ಎಸಿಪಿ ಚಂದನ್ ನಮ್ಮ ಕನ್ನಡ ಚಿತ್ರರಂಗಕ್ಕೆ ಸಿಂಹಸ್ವಪ್ನ ಅಗ್ತಿದ್ದಾರೆ. ಯೆಸ್.. ದರ್ಶನ್ ಪ್ರಕರಣದ ಬಳಿಕ ನಟಿಯೊಬ್ಬಳಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿರ್ಮಾಪಕರೊಬ್ಬರನ್ನ ಅರೆಸ್ಟ್ ಮಾಡಿದ್ದಾರೆ. ಕ್ರಿಕೆಟ್ ಹೆಸರಲ್ಲಿ ನಟಿಯನ್ನ ವಿದೇಶಕ್ಕೆ ಕರೆದೊಯ್ದು, ಮೋಸ ಮಾಡಿದ್ದ ಉದ್ಯಮಿ ಕಮ್ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಸದ್ಯ ಖಾಕಿ ಕಸ್ಟಡಿಯಲ್ಲಿದ್ದಾರೆ. ಇಷ್ಟಕ್ಕೂ ಆ ನಟಿ ಯಾರು..? FIRನಲ್ಲಿ ಏನಿದೆ ಅಂತೀರಾ..? ನೀವೇ ನೋಡಿ.
- ಲವ್, ಸೆಕ್ಸ್, ದೋಖಾ.. ಖ್ಯಾತ ನಟಿ ಸೂಸೈಡ್ ಅಟೆಂಪ್ಟ್
- ಆರೇಳು ಸಿನಿಮಾ, ಬಿಗ್‌ಬಾಸ್ ಸ್ಪರ್ಧಿ ಆಗಿರೋ ನಟಿಮಣಿ
- ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ನಟಿ ಒದ್ದಾಟ..!
- 100 ಮಾತ್ರೆ.. ICU.. ಬಟ್ಟೆ ಹರಿದು, ಅರೆಬೆತ್ತಲೆ ಮಾಡಿ ಹಿಂಸೆ
ಆರೇಳು ಸಿನಿಮಾ ಮಾಡಿ, ಬಿಗ್‌ಬಾಸ್ ಕಂಟೆಸ್ಟೆಂಟ್ ಕೂಡ ಆಗಿರೋ ಸ್ಯಾಂಡಲ್‌ವುಡ್‌ನ ಖ್ಯಾತಿ ನಟಿಯೊಬ್ಬರಿಗೆ ಉದ್ಯಮಿ ಅಗಿರೋ ಅರವಿಂದ್ ವೆಂಕಟೇಶ್ ಶೆಡ್ಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ಕ್ರಿಕೆಟ್ ಹೆಸರಲ್ಲಿ ನಟಿಯನ್ನ ಶ್ರೀಲಂಕಾಗೆ ಕರೆದು, ಅಲ್ಲಿಂದ ಸ್ನೇಹ ಬೆಳೆಸಿ, ನಂಬಿಸಿ, ಮೋಸ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿರೋ ಅರವಿಂದ್, ಸಂತ್ರಸ್ತೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹಿಂಸೆ ಮಾಡಿದ್ದಾರೆ.
ಸಂತ್ರಸ್ತ ನಟಿ ನೀಡಿರೋ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡಿರೋ ಎಸಿಪಿ ಚಂದನ್, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಳಿಕ ಈ ಅರವಿಂದ್ ವೆಂಕಟೇಶ್ ರೆಡ್ಡಿಗೆ ಸಿಂಹಸ್ವಪ್ನವಾಗಿದ್ದಾರೆ. ವಿದೇಶದಿಂದ ಬರ್ತಿದ್ದಂತೆ, ಏರ್‌ಪೋರ್ಟ್‌ನಲ್ಲೇ ಲುಕ್‌ಔಟ್ ನೋಟಿಸ್ ನೀಡಿ ಅರೆಸ್ಟ್ ಮಾಡಿದ್ದಾರೆ. 2024ರಿಂದ ಸಿಕ್ಕಾಪಟ್ಟೆ ಕಿರುಕುಳ ನೀಡ್ತಿದ್ದ ಆಸಮಿಗೆ ಬೇಸತ್ತು, ಮಹಿಳಾ ಆಯೋಗಕ್ಕೂ ದೂರು ನೀಡಿದ್ರಂತೆ ನಟಿ.
ಆದ್ರೀಗ ಮನೆ ಬಳಿ ಬಂದು ಮಾನಹಾನಿ ಮಾಡ್ತೀನಿ ಅಂತ ಚಿತ್ರಹಿಂಸೆ ನೀಡ್ತಿದ್ದ ಅರವಿಂದ್ ಕಿರುಕುಳ ತಾಳಲಾರದೆ 100ಕ್ಕೂ ಅಧಿಕ ಸ್ಲೀಪಿಂಗ್ ಪಿಲ್ಸ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ನಟಿ. ಆಗ ತಮಗೆ ಗೊತ್ತಿರೋ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ, ಪೊಲೀಸರಿಗೆ ತನ್ನ ವಿರುದ್ಧ ಹೇಳಬೇಡ ಅಂತ ಅಲ್ಲಿಯೂ ಬೆದರಿಸಿದ್ದಾರೆ. ಫೋನ್ ಕಸಿದುಕೊಂಡು, ಆಕೆಯ ಮನೆಗೆ ಮಾಹಿತಿ ತಲುಪಿಸೋಕೂ ಬಿಡದೆ ಕಾಡಿದ್ದಾನೆ ಆಸಾಮಿ. ಐಸಿಯು ಸೇರಿದ್ರೂ ಸಹ, ಅಲ್ಲಿ ಕೂಡ ಬಟ್ಟೆ ಹರಿದು, ಅರೆ ಬೆತ್ತಲೆ ಮಾಡಿ ಹಿಂಸಿಸಿದ್ದಾನೆ ಅರವಿಂದ್. ಅಲ್ಲದೆ ತಾನು ನೀಡಿದ್ದ ಒಂದು ಕೋಟಿ ವಾಪಸ್ ನೀಡು ಅಂತ ಮತ್ತೊಬ್ಬ ನಟಿ ಆರತಿ ಪಡುಬಿದ್ರಿ ಮೂಲಕ ಆಕೆಯ ನಡಾವಳಿಗಳನ್ನ ಟ್ರ್ಯಾಕ್ ಮಾಡ್ತಿದ್ದ ಅರವಿಂದ್.
ಒಟ್ಟಾರೆ ಲವ್, ಸೆಕ್ಸ್ ಅಂತೆಲ್ಲಾ ಹೋಗಿ ದೋಖಾ ಅಂತೂ ಆಗಿದೆ. ಇಲ್ಲಿ ಯಾರು ಯಾರಿಗೆ ಮೋಸ ಮಾಡಿದ್ರು. ಮೋದ ಹೋದ್ರು ಅನ್ನೋದನ್ನ ಪರಾಮರ್ಶಿಸಿಕೊಳ್ಳಬೇಕಿದೆ. ಶಾರ್ಟ್ ಕಟ್‌ನಲ್ಲಿ ಬೆಳೆಯಬೇಕು ಅಂತ ಒಂದಷ್ಟು ಮಂದಿ ನಟಿಮಣಿಯರು ಅಡ್ಡದಾರಿ ಹಿಡಿದ್ರೆ ಪರಿಣಾಮ ಹೇಗಿರುತ್ತೆ ಅನ್ನೋದಕ್ಕೂ ಈ ಪ್ರಕರಣ ಸಾಕ್ಷಿ ಆಗಲಿದೆ. ಒಟ್ಟಾರೆ ಸಂತ್ರಸ್ತ ನಟಿಗೆ ನ್ಯಾಯ ದೊರಕಲಿ. ಮತ್ತೆ ಇನ್ಯಾರೂ ಈ ರೀತಿ ಮೋಸ ಹೋಗದಿರಲಿ ಹಾಗೂ ಮೋಸ ಮಾಡದಿರಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





