ವರ್ಷಾಂತ್ಯದ ಕ್ರಿಸ್‌ಮಸ್‌ಗೆ ಡೇಟ್‌ನ ಮಾರ್ಕ್ ಮಾಡಿ ಇಟ್ಟಿರೋ ಬಾದ್‌ಷಾ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಫಸ್ಟ್ ಸಾಂಗ್ ರಿವೀಲ್ ಆಗಿದೆ. ಸಖತ್ ಸೈಕ್ ಆಗಿದೆ ಆರಡಿ ಕಟೌಟ್ ಕಿಚ್ಚನ ಸ್ಟೆಪ್ಸ್. ಯಾಕಂದ್ರೆ ಅದು ಸೈಕ್ ಸೈತಾನ್ ಸಾಂಗ್. ಮ್ಯಾಕ್ಸ್ ಕಾಂಬೋದ ಭರ್ಜರಿ ಧಮಾಕಾ ಸ್ಟೆಪ್ಸ್ ಜೊತೆ ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.
ಕಳೆದ ವರ್ಷ ಮ್ಯಾಕ್ಸ್ ಸಿನಿಮಾದಿಂದ ಮಸ್ತ್ ಮ್ಯಾಕ್ಸಿಮಮ್ ಮನರಂಜನೆ ನೀಡಿದ್ದ ಕಿಚ್ಚ ಸುದೀಪ್, ಈ ವರ್ಷ ಕೂಡ ಅಂಥದ್ದೇ ಮತ್ತೊಂದು ಮೆಗಾ ಆ್ಯಕ್ಷನ್ ವೆಂಚರ್ ಮೂಲಕ ಬರ್ತಿದ್ದಾರೆ. ಅದೇ ಮಾರ್ಕ್ ಸಿನಿಮಾ. ಈಗಾಗ್ಲೇ ಇದೇ ಡಿಸೆಂಬರ್ ಕ್ರಿಸ್‌ಮಸ್‌ಗೆ ಥಿಯೇಟರ್‌ಗೆ ಬರೋದಾಗಿ ಡೇಟ್‌ನ ಮಾರ್ಕ್ ಮಾಡಿ ಇಟ್ಟಿರೋ ಚಿತ್ರತಂಡ, ಮೊದಲ ಸಾಂಗ್ ರಿಲೀಸ್ ಮಾಡಿದೆ. ಕಿಚ್ಚನ ಡ್ಯಾನ್ಸ್ ಸಖತ್ ಸೈಕ್ ಆಗಿದ್ದು ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ ಸಾಂಗ್.
ಕಿಚ್ಚನ ಮಾರ್ಕ್ ಅಡ್ಡಾದಿಂದ ಡ್ಯಾನ್ಸಿಂಗ್ ನಂಬರ್ ಔಟ್..!
ಸಖತ್ ಸೈಕ್ ಬಾದ್‌ಷಾ ಸುದೀಪ್ ಸೈಕ್ ಸೈತಾನ್ ಸ್ಟೆಪ್ಸ್
ಸೈಕ್ ಸೈತಾನ್ ಅನ್ನೋ ಮಾಸ್ ಸಾಂಗ್ ಇದಾಗಿದ್ದು, ಅನೂಪ್ ಭಂಡಾರಿ ಈ ಹಾಡಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ದ್ ಶಾಸ್ತ್ರಿ ಗಾಯನದಲ್ಲಿ ಹಾಡು ಮೂಡಿಬಂದಿದೆ. ಈ ಹಿಂದೆ ಮ್ಯಾಕ್ಸ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಅಜನೀಶ್ ಲೋಕನಾಥ್ ಅವರೇ ಇಲ್ಲಿಯೂ ಟ್ಯೂನ್ ಕಂಪೋಸ್ ಮಾಡಿದ್ದು, ಸುದೀಪ್ ಪಾತ್ರದ ಮ್ಯಾನರಿಸಂನ ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ.
ಹುಕ್‌ಸ್ಟೆಪ್ ಚಾಲೆಂಜ್ ಕೊಟ್ಟ ಚಿತ್ರತಂಡ. ಹೌದು.. ಮಾರ್ಕ್ ಸಿನಿಮಾದ ಸೈಕೋ ಸೈತಾನ್ ಗೀತೆಗೆ ಕಿಚ್ಚ ಸುದೀಪ್ ಭರ್ಜರಿಯಾಗಿ ಕುಣಿದಿದ್ದಾರೆ. ಸಾಂಗ್ ರಿಲೀಸ್ ಆದ ಬೆನ್ನಲ್ಲೇ ಮಾರ್ಕ್ ಟೀಂ, ಚಿತ್ರಪ್ರೇಮಿಗಳಿಗೆ ಹುಕ್ ಸ್ಟೆಪ್ ಡ್ಯಾನ್ಸ್ ಚಾಲೆಂಜ್ ನೀಡಿದೆ. ಈ ಸಾಂಗ್ ಪ್ಲೇ ಮಾಡಿಕೊಂಡು, ಹುಕ್ ಸ್ಟೆಪ್ ಹಾಕಬೇಕು. ಅಂದ್ರೆ ಕಿಚ್ಚ ಈಗಾಗ್ಲೇ ಸಾಂಗ್‌ನಲ್ಲಿ ಹಾಕಿದ ಸ್ಟೆಪ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ನೀವೂ ಡ್ಯಾನ್ಸ್ ಮಾಡಬೇಕು. ಬಳಿಕ ಇದನ್ನ ನಿಮ್ಮ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಬೇಕು ಎಂದಿದೆ.

