ಸಖತ್ ಸೈಕ್ ಬಾದ್‌ಷಾ ಸುದೀಪ್ ಸೈಕ್ ಸೈತಾನ್ ಸ್ಟೆಪ್ಸ್

Untitled design 2025 10 07t204356.393

ವರ್ಷಾಂತ್ಯದ ಕ್ರಿಸ್‌‌ಮಸ್‌‌‌ಗೆ ಡೇಟ್‌ನ ಮಾರ್ಕ್‌ ಮಾಡಿ ಇಟ್ಟಿರೋ ಬಾದ್‌ಷಾ ಕಿಚ್ಚ ಸುದೀಪ್ ನಟನೆಯ ಮಾರ್ಕ್‌ ಸಿನಿಮಾದ ಫಸ್ಟ್ ಸಾಂಗ್ ರಿವೀಲ್ ಆಗಿದೆ. ಸಖತ್ ಸೈಕ್ ಆಗಿದೆ ಆರಡಿ ಕಟೌಟ್ ಕಿಚ್ಚನ ಸ್ಟೆಪ್ಸ್. ಯಾಕಂದ್ರೆ ಅದು ಸೈಕ್ ಸೈತಾನ್ ಸಾಂಗ್. ಮ್ಯಾಕ್ಸ್ ಕಾಂಬೋದ ಭರ್ಜರಿ ಧಮಾಕಾ ಸ್ಟೆಪ್ಸ್ ಜೊತೆ ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.

ಕಳೆದ ವರ್ಷ ಮ್ಯಾಕ್ಸ್ ಸಿನಿಮಾದಿಂದ ಮಸ್ತ್ ಮ್ಯಾಕ್ಸಿಮಮ್ ಮನರಂಜನೆ ನೀಡಿದ್ದ ಕಿಚ್ಚ ಸುದೀಪ್, ಈ ವರ್ಷ ಕೂಡ ಅಂಥದ್ದೇ ಮತ್ತೊಂದು ಮೆಗಾ ಆ್ಯಕ್ಷನ್ ವೆಂಚರ್ ಮೂಲಕ ಬರ್ತಿದ್ದಾರೆ. ಅದೇ ಮಾರ್ಕ್‌ ಸಿನಿಮಾ. ಈಗಾಗ್ಲೇ ಇದೇ ಡಿಸೆಂಬರ್ ಕ್ರಿಸ್‌‌ಮಸ್‌ಗೆ ಥಿಯೇಟರ್‌ಗೆ ಬರೋದಾಗಿ ಡೇಟ್‌ನ ಮಾರ್ಕ್‌ ಮಾಡಿ ಇಟ್ಟಿರೋ ಚಿತ್ರತಂಡ, ಮೊದಲ ಸಾಂಗ್ ರಿಲೀಸ್ ಮಾಡಿದೆ. ಕಿಚ್ಚನ ಡ್ಯಾನ್ಸ್ ಸಖತ್ ಸೈಕ್ ಆಗಿದ್ದು ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ ಸಾಂಗ್.

 

ಕಿಚ್ಚನ ಮಾರ್ಕ್‌ ಅಡ್ಡಾದಿಂದ ಡ್ಯಾನ್ಸಿಂಗ್ ನಂಬರ್ ಔಟ್..!

ಸಖತ್ ಸೈಕ್ ಬಾದ್‌ಷಾ ಸುದೀಪ್ ಸೈಕ್ ಸೈತಾನ್ ಸ್ಟೆಪ್ಸ್

ಸೈಕ್ ಸೈತಾನ್ ಅನ್ನೋ ಮಾಸ್ ಸಾಂಗ್ ಇದಾಗಿದ್ದು, ಅನೂಪ್ ಭಂಡಾರಿ ಈ ಹಾಡಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ದ್ ಶಾಸ್ತ್ರಿ ಗಾಯನದಲ್ಲಿ ಹಾಡು ಮೂಡಿಬಂದಿದೆ. ಈ ಹಿಂದೆ ಮ್ಯಾಕ್ಸ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಅಜನೀಶ್ ಲೋಕನಾಥ್ ಅವರೇ ಇಲ್ಲಿಯೂ ಟ್ಯೂನ್ ಕಂಪೋಸ್ ಮಾಡಿದ್ದು,  ಸುದೀಪ್ ಪಾತ್ರದ ಮ್ಯಾನರಿಸಂನ ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ಹುಕ್‌ಸ್ಟೆಪ್‌ ಚಾಲೆಂಜ್‌ ಕೊಟ್ಟ ಚಿತ್ರತಂಡ. ಹೌದು.. ಮಾರ್ಕ್‌ ಸಿನಿಮಾದ ಸೈಕೋ ಸೈತಾನ್‌ ಗೀತೆಗೆ ಕಿಚ್ಚ ಸುದೀಪ್ ಭರ್ಜರಿಯಾಗಿ ಕುಣಿದಿದ್ದಾರೆ. ‌ಸಾಂಗ್‌ ರಿಲೀಸ್‌ ಆದ ಬೆನ್ನಲ್ಲೇ ಮಾರ್ಕ್‌ ಟೀಂ, ಚಿತ್ರಪ್ರೇಮಿಗಳಿಗೆ ಹುಕ್‌ ಸ್ಟೆಪ್‌ ಡ್ಯಾನ್ಸ್‌ ಚಾಲೆಂಜ್‌ ನೀಡಿದೆ. ಈ ಸಾಂಗ್‌ ಪ್ಲೇ ಮಾಡಿಕೊಂಡು, ಹುಕ್‌ ಸ್ಟೆಪ್‌ ಹಾಕಬೇಕು. ಅಂದ್ರೆ ಕಿಚ್ಚ ಈಗಾಗ್ಲೇ ಸಾಂಗ್‌ನಲ್ಲಿ ಹಾಕಿದ ಸ್ಟೆಪ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ನೀವೂ ಡ್ಯಾನ್ಸ್‌ ಮಾಡಬೇಕು. ಬಳಿಕ ಇದನ್ನ ನಿಮ್ಮ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಬೇಕು ಎಂದಿದೆ.

ಡೇಟ್ ‘ಮಾರ್ಕ್’ ಆಗಿದೆ.. ಕ್ರಿಸ್‌‌ಮಸ್‌ಗೆ ಕಿಚ್ಚನ ದರ್ಶನ..!

ಅದೇ ಮ್ಯಾಕ್ಸ್ ಕಾಂಬೋ.. ನಯಾ ಹೈ-ವೋಲ್ಟೇಜ್ ವೆಂಚರ್

ಪೋಸ್ಟ್‌ ಮಾಡುವಾಗ markthefilm ಇನ್‌ಸ್ಟಾ ಅಕೌಂಟ್‌ನ ಟ್ಯಾಗ್‌ ಮಾಡಿರಬೇಕು ಮತ್ತು #MARKHOOKSTEPCHALLENGE ಎಂದು ಹ್ಯಾಷ್‌ಟ್ಯಾಗ್‌ ಬಳಸಿರಬೇಕು. ಅತ್ಯುತ್ತಮ ರೀಲ್ಸ್‌ನ markthefilm ಇನ್‌ಸ್ಟಾ ಪೇಜ್‌ನಲ್ಲಿ ಶೇರ್‌ ಮಾಡಿಕೊಳ್ಳಲು ಮತ್ತು ಅವರಿಗೆ ಬಹುಮಾನ ಕೂಡ ನೀಡಲು ಚಿತ್ರತಂಡ ತೀರ್ಮಾನ ಮಾಡಿದೆ. ಮ್ಯಾಕ್ಸ್ ಚಿತ್ರದಿಂದ ನಿರ್ದೇಶಕ ವಿಜಯ್ ಕಾರ್ತಿಕೇಯ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ರು. ಅವ್ರೇ ಈಗ ಮಾರ್ಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಕಾಂಬಿನೇಷನ್​​ನಲ್ಲಿ ಬರ್ತಿರೋ ಎರಡನೇ ಸಿನಿಮಾ ಇದು. ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜಂಟಿಯಾಗಿ ಈ ಸಿನಿಮಾನ ನಿರ್ಮಾಣ ಮಾಡ್ತಿವೆ. ಶೇಖರ್ ಚಂದ್ರ ಛಾಯಾಗ್ರಹಣ, ಗಣೇಶ್ ಬಾಬು ಸಂಕಲನ ಮಾರ್ಕ್‌ ಚಿತ್ರಕ್ಕಿದೆ. ಸ್ಟಂಟ್ ಸಿಲ್ವಾ, ಸುಪ್ರೀಂ ಸುಂದರ್, ವಿಕ್ರಮ್ ಮೋರ್, ಕೆವಿನ್ ಕುಮಾರ್ ಸ್ಟಂಟ್ಸ್ ಈ ಸಿನಿಮಾಗಿದ್ದು, ಡಿಸೆಂಬರ್ 25ಕ್ಕೆ ಥಿಯೇಟರ್‌‌ನಲ್ಲಿ ದರ್ಶನ ನೀಡಿಲಿದೆ ಮಾರ್ಕ್.

 

 

 

 

Exit mobile version