟ್ಟುತನ, ಶಿಸ್ತು ಕಾಣುತ್ತದೆ. ಸಂಘ-ಸಂಸ್ಥೆಗಳಲ್ಲಿ ಮುಖ್ಯ ಜವಾಬ್ದಾರಿ ಸಿಗಬಹುದು. ಕಾಲು-ಪಾದದಲ್ಲಿ ಸಣ್ಣ ನೋವು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಇತರರ ತಪ್ಪಿಗೆ ನಿಮ್ಮ ಮೇಲೆ ಆರೋಪ ಬರಬಹುದು – ತಾಳ್ಮೆಯಿಂದ ಎದುರಿಸಿ.





